Eyebrows ನೋಡಿ ವ್ಯಕ್ತಿತ್ವ ಹೇಳ್ಬೋದು!

By Suvarna NewsFirst Published Mar 26, 2022, 5:52 PM IST
Highlights

ವ್ಯಕ್ತಿಯ ವ್ಯಕ್ತಿತ್ವವನ್ನು ಹುಬ್ಬುಗಳ ಆಕಾರದಿಂದ ತಿಳಿಯಬಹುದು, ವಿವಿಧ ರೀತಿಯ ಉಪ್ಪು ಮತ್ತು ಜ್ಯೋತಿಷೀಯ ದೃಷ್ಟಿಕೋನ, ಹುಬ್ಬಿನಿಂದ ಸ್ವಭಾವವನ್ನು ತಿಳಿಯಿರಿ

ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ವ್ಯಕ್ತಿಗಳ ತಿಳಿಯಲು ಅನೇಕ ವಿಧಾನಗಳಿವೆ. ಜಾತಕ (Horoscope) ನೋಡಿ ಭವಿಷ್ಯದ (Future) ವಿಚಾರ ತಿಳಿಯುವುದು ಮುಖ್ಯವಾದ ಭಾಗವಾದರೆ, ಸಂಖ್ಯಾಶಾಸ್ತ್ರ, ಹಸ್ತ ಸಾಮುದ್ರಿಕಾ ಹೀಗೆ ಅನೇಕ ವಿಧಾನಗಳಿಂದ ಭವಿಷ್ಯದ ವಿಚಾರಗಳನ್ನು ತಿಳಿಯಬಹುದು. ಅಷ್ಟೇ ಅಲ್ಲದೆ ಶರೀರದ ರಚನೆಯ ಬದಲಾವಣೆಯಲ್ಲಿಯೂ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ತಿಳಿಯಬಹುದಾಗಿದೆ.  ಹಾಗಾಗಿ ಕಣ್ಣು, ಬೆರಳು, ಹಸ್ತದ ರಚನೆಯೂ ಸಹ ವ್ಯಕ್ತಿಯ ಸ್ವಭಾವದ ಬಗ್ಗೆ ತಿಳಿಸುತ್ತದೆ. ಅಷ್ಟೇ ಅಲ್ಲದೆ ಹುಬ್ಬು (Eyebrows) ಸಹ ವ್ಯಕ್ತಿಯ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ ಅದರಿಂದ ಸ್ವಭಾವವನ್ನು (Personality) ಸಹ ತಿಳಿಯಬಹುದಾಗಿದೆ. ಹಾಗಾಗಿ ಹುಬ್ಬುಗಳ ರಚನೆಯಿಂದ (Shape) ಸ್ವಭಾವವನ್ನು ತಿಳಿಯಬಹುದು . ಹುಬ್ಬುಗಳ ವಿವಿಧ ರೀತಿಯ ರಚನೆಯು ಏನನ್ನು ಸೂಚಿಸುತ್ತವೆ ಎಂಬುದನ್ನು ತಿಳಿಯೋಣ....

ದಪ್ಪವಾದ ಹುಬ್ಬುಗಳು (Thick eyebrows) : ದಪ್ಪವಾದ ಮತ್ತು ಹೆಚ್ಚು ಹುಬ್ಬಿನ ಕೂದಲುಗಳನ್ನು ಹೊಂದಿರುವವರು ಹೆಚ್ಚು ವಿಶ್ವಾಸಕ್ಕೆ ಯೋಗ್ಯರಾಗಿರುವುದಿಲ್ಲವೆಂದು ಹೇಳಲಾಗುತ್ತದೆ. ಈ ವ್ಯಕ್ತಿಗಳು ಹೆಚ್ಚು ಅಹಂಕಾರ ಗುಣವನ್ನು ಹೊಂದಿರುತ್ತಾರೆ. ಹಣದ ಬಗ್ಗೆ ಹೆಚ್ಚಿನ ವ್ಯಾಮೋಹವನ್ನು ಹೊಂದಿರುತ್ತಾರೆ. ಅಷ್ಟೆ ಅಲ್ಲದೆ ಸಾರಿ ಯಾವುದಾದರೂ ಸರಿ ಹಣ ಸಂಪಾದಿಸಬೇಕೆಂಬ ನಿಲುವು ಇವರದ್ದಾಗಿರುತ್ತದೆ. ಈ ರೀತಿ ಹುಬ್ಬು ಹೊಂದಿರುವ ವ್ಯಕ್ತಿಗಳು ಹೆಚ್ಚು ಸಿಟ್ಟನ್ನು ಬಂದಿರುತ್ತಾರೆ ಅಷ್ಟೇ ಚಾಲಾಕಿ ಕೂಡ ಆಗಿರುತ್ತಾರೆ.

