
ಸ್ಮಶಾನ, ಸಮಾಧಿ ಸ್ಥಳಗಳು, ಕತ್ತಲ ಪ್ರದೇಶಗಳಲ್ಲಿ ತಮ್ಮ ಅಭ್ಯಾಸಗಳನ್ನು ನಿರ್ವಹಿಸುವ ಮಾಟಗಾರರ ವಿಭಿನ್ನ ಪ್ರಪಂಚವಿದೆ. ಅವರು ಭೌತಿಕ ಆಸೆಗಳನ್ನು ಪೂರೈಸಲು ಡಾರ್ಕ್ ಶಕ್ತಿಗಳನ್ನು ಬಳಸುತ್ತಾರೆ. ವಿಜ್ಞಾನ ಮತ್ತು ತಂತ್ರಜ್ಞಾನದ ಈ ಯುಗದಲ್ಲಿ ಮಾಟಮಂತ್ರ ಮತ್ತು ದುಷ್ಟ ಕಣ್ಣಿನ ಪರಿಣಾಮಗಳು ಅಸ್ತಿತ್ವದಲ್ಲಿಲ್ಲ ಎಂದು ಕೆಲವರು ಹೇಳಬಹುದು. ಆದರೆ ವೈಜ್ಞಾನಿಕ ಯುಗವಾದರೂ ಇನ್ನೂ ಈ ಸಮಸ್ಯೆಯನ್ನು ಎದುರಿಸುತ್ತಿರುವ ವ್ಯಕ್ತಿಗಳಿಗೆ ಇಂಥ ಮಾತಿನಿಂದ ಯಾವುದೇ ಪ್ರಯೋಜನವಿಲ್ಲ.
ಬ್ಲ್ಯಾಕ್ ಮ್ಯಾಜಿಕ್ ಎನ್ನುವುದು ನಕಾರಾತ್ಮಕ ಮನಸ್ಸಿನ ಜನರು ಮತ್ತು ಶೈತಾನ್ ಅಂದರೆ ದುಷ್ಟರನ್ನು ಪೂಜಿಸುವ ಜನರು ಅಳವಡಿಸಿಕೊಳ್ಳುವ ಪ್ರಕ್ರಿಯೆಯಾಗಿದೆ. ದುಷ್ಟ ಶಕ್ತಿಗಳನ್ನು ಬಳಸಿಕೊಂಡು ಅಗತ್ಯವಿರುವ ಎಲ್ಲಾ ವಸ್ತುಗಳನ್ನು ಪಡೆಯಲು ಬ್ಲ್ಯಾಕ್ ಮ್ಯಾಜಿಕ್ ಶಾರ್ಟ್ ಕಟ್ ಮಾರ್ಗವಾಗಿದೆ.
ಏಕೆ ಈ ತಂತ್ರ ಬಳಕೆ ಮಾಡುತ್ತಾರೆ?
ಮಾಟಮಂತ್ರವನ್ನು ಜನರು ಇತರರಿಗೆ ಹಾನಿ ಮಾಡಲು ಮತ್ತು ಹೇಗಾದರೂ ತಮ್ಮ ಆಸೆ ಪೂರೈಸಿಕೊಳ್ಳಲು ಪ್ರಯೋಗಿಸುತ್ತಾರೆ. ಈ ವಿದ್ಯೆಯನ್ನು ಹಾನಿ ಮಾಡಲು, ಕೊಲ್ಲಲು, ಇತರರನ್ನು ಅಪಾಯಕ್ಕೆ ಸಿಲುಕಿಸಲು, ಜೀವನದಲ್ಲಿ ಯಾರನ್ನಾದರೂ ಕೆಳಗಿಳಿಸಲು ಬಳಸಲಾಗುತ್ತದೆ. ಅಸೂಯೆ ಪಟ್ಟ ಜನರು ಇದನ್ನು ಸ್ಪರ್ಧಿಗಳು ಅಥವಾ ಸಂಬಂಧಿಕರ ಜೀವನವನ್ನು ಹಾಳು ಮಾಡಲು ಬಳಸುತ್ತಾರೆ. ಮಾಟಮಂತ್ರ ಮಾಡಲು ಕೆಲವು ವಿಶೇಷ ಮಂತ್ರಗಳು, ವಸ್ತುಗಳು ಮತ್ತು ಯಂತ್ರಗಳನ್ನು ಬಳಸಲಾಗುತ್ತದೆ. ಮತ್ತೊಬ್ಬರು ಜೀವನದಲ್ಲಿ ಪ್ರಗತಿ ಸಾಧಿಸದಂತೆ, ಉದ್ಯೋಗದಲ್ಲಿ ನಷ್ಟವಾಗಲಿ ಎಂದು, ಸಾಕುಪ್ರಾಣಿಗಳನ್ನು ಕೊಲ್ಲಲು, ಆರೋಗ್ಯ ಸಮಸ್ಯೆಯಿಂದ ನರಳುವಂತೆ ಮಾಡಲು, ವ್ಯಕ್ತಿಯನ್ನು ಹುಚ್ಚನಾಗಿಸಲು, ವಶೀಕರಣಕ್ಕಾಗಿ- ಒಟ್ನಲ್ಲಿ ಸ್ವಾರ್ಥ ಸಾಧನೆಗಾಗಿ, ಮತ್ತೊಬ್ಬರಿಗೆ ಸಮಸ್ಯೆಯಾಗಲಿ ಎಂಬ ಕಾರಣಕ್ಕೆ ಈ ತಂತ್ರ ಬಳಕೆ ಮಾಡಲಾಗುತ್ತದೆ. ಇದರ ಪರಿಣಾಮಗಳು ತೀವ್ರವಾಗಿದ್ದು, ಬಲಿಪಶುವು ಜೀವನದ ಪ್ರತಿಯೊಂದು ವಿಭಾಗದಲ್ಲೂ ವಿಫಲವಾದ ಕಾರಣ ತೀವ್ರ ಖಿನ್ನತೆಗೆ ಒಳಗಾಗುತ್ತಾನೆ ಮತ್ತು ಕೆಲವರು ಈ ಕಾರಣದಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುವುದೂ ಇದೆ.
