ಸಂಬಂಧಗಳ ಬುನಾದಿಯೇ ನಂಬಿಕೆ. ನಂಬಿಕೆ ಉಳಿಸಿಕೊಳ್ಳಲು ಬಯಸುವವರು ಸಂಬಂಧಗಳಲ್ಲಿ ಯಾರಿಗೂ ಎಂದಿಗೂ ಮೋಸ ಮಾಡಲಾರರು. ಇದು ಕೆಲ ರಾಶಿಗಳವರ ಜನ್ಮಜಾತಸ್ಯ ಗುಣವಾಗಿದೆ.
ಎಲ್ಲ ಸಂಬಂಧಗಳಲ್ಲೂ ಅಷ್ಟೇ, ನಂಬಿಕೆ(Trust) ಹಾಗೂ ಪ್ರಾಮಾಣಿಕತೆ(loyalty) ಬಹಳ ದೊಡ್ಡ ಪಾತ್ರ ವಹಿಸುತ್ತವೆ. ಅವು ಸಂಬಂಧದ ಬುನಾದಿಯೇ ಆಗಿರುತ್ತವೆ. ಅವುಗಳು ಸ್ಟ್ರಾಂಗ್ ಆಗಿದ್ದಷ್ಟೂ ಅದರ ಮೇಲೆ ಕಟ್ಟಿಕೊಂಡ ಸಂಬಂಧ ಸ್ಟ್ರಾಂಗ್ ಇರುತ್ತದೆ. ಕೆಲವರಲ್ಲಿ ಈ ಗುಣಗಳು ಇತರರಿಗಿಂತ ಹೆಚ್ಚು ಬಲವಾಗಿರುತ್ತವೆ. ಆಸಕ್ತಿಕರ ವಿಷಯವೆಂದರೆ ಹೀಗೆ ಅತಿ ಹೆಚ್ಚು ಪ್ರಾಮಾಣಿಕತೆ, ನಂಬಿಕೆಯಂಥ ಗುಣಗಳಿಗೂ ಜನ್ಮರಾಶಿಗೂ ಸಂಬಂಧವಿದೆ ಎನ್ನುವುದು. ಹೌದು, ಯಾವೆಲ್ಲ ರಾಶಿಗಳು ತಮ್ಮ ಸಂಗಾತಿಗಷ್ಟೇ ಅಲ್ಲ, ಯಾವುದೇ ರೀತಿಯ ಸಂಬಂಧ(relationship)ದಲ್ಲೂ ಮೋಸ ಮಾಡುವವರಲ್ಲ ಎಂಬುದನ್ನು ನೋಡೋಣ.
ಮೇಷ(Aries)
ಇವರನ್ನು ಹಿಡಿಯುವುದೇ ಕಷ್ಟವೆನಿಸಬಹುದು. ನೋಡಿದ ಕೂಡಲೇ ಜೋರು, ಸಿಕ್ಕಾಪಟ್ಟೆ ಮುಂಗೋಪಿ, ಚುರುಕು ಎಂದೆಲ್ಲ ಎನಿಸಬಹುದು. ಆದರೆ ಮೇಲಿನಿಂದ ಕಾಣಿಸದ ಅವರ ಗುಣವೆಂದರೆ ಅಷ್ಟೇ ಮೃದು ಸ್ವಭಾವ ಹಾಗೂ ಪ್ರೀತಿ ಹೆಚ್ಚು. ಅವರು ಕೊಂಚ ಡಾಮಿನೇಟಿಂಗ್ ಎನಿಸಬಹುದು, ಆದರೆ ನಿಮ್ಮ ಪ್ರೀತಿಯಿಂದ ಗೆದ್ದಿರೆಂದರೆ ಮತ್ತೆಂದೂ ನಿಮಗೆ ನಂಬಿಕೆ ದ್ರೋಹ ಮಾಡುವವರಲ್ಲ. ಸ್ನೇಹದಲ್ಲೂ ಅಷ್ಟೇ, ಸ್ನೇಹಿತರಿಗೆ ಮೋಸವಾದರೆ, ಅವರ ಪರವಾಗಿ ಫೈಟ್ ಮಾಡುವ ಸ್ವಭಾವ ಇವರದು.
