ವೀರ್ಯ ನುಂಗಿದ್ರೆ ಮಕ್ಕಳು ಹುಟ್ತಾವಾ? ಈ ಕತೆ ಓದಿ!

By Asianet KannadaFirst Published Jul 19, 2020, 4:50 PM IST
Highlights

ಲೈಂಗಿಕ ಕ್ರಿಯೆಯ ಬಗ್ಗೆ ತಿಳಿಯದೆ ಮುಗ್ಧರು ಕೆಲವೊಮ್ಮೆ ಹೆಣ್ಣು ಗಂಡಸಿನ ವೀರ್ಯ ನುಂಗಿದ್ರೆ ಮಕ್ಕಳು ಹುಟ್ತಾರಾ ಎಂಬ ಪ್ರಶ್ನೆ ಕೇಳುವುದುಂಟು. ಹಾಗೆ ಹುಟ್ಟುವುದಿಲ್ಲ ಎನ್ನುವುದು ನಿಜ. ಆದರೆ ಅಂತ ವಿಚಿತ್ರ ಹುಟ್ಟುಗಳು ಸಂಭವಿಸುತ್ತವೆ ಎಂಬುದನ್ನು ಪುರಾಣಗಳು ಹೇಳುತ್ತವೆ.

ಪುರಾಣಗಳಲ್ಲಿ, ನೇರವಾದ ಲೈಂಗಿಕ ಕ್ರಿಯೆಯಿಲ್ಲದೆ ಕೆಲವು ಮಹಾಪುರುಷರೂ ಮಹಿಳೆಯರೂ ಹುಟ್ಟಿಕೊಂಡ ಕತೆಗಳಿವೆ. ಅದರಲ್ಲಿ ಸಾಮಾನ್ಯವಾಗಿ ಪುರುಷ ಮತ್ತು ಆತನ ವೀರ್ಯದ ಪ್ರಸ್ತಾಪ ಇದೆ. ಆದರೆ ಅದನ್ನು ಹೆಣ್ಣು ಪಡೆಯುವ ಬಗೆ ಮಾತ್ರ ವಿಚಿತ್ರವಾಗಿರುತ್ತದೆ. ಮಹಾಭಾರತದ ಕೌರವರು- ಪಾಂಡವರ ಜನನಕ್ಕೆ ಕಾರಣವಾದ ಪಾಂಡು- ಧೃತರಾಷ್ಟ್ರಾದಿಗಳ ತಂದೆಯಾದ ವೇದವ್ಯಾಸರ ತಾಯಿ ಸತ್ಯವತಿಯ ಹುಟ್ಟಿನ ಹಿನ್ನೆಲೆಯಲ್ಲಿ ಇಂಥದೊಂದು ಕತೆಯಿದೆ.

ಬ್ರಹ್ಮನ ಮಗ ವಸಿಷ್ಠ. ವಸಿಷ್ಠರ ಮಗ ಶಕ್ತಿ ಎನ್ನುವ ಹೆಸರಿನವನು. ಶಕ್ತಿಗೆ ಪರಾಶರ ಎಂಬ ಮಗ. ಈ ಪರಾಶರರು ನಾರಾಯಣನು ತನ್ನ ಮಗನಾಗಲಿ ಎಂದು ಮಹಾ ತಪಸ್ಸನ್ನು ಮಾಡಿದರು. ಪರಾಶರರ ತಪಸ್ಸಿನಿಂದ ಸಂತಸಗೊಂಡ ನಾರಾಯಣನು ಅವರ ಮುಂದೆ ಪ್ರತ್ಯಕ್ಷನಾಗಿ, ಹೀಗೆ ಹೇಳುತ್ತಾನೆ: “ನನ್ನ ಭಕ್ತನಾದ ವಸುರಾಜನಿಗೆ ಅತ್ತ್ಯಂತ ಚೆಲುವೆಯಾದ ಮಗಳೊಬ್ಬಳಿದ್ದಾಳೆ. ಅವಳಲ್ಲಿ ನಿನ್ನ ಮಗನಾಗಿ ಅವತರಿಸುತ್ತೇನೆ” ಎಂದು.

