Astrology Remedies: ಪ್ರಾಣಿ ಪಕ್ಷಿಗಳು ನಿಮ್ಮ ಅದೃಷ್ಟವನ್ನೇ ಬದಲಿಸಬಲ್ಲವು! ಇಷ್ಟ್ ಮಾಡಿ ಸಾಕು..

By Suvarna NewsFirst Published Sep 14, 2022, 1:36 PM IST
Highlights

ಪ್ರಾಣಿಪಕ್ಷಿಗಳಿಗೆ ಆಹಾರ ಹಾಕಿದಾಗ ನಾವು ಅವಕ್ಕೇನೋ ಕೊಟ್ಟೆವೆಂದುಕೊಳ್ಳುತ್ತೇವೆ. ಆದರೆ, ನಾವು ಕೊಟ್ಟಿದ್ದಲ್ಲ, ಅದೃಷ್ಟವನ್ನು ಪಡೆದುಕೊಂಡಿರುವುದು ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. 

ಪಕ್ಷಿಗಳು ಮತ್ತು ಪ್ರಾಣಿಗಳಿಗೆ ಆಹಾರ ನೀಡುವುದರಿಂದ ನಿಮ್ಮ ಅದೃಷ್ಟವನ್ನು ಬದಲಾಯಿಸಬಹುದು! ಹಾಗೆನ್ನುತ್ತದೆ ಜ್ಯೋತಿಷ್ಯ. ಅನೇಕ ಪುರಾತನ ವೈದಿಕ ಗ್ರಂಥಗಳು ಈ ನಂಬಿಕೆಯನ್ನು ಬೆಂಬಲಿಸುತ್ತವೆ. ವಿಶೇಷವಾಗಿ, ಹಿಂದೂ ಧರ್ಮದ ಪ್ರಕಾರ, ಪ್ರಾಣಿ ಪ್ರೇಮಿಯಾಗುವುದರಿಂದ ಸಾಕಷ್ಟು ಗ್ರಹದೋಷಗಳಿಂದ ಮುಕ್ತರಾಗಬಹುದು. 

ಜ್ಯೋತಿಷ್ಯದ ದೃಷ್ಟಿಕೋನದಿಂದ, ಪ್ರಾಣಿಗಳ ಆರೈಕೆಯು ನಿಮ್ಮ ಪ್ರಸ್ತುತ ಜೀವನ ಕರ್ಮಕ್ಕೆ ಧನಾತ್ಮಕ ಸೇರ್ಪಡೆಯಾಗಿದೆ. ಅದರೊಂದಿಗೆ, ನಿಮ್ಮ ಜನ್ಮ ಜಾತಕದಲ್ಲಿರುವ ಅನೇಕ ಗ್ರಹಗಳನ್ನು ಸಹ ಸಮಾಧಾನಗೊಳಿಸುತ್ತದೆ ಮತ್ತು ಹಿಂದಿನ ಜೀವನದ ಸಾಲಗಳಿಂದ ವಿಮೋಚನೆ ಪಡೆಯಲು ನಿಮಗೆ ಸಹಾಯ ಮಾಡುತ್ತದೆ. ಪಕ್ಷಿಗಳು ಮತ್ತು ಪ್ರಾಣಿಗಳಿಗೆ ಆಹಾರವನ್ನು ನೀಡುವುದರಿಂದ ಆಗುವ ಲಾಭಗಳು ಮತ್ತು ಜ್ಯೋತಿಷ್ಯ ದೃಷ್ಟಿಕೋನ ಮತ್ತು ಅದಕ್ಕೆ ಸಂಬಂಧಿಸಿದ ಗ್ರಹಗಳ ಪರಿಹಾರಗಳ ಬಗ್ಗೆ ತಿಳಿದುಕೊಳ್ಳೋಣ.

