ಮುಳ್ಳನ್ನು ಮುಳ್ಳಿಂದಲೇ ತೆಗೆಯುವ ಆಚಾರ್ಯ ಚಾಣಕ್ಯರು (chanakya neethi) ಬದುಕಿನ ಕಷ್ಟ ಕಾಲದಲ್ಲಿ ಕೆಟ್ಟ ಪರಿಸ್ಥಿತಿ ಬಂದಾಗ ಏನು ಮಾಡಬೇಕು ಅನ್ನುವ ಬಗ್ಗೆ ಹೇಳಿದ್ದಾರೆ.
ಚಾಣಕ್ಯ ಅನ್ನುವುದು ಒಬ್ಬ ವ್ಯಕ್ತಿಯ ಹೆಸರಿಗಿಂತ ಆತನ ಗುಣವನ್ನು ಹೇಳುವ ಹೆಸರು ಅನ್ನಬಹುದು. ವಿಷ್ಣುಗುಪ್ತ ಎಂಬ ಮಹಾನ್ ಬುದ್ಧಿಶಾಲಿ ತನ್ನ ಅಪರಿಮಿತ ಬುದ್ಧಿಯಿಂದ ಆತ ಒಂದು ಸಾಮ್ರಾಜ್ಯದ ಆಡಳಿತ ವ್ಯವಸ್ಥೆಯನ್ನೇ ಬದಲಿಸಿದ. ರಾಜನನ್ನೇ ಬದಲಿಸಿದ. ಇನ್ನು ಸಾಮಾನ್ಯ ಜನರಾದ ನಮ್ಮ ನಿಮ್ಮ ಕಷ್ಟದ ಪರಿಸ್ಥಿತಿಯಲ್ಲಿ ಏನು ಮಾಡಬೇಕು ಅನ್ನೋದು ಗೊತ್ತಿಲ್ಲದೇ ಇರುತ್ತಾ? ಅರ್ಥಶಾಸ್ತ್ರದ ಮೂಲಕ, ಚಾಣಕ್ಯ ನೀತಿಯ ಮೂಲಕ ವಿಶ್ವ ಪ್ರಸಿದ್ಧನಾದ ಚಾಣಕ್ಯನು ತನ್ನ ಜೀವನದಲ್ಲಿ ಅನೇಕ ಬಾರಿ ಅವಮಾನವನ್ನು ದುಃಖವನ್ನು ಎದುರಿಸಿದ್ದ. ತಂದೆಯ ಸಾವಿನ ಸೇಡನ್ನು ತೀರಿಸಿಕೊಳ್ಳಲು ಚಾಣಕ್ಯ ಹಠ ಬಿಡದ ತ್ರಿವಿಕ್ರಮನಂತೆ ಹೋರಾಡಿ ಯಶಸ್ಸು ಕಂಡಿದ್ದ. ಒಂದು ರೀತಿ ಮುಳ್ಳಿನ ಹಾದಿಯಂತಿತ್ತು ಚಾಣಕ್ಯನ ಜೀವನ. ಆ ಎಲ್ಲ ಕಷ್ಟ, ಅವಮಾನಗಳನ್ನೆ ಯಶಸ್ಸಿನ ಮೆಟ್ಟಿಲಾಗಿ ಮಾಡಿಕೊಂಡು ಮುನ್ನಡೆದ ಚಾಣಕ್ಯ ನಮ್ಮೆಲ್ಲರಿಗೂ ಹೂವಿನಂಥಾ ದಾರಿ ಮಾಡಿಕೊಟ್ಟು ಹೋಗಿದ್ದಾನೆ.
