Ratha Saptami: ಇಂದು ಜಗದ ಹುಟ್ಟಿನ ಕಾರಣಕರ್ತ ಸೂರ್ಯ ಹುಟ್ಟಿದ ದಿನ- ರಥಸಪ್ತಮಿ

By Suvarna News  |  First Published Feb 7, 2022, 10:00 AM IST

ಸೂರ್ಯನೇ ಈ ಜಗತ್ತಿನ ದೇವರು ಎನ್ನುತ್ತಾನೆ ಕೃಷ್ಣ. ಅಂಥ ಸೂರ್ಯನ ಜಯಂತಿ ಇಂದು- ರಥಸಪ್ತಮಿ. ಜಗದ ಸರ್ವ ಜೀವಿಗಳ ಅಸ್ತಿತ್ವಕ್ಕೆ ಕಾರಣಕರ್ತನಾಗಿರುವ ಸೂರ್ಯನ ಪೂಜೆಗಾಗಿ ಈ ದಿನ ಮೀಸಲು. 


ಕಾಶ್ಯಪ ಋಷಿ ಹಾಗೂ ಅದಿತಿ ದೇವಿ ದಂಪತಿಗೆ ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿಯಂದು ಜನಿಸಿದ ಮಗುವೇ ಸೂರ್ಯದೇವ. ಸೂರ್ಯ ಜಯಂತಿಯ ಈ ದಿನವನ್ನು ರಥಸಪ್ತಮಿ ಎನ್ನಲಾಗುತ್ತದೆ. ಈ ದಿನಕ್ಕೆ ಆರೋಗ್ಯ ಸಪ್ತಮಿ ಇಲ್ಲವೇ ಅಚಲ ಸಪ್ತಮಿ ಎಂಬ ಹೆಸರುಗಳೂ ಇವೆ. 
ವಸಂತ ಪಂಚಮಿಯಾಗಿ ಎರಡೇ ದಿನಕ್ಕೆ ರಥಸಪ್ತಮಿ ಬರುತ್ತದೆ. ಈ ದಿನ ಯಾಕೆ ಅಷ್ಟು ಪ್ರಾಮುಖ್ಯತೆ ಪಡೆದಿದೆ, ನಾವಿದನ್ನು ಏಕೆ ಆಚರಿಸಬೇಕು ಎಂಬುದಕ್ಕೆ ಉತ್ತರ ಇಲ್ಲಿದೆ. 

ದೇವರು ನಮ್ಮ ಕಣ್ಣಿಗೆ ಕಾಣುವುದಿಲ್ಲ. ಆದರೆ ಅನುಭವಕ್ಕೆ ಬರುತ್ತಾರೆ. ಆದರೆ, ನಮ್ಮ ಕಣ್ಣಿಗೆ ಕಾಣುವ ಒಬ್ಬೇ ಒಬ್ಬ ದೇವರಿದ್ದರೆ ಅದು ಸೂರ್ಯ ದೇವ. ವೇದದಲ್ಲೂ ಸೂರ್ಯನನ್ನು ದೇವರೆಂದೇ ಹೆಸರಿಸಲಾಗಿದೆ. ಅಷ್ಟೇ ಏಕೆ, ಸ್ವತಃ ಶ್ರೀ ಕೃಷ್ಣನೇ ಸೂರ್ಯನಿಗಿಂತ ಬೇರೆ ದೇವರು ಜಗತ್ತಿನಲ್ಲಿಲ್ಲ ಎಂದಿದ್ದಾನೆ.

Tap to resize

Latest Videos

undefined

ಇಡೀ ಜಗತ್ತು ಕತ್ತಲಲ್ಲಿ ಮುಳುಗಿರುವಾಗ ಶಿವ ಸೂರ್ಯನನ್ನು ಸೃಷ್ಟಿಸಿದನಂತೆ. ಮಹಾವಿಷ್ಣುವಿನ ಶಕ್ತಿಗಳ ಸಂಚಯ ರೂಪ ಸೂರ್ಯನಾಗಿದ್ದು, ಆತ ಜೀವ ನೀಡುವವನು, ಕಾಯುವವನು. ಮಾನವನ ದೇಹದಲ್ಲಿ ಬೆಳಕಿನಂತೆ ಇರುವ ಆತ್ಮ ಸೂರ್ಯನ ಅಂಶವಾಗಿದೆ. ಇಡೀ ಜಗತ್ತು ಹುಟ್ಟಿದ್ದೇ ಸೂರ್ಯನ ಬೆಳಕಿನಲ್ಲಿ. ಅದು ಕೊನೆಗೊಂಡಾಗ ಜಗತ್ತೂ ಕೊನೆಗೊಳ್ಳುತ್ತದೆ. ಸೂರ್ಯ ಸದಾ ಜೀವಿಗಳ ಆರೋಗ್ಯ ಕಾಯುತ್ತಾನೆ. ಅವನಿಗೆ ಅರೆಗಂಟೆ ಗ್ರಹಣ ಕವಿದರೂ ಜಗತ್ತು ರೋಗಭೀತಿಯಲ್ಲಿ ನಲುಗುತ್ತದೆ. 

