Diwali 2022 : ಈ ದಿನ ರಾತ್ರಿ ಗೂಬೆ ಕಂಡ್ರೆ ನಿಮ್ಮ ಲಕ್ ಬದಲಾಗುತ್ತೆ!

By Suvarna NewsFirst Published Oct 22, 2022, 11:33 AM IST
Highlights

ಲಕ್ಷ್ಮಿ ಮನೆಯಲ್ಲಿರಬೇಕು, ಮನೆಯಲ್ಲಿರುವ ತಿಜೋರಿ ಹಣ, ಆಭರಣದಿಂದ ತುಂಬಿರಬೇಕೆಂದು ಎಲ್ಲರೂ ಬಯಸ್ತಾರೆ. ಆದ್ರೆ ಲಕ್ಷ್ಮಿ ಒಲಿಯೋದು ಸುಲಭವಲ್ಲ. ಹಾಗೆ ಲಕ್ಷ್ಮಿ ನಿಮ್ಮ ಮನೆಗೆ ಬರುವ ಮೊದಲು ಸಂಕೇತ ನೀಡ್ತಾಳೆ. ಗೂಬೆ ನಿಮ್ಮ ಕಣ್ಣಿಗೆ ಬಿದ್ರೆ ಏನೆಲ್ಲ ಲಾಭವಿದೆ ಎನ್ನುವುದನ್ನು ನಾವಿಂದು ಹೇಳ್ತೇವೆ. 
 

ಪ್ರತಿ ವರ್ಷ ಕಾರ್ತಿಕ ಅಮವಾಸ್ಯೆಯಂದು ದೀಪವಾಳಿಯ ಲಕ್ಷ್ಮಿ ಪೂಜೆಯನ್ನು ಆಚರಿಸಲಾಗುತ್ತದೆ. ದೀಪಾವಳಿಯನ್ನು ದೀಪಗಳ ಉತ್ವವವೆಂದು ಕರೆದ್ರೆ ತಪ್ಪಾಗಲಾರದು. ಲಕ್ಷ್ಮಿ ಪೂಜೆ ಮಾಡಿ ಭಕ್ತರು ದೀಪ ಬೆಳಗಿ, ಪಟಾಕಿ ಸಿಡಿಸಿ ಸಂಭ್ರಮಿಸ್ತಾರೆ. ಈ ಸಂಭ್ರಮ ಸದಾ ಮನೆಯಲ್ಲಿರಲೆಂದು ತಾಯಿಯನ್ನು ಪ್ರಾರ್ಥನೆ ಮಾಡ್ತಾರೆ. ಈ ಬಾರಿ ಅಕ್ಟೋಬರ್ 24ರಂದು ದೀಪಾವಳಿ ಆಚರಣೆ ಮಾಡಲಾಗ್ತಿದೆ. ದೀಪಾವಳಿ ಸಂದರ್ಭದಲ್ಲಿ ಲಕ್ಷ್ಮಿ ದೇವಿಯ ವಾಹನ ಗೂಬೆ ಕಂಡ್ರೆ ಶುಭವೆಂದು ಹೇಳಲಾಗುತ್ತದೆ. ಕೆಲವರು ಗೂಬೆ ಬಲಿಕೊಡುವವರಿದ್ದಾರೆ. ನಾವಿಂದು ಲಕ್ಷ್ಮಿ ವಾಹನ ಗೂಬೆ ಹೇಗಾಯ್ತು ಹಾಗೂ ಅದು ಕಂಡ್ರೆ ಏನೆಲ್ಲ ಲಾಭವಿದೆ ಎಂಬುದನ್ನು ಹೇಳ್ತೇವೆ.