ಆಚಾರ್ಯ ಚಾಣಕ್ಯರು ನೀತಿಶಾಸ್ತ್ರದಲ್ಲಿ ಹಲವು ವಿಚಾರಗಳನ್ನು ಉಲ್ಲೇಖಿಸಿದ್ದಾರೆ. ಅದರಲ್ಲಿ ಮನುಷ್ಯ ಜೀವನಕ್ಕೆ ಸಂಬಂಧಿಸಿದ ಹಲವು ವಿಚಾರಗಳ ಕುರಿತು ವಿವರವಾಗಿ ಬರೆದಿದ್ದಾರೆ. ಕೆಟ್ಟ ಸಮಯ ಬೆಂಬಿಡದಂತೆ ಕಾಡಿದಾಗ ಏನು ಮಾಡಬೇಕು ಎಂಬುದರ ಕುರಿತು ಚಾಣಕ್ಯರು ವಿವರವಾಗಿ ತಿಳಿಸಿದ್ದಾರೆ. ಅದನ್ನು ಪಾಲಿಸಿದರೆ ಕಷ್ಟಗಳಿಂದ ಪಾರಾಗಬಹುದು. ಚಾಣಾಕ್ಯರ ಪ್ರಕಾರ ಲೈಫಿನಲ್ಲಿ ಕೆಟ್ಟ ಸಮಯ ಮನುಷ್ಯ ದೃಢವಾಗಿರಬೇಕು. ಆತ ಕಷ್ಟಕ್ಕೆ ಅಂಜದೇ ದೃಢವಾಗಿ ನಿಂತರೆ ಕಷ್ಟದ ಸ್ಥಿತಿ ಬದಲಾಗುತ್ತದೆ. ಬದುಕಿನ ಕೆಟ್ಟ ಸಮಯ ಬೇಗ ದೂರವಾಗುತ್ತದೆ. ಇದಕ್ಕೆ ತಾಳ್ಮೆ ಹೊಂದಿರಬೇಕು ಎಂದು ಚಾಣಕ್ಯ ಹೇಳುತ್ತಾರೆ. ಹೆಚ್ಚಿನವರಿಗೆ ತಾಳ್ಮೆ ಇಲ್ಲ. ಆದರೆ ತಾಳ್ಮೆ ರೂಢಿಸಿಕೊಳ್ಳದಿದ್ದರೆ ಬದುಕು ಅಸಹನೀಯ ಆಗಿ ಬಿಡುತ್ತೆ.
ಕಷ್ಟಕಾಲದಲ್ಲಿ ಶ್ರಮವೇ ಶ್ರೇಷ್ಠ ಅಸ್ತ್ರ ಎಂದು ಚಾಣಕ್ಯ ಒಂದು ಶ್ಲೋಕದ ಮೂಲಕ ಹೇಳಿದ್ದಾರೆ. ಅದನ್ನು ಹೇಗೆ ನಿರ್ವಹಿಸಬೇಕು ಎಂದು ಎಂಬುದನ್ನು ನಾವು ತಿಳಿದುಕೊಂಡಿರಬೇಕು ಎಂದು ಅವರು ಹೇಳುತ್ತಾರೆ. ಕಷ್ಟಕಾಲದಲ್ಲಿ ನಮ್ಮ ಕೆಲಸವನ್ನು ಬಹಳ ಶ್ರದ್ಧೆಯಿಂದ ಮಾಡಿದರೆ ಆ ಕೆಲಸದ ಮೂಲಕವೇ ಕಷ್ಟವನ್ನು ಗೆಲ್ಲಬಹುದು. ಶ್ರಮ ಪಡುವಾಗ ನಮಗೆ ಕಷ್ಟದಿಂದ ಪಾರಾಗುವ ಮಾರ್ಗಗಳು ಕಾಣುತ್ತವೆ. ಕಷ್ಟದ ನೆವದಲ್ಲಿ ಏನೂ ಮಾಡದೇ ಇದ್ದರೆ ಮನಸ್ಸು ಮತ್ತಷ್ಟು ವ್ಯಥೆಪಟ್ಟು ಕಷ್ಟದಿಂದ ಪಾರಾಗದಂತೆ ಮಾಡುತ್ತದೆ.
