ಈ ದಿನ ಎಣ್ಣೆ ಹಚ್ಕೊಂಡ್ರೆ ದರಿದ್ರ ಕಾಡಬಹುದು ಹುಷಾರು!

By Suvarna NewsFirst Published Nov 10, 2022, 3:44 PM IST
Highlights

ಚರ್ಮದ ಆರೋಗ್ಯಕ್ಕೆ ಎಣ್ಣೆ ಮಸಾಜ್ ಬೆಸ್ಟ್. ಆದ್ರೆ ಈ ಎಣ್ಣೆ ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು. ಹಾಗಾಗಿ ಮನಸ್ಸಿಗೆ ಕಂಡಾಗೆಲ್ಲ ಎಣ್ಣೆ ಹಚ್ಚುವ ಬದಲು ಶಾಸ್ತ್ರದಲ್ಲಿ ಹೇಳಿದ ದಿನ ಮಾತ್ರ ಎಣ್ಣೆ ಬಳಸಿ.
 

ಜ್ಯೋತಿಷ್ಯ (Astrology) ಶಾಸ್ತ್ರದಲ್ಲಿ ಎಣ್ಣೆ (Oil) ಹಚ್ಚುವ ಬಗ್ಗೆಯೂ ಕೆಲ ನಿಯಮಗಳನ್ನು ಹೇಳಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿನಿತ್ಯ ಎಣ್ಣೆ  ಹಚ್ಚುವುದು ಒಳ್ಳೆಯದಲ್ಲ. ಕೂದಲು (Hair) ಮತ್ತು ದೇಹ (Body) ಕ್ಕೆ ಎಣ್ಣೆ ಹಚ್ಚಲು ಒಂದಿಷ್ಟು ದಿನವಿದೆ. ಆ ದಿನ ಮೀರಿ ಬೇರೆ ದಿನ ಎಣ್ಣೆ ಹಚ್ಚಿದ್ರೆ ದೈಹಿಕ ಸಮಸ್ಯೆಗಳ ಜೊತೆಗೆ ಆರ್ಥಿಕ ಸಮಸ್ಯೆ ಎದುರಾಗುತ್ತದೆ. ನಾವಿಂದು ಯಾವ ದಿನ ಎಣ್ಣೆ ಹಚ್ಚಬಾರದು ಎನ್ನುವ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.  

ಈ ದಿನಗಳಲ್ಲಿ ಎಣ್ಣೆ ಹಚ್ಚುವುದು ಅಶುಭ : 
ಭಾನುವಾರ ಎಣ್ಣೆ ಮಸಾಜ್ ಬೇಡ :
ಭಾನುವಾರ ಕೆಲಸಕ್ಕೆ ರಜಾ. ಹಾಗಾಗಿ ಬಹುತೇಕರು ರಿಲ್ಯಾಕ್ಸ್ ಆಗಲು ಈ ದಿನ ಎಣ್ಣೆ ಮಸಾಜ್ ಇಟ್ಟುಕೊಳ್ತಾರೆ. ಶಾಸ್ತ್ರಗಳ ಪ್ರಕಾರ, ಭಾನುವಾರ ಎಣ್ಣೆ ಹಚ್ಚಬಾರದು. ಭಾನುವಾರವನ್ನು ಸೂರ್ಯನಿಗೆ ಸಮರ್ಪಿಸಲಾಗಿದೆ. ಈ ದಿನ ಎಣ್ಣೆ ಹಚ್ಚುವುದರಿಂದ ದೇಹದ ಉಷ್ಣತೆ ಹೆಚ್ಚುತ್ತದೆ. ಇದರಿಂದ ಆರೋಗ್ಯ ಮತ್ತು ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

BROOM VASTU: ಪೊರಕೆ ಕಾಲಿಗೆ ತಾಗಿಸ್ಬಾರ್ದು ಅನ್ನೋದು ಇದೇ ಕಾರಣಕ್ಕೆ!

ಮಂಗಳವಾರ ಎಣ್ಣೆ ಹಚ್ಬೇಡಿ : ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ ಮಂಗಳವಾರದಂದು ಕೂಡ ಎಣ್ಣೆ ಹಚ್ಚಬಾರದು. ಮಂಗಳವಾರವನ್ನು ಭಗವಂತ ಹನುಮಂತನಿಗೆ ಅರ್ಪಿಸಲಾಗಿದೆ. ಮಂಗಳವಾರ ಎಣ್ಣೆ ಹಚ್ಚಿದ್ರೆ ಆಯಸ್ಸು ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ. ಹಾಗಾಗಿ ಮಂಗಳವಾರ ತಲೆಗೆ ಹಾಗೂ ಮೈಗೆ ಎಣ್ಣೆ ಹಚ್ಚಬೇಡಿ. 

