Spirituality: ಆಧ್ಯಾತ್ಮ ಬಳಸಿ ನಕಾರಾತ್ಮಕ ಯೋಚನೆಗಳಿಗೆ ಬೈ ಹೇಳಿ..

By Suvarna News  |  First Published May 15, 2022, 2:47 PM IST

ನಕಾರಾತ್ಮಕ ಆಲೋಚನೆಗಳು ನಿಮ್ಮನ್ನು ವಿನಾಶದ ಅಂಚಿಗೆ ತಳ್ಳುತ್ತವೆ. ಅವು ಎಂದಿಗೂ ಒಳಿತು ಮಾಡಲಾರವು. ಏನಾದರೂ ಒಳ್ಳೆಯದಾಗಬೇಕೆಂದರೆ ಒಳ್ಳೆಯ ದೃಷ್ಟಿಯಲ್ಲಿ ನೋಡಬೇಕು. ನಕಾರಾತ್ಮಕ ಯೋಚನೆಗಳನ್ನು ದೂರವಿರಿಸಲು ಏನು ಮಾಡಬೇಕು?


ನಕಾರಾತ್ಮಕ ಆಲೋಚನೆಗಳು(Negative thoughts) ನಮ್ಮ ಯೋಚನೆಯ ದಿಕ್ಕು ತಪ್ಪಿಸುತ್ತವೆ. ಎಲ್ಲದರಲ್ಲೂ, ಎಲ್ಲರಲ್ಲೂ ತಪ್ಪು ಕಂಡು ಹಿಡಿಯುವಂತೆ ಮಾಡುತ್ತವೆ. ವೃಥಾ ಕೆಟ್ಟ ಸನ್ನಿವೇಶಗಳನ್ನು ಕಲ್ಪಿಸಿಕೊಂಡು ಭಯ ಪಡುವಂತೆ ಮಾಡುತ್ತವೆ. ನಮ್ಮ ಮನಸ್ಸಿನ ಸಂತೋಷ ಕರಗಿಸಿ ದುಃಖ, ಆತಂಕ, ಚಿಂತೆ ಹೆಚ್ಚಿಸುತ್ತವೆ. ನಿಧಾನವಾಗಿ ಅವು ನಮ್ಮನ್ನು ಖಿನ್ನತೆ(depression)ಗೆ ತಳ್ಳಬಹುದು. ಈ ಮೂಲಕ ಬದುಕನ್ನು ಭಯಾನಕವಾಗಿಸಬಹುದು. ಕಡ್ಡಿಯಂತಿರುವ ಕಷ್ಟವನ್ನು ಗುಡ್ಡವಾಗಿಸಬಹುದು. ಇಂಥ ಸಮಸ್ಯೆಗಳಿಗೆ ಮೂಲ ಕಾರಣವಾಗುವ ನಕಾರಾತ್ಮಕ ಯೋಚನೆಗಳಿಂದ ಹೊರ ಬರಬೇಕೆಂದರೆ ಅದಕ್ಕೆ ಸ್ವಪ್ರಯತ್ನವೇ ಬೇಕು. ನಕಾರಾತ್ಮಕ ಯೋಚನೆಗಳಿಂದ ಪಾರಾಗಲು ನೀವೇನು ಮಾಡಬಹುದು ಎಂದು ಇಲ್ಲಿ ಕೆಲ ತಂತ್ರಗಳನ್ನು ಕೊಡಲಾಗಿದೆ. ಅವುಗಳನ್ನು ಪ್ರಯತ್ನಿಸಿ, ಶುದ್ಧೀಕರಿಸಿ ಮತ್ತು ಆಧ್ಯಾತ್ಮಿಕವಾಗಿ ಮನಸ್ಸನ್ನು ಹಗುರಗೊಳಿಸಿ.

