ತ್ರಿವೇಣಿ ಸಂಗಮದಲ್ಲಿ ಅಮೃತ ಸ್ನಾನ ಸಾಧ್ಯವಿಲ್ಲ ಎನ್ನುವವರು ಮೌನಿ ಅಮವಾಸ್ಯೆ ದಿನ ರಾಶಿಗೆ ತಕ್ಕಂತೆ ಮಾಡಿ ಈ ಕೆಲಸ

Published : Jan 28, 2025, 02:30 PM ISTUpdated : Jan 28, 2025, 02:50 PM IST
 ತ್ರಿವೇಣಿ ಸಂಗಮದಲ್ಲಿ ಅಮೃತ ಸ್ನಾನ ಸಾಧ್ಯವಿಲ್ಲ ಎನ್ನುವವರು ಮೌನಿ ಅಮವಾಸ್ಯೆ ದಿನ ರಾಶಿಗೆ ತಕ್ಕಂತೆ ಮಾಡಿ ಈ ಕೆಲಸ

ಸಾರಾಂಶ

ಜನವರಿ 29 ರಂದು ಮೌನಿ ಅಮವಾಸ್ಯೆ ಆಚರಿಸಲಾಗ್ತಿದೆ. ಈ ದಿನ ವಿಷ್ಣು ಪೂಜೆ, ಉಪವಾಸ, ಸ್ನಾನ, ದಾನಕ್ಕೆ ವಿಶೇಷ ಮಹತ್ವವಿದೆ.  ಪ್ರಯಾಗರಾಜ್‌ನ ಮಹಾ ಕುಂಭದಲ್ಲಿ ತ್ರಿವೇಣಿ ಸಂಗಮ ಸ್ನಾನ ಪುಣ್ಯದಾಯಕ. ಇದು ಸಾಧ್ಯ ಇಲ್ಲ ಎನ್ನುವವರು ರಾಶಿಗನುಸಾರ ಹನುಮಂತ, ಶಿವ, ವಿಷ್ಣು, ಲಕ್ಷ್ಮಿ ಪೂಜೆ, ಸ್ತೋತ್ರ ಪಠಣ, ದಾನ ಮಾಡಬಹುದು. 

ಮೌನಿ ಅಮವಾಸ್ಯೆ (Mauni Amavasya )ಗೆ ಹಿಂದೂ ಧರ್ಮ (Hinduism) ದಲ್ಲಿ ವಿಶೇಷ ಮಹತ್ವವಿದೆ. ಈ ಬಾರಿ ನಾಳೆ ಅಂದ್ರೆ ಜನವರಿ 29ರಂದು ಮೌನಿ ಅಮವಾಸ್ಯೆಯನ್ನು ಆಚರಿಸಲಾಗ್ತಿದೆ. ಈ ದಿನ ವಿಷ್ಣುವನ್ನು ಪೂಜಿಸಲಾಗುತ್ತದೆ. ಮೌನಿ ಅಮವಾಸ್ಯೆಯಂದು ಅನೇಕ ಜನರು ಉಪವಾಸ (Fasting) ಮಾಡ್ತಾರೆ. ಈ ದಿನ ಸ್ನಾನ ಮತ್ತು ದಾನ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಗಂಗಾ, ಯಮುನಾ ಮತ್ತು ಸರಸ್ವತಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಕೋಟ್ಯಂತರ ಜನರು ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭ (Maha Kumbh )ಕ್ಕೆ ತೆರಳಿದ್ದಾರೆ. ಪವಿತ್ರ ಸಂಗಮದಲ್ಲಿ ಸ್ನಾನ ಮಾಡಿ, ದಾನ ಮಾಡಿದ್ರೆ ಪುಣ್ಯ ಲಭಿಸುತ್ತದೆ ಎನ್ನುವ ನಂಬಿಕೆ ಇದೆ. ಇದನ್ನು ಅಮೃತ ಸ್ನಾನ ಎನ್ನಲಾಗುತ್ತದೆ. ಮೌನಿ ಅಮವಾಸ್ಯೆಯಂದು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಲು ಸಾಧ್ಯವಾಗ್ತಿಲ್ಲ ಎನ್ನುವವರು ಮನೆಯಲ್ಲಿಯೇ ಪೂಜೆ ಮಾಡ್ಬಹುದು.

