Zodiac Style: ರಾಶಿಗನುಗುಣವಾಗಿ ಉಡುಗೆ ತೊಟ್ಟು, ಅದೃಷ್ಟ ನಿಮ್ಮದಾಗಿಸಿಕೊಳ್ಳಿ

By Suvarna News  |  First Published Feb 12, 2022, 5:34 PM IST

ನಾವು ಯಾವ ಬಣ್ಣದ ಬಟ್ಟೆಗಳನ್ನು ಧರಿಸಿದರೆ ಚೆಂದ ಕಾಣುತ್ತೇವೆ ಎಂಬುದಕ್ಕಿಂತ ಯಾವ ಮಾದರಿಯ ಬಟ್ಟೆಗಳು ಧರಿಸಿದರೆ ನಮ್ಮ ಆತ್ಮವಿಶ್ವಾಸ ಹೆಚ್ಚಿಸಿ, ಅದೃಷ್ಟ ತಂದುಕೊಡುತ್ತದೆ ನೋಡಬೇಕು. ರಾಶಿಗನುಗುಣವಾಗಿ ಈ ಮಾದರಿಯ ಬಟ್ಟೆ ನಿಮಗೊಪ್ಪುತ್ತದೆ. 


ಅರೆ, ಬಟ್ಟೆ ಹಾಕೋಕೂ ಭವಿಷ್ಯ ಕೇಳ್ಬೇಕಾ ಅನ್ಬೇಡಿ. ಅಂಥ ಕಂಡಿಶನ್‌ಗಳೆಲ್ಲ ಏನಿಲ್ಲ. ಬಟ್ಟೆ ನಿಮ್ಮಿಷ್ಟವೇ. ಆದರೆ, ರಾಶಿ ಪ್ರಕಾರ ನಿಮ್ಮ ಸ್ವಭಾವಕ್ಕೆ ಯಾವ ಬಣ್ಣ, ಎಂಥ ಬಟ್ಟೆ ಹೊಂದುತ್ತದೆ ಎಂದು ನೋಡಿ ಧರಿಸಿದಾಗ ಅದು ನಿಮ್ಮ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿರುತ್ತದೆ. ಅದರಲ್ಲಿ ನೀವು ಹೆಚ್ಚು ಆತ್ಮವಿಶ್ವಾಸದಿಂದ ಕಾಣಿಸುತ್ತೀರಿ. 
ಪ್ರತಿ ರಾಶಿಯು ಅಗ್ನಿ, ಜಲ, ಭೂಮಿ ಹಾಗೂ ವಾಯುವಿನಲ್ಲಿ ಒಂದು ತತ್ವಕ್ಕೆ ಸೇರುತ್ತದೆ. ಇವು ವ್ಯಕ್ತಿಯ ಮೂಲ ವ್ಯಕ್ತಿತ್ವ ಅಂದರೆ ಹುಟ್ಟು ಗುಣ ನಿರ್ಧರಿಸುತ್ತವೆ. ಅದರಲ್ಲಿ ಭಾವನೆಗಳು(emotions), ವರ್ತನೆ, ಯೋಚನಾ ಲಹರಿ ಎಲ್ಲವೂ ಸೇರಿರುತ್ತವೆ. ಅದಕ್ಕೆ ತಕ್ಕನಂತೆ ಡ್ರೆಸ್ ಮಾಡಿಕೊಂಡರೆ ಹೆಚ್ಚು ಆತ್ಮವಿಶ್ವಾಸ ಇರುತ್ತದೆ. ಅಷ್ಟೇ ಅಲ್ಲ, ಆ ಬಣ್ಣಗಳು ಆಯಾ ರಾಶಿಗೆ ಅದೃಷ್ಟ ತಂದುಕೊಡುತ್ತವೆ ಕೂಡಾ. 