ನಿಮ್ಮ ಸುತ್ತಲೂ ಸಕಾರಾತ್ಮಕ(Positive) ಜನರನ್ನು ಇರಿಸಿಕೊಳ್ಳಿ
ನಕಾರಾತ್ಮಕ ಜನರ ಸಹವಾಸವು ಅಪಾಯಕಾರಿ. ಏಕೆಂದರೆ ಅದು ನಿಮ್ಮನ್ನು ಕೆಳಕ್ಕೆ ಎಳೆಯುತ್ತದೆ. ಸಹವಾಸದಿಂದ ಸನ್ಯಾಸಿ ಕೆಟ್ಟ ಎಂಬ ಗಾದೆಯೇ ಇದೆಯಲ್ಲ. ಆದ್ದರಿಂದ ನೀವು ಹೆಚ್ಚು ಸಕಾರಾತ್ಮಕರಾಗಿರುವವರ ಮತ್ತು ಹರ್ಷಚಿತ್ತದಿಂದ ಇರುವವರ ಸಂಗ ಮಾಡಿ. ಸದಾ ಇತರರನ್ನು ದೂರುವವರೊಂದಿಗೆ, ಗಾಸಿಪ್ ಮಾಡುವವರೊಂದಿಗೆ ಇರಬೇಡಿ. ಚಟಗಳಂತೂ ಬೇಡವೇ ಬೇಡ. 

Tap to resize

Latest Videos

ಧನಾತ್ಮಕವಾಗಿರಿ
ಅರ್ಧ ಗ್ಲಾಸ್ ಮಾತ್ರ ಇದೆ ಎನ್ನುವುದಕ್ಕೂ ಅರ್ಧ ಗ್ಲಾಸ್ ನೀರಾದರೂ ಇದೆಯಲ್ಲಾ ಎನ್ನುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಎರಡನೆಯ ರೀತಿ ಯೋಚಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಸಕಾರಾತ್ಮಕವಾಗಿ ಮಾತ್ರ ಮಾತನಾಡಲು ಮತ್ತು ಯೋಚಿಸಲು ನಿಮ್ಮ ಮನಸ್ಸಿಗೆ ಅಭ್ಯಾಸ ಮಾಡಿಸಿ. ಅದು ಹಾದಿ ತಪ್ಪಿದಾಗ ಎಳೆದು ತಂದು ಬುದ್ಧಿ ಹೇಳಿ. ನಿಮಗೆ ಸಂತೋಷವನ್ನುಂಟು ಮಾಡುವ ಚಟುವಟಿಕೆಗಳು ಮತ್ತು ಹವ್ಯಾಸಗಳಲ್ಲಿ(Hobbies) ತೊಡಗಿಸಿಕೊಳ್ಳಿ. ಪ್ರತಿದಿನ ಧ್ಯಾನ(meditation) ಮಾಡಿ ಮತ್ತು ನಿಮ್ಮ ಕುಟುಂಬದೊಂದಿಗೆ ಸಮಯ ಕಳೆಯಿರಿ. ನೀವು ಸಾಮಾಜಿಕ ಮಾಧ್ಯಮಕ್ಕೆ ವ್ಯಸನಿಗಳಾಗಿದ್ದರೆ ಸಕಾರಾತ್ಮಕ ಸಂಭಾಷಣೆಗಳನ್ನು ನಡೆಸಿ ಮತ್ತು ಧನಾತ್ಮಕ ವಿಷಯವನ್ನು ಮಾತ್ರ ವೀಕ್ಷಿಸಲು ಪ್ರಯತ್ನಿಸಿ.

ಕ್ಷಮಿಸಿ(forgiveness)
ನೀವು ದ್ವೇಷವನ್ನು ಹಿಡಿದಿಟ್ಟುಕೊಂಡರೆ ಅದು ಯಾವುದೇ ಉದ್ದೇಶವನ್ನೂ ಪೂರೈಸುವುದಿಲ್ಲ. ಕ್ಷಮೆಯನ್ನು ಅಭ್ಯಾಸ ಮಾಡಿ ಮತ್ತು ಎಲ್ಲರನ್ನೂ ಕ್ಷಮಿಸಿ ಬಿಡಲು ಕಲಿಯಿರಿ. ನಿಮ್ಮ ಪಾಡಿಗೆ ನೀವು ನಿಮ್ಮ ಏಳ್ಗೆ ನೋಡಿಕೊಳ್ಳಿ. ಕರ್ಮವು ಎಲ್ಲವನ್ನೂ ನೋಡಿಕೊಳ್ಳುತ್ತದೆ ಎಂಬ ಮನಸ್ಥಿತಿ ಬೆಳೆಸಿಕೊಳ್ಳಿ. 