ಸೂರ್ಯನ ಬಗ್ಗೆ ಇನ್ನಷ್ಟು ಮಾಹಿತಿ
ಸೂರ್ಯನ ಮಲಸಹೋದರನಾದ ಅರುಣನು ಈತನ ರಥ(chariot)ವನ್ನು ಓಡಿಸುತ್ತಾನೆ. ಈ ರಥಕ್ಕೆ 12 ಚಕ್ರಗಳಿದ್ದು, ಏಳು ಕುದುರೆಗಳು(seven horses) ಇವನ್ನು ಎಳೆಯುತ್ತವೆ. 12 ಚಕ್ರಗಳು 12 ರಾಶಿಯನ್ನು ಪ್ರತಿನಿಧಿಸಿದರೆ, ಏಳು ಕುದುರೆಗಳು ಕಾಮನಬಿಲ್ಲಿನ(rainbow) ಏಳು ಬಣ್ಣಗಳ ಸೂಚಕವಾಗಿವೆ. ಮತ್ತೊಂದು ಚಿಂತನೆ ಪ್ರಕಾರ, ಏಳು ಕುದುರೆಗಳು ವಾರದ ಏಳು ದಿನಗಳನ್ನು ಪ್ರತಿನಿಧಿಸುತ್ತವೆ. ಅಂದರೆ ನಮ್ಮ ಜಾತಕವನ್ನು, ನಾವು ಕಳೆಯುವ ಪ್ರತಿ ದಿನವನ್ನೂ ಸೂರ್ಯನೇ ನಿರ್ವಹಿಸುವುದು. ಅಂದರೆ ನಮ್ಮ ಜೀವನದ ಸಂಪೂರ್ಣವನ್ನೂ ಆತನೇ ನಿರ್ವಹಿಸುತ್ತಾನೆ. 

ಗ್ರಹಗಳ ರಾಜ
ಸೂರ್ಯನು ಗ್ರಹಗಳ ರಾಜನಾಗಿದ್ದು, ಆತ ಜಾತಕದಲ್ಲಿ ಬಲವಾಗಿದ್ದರೆ ವ್ಯಕ್ತಿಯ ಪ್ರಗತಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. 

ರಾಮನಿಗೆ ಜಯ ತಂದವನು
ರಾವಣ(Ravan)ನೊಂದಿಗಿನ ಯುದ್ಧದ ಸಂದರ್ಭದಲ್ಲಿ ರಾಮ(Lord Ram) ದಣಿಯುತ್ತಾನೆ. ಈ ಸಂದರ್ಭದಲ್ಲಿ ಋಷಿವರ್ಯರ ಮಾತಿನಂತೆ ರಾಮನು ಆದಿತ್ಯ ಹೃದಯ ಶ್ಲೋಕ ಪಠಣ ಮಾಡುತ್ತಾನೆ. ಇದರಿಂದ ಅವನಲ್ಲಿ ಅದಮ್ಯ ಚೈತನ್ಯ ತುಂಬಿ ರಾವಣ ಸಂಹಾರ ಸಾಧ್ಯವಾಗುತ್ತದೆ. 

