Latest Videos

ಚಿಕ್ಕಮಗಳೂರು: ಮೂರ್ತಿಯ ಮೇಲೆ ಹುತ್ತ ಆವರಿಸಿದ್ದಕ್ಕೆ ಗರ್ಭಗುಡಿಯ ದೇವರನ್ನೇ ವಿಸರ್ಜಿಸೋ ಅಚ್ಚರಿ..!

By Girish GoudarFirst Published Aug 29, 2023, 12:13 PM IST
Highlights

ಬರೋಬ್ಬರಿ 10 ವರ್ಷಗಳ ಬಳಿಕ ಈ ಅಧಿದೇವತೆಯ ಮೈಮೇಲೆ ಸಂಪೂರ್ಣ ಆವರಿಸಿದ್ದ ಹುತ್ತವನ್ನು ತೆರವುಗೊಳಿಸಿ ಕೆಂಪಮ್ಮನ ಮೂರ್ತಿಯನ್ನು ವಿಸರ್ಜನೆ ಮಾಡುತ್ತಾರೆ. ಜಿಲ್ಲೆ ಸೇರಿದಂತೆ ನಾಡಿನಾದ್ಯಂತ ತನ್ನ ಪವಾಡಗಳಿಂದಲೇ ಹೆಸರು ಪಡೆದಿರೋ ಕುಂದೂರು ಗ್ರಾಮದ ದೇವಿಯ ಮೂರ್ತಿಯ ವಿಸರ್ಜನಾ ಕಾರ್ಯ ಗ್ರಾಮದಾದ್ಯಂತ ಸಂಭ್ರಮ-ಸಡಗರದಿಂದ ನಡೆದಿದೆ. 

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಆ.29):  ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕುಂದೂರು ಗ್ರಾಮದಲ್ಲಿ ನೆಲೆಸಿರೋ ಕೆಂಪಮ್ಮ ದೇವಿ ನಂಬಿದ ಸಹಸ್ರಾರು ಭಕ್ತರ ಪಾಲಿನ ಆರಾಧ್ಯ ಧೈವ. ಆಕೆಯ ಒಂದೊಂದು ಪವಾಡವನ್ನ ಕಣ್ಣಾರೆ ಕಂಡ ಭಕ್ತರು ಉಘೇ ಕೆಂಪಮ್ಮ ಅಂತ ತಲೆದೂಗುತ್ತಿದ್ದಾರೆ. ದಶಕಗಳಿಗೊಮ್ಮೆ ಆ ಸೃಷ್ಠಿಕರ್ತೆಗೂ ಹುತ್ತ ಆವರಿಸಿಕೊಳ್ಳುತ್ತಿತ್ತು. ಹೇಗಂದ್ರೆ, ಕಲ್ಲಿನ ದೇವಸ್ಥಾನದಲ್ಲಿ ಎಲ್ಲಿಂದ ಹತ್ತು ಬರುತ್ತಿತ್ತು ಗೊತ್ತಿಲ್ಲ. ಆದ್ರೆ, ನೋಡ-ನೋಡ್ತಿದ್ದಂತೆ ಆಕೆ ಮೈತುಂಬ ಹುತ್ತ ಆವರಿಸಿಕೊಳ್ಳುತ್ತಿತ್ತು. ಗರ್ಭಗುಡಿಯ ಮೂರ್ತಿಯನ್ನೇ ಆವರಿಸೋ ಹುತ್ತದ ಮಹಿಮೆ ನಿಜಕ್ಕೂ ಕೌತುಕ. 

