ಚಳಿಗಾಲದಲ್ಲಿ ಪ್ರತಿ ದಿನ ಸ್ನಾನ ಮಾಡೋದು ಸುಲಭದ ಕೆಲಸವಲ್ಲ. ಅನೇಕರು ಸ್ನಾನ ಮಾಡೋಕೆ ಹಿಂದೇಟು ಹಾಕ್ತಾರೆ. ಆದ್ರೆ ಈ ಸ್ನಾನ ನಿಮ್ಮ ದೇಹವನ್ನು ಕ್ಲೀನ್ ಮಾಡುವ ಜೊತೆಗೆ ನಿಮ್ಮ ಏಳ್ಗೆಗೆ ದಾರಿ ಎಂಬುದು ನಿಮಗೆ ಗೊತ್ತಾ?
ಪ್ರತಿ ದಿನ ಸ್ನಾನ ಮಾಡುವುದು ಬಹಳ ಮುಖ್ಯ. ಬಹುತೇಕರು ಪ್ರತಿ ದಿನ ಸ್ನಾನ ಮಾಡ್ತಾರೆ. ಎರಡು ದಿನಕ್ಕೊಮ್ಮೆ ಸ್ನಾನ ಮಾಡುವವರಿದ್ದಾರೆ. ಸ್ನಾನ ಮೈಯನ್ನು ಮಾತ್ರ ಶುದ್ಧಗೊಳಿಸೋದಿಲ್ಲ. ಅದ್ರ ಜೊತೆ ನಮ್ಮ ಮನಸ್ಸನ್ನ ಶುದ್ಧಗೊಳಿಸುತ್ತದೆ. ವಿಜ್ಞಾನ ಮಾತ್ರವಲ್ಲದೆ ಪುರಾಣಗಳಲ್ಲಿ ಕೂಡ ಸ್ನಾನದ ಮಹತ್ವದ ಬಗ್ಗೆ ಹೇಳಲಾಗಿದೆ. ಗರುಡ ಪುರಾಣದಲ್ಲಿ ಪ್ರತಿ ದಿನ ಸ್ನಾನ ಮಾಡುವುದು ಏಕೆ ಮುಖ್ಯ ಎಂಬುದನ್ನು ಹೇಳಲಾಗಿದೆ. ಗರುಡ ಪುರಾಣ (Garuda Purana ) ದಲ್ಲಿ ಮನುಷ್ಯನ ಜೀವನ (Life) ಕ್ಕೆ ಬೇಕಾದ ಪ್ರತಿಯೊಂದು ವಿಷ್ಯವನ್ನು ಹೇಳಲಾಗಿದೆ. ಪಾಪ, ಪುಣ್ಯದ ಜೊತೆ ಸತ್ತ ಮೇಲೆ ಮನುಷ್ಯ ಏನಾಗ್ತಾನೆ ಎಂಬುದನ್ನು ಕೂಡ ಹೇಳಲಾಗಿದೆ. ಗರುಡ ಪುರಾಣದಲ್ಲಿ ಹೇಳಿರುವ ನಿಯಮಗಳನ್ನು ಪಾಲನೆ ಮಾಡಿದ್ರೆ ನಾವು ಸುಖಕರ ಜೀವನ ನಡೆಸಬಹುದು. ನಾವಿಂದು ಗರುಡ ಪುರಾಣದಲ್ಲಿ ಸ್ನಾನದ ಬಗ್ಗೆ ಏನೆಲ್ಲ ಸಂಗತಿ ಹೇಳಲಾಗಿದೆ ಎಂಬುದನ್ನು ನಿಮಗೆ ಹೇಳ್ತೆವೆ.