ಮೊದಲನೇಯದಾಗಿ ಗೂಬೆ (Owl), ಲಕ್ಷ್ಮಿ (Lakshmi) ವಾಹನ ಹೇಗಾಯ್ತು ಎಂಬುದನ್ನು ನೋಡೋದಾದ್ರೆ, ಒಂದು ಬಾರಿ ಎಲ್ಲ ದೇವಾನುದೇವತೆಗಳು ಭೂಮಿಗೆ ಬಂದಿದ್ದರಂತೆ. ಈ ವೇಳೆ ಪ್ರಾಣಿ, ಪಕ್ಷಿಗಳು ನಮ್ಮನ್ನು ವಾಹನ ಮಾಡಿಕೊಳ್ಳುವಂತೆ ದೇವಾನುದೇವತೆಗಳಲ್ಲಿ ಮನವಿ ಮಾಡಿದ್ರಂತೆ. ಈ ಸಂದರ್ಭದಲ್ಲಿ ಎಲ್ಲ ದೇವರು (God) ಹಾಗೂ ದೇವತೆಗಳು ತಮ್ಮ ವಾಹನವನ್ನು ಆಯ್ಕೆ ಮಾಡಿಕೊಂಡವಂತೆ. ಆದ್ರೆ ಲಕ್ಷ್ಮಿ ತುಂಬಾ ವಿಚಾರ ಮಾಡ್ತಿದ್ದಳಂತೆ. ಆಗ ಎಲ್ಲರ ಮಧ್ಯೆ ಗಲಾಟೆಯಾಯ್ತಂತೆ. ಈ ಸಂದರ್ಭದಲ್ಲಿ ಎಲ್ಲರನ್ನು ಶಾಂತಗೊಳಿಸಿದ ಲಕ್ಷ್ಮಿ, ಕಾರ್ತಿಕ ಮಾಸದ ಅಮವಾಸ್ಯೆ ರಾತ್ರಿ ನಾನು ಭೂಮಿಗೆ ಬರ್ತೇನೆ. ಆಗ ನನ್ನ ವಾಹನವನ್ನು ಆಯ್ಕೆ ಮಾಡಿಕೊಳ್ಳುತ್ತೇನೆ ಎಂದಳಂತೆ. 

ಈ ದಿನದಂದು ಕೆಲಸಕ್ಕೆ ಜಾಯಿನ್ ಆದ್ರೆ ಎಲ್ಲವೂ ಶುಭವಾಗುತ್ತೆ!

ಹಾಗೆಯೇ ಕಾರ್ತಿಕ (Karthika) ಮಾಸದ ಅಮವಾಸ್ಯೆಯಂದು ಆಕೆಯನ್ನು ಎಲ್ಲ ಪ್ರಾಣಿಗಳು ಕಾಯ್ತಾ ಕುಳಿತಿದ್ದವಂತೆ. ಆದರೆ ರಾತ್ರಿಯಾದ್ರೂ ಲಕ್ಷ್ಮಿ ಬರಲಿಲ್ಲವಂತೆ. ರಾತ್ರಿ ಲಕ್ಷ್ಮಿ ಬಂದಿದ್ದನ್ನು ಯಾವ ಪ್ರಾಣಿಗಳೂ ನೋಡಿಲ್ಲವಂತೆ. ಗೂಬೆಗೆ ಮಾತ್ರ ತನ್ನ ತೀಕ್ಷ್ಣವಾದ ಕಣ್ಣುಗಳ ಕಾರಣ ಲಕ್ಷ್ಮಿ ಬಂದಿದ್ದು ತಿಳಿಯಿತಂತೆ. ಅದು ಲಕ್ಷ್ಮಿ ಹತ್ತಿರ ಬಂದು ತನ್ನನ್ನು ವಾಹನ ಮಾಡಿಕೊಳ್ಳುವಂತೆ ಮನವಿ ಮಾಡಿತಂತೆ. ತುಂಬಾ ಕತ್ತಲೆ ಮಧ್ಯೆಯೂ ವಿಷಯಗಳನ್ನು ನೋಡುವ ಮತ್ತು ಅರ್ಥಮಾಡಿಕೊಳ್ಳುವ ಅಸಾಧಾರಣ ಸಾಮರ್ಥ್ಯ ಅಗತ್ಯ ಎಂಬ ಕಾರಣಕ್ಕೆ ಲಕ್ಷ್ಮಿ ಗೂಬೆಯನ್ನು ವಾಹನ ಮಾಡಿಕೊಂಡಳಂತೆ. ಅಂದಿನಿಂದ ಗೂಬೆಯನ್ನು ಲಕ್ಷ್ಮಿ ವಾಹನವೆಂದು ನಂಬಲಾಗಿದೆ. ದೀಪಾವಳಿಯ ರಾತ್ರಿ ಗೂಬೆ ಕಂಡ್ರೆ ಮಂಗಳಕರವೆನ್ನಲಾಗುತ್ತದೆ.

ಕಾರ್ತಿಕ ಮಾಸದ ಅಮವಾಸ್ಯೆ ಸಮಯದಲ್ಲಿ ಕನಸಿನಲ್ಲಿ ಗೂಬೆ ಕಾಣಿಸಿಕೊಂಡರೆ  ಜೀವನದಲ್ಲಿ ಆರ್ಥಿಕ ವೃದ್ಧಿಯಾಗುತ್ತದೆ ಎಂಬ ಸೂಚನೆಯಾಗಿದೆ. ಕನಸಿನಲ್ಲಿ ಗೂಬೆ ನಿಮ್ಮಿಂದ ದೂರ ಹೋದಂತೆ ಕಂಡ್ರೆ ಇದ್ರಿಂದ ಆರ್ಥಿಕ ನಷ್ಟವಾಗುತ್ತದೆ ಎಂದು ಜನರು ನಂಬುತ್ತಾರೆ. ಲಕ್ಷ್ಮಿ ಪೂಜೆ ದಿನ ರಾತ್ರಿ ನಿಮ್ಮ ಕಣ್ಣಿಗೆ ನಿಜವಾದ ಗೂಬೆ ಕಂಡ್ರೆ ಅದೃಷ್ಟದ ಮಳೆಯಾಗುತ್ತದೆ ಎಂದೇ ಹೇಳಬಹುದು. ದೀಪಾವಳಿಯ ರಾತ್ರಿ ಗೂಬೆ ಕಾಣಿಸಿಕೊಂಡರೆ ನಿಮ್ಮ ಮನೆಗೆ ಲಕ್ಷ್ಮಿ ಪ್ರವೇಶವಾಗುವುದು ನಿಶ್ಚಿತ. ಗೂಬೆಯನ್ನು ಕಂಡ ಮನೆಯ ಮೇಲೆ ಲಕ್ಷ್ಮಿ ಆಶೀರ್ವಾದ ಸದಾ ಇರುತ್ತದೆ. ಆಕೆ ಹಣದ ಹೊಳೆಯನ್ನು ಆ ಮನೆಯಲ್ಲಿ ಹರಿಸ್ತಾಳೆಂದು ಜನರು ನಂಬಿದ್ದಾರೆ. 

ದೀಪಾವಳಿಯಂದು ಇವುಗಳನ್ನು ಉಡುಗೊರೆಯಾಗಿ ನೀಡೋದು ದುರಾದೃಷ್ಟ

ಗೂಬೆಯನ್ನು ಸ್ಪರ್ಶಿಸುವುದು ಕೂಡ ಒಳ್ಳೆಯ ಫಲ ನೀಡುತ್ತದೆ ಎಂದು ನಂಬಲಾಗಿದೆ. ಅನಾರೋಗ್ಯ ವ್ಯಕ್ತಿ ಗೂಬೆಯನ್ನು ಸ್ಪರ್ಶಿಸಿದ್ರೆ ಆತನ ರೋಗ ಗುಣವಾಗುತ್ತದೆ.  ಕಾರ್ತಿಕ ಮಾಸದ ಅಮವಾಸ್ಯೆ ದಿನ ನಿಮಗೆ ಗೂಬೆ ಧ್ವನಿ ಕೇಳಿಸಿದ್ರೆ ಮಂಗಳಕರ. ನಿಮ್ಮ ಮನೆಗೆ ತಾಯಿ ಲಕ್ಷ್ಮಿ ಬರ್ತಿದ್ದಾಳೆ ಎಂಬುದನ್ನು ಇದು ಸೂಚಿಸುತ್ತದೆ. ಗೂಬೆ ಧ್ವನಿ ಯಾವ ದಿಕ್ಕಿನಿಂದ ಕೇಳಿ ಬಂದಿದೆ ಎಂಬುದು ಕೂಡ ಮುಖ್ಯವಾಗುತ್ತದೆ. ಒಂದ್ವೇಳೆ ಗೂಬೆ ಧ್ವನಿ ಪೂರ್ವದಿಂದ ಬಂದರೆ  ನೀವು ಶೀಘ್ರದಲ್ಲೇ ಆರ್ಥಿಕ ಲಾಭವನ್ನು ಪಡೆಯಲಿದ್ದೀರಿ ಎಂದರ್ಥ.  ದಕ್ಷಿಣದಿಂದ ಗೂಬೆ ಧ್ವನಿ ಕೇಳಿ ಬಂದ್ರೆ ಶತ್ರುಗಳ ಮೇಲೆ ನೀವು ವಿಜಯ ಸಾಧಿಸಲಿದ್ದೀರಿ ಎಂಬ ಸೂಚನೆ. 

click me!