Nag Panchami 2022: ಹಬ್ಬದ ದಿನ ತಪ್ಪಿಯೂ ಈ ಕೆಲಸ ಮಾಡಬೇಡಿ..

By Suvarna NewsFirst Published Jul 30, 2022, 12:08 PM IST
Highlights

ನಾಗರ ಪಂಚಮಿ ಹಬ್ಬಕ್ಕೆ ಎರಡೇ ದಿನ ಬಾಕಿ ಇದೆ. ಈ ದಿನ ನೀವು ಮಾಡಬೇಕಾದ ಮತ್ತು ಮಾಡಬಾರದ ಕೆಲಸಗಳು ಯಾವುವು ತಿಳಿಯಿರಿ.

ಮಂಗಳಕರ ಹಿಂದೂ ಹಬ್ಬ ನಾಗರ ಪಂಚಮಿಯನ್ನು ಈ ವರ್ಷ ಆಗಸ್ಟ್ 2ರಂದು ಮಂಗಳವಾರ ಆಚರಿಸಲಾಗುವುದು. ನಾಗರ ಪಂಚಮಿಯ ದಿನ ಸಂಜೀವಿನಿ ಯೋಗ ರೂಪುಗೊಳ್ಳುತ್ತಿದೆ. ಇದರೊಂದಿಗೆ ಈ ದಿನ ರವಿಯೋಗ ಮತ್ತು ಸಿದ್ಧಿಯೋಗವೂ ಇದೆ. ಭಕ್ತರು ಈ ದಿನ ನಾಗದೇವತೆಗೆ ಹಾಲು ಮತ್ತು ಹಾಲಿನ ಆಧಾರಿತ ಉತ್ಪನ್ನಗಳನ್ನು ಅರ್ಪಿಸಿ ಭಕ್ತಿಯಿಂದ ಪೂಜಿಸುತ್ತಾರೆ. ನಾಗದೇವತೆಗಳನ್ನು ಪೂಜಿಸುವುದು ಭಕ್ತರಿಗೆ ರಕ್ಷಣೆ ನೀಡುತ್ತದೆ ಮತ್ತು ನಕಾರಾತ್ಮಕ ಶಕ್ತಿಯಿಂದ ರಕ್ಷಿಸುತ್ತದೆ ಎಂದು ನಂಬಲಾಗಿದೆ. ಅಲ್ಲದೆ ರಾಹು, ಕೇತು ದೋಷಗಳು, ಕಾಳ ಸರ್ಪ ದೋಷಗಳು ನಿವಾರಣೆಯಾಗುತ್ತವೆ. ನಾಗರ ಪಂಚಮಿ ದಿನದಂದು ನೀವು ಮಾಡಬೇಕಾದ ಮತ್ತ ಮಾಡಬಾರದ ಕೆಲಸಗಳೇನು ಎಂಬ ಬಗ್ಗೆ ತಿಳಿದುಕೊಂಡಿರಿ. 

ನಾಗರ ಪಂಚಮಿಗೆ ಏನು ಮಾಡಬೇಕು?
1. ನಿಮ್ಮ ಮತ್ತು ನಿಮ್ಮ ಪ್ರೀತಿಪಾತ್ರರಿಗೆ ಆಶೀರ್ವಾದವನ್ನು ಪಡೆಯಲು ಮತ್ತು ದುಷ್ಟರಿಂದ ರಕ್ಷಣೆ ಪಡೆಯಲು ನಾಗದೇವತೆಗಳನ್ನು ಪ್ರಾರ್ಥಿಸಿ ಮತ್ತು ಪೂಜಿಸಿ.
2. ನಿಮ್ಮ ಜೀವನದಲ್ಲಿ ಸಮೃದ್ಧಿಯನ್ನು ಆಹ್ವಾನಿಸಲು ಹಬ್ಬದ ದಿನದಂದು ಉಪವಾಸ ಕೈಗೊಳ್ಳಿ.
3. ನಾಗರ ಪಂಚಮಿಯಂದು ಸರ್ಪ, ಸುಬ್ರಹ್ಮಣ್ಯ, ಶಿವ ಮತ್ತು ನವಗ್ರಹಗಳಿಗೆ ಸಂಬಂಧಿಸಿದ ಮಂತ್ರವನ್ನು ಪಠಿಸಿ.
4. ಎಲ್ಲ ಜೀವಿಗಳನ್ನು ಒಪ್ಪಿಕೊಳ್ಳಿ ಮತ್ತು ಪೂರ್ಣ ಹೃದಯದಿಂದ ಗೌರವಿಸಿ.
5. ಹಾಲು ಮತ್ತು ಹಾಲು ಆಧಾರಿತ ಸಿಹಿತಿಂಡಿಗಳನ್ನು ಸರ್ಪ ದೇವತೆಗಳಿಗೆ ಅರ್ಪಿಸಿ.
6. ನಾಗದೇವನ ಪೂಜೆಯ ಸಮಯದಲ್ಲಿ ಅರಿಶಿನವನ್ನು ವಿಶೇಷವಾಗಿ ಬಳಸಬೇಕು. ಧೂಪ, ದೀಪಗಳು ಮತ್ತು ಪೂಜಾ ಸಾಮಗ್ರಿಗಳನ್ನು ಅರ್ಪಿಸಿದ ನಂತರ, ನಾಗದೇವತೆಗೆ ಸಿಹಿತಿಂಡಿಗಳನ್ನು ಅರ್ಪಿಸಬೇಕು.
7. ನಾಗದೇವತೆಗೆ ನಿಮ್ಮ ಭಕ್ತಿಯನ್ನು ತೋರಿಸಲು ಯಾತ್ರಾ ಸ್ಥಳಗಳಿಗೆ ಭೇಟಿ ನೀಡಿ.
8. ನಾಗರ ಕಲ್ಲನ್ನು ಪೂಜಿಸುವ ಜೊತೆಗೆ, ಸಾಧ್ಯವಾದಷ್ಟು ಅಸಹಾಯಕರಿಗೆ ದಾನ ಮಾಡಿ. 
9. ಆದಷ್ಟು ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಬೇಕು. ಫಲಾಹಾರ ಉತ್ತಮ. 
10. ಈ ದಿನ ಯಾವುದೇ ಕೆಟ್ಟ ಯೋಚನೆಯಾಗಲೀ, ಮತ್ತೊಬ್ಬರಿಗೆ ಕೇಡು ಬಯಸುವುದಾಗಲೀ ಮಾಡಬಾರದು.