ಸೂರ್ಯನನ್ನು ಬಲಪಡಿಸಲು
ಜಾತಕ(Horoscope)ದಲ್ಲಿ ಸೂರ್ಯ ದುರ್ಬಲನಾಗಿದ್ದರೆ ಆರೋಗ್ಯ ಸಮಸ್ಯೆ ಸೇರಿದಂತೆ ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸೂರ್ಯನನ್ನು ಶಾಂತಗೊಳಿಸಲು ಭಾನುವಾರದಂದು ಹಸುಗಳಿಗೆ ಗೋಧಿ ರೊಟ್ಟಿ ಮತ್ತು ಮಂಗಗಳಿಗೆ ಬೆಲ್ಲವನ್ನು ನೀಡುವುದು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.

ಚಂದ್ರದೋಷ ನಿವಾರಣೆಗೆ
ಚಂದ್ರ(Moon)ನ ಆಶೀರ್ವಾದವನ್ನು ಪಡೆಯಲು ಮೀನು ಅಥವಾ ಬಿಳಿ ಹಸುವಿಗೆ ಗೋಧಿ ಹಿಟ್ಟಿನ ಉಂಡೆಗಳನ್ನು ತಿನ್ನಿಸಬೇಕು ಮತ್ತು ಸೋಮವಾರದಂದು ಹಸುಗಳಿಗೆ ನೀರನ್ನು ನೀಡಬೇಕು.

Astro Remedies: ಬರೀ ಕೆಟ್ಟ ಕನಸೇ ಬೀಳ್ತಿದ್ಯಾ? ಈ ಪರಿಹಾರ ಮಾಡಿ..

ಕುಜ ಬಲವರ್ಧನೆಗೆ
ಮಂಗಳ ಗ್ರಹವನ್ನು ಮೆಚ್ಚಿಸಲು ಮಂಗಳವಾರ(Tuesday)ದಂದು ಮಂಗಗಳಿಗೆ ಬೇಳೆಕಾಳುಗಳು ಮತ್ತು ಬೆಲ್ಲ ತಿನ್ನಿಸಬೇಕು.

ಬುಧ ಗ್ರಹ ಬಲಪಡಿಸಲು
ಬುಧ ಗ್ರಹ ಬುದ್ಧಿವಂತಿಕೆ, ವ್ಯವಹಾರ ಕೌಶಲ ನೀಡುತ್ತದೆ. ಈ ಗ್ರಹದ ದೋಷ ಪರಿಹರಿಸಲು, ಹಸುಗಳಿಗೆ ಹಸಿರು ಹುಲ್ಲು ಅಥವಾ ಮೇವನ್ನು ನೀಡಬೇಕು. ಪಾರಿವಾಳ(Pegion)ಗಳಿಗೆ ರಾಗಿ ತಿನ್ನಿಸಬೇಕು ಮತ್ತು ಪಕ್ಷಿಗಳನ್ನು ಪಂಜರದಲ್ಲಿ ಇಡಬಾರದು. ಪಂಜರದಲ್ಲಿದ್ದರೆ ಅವನ್ನು ಹೊರಬಿಡಬೇಕು. ಹಾಗೆ ಮಾಡಲು ಉತ್ತಮ ದಿನ ಬುಧವಾರ.

ಗುರು ಬಲಕ್ಕಾಗಿ
ಗುರುಗ್ರಹದ ಆಶೀರ್ವಾದ ಪಡೆಯಲು ಗುರುವಾರದಂದು ಹಸುಗಳು, ಕುದುರೆಗಳಿಗೆ(Horse) ಕಾಳುಗಳನ್ನು, ಪಾರಿವಾಳಗಳಿಗೆ ನೆನೆಸಿದ ಕಾಳುಗಳು ಮತ್ತು ಬೆಲ್ಲವನ್ನು ಅರ್ಪಿಸಬೇಕು.

