ಈ ಬಾರಿ ಮೇ 30ರಂದು ಶನಿ ಜಯಂತಿ, ಅಮಾವಾಸ್ಯೆ ಹಾಗೂ ವಟ ಸಾವಿತ್ರಿ ವ್ರತದ ದಿನ ಬರುತ್ತಿವೆ. ಈ ದಿನ ನೀವು 10 ವಿಷಯಗಳನ್ನು ಖಂಡಿತಾ ನೆನಪಿಟ್ಟುಕೊಳ್ಳಬೇಕು.
ಮೇ 30 ಸೋಮವಾರದಂದು ಬಹಳ ವಿಶೇಷ ದಿನ. ಅಂದು ಶನಿ ಜಯಂತಿ(Shani Jayanti)ಯ ಜೊತೆಗೆ ಅಮಾವಾಸ್ಯೆ ಮತ್ತು ವಟ ಸಾವಿತ್ರಿ ಉಪವಾಸ(Vat Savitri Vrat) ಕೂಡಾ ಬರುತ್ತಿವೆ. ಈ ದಿನ, ಮಹಿಳೆಯರು ತಮ್ಮ ಪತಿಯ ದೀರ್ಘಾಯುಷ್ಯಕ್ಕಾಗಿ ಉಪವಾಸ(Fast)ವನ್ನು ಆಚರಿಸುತ್ತಾರೆ, ಶನಿ ದೇವರನ್ನು ಮೆಚ್ಚಿಸಲು ಜನರು ಶನಿಗಾಗಿ ಉಪವಾಸವನ್ನು ಮಾಡುತ್ತಾರೆ ಮತ್ತು ಪೂಜೆಯೊಂದಿಗೆ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಇದರೊಂದಿಗೆ ಅಮಾವಾಸ್ಯೆಯಾದ್ದರಿಂದ ಪಿತೃಕಾರ್ಯಗಳಿಗೂ ವಿಶೇಷ ದಿನ ಇದಾಗಿದೆ.
ವಾಸ್ತವವಾಗಿ ಶನಿದೇವನು ಜ್ಯೇಷ್ಠ ಶುಕ್ಲ ಅಮಾವಾಸ್ಯೆ ತಿಥಿಯಂದು ಜನಿಸಿದನು. ಆದ್ದರಿಂದ ಈ ದಿನ ಶನಿದೇವನ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ಸೂರ್ಯದೇವ ಮತ್ತು ಛಾಯಾ ಶನಿದೇವನ ತಂದೆ ತಾಯಿಗಳು. ಶನಿಯು ನ್ಯಾಯಯುತ ಗ್ರಹವಾಗಿದೆ. ಅವರವರ ಕರ್ಮಕ್ಕೆ ತಕ್ಕಂತೆ ಫಲ ಕೊಡುತ್ತಾನೆ. ಶನಿಯನ್ನು ಕಲಿಯುಗದ ದಂಡಾಧಿಕಾರಿ ಎಂದು ಹೇಳಲಾಗುತ್ತದೆ. ಮನುಷ್ಯನ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ ಆಧಾರದ ಮೇಲೆ, ಶನಿದೇವನು ಫಲವನ್ನು ನೀಡುತ್ತಾನೆ. ಆದ್ದರಿಂದ, ನೀವು ನಿಜವಾಗಿಯೂ ಶನಿ ದೇವನನ್ನು ಮೆಚ್ಚಿಸಲು ಬಯಸಿದರೆ, 10 ವಿಷಯಗಳನ್ನು ಶಾಶ್ವತವಾಗಿ ನಿಮ್ಮ ಜೀವನಕ್ರಮದೊಂದಿಗೆ, ವ್ಯಕ್ತಿತ್ವದೊಂದಿಗೆ ಅಳವಡಿಸಿಕೊಳ್ಳಬೇಕಾಗುತ್ತದೆ.
1. ಅಗತ್ಯವಿರುವ ವ್ಯಕ್ತಿಯಿಂದ ಹಣ(money)ವನ್ನು ದೋಚಲು ಎಂದಿಗೂ ಪ್ರಯತ್ನಿಸಬೇಡಿ. ಸಾಧ್ಯವಾದರೆ ಅವನಿಗೆ ಸಹಾಯ ಮಾಡಿ. ಬಡವರಿಗೆ ಸಹಾಯ ಮಾಡುವವರಿಗೆ ಶನಿದೇವನು ಆಶೀರ್ವಾದವನ್ನು ನೀಡುತ್ತಾನೆ.
2. ನಿಮ್ಮ ಪೋಷಕರನ್ನು ಗೌರವಿಸಿ. ಅವರು ನಿಮಗಾಗಿ ಮಾಡಿದ ತ್ಯಾಗಕ್ಕೆ ಸದಾ ಋಣಿಯಾಗಿರಿ. ಇದರಿಂದ ಶನಿದೇವ(Lord Shani)ನೂ ಸಂತಸಗೊಳ್ಳುತ್ತಾನೆ.
