ಶ್ರಾವಣದಲ್ಲಿ ಶಿವನಿಂದ ಬದಲಾಗುವುದು ಬದುಕು; ಈ ರಾಶಿಯವರೇ ಅದೃಷ್ಟವಂತರು..!

By Sushma Hegde  |  First Published Aug 11, 2023, 1:14 PM IST

ಇನ್ನೇನು ಒಂದು ವಾರದಲ್ಲಿ ಅಧಿಕ ಮಾಸ ಮುಗಿಯಲಿದ್ದು, ಇದರೊಂದಿಗೆ 4 ರಾಶಿಯವರಿಗೆ ಶುಭ ದಿನಗಳು ಆರಂಭವಾಗಲಿದೆ. ಆಗಸ್ಟ್‌ 31ರವರೆಗೆ ಶಿವನ ಆಶೀರ್ವಾದ ಸಿಗಲಿದೆ.


ಇನ್ನೇನು ಒಂದು ವಾರದಲ್ಲಿ ಅಧಿಕ ಮಾಸ  (adhik maa) ಮುಗಿಯಲಿದ್ದು, ಇದರೊಂದಿಗೆ 4 ರಾಶಿಯವರಿಗೆ ಶುಭ ದಿನಗಳು ಆರಂಭವಾಗಲಿದೆ. ಆಗಸ್ಟ್‌ 31ರವರೆಗೆ ಶಿವನ ಆಶೀರ್ವಾದ ಸಿಗಲಿದೆ. ಪ್ರತಿ ಮೂರು ವರ್ಷಕ್ಕೊಮ್ಮೆ ಅಧಿಕ ಮಾಸ ಬರುತ್ತದೆ. ಈ ವರ್ಷ ಅಧಿಕ ಮಾಸವು ಶ್ರಾವಣ (sawan) ಮಾಸದಲ್ಲಿದೆ. ಆಗಸ್ಟ್‌ 16ರವರೆಗೆ ಅಧಿಕ ಮಾಸವಿದೆ. ಆಗಸ್ಟ್‌ 17ರಿಂದ ಪವಿತ್ರ ಶ್ರಾವಣ ಆರಂಭವಾಗುತ್ತದೆ.

ಶ್ರಾವಣ ಮಾಸ ಇನ್ನು ಒಂದು ವಾರದಲ್ಲಿ ಪ್ರಾರಂಭವಾಗಲಿದೆ. ಹಿಂದೂ ಧರ್ಮದಲ್ಲಿ ಶ್ರಾವಣ ಮಾಸಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದ್ದು, ಶ್ರಾವಣ ಸೋಮವಾರ (Monday) ಕ್ಕೆ ಇನ್ನೂ ಅಧಿಕ ಮಹತ್ವ ಇರುತ್ತದೆ. ಇದು ಶಿವನಿಗೆ ತುಂಬಾ ಪ್ರಿಯವಾದ ತಿಂಗಳು. ಈ ಮಾಸದಲ್ಲಿ ಅನೇಕ ರೀತಿಯ ಪೂಜೆ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಎಲ್ಲೆಡೆ ಕೈಲಾಸದಂತೆ ವಾತಾವರಣ ಇರಲಿದೆ.

Tap to resize

Latest Videos

ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ ಶ್ರಾವಣ ಮಾಸದಲ್ಲಿ  ಗ್ರಹಗಳ ವಿಶೇಷ ಸಂಯೋಜನೆಯು ರೂಪುಗೊಳ್ಳುತ್ತಿದೆ. ಈ ವಿಶೇಷ ಕಾಕತಾಳೀಯದಿಂದಾಗಿ ಕೆಲವರ ಭವಿಷ್ಯ ಬದಲಾಗಲಿದೆ. ಈ ರಾಶಿಯವರಿಗೆ ಒಳ್ಳೆಯ ದಿನಗಳು ಪ್ರಾರಂಭವಾಗುತ್ತವೆ.