ಶುಕ್ರ ದೋಷ ನಿವಾರಣೆಗೆ
ಶುಕ್ರನನ್ನು ಮೆಚ್ಚಿಸಲು ಮತ್ತು ಅವನ ಆಶೀರ್ವಾದವನ್ನು ಪಡೆಯಲು ಶುಕ್ರವಾರವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ದಿನದಂದು ಬೆಕ್ಕುಗಳಿಗೆ ಹಾಲು(Milk) ಅಥವಾ ಮೀನುಗಳಿಗೆ ಆಹಾರವನ್ನು ನೀಡಬೇಕು.

ಶನಿ ಗ್ರಹದ ಆಶೀರ್ವಾದಕ್ಕಾಗಿ
ಶನಿವಾರದಂದು, ಶನಿ(Lord Shani) ಆಶೀರ್ವಾದ ಪಡೆಯಲು ಕಪ್ಪು ನಾಯಿಗಳಿಗೆ ಮತ್ತು ಕಪ್ಪು ಹಸುಗಳಿಗೆ ಎಣ್ಣೆಯ ಚಪಾತಿಗಳನ್ನು ತಿನ್ನಿಸಬೇಕು.

ರಾಹು ದೋಷ ನಿವಾರಣೆಗೆ
ರಾಹು ಗ್ರಹದ ಪೀಡನೆಯಿಂದ ಮುಕ್ತರಾಗಲು ಎಮ್ಮೆಗಳಿಗೆ ಹಸಿರು ಹುಲ್ಲು ಅಥವಾ ಮೇವನ್ನು ತಿನ್ನಿಸಬೇಕು. ಸಾಧ್ಯವಾದರೆ ಆನೆ(Elephant)ಗೂ ತಿನ್ನಿಸಿ. ಕೇತುವನ್ನು ಮೆಚ್ಚಿಸಲು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಾಯಿ, ಹಸು ಅಥವಾ ಮೊಲವನ್ನು ಸಾಕಲು, ಅವುಗಳನ್ನು ಚೆನ್ನಾಗಿ ನೋಡಿಕೊಳ್ಳಲು ಸಲಹೆ ನೀಡಲಾಗುತ್ತದೆ. ಇರುವೆಗಳಿಗೆ ಸಕ್ಕರೆಯೊಂದಿಗೆ ಎಳ್ಳು ಬೀಜಗಳನ್ನು ತಿನ್ನಿಸುವುದು ಕೂಡಾ ಉತ್ತಮವಾಗಿದೆ. 

ಹಸುವಿನಲ್ಲಿದ್ದಾರೆ ಮುಕ್ಕೋಟಿ ದೇವರು
ಎಲ್ಲಾ ಗ್ರಹಗಳ ಆಶೀರ್ವಾದವನ್ನು ಪಡೆಯಲು ಪ್ರತಿದಿನ ನಿಮ್ಮ ಆಹಾರದ ಭಾಗವನ್ನು ಹಸು(Cow)ವಿಗೆ ನೀಡಿ ಎಂದು ಹೇಳಲಾಗುತ್ತದೆ.

ಈ ರಾಶಿಗಳೊಂದಿಗೆ ಫಸ್ಟ್ ನೈಟ್ ಬೆಸ್ಟ್ ಆಗೋದಿಲ್ಲ, ಏಕೆಂದ್ರೆ ಇವ್ರದ್ರಲ್ಲಿ ಹಿಂದೆ..

ಅಳಿಲಿಗೆ ಆಹಾರ
ಅಳಿಲಿ(Squiril)ಗೆ ಆಹಾರವನ್ನು ನೀಡುವುದು ನಿಮ್ಮ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಅದು ನಿಮ್ಮ ಅದೃಷ್ಟವನ್ನು ಬಲಪಡಿಸುವ ಮೂಲಕ, ನಿಮ್ಮ ಕಠಿಣ ಪರಿಶ್ರಮದ ಮೂಲಕ ಸೌಕರ್ಯವನ್ನು ಪಡೆಯಲು ಸಹಾಯ ಮಾಡುತ್ತದೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!