ಪತಿ ಮಾತು ಕೇಳಲ್ಲ… ಇದು ಬಹುತೇಕ ಎಲ್ಲ ಪತ್ನಿಯರ ಸಮಸ್ಯೆ. ಇದ್ರಿಂದ ದಾಂಪತ್ಯ ಮುರಿದು ಬೀಳುವುದೂ ಇದೆ. ನಿಮ್ಮ ಪತಿ ಕೂಡ ನೀವು ಹೇಳಿದಂತೆ ಕೇಳ್ತಿಲ್ಲ, ನಿಮಗೆ ಆದ್ಯತೆ ನೀಡ್ತಿಲ್ಲ ಎಂದಾದ್ರೆ ದೀಪಾವಳಿಯಂದು ಈ ಟ್ರಿಕ್ಸ್ ಮಾಡಿ.
ದೀಪಾವಳಿ ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡ್ತಿದೆ. ಧನ ತ್ರಯೋದಶಿಯಿಂದ ದೀಪಾವಳಿ ಶುರುವಾಗಿದೆ. ದೀಪಾವಳಿಯ ಅಮವಾಸ್ಯೆ ದಿನ ಮಾಡುವ ಲಕ್ಷ್ಮಿ ಪೂಜೆ ವಿಶೇಷವಾಗಿದೆ. ಆದ್ರೆ ಈ ಬಾರಿ ಅಮವಾಸ್ಯೆ ದಿನ ಗ್ರಹಣ ಬಂದಿರುವ ಕಾರಣ ಅಕ್ಟೋಬರ್ 24ರಂದೇ ಲಕ್ಷ್ಮಿ ಪೂಜೆ ಮಾಡಲಾಗ್ತಿದೆ. ಪ್ರತಿಯೊಬ್ಬರೂ ದೀಪಾವಳಿ ದಿನ ಸಂತೋಷ ಜೀವನವನ್ನು ಬಯಸುತ್ತಾರೆ. ಮನೆಯಲ್ಲಿ ಸಂಪತ್ತು, ಸಮೃದ್ಧಿ ತುಂಬಲೆಂದು ಪ್ರಾರ್ಥಿಸುತ್ತಾರೆ.
ಜೀವನ (Life) ದಲ್ಲಿ ಐಶ್ವರ್ಯ ಮಾತ್ರ ಮುಖ್ಯವಲ್ಲ. ಜೀವನದಲ್ಲಿ ಮುಖ್ಯವಾಗಿ ನೆಮ್ಮದಿ ಬೇಕು. ಎಷ್ಟೇ ಸಂಪತ್ತಿದ್ರೂ ದಾಂಪತ್ಯದಲ್ಲಿ ಸುಖವಿಲ್ಲವೆಂದ್ರೆ ಜೀವನ ಸೆಪ್ಪೆ ಎನ್ನಿಸುತ್ತದೆ. ಲಕ್ಷ್ಮಿ (Lakshmi) ಪೂಜೆಯ ದಿನ ಮತ್ತು ರಾತ್ರಿ (Night) ಬಹಳ ವಿಶೇಷವಾದ ಸಮಯವಾಗಿದೆ. ಸಾಮಾನ್ಯವಾಗಿ ಪ್ರತಿಯೊಬ್ಬ ಮಹಿಳೆ ಕೂಡ ತನ್ನ ಗಂಡ ತನ್ನ ಮಾತನ್ನು ಕೇಳಬೇಕು, ಅದಕ್ಕೆ ಮಾನ್ಯತೆ ನೀಡಬೇಕೆಂದು ಬಯಸ್ತಾಳೆ. ಆದ್ರೆ ಇದು ಎಲ್ಲ ಸಂದರ್ಭದಲ್ಲೂ ಸಾಧ್ಯವಾಗುವುದಿಲ್ಲ. ಅನೇಕ ಪುರುಷರು ಪತ್ನಿಯ ಮಾತಿಗೆ ಕಿಂಚಿತ್ತೂ ಬೆಲೆ ನೀಡುವುದಿಲ್ಲ. ಇದು ದಾಂಪತ್ಯ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಮನೆಯಲ್ಲಿ ಗಲಾಟೆ ಆರಂಭವಾಗುತ್ತದೆ. ಪತಿ ಮಾತು ಕೇಳ್ತಿಲ್ಲ, ವೈವಾಹಿ ಜೀವನದಲ್ಲಿ ಸುಖ ಇಲ್ಲ ಎನ್ನುವವರು ದೀಪಾವಳಿ ಹಬ್ಬದ ದಿನದಂದು ಕೆಲ ಕೆಲಸ ಮಾಡ್ಬೇಕು. ಇದ್ರಿಂದ ಪತಿಯ ಪ್ರೀತಿ ಹೆಚ್ಚಾಗುತ್ತದೆ.
