Astrology Tips : ಸದ್ಯವೇ ಕೆಡಲಿದೆ ಈ ರಾಶಿಯವರ ಗ್ರಹಚಾರ

By Suvarna NewsFirst Published Oct 23, 2022, 11:17 AM IST
Highlights

ಜನರು ದೀಪಾವಳಿ ಸಂಭ್ರಮದಲ್ಲಿದ್ದಾರೆ. ಆದ್ರೆ ದೀಪಾವಳಿ ಮುಗಿತಿದ್ದಂತೆ ಕೆಲ ರಾಶಿಯವರ ಅದೃಷ್ಟ ಕೈಕೊಡಲಿದೆ. ಆರ್ಥಿಕ ನಷ್ಟ, ಅನಾರೋಗ್ಯ ಕಾಡಲಿದೆ. ಇದಕ್ಕೆ ಬುಧ ರಾಶಿ ಬದಲಾವಣೆ ಮಾಡ್ತಿರುವುದೇ ಕಾರಣ.
 

ಗ್ರಹಗಳಲ್ಲಾಗುವ ಬದಲಾವಣೆ ರಾಶಿ ಮೇಲೆ ಪರಿಣಾಮ ಬೀರುತ್ತದೆ. ಗ್ರಹಗಳಲ್ಲಿ ಸಣ್ಣ ಬದಲಾವಣೆಯಾದ್ರೂ, ಗ್ರಹಗಳು ರಾಶಿ ಬದಲಾವಣೆ ಮಾಡಿದ್ರೂ ಅದು ರಾಶಿಗಳ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತದೆ. ಇದ್ರಿಂದಾಗಿ ನಮ್ಮ ಜೀವನದಲ್ಲಿ ಅದೃಷ್ಟ, ದುರಾದೃಷ್ಟಗಳನ್ನು ನಾವು ಕಾಣಬಹುದು. ನಮ್ಮ ಆರೋಗ್ಯ, ಆರ್ಥಿಕ ಸ್ಥಿತಿ, ಉದ್ಯೋಗ, ಲಾಭ ಎಲ್ಲವೂ ಗ್ರಹಗಳನ್ನು ಅವಲಂಭಿಸಿದೆ. ಈ ಬಾರಿ ಬುಧ ರಾಶಿ ಬದಲಾವಣೆ ಮಾಡಲಿದ್ದಾನೆ. ಬುಧನು ತುಲಾ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಈ ಸಂದರ್ಭದಲ್ಲಿ ಬುಧನು ಸೂರ್ಯ, ಶುಕ್ರ ಮತ್ತು ಕೇತುಗಳ ಸಂಯೋಗ ಹೊಂದಿರುತ್ತಾನೆ. ಈ ನಾಲ್ಕು ಗ್ರಹಗಳ ಸಂಯೋಗ ಎಲ್ಲ ರಾಶಿಗಳ ಮೇಲೆ ಪ್ರಭಾವ ಬೀರಲಿದೆ.

ಬುಧ (Mercury) ನ ರಾಶಿ ಬದಲಾವಣೆ ನಂತ್ರ ಅಕ್ಟೋಬರ್ 26 ರಿಂದ ನವೆಂಬರ್ 19 ರವರೆಗೆ 4 ರಾಶಿಗಳ ಮೇಲೆ ಬುಧನ ಪ್ರಭಾವ ಇರಲಿದೆ. ನಾಲ್ಕು ರಾಶಿಯವರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇಂದು ನಾವು ಬುಧನ ರಾಶಿ ಬದಲಾವಣೆಯಿಂದ ಯಾವೆಲ್ಲ ರಾಶಿಗೆ ನಷ್ಟವಾಗಲಿದೆ ಎಂಬುದನ್ನು ನಿಮಗೆ ಹೇಳ್ತೇವೆ.

ತುಲಾ (Libra) ರಾಶಿಗೆ ಬುಧನ ಪ್ರವೇಶದಿಂದ ಯಾರಿಗೆ ನಷ್ಟ ? : 

ವೃಷಭ (Taurus) ರಾಶಿ : ತುಲಾ ರಾಶಿಗೆ ಬುಧನ ಪ್ರವೇಶದಿಂದ ವೃಷಭ ರಾಶಿಗೆ ಅಶುಭ ಫಲ ಪ್ರಾಪ್ತಿಯಾಗಲಿದೆ. ಆರ್ಥಿಕ (Finance) ಸ್ಥಿತಿಯಲ್ಲಿ ಬದಲಾವಣೆ ಕಾಣಬಹುದು. ಅಕ್ಟೋಬರ್ 26ರಿಂದ ನವೆಂಬರ್ 19ರವರೆಗೆ ಈ ರಾಶಿಯವರ ಖರ್ಚುಗಳು ಅಧಿಕವಾಗಲಿವೆ. ಈ ಸಂದರ್ಭದಲ್ಲಿ ಆರ್ಥಿಕ ನಷ್ಟ ಎದುರಿಸಬೇಕಾಗುತ್ತದೆ. ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಕೂಡ ವೃಷಭ ರಾಶಿಯವರು ಎದುರಿಸಲಿದ್ದಾರೆ. ಈ ಸಂದರ್ಭದಲ್ಲಿ ವೃಷಭ ರಾಶಿಯವರಿಗೆ ಗಂಟಲಿ (Throat) ನ ನೋವು ಸೇರಿದಂತೆ ಗಂಟಲಿಗೆ ಸಂಬಂಧಿಸಿದ ಕೆಲ ಸಮಸ್ಯೆ ಕಾಡುವ ಸಂಭವವಿದೆ. ದೇಹ (Body) ಕ್ಕೆ ಗಾಯವಾಗುವ ಸಾಧ್ಯತೆಯಿರುವ ಕಾರಣ ನೀವು ಮೈಯೆಲ್ಲ ಕಣ್ಣಾಗಿರಬೇಕು. ಒಟ್ಟಿನಲ್ಲಿ ವೃಷಭ ರಾಶಿಗೆ ಇದು ಒಳ್ಳೆಯ ಸಮಯವಲ್ಲ. ಈ ಅವಧಿಯಲ್ಲಿ ವೃಷಭ ರಾಶಿಯವರು ಎಚ್ಚರಿಕೆಯಿಂದ ಇರುವುದು ಮುಖ್ಯ.