ತೆಳುವಾದ ಹುಬ್ಬು (Thin eyebrows) : ತೆಳುವಾದ ಹುಬ್ಬನ್ನು ಹೊಂದಿರುವ ವ್ಯಕ್ತಿಗಳು ಸಮಾಧಾನ ಚಿತ್ತರಾಗಿರುತ್ತಾರೆ. ಸದಾ ಸಂತೋಷದಿಂದ ಇರುವ ಈ ವ್ಯಕ್ತಿಗಳಿಗೆ ತಾಳ್ಮೆಯೂ ಅತ್ಯಧಿಕವಾಗಿರುತ್ತದೆ. ಆದರ್ಶ ಮತ್ತು ಸಿದ್ಧಾಂತಗಳ ನೆಲೆಗಟ್ಟಿನಲ್ಲಿಯೇ  ಮುಂದುವರಿದು ಗುರಿ ಸಾಧಿಸುವ ಛಲ ಹೊಂದಿರುತ್ತಾರೆ. ಈ ವ್ಯಕ್ತಿಗಳು ಹೆಚ್ಚು ಜವಾಬ್ದಾರಿಯುತ ಗುಣವನ್ನು ಮತ್ತು ಹೆಚ್ಚಿನ ಜ್ಞಾನವನ್ನು ಹೊಂದಿರುತ್ತಾರೆ. ಅಷ್ಟೇ ಅಲ್ಲದೆ ಈ ವ್ಯಕ್ತಿಗಳ ಆರ್ಥಿಕ ಪರಿಸ್ಥಿತಿ ಚೆನ್ನಾಗಿರುತ್ತದೆ.

ಇದನ್ನು ಓದಿ: Vastu tips: ನಿಮ್ಮ ಬೆಡ್‌ರೂಮನ್ನು ಯಾರಿಗೂ ಬಿಟ್ಕೊಡ್ಬೇಡಿ!

ಕಡುಗಪ್ಪು ಹುಬ್ಬು (Dark black eyebrows) : ಗಾಢವಾದ ಕಪ್ಪು ಬಣ್ಣದ ಹುಬ್ಬನ್ನು ಹೊಂದಿರುವವರು ಹೆಚ್ಚು ಪ್ರತಿಭಾವಂತರಾಗಿರುತ್ತಾರೆ. ಕಲೆಯನ್ನು ಪ್ರೀತಿಸುವ ಈ ವ್ಯಕ್ತಿಗಳು ಐಷಾರಾಮಿ ವಸ್ತುಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ತಮ್ಮ ವೃತ್ತಿ ಕ್ಷೇತ್ರದ ಬಗ್ಗೆ ಹೆಚ್ಚು ಗಂಭೀರತೆ ಹೊಂದಿರುವ ಈ ವ್ಯಕ್ತಿಗಳು ಯಶಸ್ಸಿನ ಮೆಟ್ಟಿಲನ್ನು ಹತ್ತುವಲ್ಲಿ ಸಫಲರಾಗುತ್ತಾರೆ. 