Feng Shui Tips: ಈ ವಸ್ತುಗಳನ್ನು ಮನೆಯಲ್ಲಿಟ್ರೆ ಅದೃಷ್ಟ ಬದಲಾಗೋದು ಖಚಿತ!
ಮಾಟಮಂತ್ರಕ್ಕೆ ಬಳಸುವ ವಸ್ತುಗಳು
ಮಾಟಮಂತ್ರಗಳಲ್ಲಿ ಬಳಸುವ ಕೆಲವು ವಿಶೇಷ ವಸ್ತುಗಳೆಂದರೆ- ನಿಂಬೆ, ಮೆಣಸಿನಕಾಯಿಗಳು, ಕಪ್ಪು ಅರಿಶಿನ, ಕುಂಕುಮ, ಗೊಂಬೆಗಳು, ಪಿನ್‌ಗಳು, ಬೂದಿ, ತೆಂಗಿನಕಾಯಿ, ಕರಿಮೆಣಸು ಇತ್ಯಾದಿ. ಮಾಟಮಂತ್ರದ ಕುರಿತ ಕಹಿಸತ್ಯವೆಂದರೆ ಸಾಮಾನ್ಯವಾಗಿ ಅತಿ ಆಪ್ತರಂತೆ ಕಾಣಿಸುವವರು, ಪರಿಚಿತರು, ಸಂಬಂಧಿಕರೇ ಇದನ್ನು ಮಾಡಿಸುತ್ತಾರೆ.
ಮಾಟಕ್ಕೊಳಗಾದ ಲಕ್ಷಣಗಳು
ಇಂಥವರು ಮಾಟಕ್ಕೆ ಸುಲಭ ಬಲಿಪಶು
ಮಾಟಮಂತ್ರದ ಪರಿಣಾಮಗಳು ಇಂಥ ವ್ಯಕ್ತಿಗಳ ಮೇಲೆ ಹೆಚ್ಚು ಸುಲಭವಾಗಿ ಬೀರುತ್ತವೆ- ಯಾರು ಧನಾತ್ಮಕ ಶಕ್ತಿಯನ್ನು ನಂಬುವುದಿಲ್ಲವೋ ಅವರು.
ಧೂಮಪಾನ, ಮದ್ಯಪಾನ, ಕಾನೂನು ಬಾಹಿರ ಸಂಬಂಧ ಹೊಂದಿದವರು, ಡ್ರಗ್ಸ್ ಸೇವನೆ ಅಭ್ಯಾಸ ಹೊಂದಿದವರು.
ಜಾತಕದಲ್ಲಿ ರಾಕ್ಷಸ ಗಣವನ್ನು ಹೊಂದಿರುವ ಜನರು.
ಕುಂಡಲಿಯಲ್ಲಿ ಗ್ರಹಣ ಯೋಗ, ಅಂಗಾರಕ ಯೋಗ ಅಥವಾ ಜಾತಕದಲ್ಲಿ ಇತರ ದುಷ್ಟ ಯೋಗ ಹೊಂದಿರುವ ಸ್ಥಳೀಯರು ಸುಲಭವಾಗಿ ನಕಾರಾತ್ಮಕ ಶಕ್ತಿಗಳಿಗೆ ಸಿಕ್ಕಿಬೀಳಬಹುದು.
ಸೂರ್ಯ ಗೋಚಾರ 2022: ಈ ನಾಲ್ಕು ರಾಶಿಗಳಿಗೆ ಕೈ ಇಟ್ಟಿದ್ದೆಲ್ಲ ಚಿನ್ನ
ಪರಿಣಾಮಕಾರಿ ಪರಿಹಾರಗಳು