ಗರುಡ ಪುರಾಣದಲ್ಲಿ, ಭಗವಂತ ಪಕ್ಷಿಗಳ ರಾಜನಾದ ಗರುಡನಿಗೆ ಸ್ನಾನ (Bath) ದ ಪ್ರಯೋಜನಗಳನ್ನು ವಿವರಿಸುತ್ತಾನೆ. ಜನರು ಪ್ರತಿದಿನ ಸ್ನಾನ ಮಾಡುವುದ್ರಿಂದ ದೈವಿಕ ಜ್ಞಾನ (Knowledge) ಪಡೆಯುತ್ತಾರೆ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ. ಪ್ರತಿ ದಿನ ಸ್ನಾನ ಮಾಡುವುದು ಮತ್ರ ಮುಖ್ಯವಲ್ಲ, ಯಾವ ಸಮಯದಲ್ಲಿ ಸ್ನಾನ ಮಾಡಬೇಕು ಎಂಬುದನ್ನು ಕೂಡ ಹೇಳಲಾಗಿದೆ.
ಗರುಡ ಪುರಾಣದ ಪ್ರಕಾರ, ಬ್ರಹ್ಮ (Brahma) ಮುಹೂರ್ತದಲ್ಲಿ ಸ್ನಾನ ಮಾಡಬೇಕು ಎನ್ನಲಾಗಿದೆ. ಬ್ರಹ್ಮ ಮುಹೂರ್ತದಲ್ಲಿ ಎಚ್ಚರಗೊಂಡು ಧರ್ಮ ಮತ್ತು ಅರ್ಥವನ್ನು ಚಿಂತಿಸುವವನು ಲೌಕಿಕ ಮತ್ತು ಪಾರಮಾರ್ಥಿಕ ಫಲಗಳನ್ನು ಪಡೆಯುತ್ತಾನೆ. ಇಷ್ಟೇ ಅಲ್ಲ ವ್ಯಕ್ತಿ ಕೊಳಕು ನೀರಿನಲ್ಲಿ ಸ್ನಾನ ಮಾಡಬಾರದು. ಸ್ನಾನಕ್ಕೆ ಯಾವಾಗಲೂ ಶುದ್ಧ ನೀರನ್ನು ಮಾತ್ರ ಬಳಸಬೇಕು. ಕೆಲವರು ಬೆಳಿಗ್ಗೆ ಬಿಟ್ಟು ಸಂಜೆ ಸ್ನಾನ ಮಾಡ್ತಾರೆ. ಆದ್ರೆ ಗರುಡ ಪುರಾಣದಲ್ಲಿ ಬೆಳಿಗ್ಗೆ ಮಾತ್ರ ಸ್ನಾನ ಮಾಡಬೇಕು ಎಂದು ಹೇಳಲಾಗಿದೆ. ನೀವು ಬೆಳಿಗ್ಗೆ ಎದ್ದು ಪ್ರತಿ ದಿನ ಸ್ನಾನ ಮಾಡಿದ್ರೆ ನಿಮ್ಮ ಪಾಪಗಳು ಕೊನೆಯಾಗುತ್ತವೆ.
ಮಂಗಳಮುಖಿಗಳ ವಿವಾಹ ಸಮಾರಂಭ 18 ದಿನದವರೆಗೂ ಇರುತ್ತದೆ! ಯಾರೊಂದಿಗೆ ಮದುವೆಯಾಗುತ್ತಾರೆ?