ಲಕ್ಷ್ಮಿ ಪೂಜೆ ದಿನ ಮಾಡಿ ಈ ಕೆಲಸ :
ಲಕ್ಷ್ಮಿಗೆ ಖೀರ್ ನೈವೇದ್ಯ : ದೀಪಾವಳಿ ಲಕ್ಷ್ಮಿ ಪೂಜೆ ವೇಳೆ ಪ್ರತಿಯೊಂದು ಮನೆಯಲ್ಲೂ ಸಿಹಿ ಸಿದ್ಧವಾಗುತ್ತದೆ. ನಿಮ್ಮ ದಾಂಪತ್ಯದಲ್ಲಿ ರುಚಿ ಇಲ್ಲ, ಪತಿ ಒಲಿಯುತ್ತಿಲ್ಲ ಎಂದಾದ್ರೆ ನೀವು ಲಕ್ಷ್ಮಿಗೆ ದೀಪಾವಳಿ ದಿನ ಖೀರ್ ಅರ್ಪಿಸಿ. ಲಕ್ಷ್ಮಿಗೆ ನೈವೇದ್ಯ ಮಾಡಿ ನಂತ್ರ ಪತಿ –ಪತ್ನಿ ಇಬ್ಬರೂ ಖೀರನ್ನು ಒಟ್ಟಿಗೆ ಸ್ವೀಕರಿಸಬೇಕು. ಇದ್ರಿಂದ ಜೀವನದ ಎಲ್ಲ ಸಮಸ್ಯೆ ದೂರವಾಗುತ್ತದೆ. ಹಾಗೆಯೇ ದಾಂಪತ್ಯದಲ್ಲಿ ಪ್ರೀತಿ ಹೆಚ್ಚುತ್ತದೆ. ಲಕ್ಷ್ಮಿ ಪೂಜೆ ಸಂದರ್ಭದಲ್ಲಿ ನೀವು ಅಕ್ಕಿ ಕಡುಬನ್ನು ಕೂಡ ನೈವೇದ್ಯ ಮಾಡಿದ್ರೆ ದಾಂಪತ್ಯದಲ್ಲಿ ಸುಖ ಕಾಣಬಹುದು.
ಕಮಲದ ಹೂ ಹಾರ ಅರ್ಪಿಸಿ ದಾಂಪತ್ಯ ಉಳಿಸಿಕೊಳ್ಳಿ : ಲಕ್ಷ್ಮಿ ಕಮಲದ ಮೇಲೆ ಕುಳಿತಿರುತ್ತಾಳೆ. ಹಾಗಾಗಿಯೇ ಲಕ್ಷ್ಮಿ ಪೂಜೆ ದಿನ ಕಮಲದ ಹೂವನ್ನು ಲಕ್ಷ್ಮಿಗೆ ಅರ್ಪಿಸಬೇಕು ಎನ್ನಲಾಗುತ್ತದೆ. ಹಾಗೆಯೇ ಲಕ್ಷ್ಮಿ ಪೂಜೆ ಸಂದರ್ಭದಲ್ಲಿ ನೀವು ಕಮಲದ ಹೂವಿನ ಹಾರವನ್ನು ಅರ್ಪಿಸಬೇಕು. ನಂತ್ರ ವೈವಾಹಿಕ ಜೀವನ ಸುಖಮಯವಾಗಿರಲಿ ಎಂದು ತಾಯಿ ಲಕ್ಷ್ಮಿಯನ್ನು ಪ್ರಾರ್ಥಿಸಿ. ಹೀಗೆ ಮಾಡಿದ್ರೆ ಎಲ್ಲಾ ತೊಂದರೆಗಳಿಂದ ಮುಕ್ತಿ ಸಿಗುತ್ತದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಪತಿ ನಿಮ್ಮ ಮಾತುಗಳನ್ನು ಕೇಳುವಂತಾಗುತ್ತದೆ.
