Eid-ul-Fitr 2024 : ಕೇರಳದಲ್ಲಿ ಚಂದ್ರ ದರ್ಶನ, ಕರಾವಳಿಯಾದ್ಯಂತ ನಾಳೆಯೇ ಈದ್ ಉಲ್ ಫಿತರ್ ಆಚರಣೆ

By Ravi Janekal  |  First Published Apr 9, 2024, 9:33 PM IST

ಮಂಗಳವಾರ (ಏಪ್ರಿಲ್ 9) ಕೇರಳದ ಪೊನ್ನಾನಿಯಲ್ಲಿ ಚಂದ್ರ ದರ್ಶನವಾದ ಹಿನ್ನಲೆ ಪಶ್ಚಿಮ ಕರಾವಳಿ ತೀರದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಎಪ್ರಿಲ್ 10 (ಬುಧವಾರ) ರಂದು ಈದ್ ಉಲ್ ಫೀತರ್(ರಂಜಾನ್) ಆಚರಿಸಲು ದಕ್ಷಿಣ ಕನ್ನಡ ಖಾಝಿಗಳಾದ ಸಯ್ಯದ್ ಫಝಲ್ ಕೋಯಮ್ಮ ತಂಜಳ್ ಕೂರ ಹಾಗೂ ತ್ವಾಖಾ ಅಹ್ಮದ್ ಮುಸ್ಲಿಯಾರ್ ಕರೆ ನೀಡಿದ್ದಾರೆ.


ಉಡುಪಿ (ಏ.9): ಮಂಗಳವಾರ (ಏಪ್ರಿಲ್ 9) ಕೇರಳದ ಪೊನ್ನಾನಿಯಲ್ಲಿ ಚಂದ್ರ ದರ್ಶನವಾದ ಹಿನ್ನಲೆ ಪಶ್ಚಿಮ ಕರಾವಳಿ ತೀರದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಎಪ್ರಿಲ್ 10 (ಬುಧವಾರ) ರಂದು ಈದ್ ಉಲ್ ಫೀತರ್(ರಂಜಾನ್) ಆಚರಿಸಲು ದಕ್ಷಿಣ ಕನ್ನಡ ಖಾಝಿಗಳಾದ ಸಯ್ಯದ್ ಫಝಲ್ ಕೋಯಮ್ಮ ತಂಜಳ್ ಕೂರ ಹಾಗೂ ತ್ವಾಖಾ ಅಹ್ಮದ್ ಮುಸ್ಲಿಯಾರ್ ಕರೆ ನೀಡಿದ್ದಾರೆ.

ಈ ಬಗ್ಗೆ ಪತ್ರಿಕೆ ಪ್ರಕಟಣೆ ಮೂಲಕ ತಿಳಿಸಿರುವ ಖಾಜಿ, ದಕ್ಷಿಣಕನ್ನಡ, ಉಡುಪಿ ಕಾಸರಗೋಡು ಸೇರಿ ನಾಳೆ ಬುಧವಾರದಂದೇ ಹಬ್ಬ ಆಚರಣೆ ಮಾಡಲು ತಿಳಿಸಿದ್ದಾರೆ. ಅಂದರೆ 29 ದಿನದ ಉಪವಾಸ ವ್ರತ ನಾಳೆ ರಂಜಾನ್ ಹಬ್ಬ ಆಚರಣೆ ಮಾಡುವ ಮೂಲಕ ಅಂತ್ಯವಾಗಲಿದೆ. 

Latest Videos

undefined

ಭಾರತದಲ್ಲಿ ಗೋಚರವಾಗದ ಚಂದ್ರ, ದೇಶಾದ್ಯಂತ ಏಪ್ರಿಲ್‌ 11ಕ್ಕೆ ಈದ್‌ ಆಚರಣೆ 

ಈದ್-ಉಲ್-ಫಿತರ್ ವಿಶ್ವಾದ್ಯಂತ ಮುಸ್ಲಿಮರು ಆಚರಿಸುವ ಅತ್ಯಂತ ಮಹತ್ವದ ಇಸ್ಲಾಮಿಕ್ ಆಚರಣೆಗಳಲ್ಲಿ ಒಂದಾಗಿದೆ ಮತ್ತು ಉಪವಾಸದ ಪವಿತ್ರ ತಿಂಗಳಾದ ರಂಜಾನ್ ಚಂದ್ರ ದರ್ಶನದೊಂದಿಗೆ ಅಂತ್ಯವನ್ನು ಸೂಚಿಸುತ್ತದೆ. ದೇಶದ ಹಲವೆಡೆ ಚಂದ್ರ ದರ್ಶನವಾಗದ ಹಿನ್ನೆಲೆ ಏ.11 ರಂದು ಆಚರಿಸಲಾಗುತ್ತಿದೆ.
 

click me!