ವಟ ಸಾವಿತ್ರಿ ವ್ರತವನ್ನು ಪ್ರತಿ ವರ್ಷ ಜ್ಯೇಷ್ಠ ಅಮವಾಸ್ಯೆಯಂದು ಆಚರಿಸಲಾಗುತ್ತದೆ. ಈ ವರ್ಷ ವಟ ಸಾವಿತ್ರಿ ವ್ರತವನ್ನು ಮೇ 30ರಂದು ಸೋಮವಾರ ಆಚರಿಸಲಾಗುತ್ತಿದೆ. ಇದೇ ದಿನ ಶನಿ ಜಯಂತಿಯಿದೆ. ಈ ದಿನ ಕೆಲ ಪರಿಹಾರ ಕಾರ್ಯಗಳನ್ನು ಮಾಡುವುದರಿಂದ ಸಾಕಷ್ಟು ಶುಭ ಫಲಗಳನ್ನು ಪಡೆಯಬಹುದು.
ವಟ ಸಾವಿತ್ರಿ ವ್ರತ(Vat Savitri Vrat)ವನ್ನು ಪ್ರತಿ ವರ್ಷ ಜ್ಯೇಷ್ಠ ಅಮವಾಸ್ಯೆ(New Moon Day)ಯ ದಿನ ಆಚರಿಸಲಾಗುತ್ತದೆ. ಈ ವರ್ಷ ವಟ ಸಾವಿತ್ರಿ ವ್ರತವನ್ನು ಮೇ 30 ರಂದು ಸೋಮವಾರ ಆಚರಿಸಲಾಗುತ್ತಿದೆ. ಹಿಂದೂ ಧರ್ಮದಲ್ಲಿ ಈ ದಿನ ಕೈಗೊಳ್ಳುವ ಉಪವಾಸಕ್ಕೆ ವಿಶೇಷ ಮಹತ್ವವಿದೆ.
ಜ್ಯೇಷ್ಠ ಅಮಾವಾಸ್ಯೆಯ ದಿನದಂದು ಸಾವಿತ್ರಿ(Savitri) ತನ್ನ ಪತಿ ಸತ್ಯವಾನನ ಜೀವವನ್ನು ಯಮರಾಜನಿಂದ ರಕ್ಷಿಸಿದಳು ಎಂಬುದು ಧಾರ್ಮಿಕ ನಂಬಿಕೆಯಾಗಿದೆ. ಅದಕ್ಕಾಗಿಯೇ ವಿವಾಹಿತ ಮಹಿಳೆಯರು ತಮ್ಮ ಪತಿಯ ದೀರ್ಘಾಯುಷ್ಯ ಮತ್ತು ಸಂತೋಷದ ಜೀವನಕ್ಕಾಗಿ ಶ್ರದ್ಧೆಯಿಂದ ವಟ ಸಾವಿತ್ರಿ ಉಪವಾಸ(Upavas)ವನ್ನು ಆಚರಿಸುತ್ತಾರೆ. ವಿಶೇಷ ಪೂಜಾ ಸಾಮಗ್ರಿಗಳನ್ನು ಬಳಸಿ ಆಲದ ಮರವನ್ನು ಪೂಜಿಸುತ್ತಾರೆ.
ಈ ವ್ರತವನ್ನು ಪೂರ್ಣ ಭಕ್ತಿಯಿಂದ ಆಚರಿಸುವುದರಿಂದ ಪತಿಯ ದೀರ್ಘಾಯುಷ್ಯ ಮತ್ತು ಮಕ್ಕಳ ಪ್ರಾಪ್ತಿಯಾಗುತ್ತದೆ ಎಂದು ನಂಬಿ ಆಲದ ಮರ(Banyan tree)ಕ್ಕೆ ಪ್ರದಕ್ಷಿಣೆ ಹಾಕುವ ಮಹಿಳೆಯರು ಅದರ ಸುತ್ತಲೂ ಕೆಂಪು ದಾರ(Kalava)ವನ್ನು ಕಟ್ಟುತ್ತಾರೆ.
ಅಂದ ಹಾಗೆ, ವಟ ಸಾವಿತ್ರಿ ವ್ರತವು ಶನಿ ಜಯಂತಿ(Shani Jayanti)ಯೂ ಒಂದೇ ದಿನ ಬರಲಿದೆ. ಅಮಾವಾಸ್ಯೆಯ ತಿಥಿಯೇ ಒಂದು ಪ್ರಮುಖ ತಿಥಿ. ಶನಿ ಜಯಂತಿಯನ್ನು ಜ್ಯೇಷ್ಠ ಅಮಾವಾಸ್ಯೆಯ ದಿನವೂ ಆಚರಿಸಲಾಗುತ್ತದೆ. ಈ ದಿನ ಶನಿದೇವನ ಆರಾಧನೆಯು ತುಂಬಾ ಪ್ರಯೋಜನಕಾರಿ. ನಂಬಿಕೆಗಳ ಪ್ರಕಾರ, ವಟ ಸಾವಿತ್ರಿ ಉಪವಾಸದ ಜೊತೆಗೆ ಶನಿ ಜಯಂತಿಯಂದು ಕೆಲವು ಕ್ರಮಗಳನ್ನು ತೆಗೆದುಕೊಳ್ಳುವುದು ಉತ್ತಮವೆಂದು ಪರಿಗಣಿಸಲಾಗಿದೆ. ಈ ಪರಿಹಾರಗಳು ಯಾವುವು ಎಂದು ತಿಳಿಯೋಣ.