ಮೇಷ ರಾಶಿ (Aries)

ಮೇಷ ರಾಶಿಯವರಿಗೆ ಕೆಲಸ ಕಾರ್ಯಗಳಲ್ಲಿ ಉತ್ಸಾಹ (passion)  ಇರುತ್ತದೆ. ಧಾರ್ಮಿಕ ಕಾರ್ಯದ ಕಡೆಗೆ ಒಲವು ಹೆಚ್ಚಾಗುವುದು. ತಾಯಿಯ ಬೆಂಬಲ ಸಿಗಲಿದೆ. ತಾಯಿಯಿಂದ ಹಣವನ್ನು ಪಡೆಯುವ ಸಾಧ್ಯತೆಗಳಿವೆ. ಸ್ನೇಹಿತರೊಬ್ಬರು ಬರಬಹುದು. ಉದ್ಯೋಗ (employment) ದಲ್ಲಿ ಸ್ಥಳ ಬದಲಾವಣೆಯಾಗುವ ಸಾಧ್ಯತೆ ಇದೆ. ಕುಟುಂಬ ಸಮೇತ ಧಾರ್ಮಿಕ ಸ್ಥಳ (religious place) ಕ್ಕೆ ತೀರ್ಥಯಾತ್ರೆ ಹೋಗಬಹುದು.

ಬೆಂಗಳೂರಿನ ಮಂದಿ ಕಾಲಿಗೆ ಕಪ್ಪು ದಾರ ಏಕೆ ಕಟ್ಟಿಕೊಳ್ಳುತ್ತಾರೆ? ಇಲ್ಲಿದೆ ಬಲವಾದ ನಂಬಿಕೆ..!

 

ಮಿಥುನ ರಾಶಿ (Geminis)

ಮಿಥುನ ರಾಶಿಯವರಿಗೆ ವ್ಯಾಪಾರ  (business) ವಿಸ್ತರಣೆ ಯೋಜನೆಗಳು ನಿಜವಾಗುತ್ತವೆ. ಸಹೋದರರ ಬೆಂಬಲ ಸಿಗಲಿದೆ. ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯಲಿವೆ. ಬಟ್ಟೆ ಉಡುಗೊರೆಗಳನ್ನು ಸಹ ಕಾಣಬಹುದು. ಕೆಲಸ ಬದಲಾವಣೆಯೊಂದಿಗೆ, ನೀವು ಬೇರೆ ಸ್ಥಳಕ್ಕೆ ಹೋಗಬೇಕಾಗಬಹುದು. ಆಮದು, ರಫ್ತು ವ್ಯವಹಾರ (business) ದಲ್ಲಿ ಲಾಭದ ಅವಕಾಶಗಳಿವೆ. ತಾಯಿಯ ಆಶಿರ್ವಾದ ಸಿಗಲಿದೆ. 

ವೃಶ್ಚಿಕ ರಾಶಿ (Scorpio) 

ವೃಶ್ಚಿಕ ರಾಶಿಯವರಿಗೆ ಸಂಗಾತಿಯಿಂದ ವಿರಹ ಉಂಟಾಗಬಹುದು. ಅದಲ್ಲದೆ ಕೆಲಸದ ಸ್ಥಳದಲ್ಲಿ ಬದಲಾವಣೆ ಸಾಧ್ಯತೆ ಇದೆ . ಪರಿಶ್ರಮ (persevere) ಇರುತ್ತದೆ. ಹಾಗೂ ಲಾಭದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಅಧಿಕಾರಿಗಳ ಅಹಕಾಂರವಿರುತ್ತದೆ.

ಧನು ರಾಶಿ (Sagittarius) 

ಧನು ರಾಶಿಯವರಿಗೆ ಮನಸ್ಸಿನಲ್ಲಿ ಸಂತೋಷ (happiness) ದ ಭಾವನೆಗಳು ಉಂಟಾಗುತ್ತದೆ. ಆದರೂ ಸ್ವಯಂ ನಿಯಂತ್ರಣದಲ್ಲಿರಿ. ಉದ್ಯೋಗದಲ್ಲಿ ಬೇರೆಡೆಗೆ ಸ್ಥಳಾಂತರವಾಗಬಹುದು. ಆದಾಯ (income) ಹೆಚ್ಚಲಿದೆ. ಅಧಿಕಾರಿಗಳ ಸ್ನೇಹ ದೊರೆಯಲಿದೆ. ಬಟ್ಟೆ ಇತ್ಯಾದಿ ವೆಚ್ಚಗಳು ಹೆಚ್ಚಾಗಬಹುದು.

ಡಾ.ರಾಜ್ ಕುಟುಂಬದ ಸಾವಿನ ನಿಗೂಢ ತಿಳಿಯಲು ಅಷ್ಟಮಂಗಲ ಪ್ರಶ್ನೆ; ಏನಿದು? ಮಹತ್ವ ಏನು?

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!