ಒಮ್ಮೆ ಕಾಡಿನಲ್ಲಿ ಬೇಟೆಗೆಂದು ತಿರುಗುತ್ತಿದ್ದ ವಸುರಾಜ, ಕಾಡಿನಲ್ಲಿ ರತಿಕೇಳಿಯಲ್ಲಿ ನಿರತವಾಗಿದ್ದ ಮೃಗಮಿಥುನವನ್ನು ನೋಡಿ, ಮಾನಸಿಕವಾಗಿ ತನ್ನ ಹೆಂಡತಿಯನ್ನು ಸೇರಿದ. ಆಗ ಆತನ ವೀರ್ಯ ಸ್ಖಲನಗೊಂಡಿತು. ಈ ರೀತಿ ಸ್ಖಲನಗೊಂಡ ರೇತಸ್ಸನ್ನು ವಸುವು ಗಿಡುಗದ ಕೈಯಲ್ಲಿ ಕೊಟ್ಟು, ಅದನ್ನು ತನ್ನ ಹೆಂಡತಿಗೆ ಕೊಡಲು ಹೇಳಿ ಕಳುಹಿಸಿದ. ಗಿಡುಗ ಆ ರೇತಸ್ಸನ್ನು ಹೊತ್ತು ಆಕಾಶದಲ್ಲಿ ಸಾಗುತ್ತಿರುವಾಗ, ಇನ್ನೊಂದು ಗಿಡುಗ ಈ ಗಿಡುಗದೊಂದಿಗೆ ಯುದ್ಧಕ್ಕೆ ನಿಂತಿತು. ಹೀಗೆ ಯುದ್ಧ ಮಾಡುವಾಗ ಗಿಡುಗದ ಕೈಯಲ್ಲಿದ್ದ ರೇತಸ್ಸು ಯಮುನಾ ನದಿಯ ನೀರಿನಲ್ಲಿ ಬಿದ್ದಿತು. ಆ ರೀತಿ ಬಿದ್ದ ರೇತಸ್ಸನ್ನು ಒಂದು ಹೆಣ್ಣು ಮೀನು ನುಂಗಿತು. ಆ ಮೀನನ್ನು ಅಂಬಿಗರು ಹಿಡಿದರು. ಆ ಮೀನಿನ ಹೊಟ್ಟೆಯಲ್ಲಿ ಬೆಸ್ತರು ಅವಳಿ ಜವಳಿ ಮಕ್ಕಳಿರುವುದನ್ನು ಕಂಡರು ಮತ್ತು ಅದನ್ನು ಅವರು ತಮ್ಮ ಒಡೆಯನಾದ ದಾಶರಾಜನಿಗೆ ಒಪ್ಪಿಸಿದರು. ದಾಶರಾಜ ಆ ಮಕ್ಕಳನ್ನು ತನ್ನ ರಾಜನಾದ ವಸುವಿಗೇ ನೀಡಿದನು.

ಅಪರಾಧಿಯಾಗಲು ಜಾತಕದ ಈ ಗ್ರಹಗಳೇ ಕಾರಣ!

ಅವನು ಗಂಡುಮಗುವನ್ನು ತಾನಿಟ್ಟುಕೊಂಡು, ಮಗಳನ್ನು ದಾಶರಾಜನಿಗೆ ಮರಳಿ ಕೊಟ್ಟನು. ಆ ಗಂಡುಮಗುವೇ ಮುಂದೆ ಮತ್ಸ್ಯರಾಜನಾದ. ಅವನೇ ವಿರಾಟ.ಹೆಣ್ಣುಮಗಳೇ ಸತ್ಯವತಿ. ಈಕೆಯನ್ನು ಮುಂದೆ ಹಸ್ತಿನಾಪುರದ ಶಂತನು ಮಹಾರಾಜ ವರಿಸುತ್ತಾನೆ. ಅದಕ್ಕೂ ಮೊದಲು, ಈಕೆ ಯಮುನಾ ನದಿಯಲ್ಲಿ ದೋಣಿ ನಡೆಸುತ್ತಿರುವಾಗ ಪರಾಶರ ಮಹರ್ಷಿಗಳು ಒಮ್ಮೆ ನದಿ ದಾಟಲು ಬಂದವರು, ಈಕೆಯ ಚೆಲುವನ್ನು ಕಂಡು ಆಕೆಯಲ್ಲಿ ಕಾಮಾಸ್ಕತರಾಗುತ್ತಾರೆ. ಅಲ್ಲೇ ಸೇರುತ್ತಾರೆ, ಅಲ್ಲೇ ಮಗುವೂ ಜನಿಸುತ್ತದೆ. ಆ ಮಗುವೇ ವ್ಯಾಸ ಅಥೌಆ ವೇದವ್ಯಾಸ. ಆತನೇ ನಾರಾಯಣನ ಅವತಾರ.

ಸೂರ್ಯ ಕಟಕ ರಾಶಿಗೆ ಪ್ರವೇಶ: ನಿಮ್ಮ ಅದೃಷ್ಟ ಹೇಗಿದೆ? 