Tulsi plant Vastu: ತುಳಸಿಯಿಂದ ಸಂತೋಷ ಮನೆಗೆ ತರಲು ಹೀಗ್ಮಾಡಿ

ಆಚರಣೆ ಹೇಗೆ?
ಈ ದಿನ ಭಕ್ತರು ಮುಂಜಾನೆ ಬೇಗ ಎದ್ದು ಅರುಣೋದಯ ಸಂದರ್ಭದಲ್ಲಿ ಸ್ನಾನ ಮಾಡುತ್ತಾನೆ. ನಂತರ ಸೂರ್ಯನಿಗೆ ಕಲಶದಿಂದ ನೀರು ಚೆಲ್ಲುತ್ತಾ ಅರ್ಘ್ಯ ಬಿಡುತ್ತಾರೆ. ನಂತರ ದೀಪ ಹಚ್ಚಿ, ಕೆಂಪು ಹೂ(Red Flower)ಗಳಿಂದ ಸೂರ್ಯ ದೇವನನ್ನು ಪೂಜಿಸುತ್ತಾರೆ. ಈ ಸಂದರ್ಭದಲ್ಲಿ ಸೂರ್ಯ ಮಂತ್ರಗಳನ್ನೇ ಹೇಳಿಕೊಳ್ಳಬೇಕು. 
ಮಂತ್ರ ಹೀಗಿದೆ;
ನಮಃ ಸೂರ್ಯಾಯ ಶಾಂತಾಯ ಸರ್ವರೋಗ ನಿವಾರಿಣೇ
ಆಯುರಾರೋಗ್ಯ ಮೈಶ್ವರ್ಯಂ ದೇಹಿ ದೇವಾ ಜಗತ್ಪತೇ

ಇದರರ್ಥ ಹೀಗಿದೆ- ಈ ಜಗತ್ತನ್ನು ತನ್ನ ಶಕ್ತಿಯಿಂದಾಗಿ ಸಲಹುತ್ತಿರುವ, ಜನರನ್ನು ರೋಗಮುಕ್ತವಾಗಿಸುತ್ತಿರುವ, ಜಗತ್ತನ್ನು ಆಳುತ್ತಿರುವ ಸೂರ್ಯ ದೇವನಿಗೆ ನಾನು ನಮಿಸುತ್ತೇನೆ. ನಮಗೆ ಆರೋಗ್ಯ, ಸಂಪತ್ತನ್ನು ಆಶೀರ್ವದಿಸು. 
ಪೂಜೆ ಮುಗಿಸುವಾಗ ಓಂ ಭಾಸ್ಕರಾಯ ವಿದ್ಮಹೇ, ಮಹಾದುತ್ಯಥಿಕರಾಯ ಧೀಮಹೀ, ತನ್ನೋ ಸೂರ್ಯ ಪ್ರಚೋದಯಾತ್(ಸೂರ್ಯ ಗಾಯತ್ರಿ ಮಂತ್ರ) ಹೇಳಬೇಕು. 
ಅಂದರೆ ಜಗತ್ತನ್ನು ಅಂಧಕಾರದಿಂದ ಮುಕ್ತಗೊಳಿಸುವವನೇ, ನಿನ್ನ ಧ್ಯಾನದಿಂದ ಕೃತಾರ್ಥ ಮಾಡು ಎಂದು. 

ರಥ ಸಪ್ತಮಿಯ ದಿನ ಮಾಡುವ ಪೂಜೆಯಿಂದ ನಮ್ಮೆಲ್ಲ ಪಾಪ ಕರ್ಮಗಳನ್ನು ಕಳೆದುಕೊಳ್ಳಬಹುದು ಎನ್ನಲಾಗುತ್ತದೆ. 

Zodiac Compatibility: ವಿವಾಹಕ್ಕೆ ನಿಮ್ಮ ರಾಶಿಗೆ ಯಾವ ರಾಶಿಗಳು ಚೆನ್ನಾಗಿ ಹೊಂದುತ್ತವೆ?

ಸೂರ್ಯ ದೇವಾಲಯಗಳು(Sun Temples)
ಭಾರತದ ಪ್ರಸಿದ್ಧ ಸೂರ್ಯ ದೇವಾಲಯಗಳಾದ ಒರಿಸ್ಸಾದ ಕೊನಾರ್ಕ್, ಗುಜರಾತ್‌ನ ಮೊಧೆರಾ ಸೂರ್ಯ ದೇವಾಲಯ, ಜಮ್ಮುಕಾಶ್ಮೀರದ ಮಾರ್ತಾಂಡ ದೇವಾಲಯ, ಆಂಧ್ರದ ಅರಸವಲ್ಲಿ ಶ್ರೀಕಾಕುಲಂ, ತಮಿಳು ನಾಡಿನ ಸೂರಿಯಾನರ್ ಕೋವಿಲ್ ದೇವಾಲಯಗಳಲ್ಲಿ ಇಂದು ಭಕ್ತರು ಅಪಾರ ಸಂಖ್ಯೆಯಲ್ಲಿ ನೆರೆದು ಸೂರ್ಯ ದೇವರಿಗೆ ನಮಿಸುತ್ತಾರೆ. 

click me!