ಹಾಸನಾಂಬೆ ದರ್ಶನ ಇದೇ ವರ್ಷ ಕೊನೆ, ಬ್ರಹ್ಮಾಂಡ ಗುರೂಜಿ ನುಡಿದ ಸ್ಫೋಟಕ ಭವಿಷ್ಯ!

Published : Oct 10, 2025, 09:07 PM IST
Brahmanda guruji Bhavisya

ಸಾರಾಂಶ

ಬ್ರಹ್ಮಾಂಡ ಗುರೂಜಿಯವರು, ಈ ವರ್ಷದ ಹಾಸನಾಂಬೆ ದರ್ಶನವೇ ಕೊನೆಯಾಗಲಿದ್ದು, ಭವಿಷ್ಯದಲ್ಲಿ ದೇವಿಯ ದರ್ಶನ ಸಿಗುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಇದರೊಂದಿಗೆ, ಸಿಎಂ ಸಿದ್ದರಾಮಯ್ಯನವರ ಆರೋಗ್ಯ, ಮುಂದಿನ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಸರ್ಕಾರದ ಭವಿಷ್ಯದ ಬಗ್ಗೆಯೂ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಹಾಸನ: ಕರ್ನಾಟಕದ ಹಾಸನ ಜಿಲ್ಲೆಯ ಪ್ರಸಿದ್ಧ ಹಾಸನಾಂಬೆ ದೇವಾಲಯದಲ್ಲಿ ಈ ವರ್ಷವೂ ಲಕ್ಷಾಂತರ ಭಕ್ತರು ದರ್ಶನಕ್ಕಾಗಿ ಆಗಮಿಸುತ್ತಿರುವ ಸಂದರ್ಭದಲ್ಲಿ, ಬ್ರಹ್ಮಾಂಡ ಗುರೂಜಿಯವರು ನೀಡಿರುವ ಭವಿಷ್ಯವಾಣಿ ರಾಜ್ಯದ ಧಾರ್ಮಿಕ ಮತ್ತು ರಾಜಕೀಯ ವಲಯಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಹಾಸನಾಂಬೆ ದೇವಾಲಯದ ಕುರಿತು ಹಾಗೂ ರಾಜ್ಯ ರಾಜಕೀಯದ ಭವಿಷ್ಯದ ಕುರಿತು ಅವರು ನೀಡಿರುವ ನುಡಿಗಳು ಇದೀಗ ಚರ್ಚೆಯ ಕೇಂದ್ರಬಿಂದುವಾಗಿವೆ. ಹಾಸನಾಂಬೆ ದರ್ಶನ ಇದೇ ಕೊನೆಯ ವರ್ಷ ಭವಿಷ್ಯದಲ್ಲಿ ಆಕೆಯನ್ನು ನೋಡುವ ಅವಕಾಶ ಇಲ್ಲ. ಜೊತೆಗೆ ರಾಜ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆ ಆಗಲಿದೆ ಎಂದು ಕೂಡ ಹೇಳಿದ್ದಾರೆ.

ಹಾಸನಾಂಬೆ ದರ್ಶನ ಇದೇ ಕೊನೆಯ ವರ್ಷ

ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ನೀಡುವ ಹಾಸನಾಂಬೆ ದೇವಾಲಯ ಈ ಬಾರಿ ಅಕ್ಟೋಬರ್ 9ರಂದು ಬಾಗಿಲು ತೆರೆದಿದ್ದು, ಲಕ್ಷಾಂತರ ಭಕ್ತರು ದೇವಿಯ ದರ್ಶನಕ್ಕಾಗಿ ಆಗಮಿಸಿದ್ದಾರೆ. ಇದೇ ಸಂದರ್ಭದಲ್ಲಿ, ಬ್ರಹ್ಮಾಂಡ ಗುರೂಜಿಯವರು, “ಇದೇ ಹಾಸನಾಂಬೆ ದರ್ಶನದ ಕೊನೆಯ ವರ್ಷ” ಎಂದು ಘೋಷಿಸಿ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಮುಂದೆ ನಮಗಷ್ಟೇ ಅಲ್ಲ, ಯಾವ ಜನಕ್ಕೂ ಸಿಗುವುದಿಲ್ಲ. ಅಷ್ಟು ಮಟ್ಟದ ಅಡಚಣೆ ಆಗುತ್ತದೆ ಎಂಬುದು ಶತಸಿದ್ಧ. ಮುಂದಿನ ವರ್ಷದಿಂದ ಅಮ್ಮನವರ ಸಾನಿಧ್ಯ ಇಲ್ಲ. ಇದನ್ನು ಜನ್ಮದಲ್ಲಿ ಬರೆದಿಟ್ಟುಕೊಂಡು ಬಿಡಿ ಎಂದು ಆತ್ಮವಿಶ್ವಾಸದಿಂದ ಅವರು ತಿಳಿಸಿದ್ದಾರೆ. ಯಾಕಂದ್ರೆ ಹಾಸನಾಂಬೆ ಮತ್ತೆ ತೆಗೀತಾರೋ ಇಲ್ಲವೋ, ತೆಗೆಯುವ ಅವಕಾಶಗಳು ಬರುತ್ತವೋ ಇಲ್ಲವೋ ಅನ್ನುವಷ್ಟರ ಮಟ್ಟಿಗೆ ಸಿದ್ದೇಶ್ವರನ ಕೃಪಾಶೀರ್ವಾದ ಇದೆ. 2025 ರಿಂದ 2032ರ ಅವಧಿಯಲ್ಲಿ ಹಾಸನ ಸಿದ್ದೇಶ್ವರ, ಜೈನ್ ಕಲ್ ಸಿದ್ದೇಶ್ವರ ಮತ್ತು ಇತರ ಪಂಗಡಗಳ ಶಿವಶಕ್ತಿಗಳು ಒಂದೇ ಕಡೆ ಸೇರುತ್ತವೆ ಇದರಿಂದ 7 ಜನ ಅಕ್ಕತಂಗಿಯರಿಂದ ಘಟಪ್ರಭಾ ನದಿ ತೀರದ ಪ್ರದೇಶಗಳಲ್ಲಿ ಭಾರೀ ಪರಿವರ್ತನೆಗಳು ಸಂಭವಿಸಬಹುದು ಎಂದೂ ಸೂಚಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಬಗ್ಗೆ ಗುರೂಜಿಯ ಭವಿಷ್ಯ

ಬ್ರಹ್ಮಾಂಡ ಗುರೂಜಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಕುರಿತು ಮಾತನಾಡುತ್ತಾ, ಅವರ ಆರೋಗ್ಯದಲ್ಲಿ ಕುಸಿತ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕಾಗಿ ಇಬ್ಬರಿಗೆ ಅವಕಾಶವಿದ್ದು, ಅದರಲ್ಲಿ ರಾಜಕೀಯವಾಗಿ ಭಾರೀ ಏರಿಳಿತಗಳು ನಡೆಯುವ ಸಾಧ್ಯತೆ ಇದೆ ಎಂದು ಅವರು ನುಡಿದ್ದಾರೆ. ಮುಂದಿನ ಸಿಎಂ ಆಯ್ಕೆ ಈ ವರ್ಷದ ನವೆಂಬರ್ ಅಥವಾ ಸಂಕ್ರಾಂತಿಯೊಳಗೆ ಆಗದಿದ್ದರೆ, ಆ ಯೋಗ ಮತ್ತೆ ಬರಲು 10 ವರ್ಷ ಬೇಕಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ಇದೇ ಕೊನೆಯ ಅವಧಿ

ರಾಜಕೀಯ ವಲಯದಲ್ಲಿ ಹೆಚ್ಚು ಗಮನ ಸೆಳೆದ ಹೇಳಿಕೆಯೆಂದರೆ, ಕಾಂಗ್ರೆಸ್ ಪಕ್ಷದ ಭವಿಷ್ಯ ಕುರಿತು ನೀಡಿದ ಭವಿಷ್ಯವಾಣಿ. ಬ್ರಹ್ಮಾಂಡ ಗುರೂಜಿಯವರು, ಕಾಂಗ್ರೆಸ್ ಸರ್ಕಾರದ ಅವಧಿ ಇದೇ ಕೊನೆಯದು. ಮುಂದೆ 10 ವರ್ಷಗಳ ಬಳಿಕ ಯೋಗ ಇದ್ದರೂ, ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆ ಅತಿ ಕಡಿಮೆ. ಮಿಶ್ರ ಸರ್ಕಾರ (ಸಮ್ಮಿಶ್ರ ಆಡಳಿತ) ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಕಾಂಗ್ರೆಸ್ ಪಕ್ಷದ ಭವಿಷ್ಯದ ಬಗ್ಗೆ ಊಹಾಪೋಹಗಳನ್ನು ಮತ್ತಷ್ಟು ಗಾಢಗೊಳಿಸಿದೆ.