ದೇವರ ಪೂಜೆ ಮಾಡುವ ಮುನ್ನ ಸ್ನಾನ ಮಾಡಿ : ರಾತ್ರಿ ಮಲಗಿದಾಗ ವ್ಯಕ್ತಿಯ ಬಾಯಿಯಿಂದ ಲಾಲಾರಸ ಹೊರಗೆ ಬರುತ್ತದೆ. ಇದ್ರಿಂದ ಮನುಷ್ಯ ಅಶುದ್ಧನಾಗುತ್ತಾನೆ. ಹಾಗಾಗಿ ಬೆಳಿಗ್ಗೆ ಎದ್ದ ತಕ್ಷಣ ಸ್ನಾನ ಮಾಡಬೇಕು. ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ಆ ನಂತರ ಧಾರ್ಮಿಕ ಕಾರ್ಯಗಳನ್ನು ಆರಂಭಿಸಬೇಕು ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಸ್ನಾನ ಮಾಡದೆ ಯಾವಾಗ್ಲೂ ದೇವರ ಪೂಜೆ ಸೇರಿದಂತೆ ಧಾರ್ಮಿಕ ಕಾರ್ಯವನ್ನು ಮಾಡಬಾರದು. ಅಶುದ್ಧವಾಗಿ ಸ್ನಾನ ಮಾಡಿದ್ರೆ ನಿಮಗೆ ಪೂಜೆಯ ಯಾವುದೇ ಫಲ ಸಿಗುವುದಿಲ್ಲ. ಪೂಜೆ ವಿಫಲವಾಗುವ ಜೊತೆಗೆ ಪಾಪಕ್ಕೆ ತುತ್ತಾಗುತ್ತೀರಿ. ಸ್ನಾನ ಮಾಡದೆ ದೇವರ ಕಾರ್ಯ ಮಾಡುವ ವ್ಯಕ್ತಿಯನ್ನು ಗರುಡ ಪುರಾಣದ ಪ್ರಕಾರ ಪಾಪಿ ಎಂದು ಪರಿಗಣಿಸಲಾಗುತ್ತದೆ. ಈ ಜನರಿಗೆ ಜೀವನ ಪರ್ಯಂತ ತೊಂದರೆಗಳು ಎದುರಾಗುತ್ತವೆ.
ಅತ್ತೆಯನ್ನು ಬುಟ್ಟಿಗೆ ಹಾಕಿಕೊಳ್ಳುವಲ್ಲಿ ಎತ್ತಿದ ಕೈ ಈ ರಾಶಿಯವರು!
ಮುನಿಸಿಕೊಳ್ಳುವ ಲಕ್ಷಿ : ಪ್ರತಿದಿನ ಬೆಳಿಗ್ಗೆ ಸ್ನಾನ ಮಾಡದಿದ್ದರೆ ನಕಾರಾತ್ಮಕ ಶಕ್ತಿ ನಿಮ್ಮನ್ನು ಆಕರ್ಷಿಸುತ್ತದೆ. ಅಶುದ್ಧತೆ ಇರುವಲ್ಲಿ ನಕಾರಾತ್ಮಕತೆ ಇರುತ್ತದೆ. ಅಲ್ಲದೆ ಶುದ್ಧತೆ ಇರುವಲ್ಲಿ ಮಾತ್ರ ಲಕ್ಷ್ಮಿ ನೆಲೆ ನಿಲ್ಲುತ್ತಾಳೆ. ನೀವು ಸ್ನಾನ ಮಾಡದೆ ಹೋದ್ರೆ ಲಕ್ಷ್ಮಿ ನಿಮ್ಮ ಬಳಿ ಬರುವುದಿಲ್ಲ. ನಿಮ್ಮ ಮನೆಯಲ್ಲಿ ನೆಲೆಸುವುದಿಲ್ಲ. ದರಿದ್ರ ಲಕ್ಷ್ಮಿ ನಿಮ್ಮ ಮನೆಯಲ್ಲಿ ಸದಾ ನೆಲೆಸುವಂತೆ ಆಗುತ್ತದೆ. ಆರ್ಥಿಕ ಸಮಸ್ಯೆಯನ್ನು ಈ ಜನರು ಎದುರಿಸುತ್ತಾರೆ. ಸದಾ ಹಣ ಮನೆಯಲ್ಲಿರಬೇಕು, ಸಕಾರಾತ್ಮಕ ಶಕ್ತಿ ನೆಲೆಸಿರಬೇಕು ಎನ್ನುವವರು ಪ್ರತಿ ದಿನ ಬೆಳಿಗ್ಗೆ ಎದ್ದು ಸ್ನಾನ ಮಾಡಬೇಕು ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ.