ನಿಮ್ಮ ಸಂಗಾತಿ ಏನು ಅಂತ ಅರ್ಥವೇ ಆಗ್ತಿಲ್ವಾ? ಹಾಗಾದ್ರೆ ಅವರು ಈ ರಾಶಿಯವರೇ ಇರ್ಬೇಕು?

By Suvarna NewsFirst Published Nov 10, 2023, 5:17 PM IST
Highlights

ಕೆಲವು ಜನರ ವರ್ತನೆ ಹೇಗಿರುತ್ತದೆ ಎಂದರೆ, ತಮ್ಮ ಪ್ರೀತಿ ಪಾತ್ರರ ಪ್ರೀತಿಯಿಂದಲೂ ಅವರು ದೂರ ಉಳಿಯುವಂತಾಗಿಬಿಡುತ್ತದೆ. ಅವರ ದುಡುಕು ಪ್ರವೃತ್ತಿ, ಗೊಂದಲದ ನಡವಳಿಕೆ, ಹಠಮಾರಿ ಧೋರಣೆ, ಡಾಮಿನೇಟ್‌ ಮಾಡುವ ಪ್ರವೃತ್ತಿ ಅವರ ಸಂಗಾತಿಯನ್ನು ಅವರಿಂದ ದೂರವೇ ಇರಿಸುತ್ತವೆ.  

ಪ್ರೀತಿ ಜೀವನದ ಸುಂದರ ಪಯಣ. ಪ್ರೀತಿಯ ಅನುಭೂತಿ ಜೀವನ, ಜೀವವನ್ನು ಕಾಯುವ ಅದ್ಭುತ ಶಕ್ತಿ. ಎಂದಿನಿಂದಲೂ, ಹಿಂದಿನಿಂದಲೂ, ಇಂದೂ, ಮುಂದೂ ಪ್ರೀತಿಯ ಮೌಲ್ಯ ಕಳೆದುಹೋಗುವುದಿಲ್ಲ. ಏಕೆಂದರೆ, ಮನುಷ್ಯನಿಗೆ ಪ್ರೀತಿಪಾತ್ರರಿಲ್ಲದೆ ಬಾಳಲು ಸಾಧ್ಯವಿಲ್ಲ. ಆದರೆ, ಈ ಪ್ರೀತಿ ಎನ್ನುವುದು ಅಷ್ಟೇ ಗೊಂದಲಕಾರಿಯೂ ಹೌದು. ಈ ಮಾತು ಏಕೆಂದರೆ, ಕೆಲವರನ್ನು ನೋಡಿ. ತಮ್ಮವರನ್ನು ಅತಿಯಾಗಿ ಪ್ರೀತಿಸುತ್ತಾರೆ, ಹಾಗೆಯೇ ಅಷ್ಟೇ ಗೋಳು ಹೊಯ್ದುಕೊಳ್ಳುತ್ತಾರೆ. ಬೇರೆ ಬೇರೆ ಮಾನಸಿಕ ಸಮಸ್ಯೆಗಳ ಬಗ್ಗೆ ಇಲ್ಲಿ ಮಾತನಾಡುತ್ತಿಲ್ಲ. ಯಾವ ಸಮಸ್ಯೆಯೂ ಇಲ್ಲದೇ ತಮ್ಮ ಸಂಗಾತಿಯನ್ನು ಕಾಡಿಸುವ ಜನ ಸಾಕಷ್ಟಿರುತ್ತಾರೆ. ಇದಕ್ಕೇನು ಕಾರಣ ಎಂದು ಯೋಚಿಸಿದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಉತ್ತರ ದೊರೆಯುತ್ತದೆ. ನಿಮ್ಮ ರಾಶಿಚಕ್ರಗಳು ಇದಕ್ಕೆ ಕಾರಣ. ಪ್ರೀತಿ, ಸಂಬಂಧಗಳ ವಿಚಾರದಲ್ಲಿ ರಾಶಿಚಕ್ರಗಳ ಪ್ರಭಾವ ಅಧಿಕ. ಇದೇ ಕಾರಣದಿಂದ ಕೆಲವರನ್ನು ನಿರಂತರವಾಗಿ ಪ್ರೀತಿಸಲು ಕಷ್ಟವಾಗುತ್ತದೆ. ಅವರ ಮೇಲೆ ಪ್ರೀತಿಯಿದ್ದರೂ ಅದು ಕೆಲವೊಮ್ಮೆ ಮಾತ್ರ ಎನ್ನುವಂತಾಗುತ್ತದೆ. ಉಳಿದ ಸಮಯದಲ್ಲಿ ಅವರಿಂದ ದೂರವೇ ಉಳಿಯುವಂತಾಗುತ್ತದೆ. ತಮ್ಮ ಪತಿ ಅಥವಾ ಪತ್ನಿ ಹೀಗೇಕೆ ಎಂದು ಚಿಂತಿಸುವ ಬದಲು ಅವರ ವರ್ತನೆಗೆ ಏನು ಕಾರಣ ಎಂದು ತಿಳಿದುಕೊಳ್ಳುವುದು ಕ್ಷೇಮ. ಜನ್ಮರಾಶಿಯ ಪರಿಣಾಮದಿಂದ ಅವರ ನಡವಳಿಕೆ ಹಾಗಿರುತ್ತದೆ. ಇಂತಹ ರಾಶಿಗಳೊಂದಿಗೆ ಒಡನಾಡುವಾಗ ಅವರ ವರ್ತನೆಯ ಬಗ್ಗೆ ಅಂದಾಜಿದ್ದರೆ ನೀವು ನೋವಿಗೆ ತುತ್ತಾಗುವುದನ್ನು ತಪ್ಪಿಸಿಕೊಳ್ಳಬಹುದು.