ಒಂದು ದಶಕದ ಬಳಿಕ ಗರ್ಭಗುಡಿ ದೇವರ ವಿಸರ್ಜನಾ ಕಾರ್ಯ

ಶಕ್ತಿರೂಪಿಣಿ... ಕಾಂತ್ಯಾಯಿಣಿ... ವಿಶ್ವರೂಪಿಣಿ... ಹೀಗೆ ಹತ್ತು ಹಲವು ಹೆಸರುಗಳಿಂದ ಕರೆಸಿಕೊಳ್ಳೋ ದೇವತೆಗಳ ಪೈಕಿ ಚಾಮುಂಡಿ ತಾಯಿ ನಾಡಿನ ಅಧಿದೇವತೆ. ಅದರ ಮತ್ತೊಂದು ರೂಪವೇ ಕಾಫಿನಾಡ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಕುಂದೂರು ಗ್ರಾಮದಲ್ಲಿ ನೆಲೆಸಿರೋ ಕೆಂಪಮ್ಮ ದೇವಿ...! ನೂರಾರು ವರ್ಷಗಳಿಂದ ಉಗ್ರ ರೂಪಿಯಂತೆ ಈ ಗ್ರಾಮದಲ್ಲಿ ನೆಲೆಸಿರುವ ಕೆಂಪಮ್ಮ ದೇವಿಯ ಅಚ್ಚರಿ ಪವಾಡಗಳಿಗೆ ಸಹಸ್ರಾರು ಭಕ್ತರನ್ನು ಆಶ್ಚರ್ಯಚಕಿತರಾಗಿದ್ದಾರೆ. ಇಂಥ ಅಚ್ಚರಿ ವಿಸ್ಮಯಕ್ಕೆ ಕಾರಣ ಕೆಂಪಮ್ಮ ದೇವಿಯ ಗರ್ಭಗುಡಿಯ ಮೂರ್ತಿಯನ್ನೇ ಹುತ್ತ ಸಂಪೂರ್ಣ ಆವರಿಸುತ್ತೆ.  ಹುತ್ತ ಆವರಿಸಿತು ಅಂದ್ರೆ ಕೆಂಪಮ್ಮನ ಮೂರ್ತಿಯನ್ನೇ ವಿಸರ್ಜಿಸುವ ಕಾಲ ಬಂತು ಅಂತ ಅರ್ಥ..! ಇದೀಗ ಆ ಘಳಿಗೆ ಕೂಡಿ ಬಂದಿದ್ದು ಬರೋಬ್ಬರಿ 10 ವರ್ಷಗಳ ಬಳಿಕ ಈ ಅಧಿದೇವತೆಯ ಮೈಮೇಲೆ ಸಂಪೂರ್ಣ ಆವರಿಸಿದ್ದ ಹುತ್ತವನ್ನು ತೆರವುಗೊಳಿಸಿ ಕೆಂಪಮ್ಮನ ಮೂರ್ತಿಯನ್ನು ವಿಸರ್ಜನೆ ಮಾಡುತ್ತಾರೆ. ಜಿಲ್ಲೆ ಸೇರಿದಂತೆ ನಾಡಿನಾದ್ಯಂತ ತನ್ನ ಪವಾಡಗಳಿಂದಲೇ ಹೆಸರು ಪಡೆದಿರೋ ಕುಂದೂರು ಗ್ರಾಮದ ದೇವಿಯ ಮೂರ್ತಿಯ ವಿಸರ್ಜನಾ ಕಾರ್ಯ ಗ್ರಾಮದಾದ್ಯಂತ ಸಂಭ್ರಮ-ಸಡಗರದಿಂದ ನಡೆದಿದೆ. 

ಈ ಬಾರಿ ಮೈಸೂರು ದಸರಾ ಉದ್ಘಾಟನೆಗೆ ನಾದಬ್ರಹ್ಮ ಹಂಸಲೇಖ ಆಯ್ಕೆ: ಸಿಎಂ ಸಿದ್ದರಾಮಯ್ಯ ಘೋಷಣೆ

ದೇವಿಯ ವಿಸರ್ಜನಾ ಕಾರ್ಯ : 

