ಕೋಳಿ ಅಂಕದ ಭವಿಷ್ಯ ಹೇಳುವ ಕುಕ್ಕುಟ ಪಂಚಾಂಗ!

By Suvarna NewsFirst Published Oct 27, 2022, 3:35 PM IST
Highlights

ಕೇವಲ ಮನುಷ್ಯರಿಗಷ್ಟೇ ಅಲ್ಲ, ಕೋಳಿಗಳ ಭವಿಷ್ಯ ಹೇಳುವ ಪಂಚಾಂಗವೂ ಉಂಟು! ಹಾಗಂಥ ಇದೇನೋ ಕೋಳಿ ಸಾಂಬಾರಾಗುತ್ತದೋ, ಮರಿ ಹಾಕುತ್ತದೋ ಎಂದು ಭವಿಷ್ಯ ಹೇಳುವುದಿಲ್ಲ. ಕೋಳಿಅಂಕದಲ್ಲಿ ಯಾವ ತಿಥಿಯಲ್ಲ ಆಡಿಸಿದರೆ ಯಾವ ರೀತಿಯ ಕೋಳಿ ಗೆಲ್ಲುತ್ತದೆ ಎಂದು ಹೇಳುತ್ತದೆ ಈ ಕುಕ್ಕುಟ ಪಂಚಾಂಗ!

ಜಯಾನಂದ ಕೆ ಬಂಗೇರ

ನಮ್ ತುಳುನಾಡಿನಲ್ಲಿ ಕೇವಲ ಉದ್ಯಾವರ ಮತ್ತು ಶಾಸ್ತ್ರಸಿದ್ದ ಉಡುಪಿ ಶ್ರೀ ಕೃಷ್ಣ ಪಂಚಾಂಗ ಮಾತ್ರವಲ್ಲ. ನಮ್ಮಲ್ಲಿ ವಿಶೇಷ ವಾಗಿ ನಡೆಯುವ ಕೋಳಿ ಅಂಕ (ಕೋರ್ದ ಕಟ್ಟ)ಗಂತಾನೆ ಒಂದು ಶಾಸ್ತ್ರೀಯ ಪಂಚಾಂಗ ಇತ್ತು!
ಬರೀ ಮನುಷ್ಯರಲ್ಲಿ ಮಾತ್ರ ಜಾತಿಯನ್ನು ಹುಡುಕಿದ್ದಲ್ಲ, ನಾವು ಕೋಳಿಗಳಲ್ಲಿಯೂ ಜಾತಿ ಹುಡುಕಿದ್ದೇವೆ.

ಇಂತಹ ತಿಥಿಯಲ್ಲಿ ಇಂತಹ ಜಾತಿಯ ಕೋಳಿ ಕಟ್ಟಿದ್ರೆ ಇಂತಹ ಜಾತಿಯ ಕೋಳಿಯನ್ನು ಗೆಲ್ಲುತ್ತದೆ ಅನ್ನೋದು ಆ ಪಂಚಾಂಗದಲ್ಲಿತ್ತು ಅನ್ನೋದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯವರನ್ನು ಬಿಟ್ಟು ಉಳಿದವರಿಗೆ ಬಹುಶಃ ಗೊತ್ತಿರಲಿಕ್ಕಿಲ್ಲ!

ಹಾಗಂತ ಇದು ತಮಿಳು ನಾಡಿನಲ್ಲಿಯೂ ಇತ್ತು, ಈಗಲೂ ಇದೆ(ಆದರೆ ರೀತಿ ರಿವಾಜು ಬೇರೆ). ಈ ಕಾನ್ಸೆಪ್ಟಿನ ಮೇಲೆ #ಧನುಷ್ ಸಿನಿಮಾ ಮಾಡಿದ್ರು. ಬರೀ ಕೋಳಿ ಅಂಕದ ವಿಷ್ಯ ಹಿಡ್ಕೊಂಡು ಆ ಸಿನಿಮಾ ಹೆಸ್ರು ನೆನಪಿಗೆ ಬರ್ತಿಲ್ಲ.