ಮೇಷ(Aries): ಅಗ್ನಿ(Fire) ಇವರ ತತ್ವ. ಮಹತ್ವಾಕಾಂಕ್ಷಿ(Ambitious)ಗಳೂ, ಸಾಹಸಿಗಳೂ, ಆತ್ಮವಿಶ್ವಾಸಿ(Confident)ಗಳೂ ಆದ ಇವರ ಯೋಚನೆ ಮಾತ್ರ ಹೆಚ್ಚು ಸ್ವಾರ್ಥತನದಿಂದ ಕೂಡಿರುತ್ತದೆ. ಎಂಥದೇ ಸವಾಲುಗಳನ್ನು ಎದುರಿಸುವ ಇವರು ಎಲ್ಲದಕ್ಕೂ ಬೇಗ ಪ್ರತಿಕ್ರಿಯಿಸುತ್ತಾರೆ. ಬಿಳಿ(White), ನೀಲಿ ಹಾಗೂ ಹಸಿರು ಬಣ್ಣ ಇವರ ವ್ಯಕ್ತಿತ್ವಕ್ಕೆ ಹೊಂದುತ್ತವೆ. ಎಲ್ಲ ಟ್ರೆಂಡ್‌ಗಳನ್ನು ಮೊದಲು ಫಾಲೋ ಮಾಡುವ ನಿಮ್ಮ ವಾರ್ಡ್ರೋಬ್‌ನಲ್ಲಿ ಈ ಬಣ್ಣದ ಬಟ್ಟೆಗಳಿರಲಿ. 

Tap to resize

Latest Videos

undefined

ವೃಷಭ(Taurus): ಭೂಮಿ ನಿಮ್ಮ ತತ್ವ. ಪರಿಸರ ಪ್ರೇಮ, ಅವಲಂಬನೆ, ಅತಿ ಸೂಕ್ಷ್ಮ ಸ್ವಭಾವ, ಹಾಗೂ ಗಟ್ಟಿತನ ನಿಮ್ಮ ವ್ಯಕ್ತಿತ್ವ. ನಿಮಗೆ ಕೆಂಪು ಅಥವಾ ಹಸಿರು(Green) ಬಣ್ಣ ಅದೃಷ್ಟ ತಂದುಕೊಡುತ್ತದೆ. ಕಂಫರ್ಟೇಬಲ್ ಎನಿಸುವ ಬಟ್ಟೆಗಳು ಹಾಗೂ ಬಹಳಷ್ಟು ಆಭರಣಗಳು ನಿಮಗೆ ಸೂಟಾಗುತ್ತವೆ. 

ಮಿಥುನ(Gemini): ವಾಯು ನಿಮ್ಮ ತತ್ವ. ಹೆದರದೆ ಮುನ್ನುಗ್ಗುವವರು, ಹೊಸತನ್ನು ಟ್ರೈ ಮಾಡುವವರು ಹಾಗೂ ಜನರೊಂದಿಗೆ ಸುಲಭವಾಗಿ ಬೆರೆಯುತ್ತಾ, ಸಿಕ್ಕಾಪಟ್ಟೆ ಮಾತನಾಡುವವರಾದ ಇವರಿಗೆ ಬಿಳಿ ಹಾಗೂ ಹಳದಿ(Yellow) ಅದೃಷ್ಟ ತಂದುಕೊಡುತ್ತವೆ. ನಿಮ್ಮ ಸ್ಟೈಲ್ ಯಾವಾಗಲೂ ಯೂತ್‌ಫುಲ್ ಆಗಿಯೂ ಟ್ರೆಂಡಿಯಾಗಿಯೂ ಇರಬೇಕು. ಮಿಕ್ಸ್ ಆ್ಯಂಡ್ ಮ್ಯಾಚ್ ಮಾಡಿ ಸ್ಟೈಲ್ ಎಂಜಾಯ್ ಮಾಡಿ. 

Lord Shiva: ಶಿವನಿಗೇಕೆ ಮೂರು ಕಣ್ಣುಗಳು? ಮೂರನೇ ಕಣ್ಣೇನು ನೋಡುತ್ತದೆ?

ಕಟಕ(Cancer): ನಿಗೂಢ, ಸಿಕ್ಕಾಪಟ್ಟೆ ಮತ್ತೊಬ್ಬರ ಮನಸ್ಸನ್ನು ಅರಿಯುವ ಸ್ವಭಾವ, 6ನೇ ಇಂದ್ರಿಯ ಹೆಚ್ಚು ಸ್ಟ್ರಾಂಗ್ ಆಗಿರುತ್ತದೆ ಕಟಕದವರಿಗೆ. ಇವರಿಗೆ ಗಾಢ ನೀಲಿ ಹಾಗೂ ಗಾಢ ಹಳದಿ ಉತ್ತಮ ಬಣ್ಣಗಳು. ಈ ಬಣ್ಣದ ಬಟ್ಟೆಗಳಾದರೂ ಸ್ವಲ್ಪ ವಿಂಟೇಜ್ ಸ್ಟೈಲ್ ಇದ್ದೂ ಟ್ರೆಂಡಿಯಾಗಿರುವಂಥವನ್ನು ಧರಿಸಿ. ಯಾವತ್ತಿಗೂ ಹಳತಾಗದ ಸ್ಟೈಲ್‌ಗಳನ್ನು ಟ್ರೈ ಮಾಡಿ. 