ಪ್ರತಿದಿನ ಬೆಳಿಗ್ಗೆ ಈ ಮಂತ್ರಗಳನ್ನು ಪಠಿಸಿ ದಿನವಿಡೀ ಪಾಸಿಟಿವ್ ಆಗಿರುವಿರಿ
3. ನೀವು ಶನಿ ದೇವನನ್ನು ಸಂತೋಷವಾಗಿರಿಸಲು ಬಯಸಿದರೆ, ಬೆಳಿಗ್ಗೆ ಬೇಗನೆ ಎದ್ದು ರಾತ್ರಿ ಬೇಗನೆ ಮಲಗಿಕೊಳ್ಳಿ. ನಿಮ್ಮ ಅಧೀನದಲ್ಲಿರುವ ಜನರನ್ನು ಚೆನ್ನಾಗಿ ನೋಡಿಕೊಳ್ಳಿ. ನೀವೂ ಸಂತೋಷವಾಗಿದ್ದು, ಸುತ್ತಲಿರುವವರಿಗೆ ಸಂತೋಷ ಹರಡಿ.
4. ಶನಿ ದೇವನ ಆರಾಧನೆಯಲ್ಲಿ ವಿಶೇಷ ಕಾಳಜಿ ವಹಿಸಬೇಕು, ಎಂದಿಗೂ ಅವನ ಕಣ್ಣುಗಳನ್ನು ನೋಡಿ ಪೂಜೆ ಮಾಡಬಾರದು. ಮನದಲ್ಲಿ ಭಕ್ತಿ ಇರಬೇಕು. ಎಲ್ಲೋ ಗಮನ
5. ಅಶ್ವತ್ಥ ಮರ(Peepal Tree)ದ ಕೆಳಗೆ ನಿಂತು ಶನಿ ದೇವನನ್ನು ಪೂಜಿಸಿ. ಶನಿ ಜಯಂತಿಯ ದಿನ ಈ ಮರದ ಕೆಳಗೆ ದೀಪವನ್ನು ಎಳ್ಳೆಣ್ಣೆ ದೀಪ ಬೆಳಗಿಸಿ.
6. ಶನಿ ಜಯಂತಿಯ ದಿನ ಅನಾರೋಗ್ಯ ಪೀಡಿತರಿಗೆ ಔಷಧಿ ಮತ್ತು ಅನ್ನದಾನ ಮಾಡುವುದು ಉತ್ತಮ. ಇಂಥ ಕ್ರಮಗಳು ಕರ್ಮಕ್ಕೆ ತಕ್ಕ ಫಲ ಕೊಡುತ್ತವೆ.
7. ನಿಮ್ಮ ಪೂರ್ವಜರ ಸಲುವಾಗಿ ದೇವಸ್ಥಾನದ ಅರ್ಚಕರಿಗೆ ಹಾಲು ಮತ್ತು ಬಿಳಿ ಸಿಹಿ ತಿಂಡಿಗಳನ್ನು ನೀಡಿ. ದೇವಸ್ಥಾನದ ಹೊರಗಿರುವ ನಿರ್ಗತಿಕರಿಗೆ ಕೈಲಾದಷ್ಟು ಸಹಾಯ ಮಾಡಿ.
8, ತುಳಿತಕ್ಕೊಳಗಾದವರನ್ನು ಗೇಲಿ ಮಾಡಬೇಡಿ, ಸಾಧ್ಯವಾದರೆ ಅವರಿಗೆ ಸಹಾಯ ಮಾಡಿ. ಇಲ್ಲದಿದ್ದಲ್ಲಿ ಸಹಾನುಭೂತಿ ತೋರಿದರೂ ಆಯಿತು. ಮನಸ್ಸಿನಲ್ಲಿಯೂ ಯಾರಿಗೂ ಕೇಡು ಬಯಸಬೇಡಿ.
ಗಾಯತ್ರಿ ಮಂತ್ರ ಪಠಿಸಿ ಈ ಐದು ಪ್ರಯೋಜನ ಪಡೆಯಿರಿ
9. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಒಂದು ಜಪಮಾಲೆ ಹಿಡಿದು, 'ಓಂ ಶಂ ಶನೈಶ್ಚರಾಯ ನಮಃ' ಎಂದು ಪ್ರತಿ ದಿನ ಜಪಿಸಿ.
10. ಶನಿ ಜಯಂತಿಯ ದಿನ ಸಾಸಿವೆ ಎಣ್ಣೆ(mustard oil)ಯನ್ನು ದಾನ ಮಾಡುವುದು ಕೂಡ ಬಹಳ ಒಳ್ಳೆಯದು.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.