ಪ್ರಕೃತಿ ಮತ್ತು ಸಾಮಾಜಿಕ ಭವಿಷ್ಯ

ಗುರೂಜಿಯವರು ಪ್ರಕೃತಿ ಮತ್ತು ಸಮಾಜದ ಕುರಿತಾದ ಭವಿಷ್ಯವಾಣಿಗಳನ್ನೂ ನೀಡಿದರು. ಕೃಷ್ಣಾ, ಗೋದಾವರಿ, ಘಟಪ್ರಭಾ, ಮಲಪ್ರಭಾ ನದಿಗಳು ಉಕ್ಕಿಹರಿದು ದಕ್ಷಿಣ ಮತ್ತು ಉತ್ತರ ಕರ್ನಾಟಕವನ್ನು ವಿಭಜಿಸುವಂಥಾ ಸ್ಥಿತಿ ಉಂಟಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ಕನ್ಯಾಕುಮಾರಿ ಪ್ರದೇಶ ರಕ್ಷಿತವಾಗಿದ್ದರೂ, ಕಾಶ್ಮೀರ ಭಾಗ ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇದೆ ಎಂದು ಅವರು ಭವಿಷ್ಯ ನುಡಿದ್ದಾರೆ. ಹಲವರಿಗೆ ಜಲಗಂಡಾಂತರ ಹಾಗೂ ಆರೋಗ್ಯ ಸಂಬಂಧಿ ಸಮಸ್ಯೆಗಳು ಎದುರಾಗಬಹುದು ಎಂದು ಜನರಿಗೆ ಮುನ್ನೆಚ್ಚರಿಕೆ ನೀಡಿದರು. ಮಹಿಳೆಯರಿಗೆ ಖರ್ಚುಗಳಲ್ಲಿ ಎಚ್ಚರಿಕೆ ವಹಿಸುವಂತೆ, ಮುಂದಿನ ದಿನಗಳಲ್ಲಿ ಉನ್ನತ ಸ್ಥಾನ ಪಡೆಯಲು ಹಣ ಮತ್ತು ಶ್ರಮ ಹೆಚ್ಚು ಬೇಕಾಗುತ್ತದೆ ಎಂದು ಸಲಹೆ ನೀಡಿದರು.

ಮೊದಲ ದಿನದ ದರ್ಶನಕ್ಕೆ ಮಳೆ ಅಡ್ಡಿ

ಹಾಸನಾಂಬೆ ದರ್ಶನದ ಮೊದಲ ದಿನವೇ ಭಾರೀ ಮಳೆಯು ಭಕ್ತರಿಗೆ ಅಡ್ಡಿಯಾಯಿತು. ಉಚಿತ ದರ್ಶನ ಮತ್ತು ಪಾಸ್ ಸಾಲುಗಳ ವ್ಯವಸ್ಥೆಯನ್ನು ಅಧಿಕಾರಿಗಳು ಸೂಕ್ತವಾಗಿ ಮಾಡಿದ್ದಾರೆ. ಹಾಸನ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ಅವರು ಸ್ಥಳದಲ್ಲಿ ಹಾಜರಿದ್ದು, ಭಕ್ತರ ಸಂಚಾರವನ್ನು ನಿಯಂತ್ರಿಸಿದರು.

ಬ್ರಹ್ಮಾಂಡ ಗುರೂಜಿಯವರು ಹಾಸನಾಂಬೆ ದರ್ಶನದ ಕುರಿತಾದ ಧಾರ್ಮಿಕ ನುಡಿಗಳ ಜೊತೆಗೆ, ಸಿಎಂ ಸಿದ್ದರಾಮಯ್ಯ ಅವರ ಆರೋಗ್ಯ, ಮುಂದಿನ ಮುಖ್ಯಮಂತ್ರಿ ಯೋಗ ಹಾಗೂ ಕಾಂಗ್ರೆಸ್ ಪಕ್ಷದ ಭವಿಷ್ಯ ಕುರಿತು ನೀಡಿದ ಭವಿಷ್ಯವಾಣಿಗಳು ಕರ್ನಾಟಕದ ಧಾರ್ಮಿಕ, ರಾಜಕೀಯ ಹಾಗೂ ಸಾಮಾಜಿಕ ವಲಯಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿವೆ. ಈ ನುಡಿಗಳು ಕೇವಲ ಜ್ಯೋತಿಷ್ಯ ಅಥವಾ ಆಧ್ಯಾತ್ಮಿಕ ದೃಷ್ಟಿಯಿಂದ ಮಾತ್ರವಲ್ಲದೆ, ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿಯೂ ಮಹತ್ವ ಪಡೆದುಕೊಂಡಿವೆ.

PREV
Read more Articles on
click me!

Recommended Stories

ವೃಶ್ಚಿಕ ರಾಶಿಯಲ್ಲಿ ಲಕ್ಷ್ಮಿ ಯೋಗ ಆರಂಭ, ಅದೃಷ್ಟ ಈ 6 ರಾಶಿಗೆ
ಹೊಸ ವರ್ಷದಲ್ಲಿ ಕೇತು 3 ರಾಶಿಗೆ ದಯೆ, ಗೌರವ ಮತ್ತು ಪ್ರತಿಷ್ಠೆ 3 ಪಟ್ಟು ಜಾಸ್ತಿ