ಇನ್ನು ಐತಿಹಾಸಿಕ ಪುರಾಣದ ಮಾಹಿತಿ ಪ್ರಕಾರ ನೂರಾರು ವರ್ಷಗಳ ಹಿಂದೆ ದಟ್ಟ ಕಾನನವಾಗಿದ್ದ ಈ ಗ್ರಾಮದಲ್ಲಿ ನಿತ್ಯವೂ ಹಸು ಒಂದು ಹುತ್ತಕ್ಕೆ ಹಾಲೆರೆದು ಹೋಗುತ್ತಿದ್ದದ್ದನ್ನ ಕಂಡ ಗ್ರಾಮಸ್ಥರು, ದೈವ ಪಂಡಿತರ ಬಳಿ ಘಟನೆ ವಿವರಿಸಿದಾಗ ಇಲ್ಲಿ ಕೆಂಪಮ್ಮ ದೇವಿ ನೆಲೆಸಿದ್ದಾಳೆ ಅಂದಿದ್ರಂತೆ. ಅಂದಿನಿಂದ ಶುರುವಾದ ಕೆಂಪಮ್ಮ ದೇವಿಯ ವಿಗ್ರಹ ಆರಾಧನೆ ಇಂದಿಗೂ ಮುಂದುವರೆದಿದೆ. ಅಚ್ಚರಿ ಅಂದ್ರೆ 20 ವರ್ಷಗಳಿಗೊಮ್ಮೆ, ಕೆಲವೊಮ್ಮೆ 10 ವರ್ಷಗಳಿಗೆ ದೇವಿಯ ಹಣೆ ತನಕವು ಹುತ್ತದ ಮಣ್ಣು ಸಂಪೂರ್ಣ ಆವರಿಸಿದ ದೃಶ್ಯ ಕಣ್ತುಂಬಿಕೊಳ್ಳಲು ಜಿಲ್ಲೆ ಸೇರಿದಂತೆ ರಾಜ್ಯ-ಹೊರ ರಾಜ್ಯಗಳೆಂದಲೂ ಭಕ್ತರು ಆಗಮಿಸುತ್ತಾರೆ. ಹತ್ತು ವರ್ಷಗಳ ಹಿಂದೆ ಇಡೀ ಮೂರ್ತಿಯನ್ನು ಆವರಿಸಿದ್ದ ಹುತ್ತ ಇದೀಗ ಮತ್ತೆ ಸಂಪೂರ್ಣ ಆವರಿಸಿದ್ದು ದೇವಿಯ ವಿಸರ್ಜನಾ ಕಾರ್ಯ ಅದ್ದೂರಿಯಾಗಿ ನಡೆಯಿತು. ಭಕ್ತರ ನಂಬಿಕೆ ಹಾಗೂ ದೇವಿಯ ಆಗ್ನೇಯಂತೆ ಕಲ್ಲಿನ ಮೂರ್ತಿಯನ್ನು ಮಾಡಲು ಗ್ರಾಮಸ್ಥರು ನಿರ್ಧರಿಸಿದ್ದು, ಕೆಲವೇ ದಿನಗಳಲ್ಲಿ ಮತ್ತೊಂದು ಅಚ್ಚರಿಕೆ ಸಾಕ್ಷಿಯಾಗಲಿದ್ದಾಳೆ ಈ ದೇವಿ. 

ಒಟ್ಟಾರೆ, ದೇವರ ಅಂದ್ರೆನೆ ಒಂದು ಶಕ್ತಿ. ದೈವದ ಒಂದೊಂದು ಪವಾಡ ಹೊರಬಂದಾಗಲೂ ಭಕ್ತವೃಂದ ಕೈಮುಗಿದು ಊಘೇ ಅನ್ನುತ್ತೆ. ಹುತ್ತದ ಕೆಂಪಮ್ಮ ಕೂಡ ಗರ್ಭಗುಡಿಯಲ್ಲಿ ಕೂತು ಪವಾಡಗಳಿಗೆ ಸಾಕ್ಷಿಯಾಗುತ್ತಿದ್ದಾಳೆ. ಭಕ್ತರ ಕಷ್ಟ-ಕೋಟಲೆ, ನೋವುಗಳಿಗೆ ನೆರವಾಗುತ್ತಾ, ಹುತ್ತದ ಕೆಂಪಮ್ಮ ಎಂದೇ ನಾಡಿನಾದ್ಯಂತ ಪ್ರಸಿದ್ಧಿ ಪಡೆದಿರೋ ಕುಂದೂರು ಕೆಂಪಮ್ಮ ದೇವಿಯ ವಿಸ್ಮಯ ಅಚ್ಚರಿಗೆ ಸಾವಿರಾರು ಭಕ್ತರು ಸಾಕ್ಷಿಯಾಗಿದ್ದಾರೆ.

click me!