ರಾಯರ ವಾರ ಗುರುವಾರ ಬೇಡ್ವೇಬೇಡ : ಗುರುವಾರ ತಲೆ ಸ್ನಾನ ಮಾಡಬಾರದು ಎನ್ನಲಾಗುತ್ತದೆ. ಹಾಗೆಯೇ ಗುರುವಾರ ಬಟ್ಟೆ ತೊಳೆಯುವುದನ್ನು ಕೂಡ ಶಾಸ್ತ್ರಗಳಲ್ಲಿ ನಿಷೇಧಿಸಲಾಗಿದೆ. ಗುರುವಾರ ಎಣ್ಣೆ ಹಚ್ಚಿಕೊಳ್ಳುವುದು ಕೂಡ ಒಳ್ಳೆಯದಲ್ಲ. ಶಾಸ್ತ್ರಗಳ ಪ್ರಕಾರ, ಈ ದಿನ ಎಣ್ಣೆ ಹಚ್ಚುವುದರಿಂದ ಸಾಲದ ಹೊರೆ ಹೆಚ್ಚಾಗುತ್ತದೆ. ಇದ್ರಿಂದ ಆರ್ಥಿಕ ಬಿಕ್ಕಟ್ಟು ನಿಮ್ಮನ್ನು ಕಾಡುವ ಸಾಧ್ಯತೆಯಿರುತ್ತದೆ. ಹಣಕಾಸಿನಲ್ಲಿ ಯಾವುದೇ ತೊಂದರೆಯಾಗಬಾರದು ಎಂದಾದ್ರೆ ಯಾವುದೇ ಕಾರಣಕ್ಕೂ ಗುರುವಾರ ಎಣ್ಣೆ ಹಚ್ಚಬೇಡಿ.

ಶುಕ್ರವಾರ ಎಣ್ಣೆ ಹಚ್ಚಿದ್ರೆ ಬಡತನ : ಶಾಸ್ತ್ರಗಳ ಪ್ರಕಾರ ಶುಕ್ರವಾರವೂ ಎಣ್ಣೆ ಹಚ್ಚಬಾರದು. ಈ ದಿನ ಎಣ್ಣೆ ಹಚ್ಚುವುದರಿಂದ ದಾರಿದ್ರ್ಯ ಬರುತ್ತದೆ. ಇದರೊಂದಿಗೆ ಸಮಾಜದಲ್ಲಿ ಗೌರವ ಕಡಿಮೆಯಾಗುತ್ತದೆ. ಶುಕ್ರವಾರ ತಲೆ ಹಾಗೂ ಮೈಗೆ ಎಣ್ಣೆ ಹಚ್ಚುವುದ್ರಿಂದ ಅನೇಕ ಸಮಸ್ಯೆಗಳು ಎದುರಾಗುತ್ತವೆ. 

Vidur Niti: ಈ 4 ಭಾವಗಳಿಂದ ದೂರವಿರದಿದ್ದರೆ ಲೈಫ್ ಹಾಳಾಗೋದು ಗ್ಯಾರಂಟಿ!

ಈ ದಿನ ಎಣ್ಣೆ ಹಚ್ಚಿದ್ರೆ ಒಳ್ಳೆಯದು : ಗುರುವಾರ, ಭಾನುವಾರ, ಶುಕ್ರವಾರ ಎಣ್ಣೆ ಹಚ್ಚಬಾರದು ಅಂದ್ಮೇಲೆ ಉಳಿದಿದ್ದು ಸೋಮವಾರ, ಬುಧವಾರ ಮತ್ತು ಶನಿವಾರ. ಈ ದಿನ ನೀವು ಎಣ್ಣೆ ಹಚ್ಚಬಹುದು. ಇದ್ರಿಂದ ಮಂಗಳಕರ ಫಲಿತಾಂಶ ಸಿಗುತ್ತದೆ. ಈ ದಿನ ಎಣ್ಣೆ ಹಚ್ಚುವುದರಿಂದ ಸಂಪತ್ತು (Wealth) ಮತ್ತು ಸಮೃದ್ಧಿ (Prosperity) ಪ್ರಾಪ್ತಿಯಾಗುತ್ತದೆ. ಕೆಲಸದಲ್ಲಿ ಯಶಸ್ಸು ಸಿಗುತ್ತದೆ. 
 

click me!