Pitru Paksha Rules: ದೋಷ ಕಾಡಬಾರದು ಅಂದ್ರೆ ಪಿತೃ ಪಕ್ಷದಲ್ಲಿ ಇವನ್ನೆಲ್ಲ ಮುಟ್ಟಕ್ಕೇ ಹೋಗ್ಬೇಡಿ

Published : Sep 09, 2025, 12:56 PM IST
pitru paksha

ಸಾರಾಂಶ

Pitru paksha 2025 : ಪಿತೃಪಕ್ಷದಲ್ಲಿ ಎಷ್ಟು ಎಚ್ಚರಿಕೆ ಇದ್ರೂ ಸಾಲದು. ಪೂರ್ವಜರ ಶಾಪ ಜೀವನವನ್ನು ಸಂಕಷ್ಟಕ್ಕೆ ನೂಕುತ್ತೆ. ಅವರ ಆಶೀರ್ವಾದ ಬೇಕೆಂದ್ರೆ ಏನು ಮಾಡ್ಬೇಕು, ಏನು ತಿನ್ಬೇಕು, ಏನು ತಿನ್ಬಾರದು ಎಂಬುದನ್ನು ನೆನಪಿಡಿ. 

ಹಿಂದೂ ಧರ್ಮ (Hinduism )ದಲ್ಲಿ ಪಿತೃ ಪಕ್ಷ (pitru paksha)ವನ್ನು ಪೂರ್ವಜರಿಗೆ ಅರ್ಪಣೆ ಮಾಡಲಾಗಿದೆ. ಈ ವರ್ಷದ ಪಿತೃಪಕ್ಷ ಈಗಾಗಲೇ ಶುರುವಾಗಿದ್ದು, ಸೆಪ್ಟೆಂಬರ್ 21ರವರೆಗೆ ಪಿತೃಪಕ್ಷವಿರಲಿ. ಈ 16 ದಿನಗಳ ಕಾಲ, ಶ್ರಾದ್ಧ, ತರ್ಪಣ ಸೇರಿದಂತೆ ಪೂರ್ವಜರ ಪೂಜೆ ನಡೆಯುತ್ತದೆ. ಪೂರ್ವಜರ ಆತ್ಮಕ್ಕೆ ಶಾಂತಿ ಕೋರುವುದು ಮಾತ್ರವಲ್ಲದೆ ಅವರಿಂದ ಆಶೀರ್ವಾದ ಪಡೆಯಲು, ಪಿಂಡದಾನ, ಶ್ರಾದ್ಧಗಳನ್ನು ಮಾಡಲಾಗುತ್ತದೆ. ಪೂರ್ವಜರಿಗೆ ಇಷ್ಟವಾಗುವ ಆಹಾರವನ್ನು ತಯಾರಿಸಿ ನೀಡಲಾಗುತ್ತದೆ. ಆದ್ರೆ ಪಿತೃ ಪಕ್ಷದಲ್ಲಿ ಕೆಲವೊಂದು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡ್ಬೇಕು. ಈ 16 ದಿನಗಳ ಕಾಲ ಕೆಲ ಆಹಾರ ಸೇವನೆಯನ್ನೂ ಶಾಸ್ತ್ರದಲ್ಲಿ ನಿಷೇಧಿಸಲಾಗಿದೆ.

ಸಾತ್ವಿಕ ಆಹಾರ ಸೇವನೆ : ಪೂರ್ವಜರ ಶ್ರಾದ್ಧ ಮಾಡುವ ಜೊತೆಗೆ ನಮ್ಮ ಮನಸ್ಸು ಶುದ್ಧವಾಗಿರುವುದು ಮುಖ್ಯ. ಹಾಗಾಗಿಯೇ ಈ ದಿನಗಳಲ್ಲಿ ಸಾತ್ವಿಕ ಆಹಾರ ಸೇವನೆ ಮಾಡುವಂತೆ ಸಲಹೆ ನೀಡಲಾಗುತ್ತದೆ. ತಾಮಸಿಕ ಹಾಗೂ ರಾಜಸಿಕ ಆಹಾರ ಸೇವನೆ ಮಾಡದಂತೆ ಸೂಚಿಸಲಾಗುತ್ತದೆ. ತಾಮಸಿಕ ಹಾಗೂ ರಾಜಸಿಕ ಆಹಾರ ತಿಂದ್ರೆ ಮಾನಸಿಕ ಶಾಂತಿ ಸಿಗೋದಿಲ್ಲ. ಮನಸ್ಸು ಚಂಚಲವಾಗುತ್ತದೆ. ಮನಸ್ಸನ್ನು ಆಧ್ಯಾತ್ಮ ಹಾಗೂ ಪೂಜೆಯ ಮೇಲೆ ಕೇಂದ್ರಿಕರಿಸಲು ಸಾಧ್ಯವಾಗೋದಿಲ್ಲ. ಹಾಗಾಗಿಯೇ ಸಾತ್ವಿಕ ಆಹಾರ ಸೇವನೆ ಮಾಡ್ಬೇಕು, ಅದು ಬೇಗ ಜೀರ್ಣವಾಗುವುದಲ್ಲದೆ ಮನಸ್ಸನ್ನು ಶಾಂತಗೊಳಿಸುತ್ತದೆ.