ಈ ಟೈಂನಲ್ಲಿ ಸೆಕ್ಸ್ ಮಾಡಿದ್ರೆ ರಾಕ್ಷಸನಂಥ ಮಗನ ಜನನ ; ಮುತ್ತಿನಂತ ಮಗ ಹುಟ್ಟಲು ಈ ನಿಯಮ ಪಾಲಿಸಿ..!
ಕಠಿಣ ಪರಿಶ್ರಮ ಮತ್ತು ಅದರ ಮಹತ್ವವನ್ನು ವಿವರಿಸುವ ಚಾಣಕ್ಯರು, ಒಂದು ವಸ್ತು ಅಥವಾ ವಿಷಯ ಎಷ್ಟೇ ದೂರದರಲ್ಲಿರಲಿ, ಅದನ್ನು ಪಡೆಯುವುದು ಎಷ್ಟೇ ಕಷ್ಟವಾಗಿರಲಿ, ಅದನ್ನು ಸಾಧಿಸುವುದು ಅಸಾಧ್ಯವೆಂದು ತೋರುತ್ತಿದ್ದರೂ ಅದನ್ನು ಪಡೆಯಲು ಕಠಿಣ ಪರಿಶ್ರಮ ಹಾಕುವುದು ಅವಶ್ಯ ಎಂದು ಅವರು ಹೇಳುತ್ತಾರೆ. ಕಠಿಣ ತಪಸ್ಸು ಅಂದರೆ ಕಠಿಣ ಪರಿಶ್ರಮದಿಂದ ಎಲ್ಲವನ್ನೂ ಸಾಧಿಸಲು ಸಾಧ್ಯ ಎಂದು ಚಾಣಕ್ಯ ಹೇಳುತ್ತಾರೆ. ಸೋಮಾರಿಯಾದವನಿಗೆ ಎಂದಿಗೂ ಅವಕಾಶಗಳು ಸಿಗುವುದಿಲ್ಲ ಎನ್ನುವ ಚಾಣಕ್ಯ, ತಮ್ಮ ಸ್ವಂತ ಪರಿಶ್ರಮ ಹಾಗೂ ಶ್ರದ್ಧೆಯಿಂದ ಅವಕಾಶಗಳನ್ನು ಹುಡುಕಬೇಕು ಎಂದು ಹೇಳುತ್ತಾರೆ. ಮನುಷ್ಯ ಯಾವಾಗಲೂ ಸಮಸ್ಯೆಯ ಬಗ್ಗೆಯಲ್ಲ ಪರಿಹಾರದ ಬಗ್ಗೆ ಕಾಳಜಿ ವಹಿಸಬೇಕು ಎಂದು ಅವರು ಹೇಳುತ್ತಾರೆ.
ಕಷ್ಟದ ಪರಿಸ್ಥಿತಿ ಎದುರಾದಾಗ ಮತ್ತೆ ಮತ್ತೆ ಪ್ರಯತ್ನಿಸಿದರೂ ಗುರಿ ಸಾಧಿಸಲು ಸಾಧ್ಯವಾಗದೇ ಇದ್ದರೆ, ನಮ್ಮ ಪ್ರಯತ್ನಕ್ಕೆ ಫಲ ಸಿಗದೇ ಇದ್ದಾಗ ಕೆಲಸ ಮಾಡುವ ವಿಧಾನವನ್ನು ಬದಲಿಸಿಕೊಳ್ಳಬೇಕು ಎಂದು ಚಾಣಾಕ್ಯ ಹೇಳುತ್ತಾರೆ. ಆಗ ಖಂಡಿತವಾಗಿಯೂ ಯಶಸ್ಸು ಗಳಿಸಲು ಸಾಧ್ಯ ಎಂಬುದು ಅವರ ಮಾತು.
Numerology Today: ಆತ್ಮೀಯರಲ್ಲೂ ಸ್ವಾರ್ಥ; ಹಳೆಯ ಆಸ್ತಿಯ ಮೇಲೆ ವಿವಾದ ಉದ್ಭವ..!