ಸುರ್ಮಾ
ಶನಿ ಜಯಂತಿ ಅಥವಾ ವಟ ಸಾವಿತ್ರಿ ಉಪವಾಸದ ದಿನದಂದು, ಏಕಾಂತ ಸ್ಥಳದಲ್ಲಿ ಹೊಂಡವನ್ನು ಅಗೆದು ಅದರಲ್ಲಿ ಕಪ್ಪು ಪುಡಿಯನ್ನು(Surma) ಹಾಕಿ. ಈ ಪರಿಹಾರವು ನಿಮ್ಮ ಹಣಕಾಸಿನ ಸಮಸ್ಯೆಗಳನ್ನು ಪರಿಹರಿಸುತ್ತದೆ.
ಶುಕ್ರ ಗೋಚಾರ 2022: ಮೇ 23ರಿಂದ ಈ ರಾಶಿಗಳ ಅದೃಷ್ಟದ ದಿನಗಳು ಶುರು
ಅಶ್ವತ್ಥ ಮರದ ಪರಿಹಾರ
ಈ ದಿನ, ಅಶ್ವತ್ಥ ಮರಕ್ಕೆ ಸಿಹಿ ಹಾಲ(Sugared milk)ನ್ನು ಅರ್ಪಿಸಿದ ನಂತರ, ಪಶ್ಚಿಮ ದಿಕ್ಕಿನಲ್ಲಿಟ್ಟು ಎಣ್ಣೆಯ ದೀಪವನ್ನು ಬೆಳಗಿಸಿ. ಇದರ ನಂತರ, ಅಶ್ವತ್ಥ ವೃಕ್ಷದ ಒಂದು ಪ್ರದಕ್ಷಿಣೆಯನ್ನು ಮಾಡುವಾಗ, 'ಓಂ ಶನಿಶ್ಚರಾಯ ನಮಃ' ಎಂಬ ಮಂತ್ರವನ್ನು ಪಠಿಸಿ. ನಂತರ ಶನಿ ದೇವರಲ್ಲಿ ಪ್ರಾರ್ಥಿಸಿ.
ಕಪ್ಪು ಹಸುವಿನ ಪರಿಹಾರ
ವಟ ಸಾವಿತ್ರಿ ವ್ರತದ ದಿನದಂದು ಕಪ್ಪು ಹಸು(black cow)ವಿಗೆ 8 ಬೂಂದಿ ಲಡ್ಡುಗಳನ್ನು ತಿನ್ನಿಸಿ. ನಂತರ ಅದಕ್ಕೆ ಪ್ರದಕ್ಷಿಣೆ ಹಾಕಿದ ನಂತರ, ನಿಮ್ಮ ತಲೆಯನ್ನುಅದರ ಬಾಲದಿಂದ 8 ಬಾರಿ ನೇವರಿಸಿ.
ಹನುಮಾನ್ ಚಾಲೀಸಾ ಪಠ್ಯ
ಶನಿ ಜಯಂತಿಯ ದಿನದಂದು ಹನುಮಾನ್ ಚಾಲೀಸಾ(Hanuman Chalisa)ವನ್ನು ಪಠಿಸುತ್ತಾ ನವಗ್ರಹ ಪ್ರದಕ್ಷಿಣೆ ಮಾಡಿ.
ತುಪ್ಪದ ದೀಪ ಹಚ್ಚಿ
ಮನೆಯಲ್ಲಿ ಜಗಳ, ಕಲಹಗಳಿಂದ ಕಂಗೆಟ್ಟ ಜನರು ನಿತ್ಯವೂ ಆಲದ ಕೆಳಗೆ ತುಪ್ಪದ ದೀಪ(Ghee Lamp)ವನ್ನು ಹಚ್ಚಿ ವಿಷ್ಣು ದೇವರನ್ನು ಧ್ಯಾನಿಸಬೇಕು. ಇದು ವಿವಾದಿತ ವಿಷಯಗಳಿಗೆ ಅಂತ್ಯವನ್ನು ತರುತ್ತದೆ ಮತ್ತು ಅಪಶ್ರುತಿಯಿಂದ ವಿರಾಮವನ್ನು ನೀಡುತ್ತದೆ. ವಟ ಸಾವಿತ್ರಿ ಹಬ್ಬದ ದಿನ ವಿಶೇಷವಾಗಿ ಈ ಕೆಲಸ ಮಾಡಬೇಕು.
ಮೀನದಲ್ಲಿ ಗುರು; ಮೂರು ರಾಶಿಗಳಿಗೆ ರಾಜಹಂಸ ಯೋಗ!
ರೋಗಕ್ಕೆ ಚಿಕಿತ್ಸೆ
ಒಬ್ಬ ವ್ಯಕ್ತಿಯು ಮನೆಯಲ್ಲಿ ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರೆ, ವಟ ಅಮವಾಸ್ಯೆಯ ರಾತ್ರಿ, ಆಲದ ಬೇರನ್ನು ದಿಂಬಿನ ಕೆಳಗೆ ಇಟ್ಟುಕೊಳ್ಳುವುದರಿಂದ ರೋಗವು ದೂರವಾಗುತ್ತದೆ. ವ್ಯಕ್ತಿಯ ಆರೋಗ್ಯಕ್ಕೆ ಕ್ರಮೇಣ ಸುಧಾರಿಸುತ್ತಾ ಸರಿ ಹೋಗುತ್ತದೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.