undefined
ವೃಷಭ(Taurus)
ಇವರು ಅತೀ ಪ್ರಾಮಾಣಿಕ(honest)ರು. ಇವರಿಗೆ ಗುಟ್ಟು ಮಾಡುವುದು ಇಷ್ಟವಾಗುವುದಿಲ್ಲ. ಎಲ್ಲವನ್ನೂ ಎದುರಾ ಎದುರೇ ಹೇಳಿ ಹಗುರಾಗುತ್ತಾರೆ. ಹಾಗಾಗಿ, ಹಿಂದಿನಿಂದ ಮಾತಾನಾಡುವುದು, ಬೆನ್ನಿಗೆ ಚೂರಿ ಇರಿಯುವುದು ಇವರ ಸ್ವಭಾವದಲ್ಲೇ ಇಲ್ಲ. ಯಾರು ಬೇಕಿದ್ದರೂ ವೃಷಭ ರಾಶಿಯವರನ್ನು ಆರಾಮಾಗಿ ನಂಬಬಹುದು. ಏಕೆಂದರೆ, ತಮಗೇನು ಬೇಕು, ತಾವೇನು ಮಾಡಬೇಕು ಎಂಬ ಬಗ್ಗೆ ತುಂಬಾ ಪ್ರಾಮಾಣಿಕರಾಗಿರುತ್ತಾರೆ. ಸಂಗಾತಿಯ ವಿಷಯದಲ್ಲಿ ಹೆಚ್ಚೇ ಪ್ರಾಮಾಣಿಕರಾಗಿರುತ್ತಾರೆ. ಏಕೆಂದರೆ ಸಂಬಂಧ ಹೇಗೆ ಬೆಳೆಸಿಕೊಳ್ಳಬೇಕೆಂಬುದು ಇವರಿಗೆ ಚೆನ್ನಾಗಿ ಗೊತ್ತು.
ತುಲಾ(Libra)
ಗೆಳೆತನಗಳು(friendships), ಸಂಬಂಧಗಳು- ಯಾವುದೂ ಆಟದ ವಿಷಯವಲ್ಲ ಎಂಬುದು ಇವರಿಗೆ ಚೆನ್ನಾಗಿ ಗೊತ್ತು. ಸಂಬಂಧಗಳನ್ನು ಉಳಿಸಿಕೊಳ್ಳಲು ಇವರು ತಮ್ಮ ಪೂರ್ತಿ ಎನರ್ಜಿ ಹಾಕಬಲ್ಲರು. ಯಾವಾಗಲೂ ನಂಬಿಕೆ ಕಾಪಾಡಿಕೊಳ್ಳಲು ಪ್ರಾಶಸ್ತ್ಯ ನೀಡುವ ಇವರಲ್ಲಿ ಮೋಸ, ವಂಚನೆಯ ಯೋಚನೆಗಳೂ ಸುಳಿಯುವುದಿಲ್ಲ. ಯಾರಿಗೋ ಮೋಸ ಮಾಡುವ ಮಾತು ಇವರಿಂದ ಬಹು ದೂರ. ಸಣ್ಣ ಪುಟ್ಟ ಕಾರಣಗಳಿಗೆ ದೂರ ಹೋದವರನ್ನೂ ಮತ್ತೆ ವಾಪಸ್ ತಂದು ನಂಬಿಕೆ ಗಳಿಸಬಲ್ಲ ಸಾಮರ್ಥ್ಯ ಇವರದು. ವಿವಾಹ ಜೀವನದಲ್ಲಿ ಸಂಗಾತಿಯನ್ನು ಅತಿಯಾಗಿ ಪ್ರೀತಿಸುವ ಇವರು ಅವರ ನಂಬಿಕೆಯಷ್ಟೇ ಅಲ್ಲ, ಅವರಿಗೆ ಸಂಬಂಧಿಸಿದವರೆಲ್ಲರ ನಂಬಿಕೆ ಗಳಿಸಿ ಪ್ರೀತಿ ಗೆಲ್ಲುತ್ತಾರೆ.