Udupi: ಕೊರಗ ಕಾಲನಿಯಲ್ಲಿ ಅದಮಾರು ಶ್ರೀ ದೀಪಾವಳಿ ಆಚರಣೆ

ಕೋಳಿ ಇದೆ ಅಂತ ಎಲ್ಲರೂ ಕಟ್ಟುವುದಿಲ್ಲ. ಅದಕ್ಕೆಂದೇ ಪರಿಣಿತರು ಇದ್ದಾರೆ. ಕೋಳಿಗೆ ಮತ್ತೊಂದು ಕೋಳಿಯನ್ನು ಜತೆ ಮಾಡುವುದರ ಮೂಲಕ (ಇಲ್ಲಿ ಕೋಳಿಯ ಬಣ್ಣ ಮತ್ತು ಅದರ ತೂಕ, ಗಾತ್ರ ಬಹಳ ಮುಖ್ಯವಾಗುತ್ತದೆ.)
ಇದರ ನಂತರ ಕೋಳಿ ಅಂಕಕ್ಕೆಂದೇ ವಿಶೇಷವಾಗಿ ತಯಾರಿಸಿದ ಸಣ್ಣ ಚೂರಿ (ಇದರಲ್ಲೂ ವಿನ್ಯಾಸಗಳಿವೆ) ಅದನ್ನು ಕೋಳಿಯ ಮೋಸ್ಟ್ಲಿ ಬಲ ಕಾಲಿಗೆ ಕಟ್ಟುವುದು ಕೂಡ ಒಂದು ವಿದ್ಯೆಯೇ. ಕತ್ತಿ ಸಡಿಲವಾಗಲೂ ಬಾರದು ಬಿಗಿಯಾಗಿಯೂ ಇರಬಾರದು. ಬಿಗಿಯಾದ್ರೆ ಕೋಳಿಗೆ ನಡೆಯಲು ಕಷ್ಟ ಲೂಸ್ ಆದ್ರೆ ಎದುರಾಳಿ ಕೋಳಿಗೆ ಸರಿಯಾಗಿ ಏಟು ಬೀಳದು. (ಈ ಕೋಳಿಗಳು ಕಾದಾಡುವಾಗ ಬೀಳುವ ಜಾಗದ ಏಟುಗಳಿಗೂ ಒಂದೊಂದು ಹೆಸರಿದೆ.)
ಇದರ ನಂತರ ಕೋಳಿ ಕಾದಾಟಕ್ಕೆ ಬಿಡುವ ಕ್ರಮದಲ್ಲಿ ಕೋಳಿಗೆ ನೋವು ಆಗಬಾರದು ಮತ್ತು ಎದುರಾಳಿ ಕೋಳಿಯ ನಡೆಯನ್ನು ಗಮನಿಸಿ ಕೋಳಿಯನ್ನು ಬಿಡುವುದು ಕೂಡ ಒಂದು ಬುದ್ಧಿಮತ್ತೆ ಒಂಚೂರು ಹೆಚ್ಚುಕಮ್ಮಿಯಾದರು ಬಿಡುವವನ ಕೈಗೆ ಗಾಯ ಆಗಿ ಸತ್ತಂತಹ ನಿದರ್ಶನ ಕೂಡ ಇದೆ.
ಕೋಳಿ ಬಿಟ್ಟ ನಂತರ ಒಂದು ಬಾರಿ ಎದುರಾಳಿ ಕೋಳಿಗೆ ಹೊಡೆತ ಕೊಟ್ಟ ನಂತರ ಕೋಳಿಯನ್ನು ಹಿಡಿಯೋದು ಕೂಡ ಅಷ್ಟೇ ನಾಜೂಕಿನ ಕೆಲ್ಸ. ಇಲ್ಲಿ ನೇರವಾಗಿ ಕೋಳಿ ಬಿಟ್ಟವನ ತೊಡೆಗೆ ಆ ಚೂರಿ ತಾಗುವ ಸಂಭವ ಜಾಸ್ತಿ ಇರುತ್ತದೆ.