ಮೌನಿ ಅಮವಾಸ್ಯೆಯಂದು ಬ್ರಹ್ಮ ಮುಹೂರ್ತದಲ್ಲಿ ಎದ್ದು ನೀರಿಗೆ ಗಂಗಾ ನೀರನ್ನು ಸೇರಿಸಿ ಸ್ನಾನ ಮಾಡಿ. ನಂತ್ರ ವಿಷ್ಣುವಿನ ಪೂಜೆ ಮಾಡಿ. ಹಾಗೆಯೇ ಇಡೀ ದಿನ ಉಪವಾಸ ಮಾಡುವ ಸಂಕಲ್ಪ ಮಾಡಿ. ವಿಷ್ಣು ಪೂಜೆಯ ನಂತ್ರ ತುಳಸಿಗೆ 108 ಪ್ರದಕ್ಷಿಣೆ ಹಾಕ್ಬೇಕು. ಪೂಜೆ ಮುಗಿದ ಮೇಲೆ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ದಾನವನ್ನು ಮಾಡಿ. ಈ ದಿನ ಪೂರ್ವಜರನ್ನು ನೆನಪಿಸಿಕೊಳ್ಳಬೇಕು. ನಾವಿಂದು ರಾಶಿಗನುಸಾರ ಯಾವೆಲ್ಲ ಕೆಲಸ ಮಾಡ್ಬೇಕು ಎಂಬುದನ್ನು ಹೇಳ್ತೇವೆ.

ಜನವರಿ 29 ರಂದು 5 ರಾಶಿಗೆ ಅದೃಷ್ಟ, ಸಂಪತ್ತು

ಮೌನಿ ಅವಮಾಸ್ಯೆಯಂದು ರಾಶಿಗನುಗುಣವಾಗಿ ಮಾಡಿ ಈ ಕೆಲಸ  :

ಮೇಷ ರಾಶಿ : ಈ ರಾಶಿಯವರು ಮೌನಿ ಅಮವಾಸ್ಯೆಯಂದು ಹನುಮಂತನನ್ನು ಪೂಜಿಸಬೇಕು. ಹನುಮಾನ್ ಚಾಲೀಸಾವನ್ನು 100 ಬಾರಿ ಪಠಿಸಬೇಕು. ನಿಮ್ಮ ತೂಕಕ್ಕೆ ಸಮವಾಗಿ ನೋವು ಗೋಧಿ ದಾನ ಮಾಡಬೇಕು. ಬೆಲ್ಲ ಮತ್ತು ಎಳ್ಳನ್ನು ದಾನ ಮಾಡಿದ್ರೆ ಕಷ್ಟಗಳಿಗೆ ಮುಕ್ತಿ ಸಿಗುತ್ತದೆ.

ವೃಷಭ ರಾಶಿ : ಈ ರಾಶಿಯವರು ಶ್ರೀ ಸೂಕ್ತ ಪಠಿಸಬೇಕು. ಹಸುವಿಗೆ ಪಾಲಕ್ ಸೊಪ್ಪನ್ನು ತಿನ್ನಿಸಿ. ಕಂಬಳಿಯನ್ನು ದಾನ ಮಾಡೋದಲ್ಲದೆ  ಅಕ್ಕಿ ಮತ್ತು ಸಕ್ಕರೆಯನ್ನು ದಾನ ಮಾಡಬಹುದು.

ಮಿಥುನ ರಾಶಿ : ಮೌನಿ ಅಮವಾಸ್ಯೆಯಂದು ಪುಣ್ಯ ಪ್ರಾಪ್ತಿಯಾಗ್ಬೇಕು ಎನ್ನುವವರು ಶ್ರೀ ವಿಷ್ಣು ಸಹಸ್ರನಾಮವನ್ನು ಪಠಿಸಬೇಕು. ಹಾಗೆಯೇ ಬಡವರಿಗೆ ಕಂಬಳಿ ಮತ್ತು ಎಳ್ಳು, ಹೆಸರು ಬೇಳೆಯನ್ನು ದಾನ ಮಾಡಬೇಕು.  

ಕರ್ಕ ರಾಶಿ :  ಶಿವನ ಆರಾಧನೆ ಮಾಡುವುದರಿಂದ ನಿಮ್ಮ ಪಾಪ ಕಳೆಯುತ್ತದೆ. ದುರ್ಗಾಸಪ್ತಶತಿ ಪಠಿಸುವುದು ಕೂಡ ಪ್ರಯೋಜನಕಾರಿಯಾಗಿದೆ. ಈ ರಾಶಿಯವರು ತೂಕಕ್ಕೆ ತಕ್ಕಂತೆ ಅಕ್ಕಿಯನ್ನು ದಾನ ನೀಡಬೇಕು.  