ಹನುಮಂತನಿಗೂ ಒಬ್ಬ ಮಗನಿದ್ದ ಎನ್ನುತ್ತಾರೆ. ಆತನ ಕತೆ ಹೀಗಿದೆ. ಲಂಕಾ ಯುದ್ಧದಲ್ಲಿ ಅಹಿರಾವಣ ಮಹಿರಾವಣರು ರಾಮ- ಲಕ್ಷ್ಮಣರನ್ನು ಯುದ್ಧರಂಗದಿಂದ ಕದ್ದುಕೊಂಡು ಪಾತಾಳಕ್ಕೆ ಹೊರಟುಹೋಗುತ್ತಾರೆ. ಅವರನ್ನು ಹುಡುಕಿಕೊಂಡು ಹನುಮಂತನು ಸಮುದ್ರದ ಮೂಲಕ ಪಾತಾಳಕ್ಕೆ ತೆರಳುವಾಗ, ಅರ್ಧ ಮಕರ, ಅರ್ಧ ಕಪಿಯ ರೂಪದಲ್ಲಿದ್ದ ಮಹಾ ಆಕಾರವೊಂದು ಆತನನ್ನು ಹಿಡಿದುಕೊಳ್ಳುತ್ತದೆ. ಹನುಮಂತನ ಸಮಾನ ಬಲನಾಗಿದ್ದ ಆತನೊಂದಿಗೆ ಕಾದಾಡಿದ ಹನುಮಂತನು ನೀನು ಯಾರೆಂದು ಕೇಳುತ್ತಾನೆ. ಆಗ, ನಾನು ಹನುಮಂತನ ಮಗ ಎಂದು ಆತ ಹೇಳುತ್ತಾನೆ. ಹನುಮಂತ ಬ್ರಹ್ಮಚಾರಿಯಲ್ಲವೇ, ಆತನಿಗೆ ಮಗನಿರಲು ಹೇಗೆ ಸಾಧ್ಯ ಎಂದು ಆಂಜನೇಯ ಪ್ರಶ್ನಿಸಿದಾಗ, ಆತನು ತನ್ನ ಕತೆಯನ್ನು ಹೇಳುತ್ತಾನೆ- ಹಿಂದೆ ಹನುಮಂತನು ಸೀತಾನ್ವೇಷಣೆಗಾಗಿ ಲಂಕೆಗೆ ತೆರಳಿದ್ದ. ಸೀತೆಯನ್ನು ಮಾತನಾಡಿಸಿ, ರಾವಣನ ಆಸ್ಥಾನದಲ್ಲಿ ಗಲಭೆಯೆಬ್ಬಿಸಿ, ನಂತರ ಬಾಲಕ್ಕೆ ಬೆಂಕಿಯಿಡಿಸಿಕೊಂಡು, ಲಂಕೆಯನ್ನು ಸುಟ್ಟು ಸಮುದ್ರದ ಮೇಲಿನಿಂದ ಹಾರುತ್ತಾ ಹಿಂದಿರುಗುತ್ತಿದ್ದಾಗ, ಬಳಲಿದ್ದ ಆತನ ಮೈಯಿಂದ ಬೆವರಿನ ಹನಿ ಸಮುದ್ರಕ್ಕೆ ಬಿತ್ತು. ಅದನ್ನು ಮೊಸಳೆಯ ರೂಪದಲ್ಲಿದ್ದ ಅಪ್ಸರೆಯೊಬ್ಬಳು ನುಂಗಿದಳು. ಆ ಬೆವರು ಆಕೆಯಲ್ಲಿ ಫಲಿಸಿ, ಹುಟ್ಟಿದವನೇ ಮತ್ಸ್ಯವಾನರ. ಈ ಕತೆಯನ್ನು ಹೇಳಿದ ಬಳಿಕ, ನಾನೇ ನಿನ್ನ ತಂದೆ ಎಂದು ಆಂಜನೇಯ ಆತನಿಗೆ ತಿಳಿಸುತ್ತಾನೆ.

ಈ ಐದು ರಾಶಿಯವರ ಹೆಂಡತಿಯರು ಅದೃಷ್ಟವಂತರು..! 

ಹೀಗೆ ಪುರಾಣದ ಅನೇಕ ಕತೆಗಳು ವೀರ್ಯ ನೇರವಾಗಿ ಹೆಣ್ಣಿನ ಯೋನಿ ಸೇರದೆಯೂ ಮಕ್ಕಳು ಜನಿಸಬಹುದು ಎಂಬುದನ್ನು ಹೇಳುತ್ತವೆ.

click me!