2022 ಈ ರಾಶಿಯ ಹುಡುಗಿಯರಿಗೆ ಸಖತ್ Lucky Year
ವೃಶ್ಚಿಕ(scorpio)
ಇವರು ಪ್ರೀತಿಸಿದರೆ ಸಿಕ್ಕಾಪಟ್ಟೆ ಹಚ್ಚಿಕೊಂಡು ಪ್ರೀತಿಸುತ್ತಾರೆ. ತಮಗೂ ಹಾಗೂ ತಾವು ಪ್ರೀತಿಸುವವರಿಗೂ ಸತ್ಯವಾಗಿ ಬಾಳುತ್ತಾರೆ. ಇನ್ನೊಬ್ಬರ ಮನಸ್ಸಿಗೆ ನೋವಾಗುವಂಥದ್ದು, ಅವರನ್ನು ಕೆರಳಿಸುವಂಥದ್ದನ್ನು ಇವರು ಮಾಡಲಾರರು. ಯಾವುದಕ್ಕಾದರೂ ಕಮಿಟ್ ಆದರೆ, ಮಾತು ಉಳಿಸಿಕೊಳ್ಳದೆ ಇವರಿಗೆ ಸಮಾಧಾನ ಇರದು. ತಾವು ನಂಬಿದ್ದೇ ಸರಿ ಎಂದುಕೊಂಡ ಮೇಲೆ ಅದಕ್ಕೆ ಸಂಪೂರ್ಣ ಬದ್ಧವಾಗಿರುತ್ತಾರೆ. ಹೀಗಾಗಿ, ಅತಿ ನಂಬಿಕಸ್ಥರಲ್ಲಿ ಈ ರಾಶಿ ಸ್ಥಾನ ಗಳಿಸಿದೆ.
Moles and Meaning: ಮಚ್ಚೆ ಇಲ್ಲಿದ್ರೆ ನಿಮ್ಮಷ್ಟು ಲಕ್ಕಿ ಮತ್ಯಾರಿಲ್ಲ..
ಮಕರ(Capricorn)
ನಂಬಿದವರಿಗೆ ಬದ್ಧರಾಗಿರುವುದು, ನಂಬಿಕೆಗಳನ್ನು ಉಳಿಸಿಕೊಳ್ಳುವುದು ಮಕರ ರಾಶಿಯವರಿಗೆ ಜೀವನದ ಗುರಿಯೇ ಇದ್ದಂತೆ. ಆದರ್ಶಗಳು ಹೆಚ್ಚಿರುವ ಇವರು ತಾವು ನಂಬಿರುವ ಆದರ್ಶದಂತೆಯೇ ಬದುಕುವವರು. ಮತ್ತೊಬ್ಬರಿಗೆ ನೋವು, ತೊಂದರೆ ಕೊಡುವವರಲ್ಲ. ಇನ್ನೊಬ್ಬರು ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡುವ ಇವರು ಯಾವಾಗಲೂ ಸರಿಯಾದುದನ್ನೇ ಮಾಡಬೇಕೆಂದು ಇತರರನ್ನು ಪ್ರೇರೇಪಿಸಬಲ್ಲರು. ಹಣದ ವಿಷಯದಲ್ಲೂ ಅಷ್ಟೇ, ತೆಗೆದುಕೊಂಡರೆ ಮಾತಿನ ದಿನ ಕೊಟ್ಟು ಬಿಡುವವರು. ಸಂಗಾತಿಯ ವಿಷಯದಲ್ಲೂ ಆಡದೆ ಮಾಡಿ ತೋರಿಸಿ ಪ್ರೀತಿ ಗಳಿಸುವವರು. ಅವರನ್ನು ಮತ್ತಷ್ಟು ಬೆಳೆಯಲು ಪ್ರೇರೇಪಿಸುವ ಸ್ವಭಾವ ಇವರದು.