ಸಿಂಹ ರಾಶಿ :  ಶ್ರೀ ಆದಿತ್ಯಹೃದಯ ಸ್ತೋತ್ರವನ್ನು ಮೂರು ಬಾರಿ ಪಠಿಸಬೇಕು. ಗೋಧಿ ಮತ್ತು ಬೆಲ್ಲವನ್ನು ದಾನ ಮಾಡುವುದರಿಂದ ಹೆಚ್ಚು ಪ್ರಯೋಜನ ಪ್ರಾಪ್ತಿಯಾಗುತ್ತದೆ.

ಕನ್ಯಾ ರಾಶಿ : ಬುಧ ಗ್ರಹದ ಬೀಜ ಮಂತ್ರವನ್ನು ಪಠಿಸುವ ಜೊತೆಗೆ ಶ್ರೀ ರಾಮ ರಕ್ಷಾ ಸ್ತೋತ್ರ ಪಠಿಸಿ. ಕಂಬಳಿಗಳನ್ನು ದಾನ ಮಾಡಿ.

ತುಲಾ ರಾಶಿ : ಇವರು ಗಣೇಶ ಮತ್ತು ಲಕ್ಷ್ಮಿಯನ್ನು ಪೂಜಿಸಬೇಕು. ಬಡವರಿಗೆ ಉಣ್ಣೆಯ ಬಟ್ಟೆಗಳನ್ನು ದಾನ ಮಾಡಬೇಕು.

ಎಲ್ಲರ ಪಾಪ ತೊಳೆಯುವ ಗಂಗಾ ಮಾತೆಯಿಂದಲೇ ನಡೆದಿತ್ತು ಮಹಾ ಪಾಪ

ವೃಶ್ಚಿಕ ರಾಶಿ :  ಭಜರಂಗಬಾಣ ಪಠಿಸಿ. ಸುಂದರಕಾಂಡವನ್ನು ಸಹ ಪಠಿಸಿದ್ರೆ ಒಳ್ಳೆಯ ಫಲ ಪ್ರಾಪ್ತಿಯಾಗುತ್ತದೆ. ಈ ದಿನ ನೀವು ಆಹಾರವನ್ನು ಬಡವರಿಗೆ ದಾನ ಮಾಡಬೇಕು.  

ಧನು ರಾಶಿ : ರಾಮಚರಿತಮಾನಸದ ಅರಣ್ಯಖಂಡವನ್ನು ಓದುವುದು ಉತ್ತಮ. ಧಾರ್ಮಿಕ ಪುಸ್ತಕಗಳನ್ನು ದಾನ ಮಾಡಿದ್ರೆ ಲಾಭ ಹೆಚ್ಚು.

ಮಕರ ರಾಶಿ : ಮಕರ ರಾಶಿಯವರು ಮೌನಿ ಅಮವಾಸ್ಯೆಯಂದು ಶನಿಯ ಬೀಜ ಮಂತ್ರವನ್ನು ಪಠಿಸಬೇಕು. ಸುಂದರಕಾಂಡವನ್ನು ಸಹ ಹೇಳಬಹುದು. ಬಡವರಿಗೆ ಕಂಬಳಿಯನ್ನು ದಾನ ಮಾಡಿ.

ಕುಂಭ ರಾಶಿ : ಇವರು ಹನುಮಾನ್ ಬಾಹುಕ್ ಪಠಿಸಬೇಕು. ಬಡವರಿಗೆ ಉಣ್ಣೆಯ ಬಟ್ಟೆಗಳನ್ನು ನೀಡಲು ಮರೆಯಬಾರದು. ಎಳ್ಳನ್ನು ದಾನ ಮಾಡಿದರೆ ಒಳ್ಳೆಯದು. 

ಮೀನ ರಾಶಿ : ಗುರು ಮತ್ತು ಚಂದ್ರನ ಬೀಜ ಮಂತ್ರವನ್ನು ಪಠಿಸಿ.  ಅಶ್ವತ್ಥ ಮರವನ್ನು 7 ಬಾರಿ ಪ್ರದಕ್ಷಿಣೆ ಹಾಕಿದ್ರೆ ಒಳ್ಳೆಯದು. ನೀವು ಕಂಬಳಿ ಅಥವಾ ಉಣ್ಣೆ ಬಟ್ಟೆಯನ್ನು ದಾನ ಮಾಡಬೇಕು. 
 

PREV
Read more Articles on
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