ಕೂಡಿರುವ ಹುಬ್ಬು (Joint eyebrows) : ಹಲವಾರು ಜನರಿಗೆ ಹುಬ್ಬು ಕೂಡಿರುವುದನ್ನು ಗಮನಿಸಿರುತ್ತೇವೆ. ಅಂಥವರು ಚತುರರು ಮತ್ತು ಸಂಯಮವನ್ನು ಹೊಂದಿರುವವರು ಆಗಿರುತ್ತಾರೆ. ಈ ವ್ಯಕ್ತಿಗಳು ಸದಾ ತಮ್ಮ ಯಶಸ್ಸು ಮತ್ತು ಜೀವನದಲ್ಲಿ ಸಾಧಿಸಬೇಕಾದ ಗುರಿಗಳ ಬಗ್ಗೆಯೇ ಆಲೋಚಿಸುತ್ತಾ ಇರುತ್ತಾರೆ. ಇತರೆ ರಿಂದ ಹೇಗೆ ಕೆಲಸ ಮಾಡಿಸಿಕೊಳ್ಳಬೇಕು ಎಂಬ ಬಗ್ಗೆ ಚೆನ್ನಾಗಿ ತಿಳಿದಿರುತ್ತಾರೆ.

ಉದ್ದವಾದ ಹುಬ್ಬು (Lengthy eyebrows) : ಕೆಲ ವ್ಯಕ್ತಿಗಳ ಉಪ್ಪು ಇನ್ನೇನು ಕಿವಿಗೆ ತಾಕುತ್ತದೆ ಇನ್ನುವಷ್ಟು ಉದ್ದವಾಗಿರುತ್ತದೆ. ಅಂತಹ ವ್ಯಕ್ತಿಗಳು ಜಿಪುಣರಾಗಿರುತ್ತಾರೆ. ಅಷ್ಟೇ ಅಲ್ಲದೆ ಇವರು ಚಂಚಲ ಸ್ವಭಾವವನ್ನು ಹೊಂದಿದ್ದು, ಓದುವುದು ಮತ್ತು ಬರೆಯುವುದರಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವುದಿಲ್ಲ. ಇಂತಹ ವ್ಯಕ್ತಿಗಳಿಗೆ ವ್ಯಾವಹಾರಿಕ ಜ್ಞಾನವೂ ಕಡಿಮೆಯೇ ಎಂದು ಹೇಳಲಾಗುತ್ತದೆ. 

ಇದನ್ನು ಓದಿ: Solar Eclipse 2022: ಈ ವರ್ಷದಲ್ಲೆಷ್ಟು ಬಾರಿ ಸೂರ್ಯ ಗ್ರಹಣ?

ಹುಬ್ಬುಗಳ ಮಧ್ಯೆ ಹೆಚ್ಚಿನ ಅಂತರ (Gap between eyebrows) :  ಎರಡು ಹುಬ್ಬುಗಳ ಅಂತ್ಯದಲ್ಲಿ ಹೆಚ್ಚಿನ ಅಂತರವನ್ನು ಹೊಂದಿದ್ದರೆ ಅಂತಹ ವ್ಯಕ್ತಿಗಳು ಸ್ವಚ್ಚ ಮತ್ತು ಜೀವನದ ಬಗ್ಗೆ ಸ್ಪಷ್ಟತೆಯನ್ನು ಹೊಂದಿರುವವರು ಆಗಿರುತ್ತಾರೆ. ನೇರ ನುಡಿಯನ್ನು ಹೊಂದಿರುವವರು ಕಣ್ಣಿಗೆ ಕಂಡದ್ದನ್ನು ನೇರವಾಗಿ ಹೇಳಿಬಿಡುತ್ತಾರೆ. ಸಹಾಯದ ಆವಶ್ಯಕತೆ ಇದ್ದಾಗ ಹಿಂದೆಮುಂದೆ ಯೋಚಿಸದೆ ಸಹಾಯ ನೀಡುತ್ತಾರೆ. ಈ ವ್ಯಕ್ತಿಗಳ ದಾಂಪತ್ಯ ಜೀವನದಲ್ಲಿ ವಾದ - ವಿವಾದಗಳು ಆಗಾಗ ಆಗುತ್ತಿರುತ್ತವೆ.

click me!