Nag Panchami 2022: ನಾಗರ ಹಾವಿನ ಕುರಿತ ಮೂಢನಂಬಿಕೆಗಳು ಒಂದೆರಡಲ್ಲ..

ನಾಗರ ಪಂಚಮಿಯಂದು ಮಾಡಬಾರದ್ದೇನು?
1. ನಾಗರ ಪಂಚಮಿಯ ದಿನ ಕಬ್ಬಿಣದ ಪಾತ್ರೆಗಳನ್ನು ಬಳಸಬೇಡಿ ಮತ್ತು ಕಬ್ಬಿಣದ ಪಾತ್ರೆಗಳಲ್ಲಿ ಅಡುಗೆ ಮಾಡುವುದರಿಂದ ದೂರವಿರಿ.
2. ಮರಗಳನ್ನು ಕತ್ತರಿಸುವುದನ್ನು ಅಥವಾ ಉಳುಮೆ ಮಾಡುವುದನ್ನು ತಪ್ಪಿಸಿ. ಏಕೆಂದರೆ ಆ ಪ್ರದೇಶದಲ್ಲಿ ವಾಸಿಸುವ ಹಾವುಗಳಿಗೆ ಹಾನಿಯಾಗಬಹುದು.
3. ಹೊಲಿಗೆ ಸೂಜಿಗಳಂತಹ ಚೂಪಾದ ವಸ್ತುಗಳನ್ನು ಬಳಸುವುದು ಈ ದಿನ ಅಶುಭವೆಂದು ಪರಿಗಣಿಸಲಾಗುತ್ತದೆ. ಅವುಗಳಿಂದ ದೂರವಿರಿ. ಸೂಜಿಗೆ ದಾರ ಪೋಣಿಸಬೇಡಿ. 
4. ಈ ದಿನ ಮಾಂಸ ಅಥವಾ ಮದ್ಯ ಸೇವಿಸಬೇಡಿ.
5. ಯಾರೊಂದಿಗಾದರೂ ಸಂಘರ್ಷ ಅಥವಾ ಮೌಖಿಕ ವಾಗ್ವಾದಗಳನ್ನು ತಪ್ಪಿಸಿ.
6. ಹಾವುಗಳು ಮಾಂಸಾಹಾರಿಗಳು.ಈ ಜೀವಿ ಹಾಲನ್ನು ಕುಡಿಯುವುದಿಲ್ಲ. ಹಾಗಾಗಿ, ಜೀವಂತ ಹಾವಿಗೆ ಹಾಲು ಕೊಡಬೇಡಿ.

Nag Panchami 2022: ನಾಗರ ಪೂಜೆಯ ವಿಧಾನ ಹೀಗೆ..

ಕಾಳ ಸರ್ಪ ದೋಷದಿಂದ ಮುಕ್ತಿ
ಈ ವರ್ಷ, ನಾಗ ಪಂಚಮಿಯ ದಿನವು ಮಂಗಳ ಗೌರಿ ವ್ರತದ ಕಾಕತಾಳೀಯವಿದೆ. ಈ ದಿನದಂದು ಭಗವಾನ್ ಶಂಕರ ಮತ್ತು ತಾಯಿ ಪಾರ್ವತಿಯನ್ನು ಪೂಜಿಸುವುದು ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಭಗವಾನ್ ಶಂಕರನು ಕಾಳ ಸರ್ಪ ದೋಷದಿಂದ ಸ್ವಾತಂತ್ರ್ಯವನ್ನು ನೀಡುತ್ತಾನೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!