ಗಣಪತಿಗೆ ಪ್ರಿಯವಾದ ವಸ್ತು ಅರ್ಪಿಸಿದ್ರೆ ಶುಭ : ದೀಪಾವಳಿಯ ದಿನ ಗಣಪತಿಗೆ ದೂರ್ವೆಯನ್ನು ಅರ್ಪಿಸಬೇಕು. ಇದ್ರಿಂದ ಪತಿ – ಪತ್ನಿ ಸಂಬಂಧ ಬಲಗೊಳ್ಳುತ್ತದೆ. ಗಣಪತಿಗೆ ದೂರ್ವೆ ಪ್ರಿಯ. ದೀಪಾವಳಿಯಲ್ಲಿ ಆತನಿಗೆ ದೂರ್ವೆ ಅರ್ಪಿಸಿದ್ರೆ ಆತ ಪ್ರೀತಿ ನೀಡ್ತಾನೆ ಎನ್ನಲಾಗುತ್ತದೆ.
ಸಂಗಾತಿ ಜೊತೆ ಮಾಡಿ ಪೂಜೆ : ಸಂಗಾತಿಯೊಂದಿಗೆ ಸದಾ ನಗ್ತಾ, ಸಂತೋಷವಾಗಿರಬೇಕೆಂದ್ರೆ ಲಕ್ಷ್ಮಿ ಪೂಜೆಯನ್ನು ಒಟ್ಟಿಗೆ ಮಾಡಿ. ಇದ್ರಿಂದ ಪರಸ್ಪರ ಪ್ರೀತಿ ಹೆಚ್ಚಾಗುತ್ತದೆ. ಅನಗತ್ಯ ಜಗಳ ಆಗುವುದಿಲ್ಲ.
ಸೂರ್ಯಗ್ರಹಣ 2022: ಯಾವ ರಾಶಿಗೆ ಲಾಭ, ಯಾವ ರಾಶಿಗೆ ಸಂಕಷ್ಟ?
ಲಕ್ಷ್ಮಿಗೆ ಅರಿಶಿನ- ಕುಂಕುಮ ಅರ್ಪಿಸಿ : ಸಂತೋಷದ ದಾಂಪತ್ಯ ಜೀವನ ಬಯಸುವವರು ನೀವಾಗಿದ್ದರೆ ದೀಪಾವಳಿಯಂದು ಲಕ್ಷ್ಮಿಗೆ ಕುಂಕುಮವನ್ನು ಅರ್ಪಿಸಿ. ಹಾಗೇ ಅರಿಶಿನದ ತಿಲಕವನ್ನು ಇಡಬೇಕು. ಇದು ಜೀವನದಲ್ಲಿ ಅದೃಷ್ಟ ಹೆಚ್ಚಿಸುತ್ತದೆ. ದಂಪತಿ ಸಂಬಂಧ ಬಲಗೊಳ್ಳುತ್ತದೆ. ವೈವಾಹಿಕ ಸಮಸ್ಯೆ ದೂರವಾಗುತ್ತದೆ.
SURYA GRAHAN: ಗ್ರಹಣದ ಸಂದರ್ಭದಲ್ಲಿ ತುಳಸಿ ಆರೈಕೆ ಹೀಗಿರಲಿ
ಈ ವಸ್ತು ದಾನ ಮಾಡಲು ಮರೆಯಬೇಡಿ : ಪತಿ ಮಾತು ಕೇಳ್ಬೇಕು, ಸಂಸಾರದಲ್ಲಿ ಗಲಾಟೆಯಾಗ್ಬಾರದು ಎನ್ನುವವರು ಲಕ್ಷ್ಮಿ ಪೂಜೆಯ ದಿನ ಮಂಗಳಮುಖಿಯರಿಗೆ ಮೆಹಂದಿಯನ್ನು ದಾನ ಮಾಡಿ. ವಿವಾಹಿತೆಗೆ ಜೇನುತುಪ್ಪವನ್ನು ಕೂಡ ನೀವು ಉಡುಗೊರೆಯಾಗಿ ನೀಡಬಹುದು.