ವೃಶ್ಚಿಕ ರಾಶಿ : ಅಕ್ಟೋಬರ್ 26ರಿಂದ ನವೆಂಬರ್ 19ರವರೆಗೆ ವೃಶ್ಚಿಕ ರಾಶಿಯವರು ಖರ್ಚುಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಮುಖ್ಯ. ಯಾಕೆಂದ್ರೆ ಹಣ ಈ ಸಮಯದಲ್ಲಿ ನೀರಿನಂತೆ ಹರಿದು ಹೋಗುವ ಸಾಧ್ಯತೆಗಳಿರುತ್ತವೆ. ಆರ್ಥಿಕ ಸ್ಥಿತಿ ಸ್ಥಿರವಾಗಿರಬೇಕೆಂದ್ರೆ ನೀವು ಸಾಕಷ್ಟು ಪರಿಶ್ರಮಪಡಬೇಕು. ಯಾವುದೇ ವಹಿವಾಟನ್ನು ಈ ಸಂದರ್ಭದಲ್ಲಿ ಮಾಡಬೇಡಿ. ಯಾರಿಗೂ ಸಾಲ ನೀಡಲು ಹೋಗಬೇಡಿ. ವಿರೋಧಿಗಳು ಈ ಸಂದರ್ಭದಲ್ಲಿ ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಹಾಗಾಗಿ ವಿರೋಧಿಗಳಿಂದ ದೂರವಿರಿ. ಕಚೇರಿಯಲ್ಲಿ ಅನವಶ್ಯಕ ಗಲಾಟೆ ಮಾಡಲು ಹೋಗ್ಬೇಡಿ. ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಮುಖ್ಯ.

ಈ ದಿನದಂದು ಕೆಲಸಕ್ಕೆ ಜಾಯಿನ್ ಆದ್ರೆ ಎಲ್ಲವೂ ಶುಭವಾಗುತ್ತೆ!

ಕುಂಭ ರಾಶಿ : ಈ ಸಮಯದಲ್ಲಿ ಕುಂಭ ರಾಶಿಯವರು ವಾದ ಮಾಡದೆ, ಶಾಂತತೆ ಕಾಯ್ದುಕೊಳ್ಳಬೇಕು. ಹೆಚ್ಚು ಲಾಭಬೇಕೆಂದ್ರೆ ಹೆಚ್ಚು ಶ್ರಮವಹಿಸಬೇಕಾಗುತ್ತದೆ. ಯಾವುದೇ ಕೆಲಸದಿಂದ ತೃಪ್ತಿ ನಿಮಗೆ ಸಿಗುವುದಿಲ್ಲ. ಕುಂಭ ರಾಶಿಯವರ ವೆಚ್ಚ ಹೆಚ್ಚಾಗುವ ಜೊತೆಗೆ ಒತ್ತಡ ಜಾಸ್ತಿಯಾಗುತ್ತದೆ. ಒಡಹುಟ್ಟಿದವರ ಮಧ್ಯೆ ಗಲಾಟೆಯಾಗುವ ಸಾಧ್ಯತೆಯಿದೆ. ಕಠಿಣ ಪರಿಶ್ರಮದಿಂದ ಮಾತ್ರ ಫಲ ಸಾಧ್ಯ ಎಂಬುದನ್ನು ಮರೆಯಬೇಡಿ.

Diwali 2022 : ಈ ದಿನ ರಾತ್ರಿ ಗೂಬೆ ಕಂಡ್ರೆ ನಿಮ್ಮ ಲಕ್ ಬದಲಾಗುತ್ತೆ!

ಮೀನ ರಾಶಿ : ಮೀನ ರಾಶಿಯವರ ಆರೋಗ್ಯದಲ್ಲಿ ಏರುಪೇರಾಗುವ ಸಂಭವವಿದೆ. ಹಾಗಾಗಿ ಈ ಸಮಯದಲ್ಲಿ ಮೀನ ರಾಶಿಯವರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಕಣ್ಣಿಗೆ ಸಂಬಂಧಿಸಿದ ಸಮಸ್ಯೆ ಕಾಡುವ ಸಂಭವವಿದೆ. ಹಾಗಾಗಿ ಧೂಳು ಹೆಚ್ಚಿರುವ ಪ್ರದೇಶಕ್ಕೆ ಹೋಗದೆ ಇರೋದು ಒಳ್ಳೆಯದು. ತಾಯಿ ಆರೋಗ್ಯದಲ್ಲೂ ಏರುಪೇರಾಗುವ ಸಂಭವವಿದೆ. ಹಾಗಾಗಿ ತಾಯಿ ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದಿರಿ.
 

click me!