ಈ ರಾಶಿಯವರನ್ನು ಸಂಕಷ್ಟದ ಸುಳಿಯಲ್ಲಿ ಸಿಲುಕಿಸಲಿದ್ದಾನೆ ಶುಕ್ರ, ಜಾಗ್ರತೆವಹಿಸಿ

ಪಿತೃ ಪಕ್ಷದಲ್ಲಿ ಈ ಆಹಾರ ಸೇವನೆ ಮಾಡಬೇಡಿ : ಬಿಳಿ ಬೇಳೆ, ಉದ್ದಿನ ಬೇಳೆ, ಕಪ್ಪು ಉದ್ದಿನ ಬೇಳೆ, ಕಪ್ಪು ಸಾಸಿವೆ, ಜೀರಿಗೆ, ಕಪ್ಪು ಉಪ್ಪು, ಅಕ್ಕಿ, ಗೋಧಿ ಮತ್ತು ಕಡಲೆ ಹಿಟ್ಟನ್ನು ಶ್ರಾದ್ಧ ಮಾಡುವವರು ಸೇವನೆ ಮಾಡಬಾರದು.

ಈ ತರಕಾರಿ ಸೇವನೆ ಮಾಡಬೇಡಿ : ಶ್ರಾದ್ಧ ಅಥವಾ ಪಿತೃ ಪಕ್ಷವನ್ನು ಆಚರಣೆ ಮಾಡುವ ಜನರು ಕೆಲ ತರಕಾರಿಯನ್ನು ತಿನ್ನಬಾರದು. ಬದನೆಕಾಯಿ, ಹಾಗಲಕಾಯಿ, ಸೌತೆಕಾಯಿ, ಬೆಳ್ಳುಳ್ಳಿ, ಈರುಳ್ಳಿ, ಅರ್ಬಿ, ಮೂಲಂಗಿ ಮತ್ತು ಆಲೂಗಡ್ಡೆ ತಿನ್ನಬಾರದು.

ಈ ಆಹಾರದಿಂದಲೂ ದೂರ ಇರಿ : ಪಿತೃ ಪಕ್ಷದಲ್ಲಿ ಪೂರ್ವಜರ ಆಶೀರ್ವಾದ ಬೇಕು ಎನ್ನುವವರು ತರಕಾರಿ, ಧಾನ್ಯಗಳ ಜೊತೆ ಪಾನ್ ಗೆ ಬಳಸುವ ವೀಳ್ಯದೆಲೆ ಹಾಗೂ ಹಳಸಿದ ಆಹಾರವನ್ನು ಕೂಡ ತಿನ್ನಬಾರದು.

ಪಿತೃ ಪಕ್ಷದಲ್ಲಿ ಈ ಕೆಲಸಗಳನ್ನು ಮಾಡಬೇಡಿ : ಪಿತೃ ಪಕ್ಷದಲ್ಲಿ ಪೂರ್ವಜರು ಮನೆಗೆ ಬರ್ತಾರೆ ಎನ್ನುವ ನಂಬಿಕೆ ಇದೆ. ಆದ್ರೆ ಈ 16 ದಿನಗಳ ಕಾಲ ಯಾವುದೇ ವಿಶೇಷ ಕೆಲ್ಸಗಳನ್ನು ಮಾಡಬಾರದು.

• ಯಾವುದೇ ಹೊಸ ಕೆಲಸವನ್ನು ಈ ದಿನ ಶುರು ಮಾಡಬಾರದು.

