ತಾಯಿ ಲಕ್ಷ್ಮಿಯ ಒಲುಮೆಯಿದ್ದರೆ ಜೀವನದಲ್ಲಿ ಹಣದ ಕೊರತೆ ಇರುವುದಿಲ್ಲ. ಹಣದ ಕೊರತೆ ಇರದಿದ್ದರೆ ಸಾಕಷ್ಟು ಸಮಸ್ಯೆಗಳು ತಗ್ಗುವ ಜೊತೆಗೆ ಉತ್ತಮ ಜೀವನ ನಡೆಸುವುದು ಸುಲಭವಾಗುತ್ತದೆ. ಆದರೆ, ಆಕೆಯ ಒಲುಮೆ ಪಡೆಯಲು ಏನು ಮಾಡಬೇಕು?
ತಾಯಿ ಲಕ್ಷ್ಮಿಯ ಅನುಗ್ರಹ ಬೇಡ ಅನ್ನುವರಾರಿದ್ದಾರೆ ಹೇಳಿ? ಲಕ್ಷ್ಮೀ ತಮ್ಮ ಮನೆಗೆ ಬರಲೆಂದು, ಸದಾ ಆಕೆ ಅಲ್ಲಿ ನೆಲೆಸಲೆಂದು ಎಲ್ಲರೂ ಬೇಡಿಕೊಳ್ಳುತ್ತಾರೆ. ಏಕೆಂದರೆ ಲಕ್ಷ್ಮೀ ಯಾರಿಗೆ ಒಲಿಯುತ್ತಾಳೋ ಅವರಿಗೆ ಎಂದಿಗೂ ಯಾವುದಕ್ಕೂ ಕೊರತೆಯಾಗುವುದಿಲ್ಲ. ಲಕ್ಷ್ಮಿಯು ಮನೆಯಲ್ಲೇ ಸದಾ ನೆಲೆಸುವಂತೆ ನೋಡಿಕೊಳ್ಳಲು ಕೆಲವೊಂದು ವಿಷಯಗಳನ್ನು ಅನುಸರಿಸಬೇಕು. ಅಂದರೆ ಮನೆಯನ್ನು ಸದಾ ಸ್ವಚ್ಛವಾಗಿಟ್ಟುಕೊಳ್ಳುವುದು, ಮನಸ್ಸನ್ನು ಸ್ವಚ್ಛವಾಗಿರಿಸುವುದು, ಸೋಮಾರಿತನ ಬಿಡುವುದು ಹೀಗೆ..
ಇವುಗಳ ಹೊರತಾಗಿ ಬೆಳಗ್ಗೆ ಎದ್ದ ಕೂಡಲೇ ಮಾಡುವ ಈ ಒಂದು ಕಾರ್ಯ ಕೂಡಾ ಲಕ್ಷ್ಮಿಯನ್ನು ಮನೆಯಲ್ಲೇ ಇರಿಸುತ್ತದೆಯಂತೆ. ಆಕೆಯ ಆಶೀರ್ವಾದವನ್ನು ತಂದು ಕೊಡುತ್ತದೆ. ಏನು ಆ ಕೆಲಸ?
ಬೆಳಗಿನ ಸಮಯವನ್ನು ಅತ್ಯಂತ ಶಕ್ತಿಶಾಲಿ ಎಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ, ನೀವು ಧನಾತ್ಮಕ ಶಕ್ತಿಯನ್ನು ಪಡೆಯುವಂತಹ ಕೆಲಸಗಳನ್ನು ಯಾವಾಗಲೂ ಮಾಡಿ. ನೀವು ಸಕಾರಾತ್ಮಕ ಶಕ್ತಿಯೊಂದಿಗೆ ಬೆಳಿಗ್ಗೆ ಪ್ರಾರಂಭಿಸಿದರೆ, ನಿಮ್ಮ ಇಡೀ ದಿನ ಅರ್ಥಪೂರ್ಣವಾಗುತ್ತದೆ ಎಂದು ನಂಬಲಾಗಿದೆ. ಲಕ್ಷ್ಮಿ ದೇವಿ(Goddess Lakshmi)ಯ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲು, ನೀವು ಪ್ರತಿದಿನ ಬೆಳಿಗ್ಗೆ ಎದ್ದು ಸ್ನಾನದ ನಂತರ ಲಕ್ಷ್ಮಿ ದೇವಿಯನ್ನು ಪೂಜಿಸಬೇಕು. ಅಷ್ಟೇ ಅಲ್ಲ, ಬೆಳಗ್ಗೆ ಎದ್ದೊಡನೆ ಮಾದಲು ನಿಮ್ಮ ಅಂಗೈಗಳನ್ನು ನೋಡಿಕೊಳ್ಳಬೇಕು. ಹಾಗೆ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಕೆಲಸ ಮಾಡುವುದರಿಂದ ಏನು ಪ್ರಯೋಜನ ಎಂದು ತಿಳಿಯೋಣ..