ಸಿಂಹ(Leo): ಸ್ವಲ್ಪ ಅಹಂಕಾರಿಯಾದ, ಅತಿ ಪೊಸೆಸಿವಾದ, ಪ್ರಾಮಾಣಿಕ ಹಾಗೂ ವರ್ಣರಂಜಿತ ವ್ಯಕ್ತಿತ್ವ ಹೊಂದಿರುವ ಸಿಂಹ ರಾಶಿಯವರು ಚಿನ್ನದ ಬಣ್ಣ, ಹಳದಿ ಹಾಗೂ ಕೇಸರಿ ಬಣ್ಣದಲ್ಲಿ ಹೆಚ್ಚು ಆತ್ಮವಿಶ್ವಾಸಿಗಳಾಗಿರುತ್ತಾರೆ. ಈ ಬೋಲ್ಡ್ ಬಣ್ಣಗಳಲ್ಲಿ ವಿಶೇಷವಾಗಿರುವ ಉಡುಗೆ ಧರಿಸಿ. 

ಕನ್ಯಾ(Virgo): ಹೆಚ್ಚು ಲಾಜಿಕಲ್, ಪ್ರಾಕ್ಟಿಕಲ್ ಹಾಗೂ ವ್ಯವಸ್ಥಿತವಾಗಿ ಕೆಲಸ ಮಾಡುವ, ತಾಳ್ಮೆಯ ಸ್ವಭಾವದ ಕನ್ಯಾ ರಾಶಿಯವರಿಗೆ ನೀಲಿ, ಆರೇಂಜ್ ಹಾಗೂ ತಿಳಿ ಹಸಿರು ಬಣ್ಣಗಳು ಅದೃಷ್ಟ ತರುತ್ತವೆ. ಸರಳವಾದ ಬಟ್ಟೆಗಳು, ರೆಕ್ಕೆಯಂಥ ವಿನ್ಯಾಸ ಒಪ್ಪುತ್ತವೆ. ರಫಲ್ ವಿನ್ಯಾಸ ಹಾಗೂ ಆಫ್ ಶೋಲ್ಡರ್ ಬಟ್ಟೆಗಳನ್ನು ಟ್ರೈ ಮಾಡಿ. 

Chanakya Neeti: ಈ ನಾಲ್ಕು ವಿಷಯಗಳಿಗೆ ಎಂದಿಗೂ ಸಂಕೋಚ ಸಲ್ಲದು!

ತುಲಾ(Libra): ಬಹಳ ಸಹಕಾರ ಸ್ವಭಾವದವರು, ಜನರೊಂದಿಗೆ ಸುಲಭವಾಗಿ ಬೆರೆಯುವವರು, ಸ್ವಲ್ಪ ಉದಾಸೀನತೆ ಹಾಗೂ ಸರಿಯಾಗಿ ನಿರ್ಧಾರ ತೆಗೆದುಕೊಳ್ಳಲು ಬರದವರು. ಆದರೆ ಸಿಕ್ಕಾಪಟ್ಟೆ ಆಕರ್ಷಕ ವ್ಯಕ್ತಿತ್ವದ ತುಲಾ ರಾಶಿಯವರು ಬಿಳಿ, ನೀಲಿ ಹಾಗೂ ಕೇಸರಿ ಬಣ್ಣದ ಉಡುಗೆ ಧರಿಸುವುದು ಒಳ್ಳೆಯದು. 

ವೃಶ್ಚಿಕ(Scorpio): ಧೈರ್ಯಶಾಲಿಗಳು, ನಿಗೂಢತೆ ಹಾಗೂ ಗುಟ್ಟುಗಳನ್ನು ಕಾಪಾಡಿಕೊಳ್ಳುವವರು, ಮಾತನ್ನು ಹೇಗೆ ಬೇಕೋ ಹಾಗೆ ಬದಲಿಸುವವರಾದ ಇವರಿಗೆ ಕೆಂಪು, ಹಳದಿ, ನೀಲಿ, ಕೇಸರಿ ಬಣ್ಣಗಳು ಹೊಂದುತ್ತವೆ. ಕಪ್ಪು ನಿಮ್ಮೊಳಗಿನ ನಿಗೂಢತೆಯನ್ನು ಸೂಚಿಸುತ್ತದೆ. ಅದನ್ನೂ ಧರಿಸಬಹುದು. 