• ಹೊಸ ಬಟ್ಟೆ ಖರೀದಿ ಹಾಗೂ ಹೊಸ ಬಟ್ಟೆ ಧರಿಸುವುದನ್ನು ಕೂಡ ನಿಷೇಧಿಸಲಾಗಿದೆ.

• ಉಗುರು ಕತ್ತರಿಸೋದು, ಕೂದಲು ಕತ್ತರಿಸೋದು ಕೂಡ ಒಳ್ಳೆಯದಲ್ಲ. ನೀವು ಪಿತೃ ಪಕ್ಷದಲ್ಲಿ ನಿಷೇಧಿತ ಕೆಲ್ಸ ಮಾಡಿದ್ರೆ ಪೂರ್ವಜರು ಕೋಪಗೊಳ್ತಾರೆ.

• ಪಿತೃಪಕ್ಷದ ಸಮಯದಲ್ಲಿ ನೀವು ಕಬ್ಬಿಣ ಅಥವಾ ಕಬ್ಬಿಣದಿಂದ ಮಾಡಿದ ವಸ್ತುಗಳನ್ನು ಖರೀದಿಸಬಾರದು.

• ಈ ಅವಧಿಯಲ್ಲಿ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಖರೀದಿಸಬೇಡಿ.

• ವಾಹನ, ಭೂಮಿ ಅಥವಾ ಮನೆ ಖರೀದಿ ತಪ್ಪಿಸಿ.

• ಪಿತೃಪಕ್ಷದ ಸಮಯದಲ್ಲಿ ಶೂ ಮತ್ತು ಚಪ್ಪಲಿ ಖರೀದಿ ನಿಷಿದ್ಧ.

• ಈ ಅವಧಿಯಲ್ಲಿ ಮದುವೆ ಅಥವಾ ಯಾವುದೇ ಶುಭ ಕಾರ್ಯಕ್ಕಾಗಿ ವಸ್ತುಗಳನ್ನು ಖರೀದಿಸಬೇಡಿ.

• ಪಿತೃಪಕ್ಷದ ಸಮಯದಲ್ಲಿ ನೀವು ಪೊರಕೆಯನ್ನು ಸಹ ಖರೀದಿಸಬಾರದು.

ರಾಮಾಯಣದ ಸೀತೆ ಪಾತ್ರದಲ್ಲಿ ಮಿಂಚಲಿದ್ದಾರೆ ಮಿಸ್ ಯೂನಿವರ್ಸ್ ಇಂಡಿಯಾ Manika Vishwakarma!

ಪಿತೃಪಕ್ಷದ ಸಮಯದಲ್ಲಿ ಏನು ಖರೀದಿಸುವುದು ಶುಭ? : ಪಿತೃ ಪಕ್ಷದ ಸಮಯದಲ್ಲಿ, ನೀವು ಶ್ರಾದ್ಧಕ್ಕೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸಬಹುದು. ಬಾರ್ಲಿ, ಕಪ್ಪು ಎಳ್ಳು, ಮಲ್ಲಿಗೆ ಎಣ್ಣೆ, ಅಕ್ಕಿ ಮುಂತಾದ ವಸ್ತುಗಳನ್ನು ಖರೀದಿಸುವುದು ಶುಭ. ಈ ಅವಧಿಯಲ್ಲಿ ಧೂಪದ್ರವ್ಯ ಮತ್ತು ದೀಪಗಳನ್ನು ಖರೀದಿಸುವುದು ನಿಮ್ಮ ಪೂರ್ವಜರನ್ನು ಖುಷಿಗೊಳಿಸುತ್ತದೆ. ಧಾರ್ಮಿಕ ಪುಸ್ತಕಗಳನ್ನು ಖರೀದಿಸಬಹುದು.

 

PREV
Read more Articles on
click me!

Recommended Stories

ವೃಶ್ಚಿಕ ರಾಶಿಯಲ್ಲಿ ಲಕ್ಷ್ಮಿ ಯೋಗ ಆರಂಭ, ಅದೃಷ್ಟ ಈ 6 ರಾಶಿಗೆ
ಹೊಸ ವರ್ಷದಲ್ಲಿ ಕೇತು 3 ರಾಶಿಗೆ ದಯೆ, ಗೌರವ ಮತ್ತು ಪ್ರತಿಷ್ಠೆ 3 ಪಟ್ಟು ಜಾಸ್ತಿ