ಇಲ್ಲಿಯೂ ಮೋಸ ವಂಚನೆ ನಡೆಯುತ್ತದೆ, ಅದೆಲ್ಲವೂ ಕೋಳಿ ಬಿಡುವವನ ಮೇಲೆ ಅವಲಂಬಿತ ಆಗಿರುತ್ತದೆ. ಒಂದು ಅಡ್ಜಸ್ಟ್ ಮೆಂಟ್ ಮಾಡಿಕೊಂಡರೆ ಒಬ್ಬನಿಗೆ ನಷ್ಟವಾಗುತ್ತದೆ. ಇಲ್ಲಿ ಬೆಟ್ಟಿಂಗ್ ಕೂಡ ನಡೆಯುತ್ತದೆ. ಅದು ಕೂಡ 50 ರೂಪಾಯಿಯಿಂದ ಹಿಡಿದು ಲಕ್ಷಗಳವರೆಗೆ ಇರುತ್ತದೆ!

ವಿಷ್ಯ ಇನ್ನೂ ಉಂಟು ಬರೆದರೆ ಒಂದು ಪುಸ್ತಕವೇ ಆಗಬಹುದು. ಬಹು ಮುಖ್ಯವಾಗಿ ದೈವಾರಾಧನೆಗೂ ಕೋಳಿ ಅಂಕಕ್ಕೂ ಒಂದು ಅವಿನಾಭಾವ ಸಂಬಂಧ ಇದೆ.

Numerology: ಜನ್ಮಸಂಖ್ಯೆ 3 ಆಗಿದ್ದರೆ, ನಿಮ್ಮ ಮೇಲಿರುತ್ತೆ 'ಗುರು' ಕೃಪೆ! ಸ್ವಭಾವ, ಭವಿಷ್ಯ ಹೀಗಿರುತ್ತೆ..

ಕುಕ್ಕುಟ ಪಂಚಾಂಗದಲ್ಲೇನಿದೆ?
ಯಾವ ತಿಥಿಯಲ್ಲಿ ಕೋಳಿ ಅಂಕ ಕಟ್ಟಿದರೆ ಯಾವ ಬಣ್ಣದ ಕೋಳಿ ಗೆಲ್ಲುತ್ತದೆ, ಯಾವ ಬಣ್ಣದ ಕೋಳಿಯ ವಿರುದ್ಧ ಗೆಲ್ಲುತ್ತದೆ, ಯಾವ ತಿಥಿಯಲ್ಲಿ ಯಾವ ಬಣ್ಣದ ಕೋಳಿಯ ಅಂಕ ಕಟ್ಟಬಾರದು ಎಂಬ ವಿವರಗಳು ಈ ಪಂಚಾಂಗದಲ್ಲಿದೆ. 
ಉದಾಹರಣೆಗೆ ಪಾಡ್ಯದ ತಿಥಿಯಾದರೆ, ಕೆಂಪು ಕೋಳಿಯು ಕಪ್ಪನ್ನು ಬಿಟ್ಟು ಬೇರೆಲ್ಲ ಕೋಳಿಗಳನ್ನು ಕಡಿಯುವುದು, ಈ ದಿನ ಕಪ್ಪು ಕೋಳಿಯು ಕೆಂಪನ್ನು ಬಿಟ್ಟು ಬೇರೆಲ್ಲ ಕೋಳಿಗಳನ್ನು ಕಡಿಯುವುದು ಹೀಗೆ.. ಇಷ್ಟೇ ಅಲ್ಲ, ಕೋಳಿಅಂಕಕ್ಕೆ ಮನೆಯಿಂದ ಯಾವಾಗ ಹೊರಡಬೇಕು, ಯಾವೆಲ್ಲ ಜಾತಿಯ ಕೋಳಿಗಳಿವೆ ಇತ್ಯಾದಿ ವಿವರಗಳನ್ನೂ ಸೂಚನೆಯಾಗಿ ಇದರಲ್ಲಿ ನೀಡಲಾಗಿರುತ್ತದೆ. 

click me!