ಧನುಸ್ಸು(Sagittarius): ಉತ್ತಮ ಹಾಸ್ಯಪ್ರಜ್ಞೆ(sense of humor), ತಾಳ್ಮೆ ಇಲ್ಲದ ಸ್ವಭಾವ, ಜೊತೆಗೆ ಸ್ವಾತಂತ್ರ್ಯ ಇಷ್ಟ ಪಡುವ ನೀವು ತಿರುಗಾಟವನ್ನು ಎಂಜಾಯ್ ಮಾಡುತ್ತೀರಿ. ನಿಮಗೆ ನೇರಳೆ, ಬಿಳಿ ಹಾಗೂ ಕೇಸರಿ ಬಣ್ಣಗಳು ಒಪ್ಪುತ್ತವೆ. ಟ್ರಾವೆಲ್ ಫ್ರೆಂಡ್ಲಿ ಎನಿಸುವಂಥ ಬಟ್ಟೆಗಳನ್ನು ಧರಿಸಿ. ಬೊಹೆಮಿಯನ್ ಸ್ಟೈಲ್ ಸೂಟ್ ಆಗುತ್ತದೆ. 

Benefits Of Aarti: ನಾವೇಕೆ ದೇವರಿಗೆ ಆರತಿ ಮಾಡುತ್ತೇವೆ?

ಮಕರ(Capricorn): ಹೆಚ್ಚು ಪ್ರಾಕ್ಟಿಕಲ್, ಸ್ವಾವಲಂಬಿ, ಮಹತ್ವಾಕಾಂಕ್ಷಿ ಹಾಗೂ ಸೂಕ್ಷ್ಮ ಸ್ವಭಾವದವರಾದ ಇವರಿಗೆ ಗಾಢ ಹಸಿರು ಹಾಗೂ ಗಾಢ ನೀಲಿ ಬಣ್ಣಗಳು ಉತ್ತಮ. ಕಡಿಮೆ ಬಟ್ಟೆಯಿದ್ದರೂ ಬ್ರ್ಯಾಂಡೆಡ್ ಆಗಿದ್ದರೆ ನೀವು ಕಾನ್ಫಿಡೆಂಟ್ ಆಗಿರುವಿರಿ. 

ಕುಂಭ(Aquarius): ಬಹಳ ಕಲ್ಪನಾ ಶಕ್ತಿಯುಳ್ಳ, ಯಾವುದಕ್ಕೂ ಕಾಂಪ್ರಮೈಸ್ ಆಗದ, ಹಟಮಾರಿ(Stubborn) ಸ್ವಭಾವದ ಕುಂಭ ರಾಸಿಗೆ ಕೆಂಪು, ಹಳದಿ ಹಾಗೂ ನೀಲಿ ಬಣ್ಣಗಳು ಉತ್ತಮ. ಹೆಚ್ಚು ಕ್ರಿಯೇಟಿವ್ ಆದ, ಚಿತ್ರವಿಚಿತ್ರವಾಗಿ ಕಾಣುವ ಸ್ಟೈಲ್ ನಿಮಗೆ ಸೂಟ್ ಆಗುತ್ತವೆ. ಅವು ನಿಮ್ಮ ಸೃಜನಶೀಲತೆಯನ್ನು ಪ್ರತಿಫಲಿಸುತ್ತವೆ. 

ಮೀನ(Pisces): ಕಲಾವಿದರೂ, ಸಹಾನುಭೂತಿ ಉಳ್ಳವರು, ಬುದ್ದಿವಂತರು, ರೊಮ್ಯಾಂಟಿಕ್ ಆಗಿರುವ ಇವರಿಗೆ ಹಸಿರು, ನೇರಳೆ, ಸಮುದ್ರದ ನೀಲಿ ಬಣ್ಣ ಸೂಟಾಗುತ್ತದೆ. ನೀವು ಆಧ್ಯಾತ್ಮಿಕ ಮನಸ್ಥಿತಿಯವರು. ಸರಳವಾದ ಉಡುಗೆಗಳನ್ನು ಧರಿಸಿ.

click me!