Name Astrology: ಈ ಹೆಸರಿನ ಮಕ್ಕಳ ಮೆದುಳು ಕಂಪ್ಯೂಟರ್‌ಗಿಂತ ಫಾಸ್ಟ್!

ಸಹಾಯ(help)
ನಿಮ್ಮ ಕೈಲಾದಷ್ಟು ಜನರಿಗೆ ಸಹಾಯ ಮಾಡಿ. ಇದು ನಿಮಗೆ ಉತ್ತಮ ಭಾವನೆಯನ್ನು ನೀಡುತ್ತದೆ ಮತ್ತು ನಿಮ್ಮ ಮನಸ್ಥಿತಿಯನ್ನು ಉತ್ತಮಗೊಳಿಸುತ್ತದೆ. ನೆರವಿಗೆ ನಿಂತಾಗಲೇ ಸುತ್ತಲೂ ಇದ್ದವರ ಕಷ್ಟಗಳು ಕಾಣಿಸುವುದು. ಆಗಲೇ ನಿಮ್ಮ ಕಷ್ಟ ಚಿಕ್ಕದೆಂಬುದು ಅರಿವಾಗುವುದು. ನೀವು ಜನರಿಗೆ ಸಹಾಯ ಮಾಡಲು ಸ್ವಯಂಸೇವಕರಾದಾಗ, ಅದು ನಿಮ್ಮ ಮನಸ್ಸನ್ನು ಹಲವಾರು ಚಿಂತೆಗಳಿಂದ ದೂರವಿಡಲು ಸಹಾಯ ಮಾಡುತ್ತದೆ. ಆದ್ದರಿಂದ ಅಗತ್ಯವಿರುವವರಿಗೆ ಸಹಾಯ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. 

ವರ್ಕ್ ಔಟ್(Workout)
ಕೆಲವು ರೀತಿಯ ದೈಹಿಕ ವ್ಯಾಯಾಮ ಮಾಡಿ. ಅದು ನೃತ್ಯವಾಗಲಿ, ಬ್ಯಾಡ್ಮಿಂಟನ್, ಜಿಮ್‌ನಲ್ಲಿ ವರ್ಕ್‌ಔಟ್ ಆಗಿರಲಿ, ಯೋಗ ಇತ್ಯಾದಿ. ನೀವು ಹಾಗೆ ಮಾಡಿದಾಗ, ಅದು ದೇಹದಲ್ಲಿ ಎಂಡಾರ್ಫಿನ್‌ ಹಾರ್ಮೋನ್‌ಗಳನ್ನು ಬಿಡುಗಡೆ ಮಾಡುತ್ತದೆ. ಇವು ನಮ್ಮಲ್ಲಿ ಸಂತೋಷ ಹೆಚ್ಚಿಸುತ್ತವೆ. ಇದರಿಂದ ದೈಹಿಕವಾಗಿಯೂ ಸದೃಢರಾಗುವಿರಿ. 

ಅಬ್ಬಬ್ಬಾ ಲಾಟ್ರಿ! ಇನ್ನೊಂದು ತಿಂಗಳ ಕಾಲ ಈ ಐದು ರಾಶಿಗಳಿಗೆ ಬುಧಾದಿತ್ಯ ಯೋಗ!

ಗಾಸಿಪ್‌(gossip)ನಲ್ಲಿ ಪಾಲ್ಗೊಳ್ಳಬೇಡಿ
ಗಾಸಿಪ್ ಮಾಡುವುದು ಇತರರನ್ನು ಕೀಳಾಗಿಸುವುದಲ್ಲದೆ, ಇದು ನೀವು ವಿಶ್ವಕ್ಕೆ ಹಾಕುತ್ತಿರುವ ಒಂದು ರೀತಿಯ ನಕಾರಾತ್ಮಕ ಚಿಂತನೆಯೇ ಹೊರತು ಬೇರೇನೂ ಅಲ್ಲ. ಯಾರ ಬಗ್ಗೆಯೂ ಗಾಸಿಪ್ ಮಾಡಬೇಡಿ. ಅವರವರ ಜೀವನ ಅವರವರಿಗೆ ಮಾತ್ರ ಗೊತ್ತು ಅದರ ಕಷ್ಟನಷ್ಟಗಳು. 
 

click me!