ಲಕ್ಷ್ಮಿ ದೇವಿಯು ಅಂಗೈಯಲ್ಲಿ ನೆಲೆಸಿದ್ದಾಳೆ ಎಂದು ಧರ್ಮಗ್ರಂಥಗಳಲ್ಲಿ ನಂಬಲಾಗಿದೆ. ಅಂಗೈಗಳ ಮೇಲ್ಭಾಗದಲ್ಲಿ ಲಕ್ಷ್ಮಿ, ಮಧ್ಯದಲ್ಲಿ ಸರಸ್ವತಿ ಮತ್ತು ಮೂಲದಲ್ಲಿ ಬ್ರಹ್ಮದೇವರು ನೆಲೆಸಿದ್ದಾರೆ ಎಂದು ಹೇಳಲಾಗುತ್ತದೆ. ಆದ್ದರಿಂದ, ಬೆಳಿಗ್ಗೆ ಎದ್ದು ಅಂಗೈಯನ್ನು ನೋಡುವುದು ತುಂಬಾ ಮಂಗಳಕರವಾಗಿರುತ್ತದೆ.
ಬೆಳಿಗ್ಗೆ ಎದ್ದ ನಂತರ, ಮೊದಲನೆಯದಾಗಿ, ಅಂಗೈಗಳನ್ನು (Palms) ನೋಡಿದಾಗ ಧನಾತ್ಮಕ ಶಕ್ತಿಯು ದೇಹದಲ್ಲಿ ಹರಡುತ್ತದೆ. ಬೆಳಗ್ಗೆ ಎದ್ದ ತಕ್ಷಣ ಅಂಗೈಯನ್ನು ನೋಡುವುದರಿಂದ ವಿದ್ಯೆಯ ಅಧಿದೇವತೆಯಾದ ಸರಸ್ವತಿ ಹಾಗೂ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿಯ ಆಶೀರ್ವಾದ ಸಿಗುತ್ತದೆ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳೂ ದಿನದಿಂದ ದಿನಕ್ಕೆ ಕಡಿಮೆಯಾಗುತ್ತವೆ. ಮತ್ತು ದೇವತೆಗಳ ಅನುಗ್ರಹವು ನಮ್ಮ ಮೇಲೆ ಇದ್ದಾಗ, ನಾವು ನಮ್ಮ ಜೀವನದಲ್ಲಿ ದೊಡ್ಡ ಸವಾಲುಗಳನ್ನು ಸುಲಭವಾಗಿ ಎದುರಿಸಬಹುದು.
ಬೆಳಿಗ್ಗೆ ನಿಮ್ಮ ಎರಡೂ ಕೈಗಳನ್ನು ನೋಡುತ್ತಾ, 'ಕರಾಗ್ರೇ ವಸತೇ ಲಕ್ಷ್ಮಿ, ಕರಮಧ್ಯೇ ಸರಸ್ವತಿ, ಕರಮೂಲೇ ಸ್ಥಿತೇ ಬ್ರಹ್ಮ ಪ್ರಭಾತೇ ಕರದರ್ಶನಂ' ಎಂದು ಹೇಳಿ. ಈಗ ಎರಡೂ ಅಂಗೈಗಳನ್ನು ನಿಮ್ಮ ಮುಖದ ಮೇಲೆ ತಿರುಗಿಸಿ. ಅಂಗೈಗಳಲ್ಲಿ ಬ್ರಹ್ಮತೀರ್ಥ, ಋಷಿತೀರ್ಥ, ದೇವತೀರ್ಥ, ಪ್ರಜಾಪತಿ, ಪಿತೃತೀರ್ಥ ಮತ್ತು ಅಗ್ನಿತೀರ್ಥಗಳೂ ಇವೆ.
ಬೆಳಿಗ್ಗೆ ಎದ್ದ ನಂತರ ಮತ್ತು ನಿಮ್ಮ ಅಂಗೈಗಳನ್ನು ನೋಡಿದ ನಂತರ ಈ ಮಂತ್ರವನ್ನು ಪಠಿಸುವ ಮೂಲಕ, ವ್ಯಕ್ತಿಯು ಕ್ರಮೇಣ ಸಮಸ್ಯೆಗಳನ್ನು ಶಾಂತವಾಗಿ ನಿಭಾಯಿಸುತ್ತಾನೆ. ಮತ್ತು ನೀವು ಏಕಾಗ್ರತೆಯನ್ನು ಹೊಂದಿರುವಾಗ, ನೀವು ಶಾಂತರಾಗುತ್ತೀರಿ.
Numerology: ಜನ್ಮಸಂಖ್ಯೆ 3 ಆಗಿದ್ದರೆ, ನಿಮ್ಮ ಮೇಲಿರುತ್ತೆ 'ಗುರು' ಕೃಪೆ! ಸ್ವಭಾವ, ಭವಿಷ್ಯ ಹೀಗಿರುತ್ತೆ..
ಯಾರ ಗ್ರಹಸ್ಥಿತಿ ಸರಿಯಾಗಿ ನಡೆಯುತ್ತಿಲ್ಲವೋ ಅವರು ಶುಭವಾಗಲು ಮಲಗಿದ ನಂತರ ಕಣ್ಣು ತೆರೆದ ತಕ್ಷಣ ಅಂಗೈಯನ್ನು ಮೊದಲು ನೋಡಬೇಕು ಎಂಬುದು ನಂಬಿಕೆ. ಅಂಗೈ ದರ್ಶನವಾದ ನಂತರ ಮನೆಯ ಹಿರಿಯರಿಗೆ ನಮಸ್ಕರಿಸಬೇಕು.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.