•    ಮೇಷ (Aries)
ಮೇಷ ರಾಶಿಯ ಜನರು ತಮ್ಮ ಬೆಂಕಿಯಂತಹ ನಡವಳಿಕೆಗೆ (Behavior) ಖ್ಯಾತರು. ದುಡುಕು (Impulsive) ಪ್ರವೃತ್ತಿಯಿಂದಾಗಿ ಇವರೊಂದಿಗಿನ ಮಾತುಕತೆ ಕೆಲವೊಮ್ಮೆ ವಿಪರೀತಕ್ಕೆ ಹೋಗಬಹುದು. ಆ ಸಮಯದಲ್ಲಿ ಇವರು ಕೋಪದಿಂದ (Angry) ಸಿಡಿಯಬಹುದು. ಬಿಕ್ಕಟ್ಟು ಸೃಷ್ಟಿಯಾಗಬಹುದು. ಸಂಗಾತಿಯನ್ನು ಗೊಂದಲಕ್ಕೆ ದೂಡುವಲ್ಲಿ ಇವರು ಎತ್ತಿದ ಕೈ. ಏಕಾಏಕಿ ಏನಾದರೂ ಪ್ಲಾನ್‌ ಮಾಡಿ, ಅದನ್ನು ಕಾರ್ಯಗತಗೊಳಿಸುವ ಇವರ ಸ್ವಭಾವದಿಂದ ಸಂಗಾತಿಗೆ ಕಿರಿಕಿರಿಯಾಗಬಹುದು.

Latest Videos

ಶನಿ ಕೇತುವಿನ ಷಡಷ್ಟಕ ಯೋಗ, ಈ ರಾಶಿಯವರಿಗೆ ನಷ್ಟ

•    ವೃಷಭ (Taurus)
ಐಹಿಕ ಸುಖಕ್ಕೆ ಹೆಚ್ಚು ಆದ್ಯತೆ ನೀಡುವ ವೃಷಭ ರಾಶಿಯ ಜನ ಹಠಮಾರಿಗಳು (Stubborn). ಒಮ್ಮೆ ನಿರ್ಧರಿಸಿದರೆ ಎಂದಿಗೂ ಬಾಗುವುದಿಲ್ಲ. ಬದಲಾವಣೆಯನ್ನು ಸುಲಭದಲ್ಲಿ ಒಪ್ಪಿಕೊಳ್ಳುವುದಿಲ್ಲ. ತಮ್ಮದೇ ದಾರಿಯನ್ನು ನಿರ್ಮಿಸಿಕೊಂಡಿರುತ್ತಾರೆ. ಕೆಲವು ವಿಚಾರಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದೇ ಇಲ್ಲ. ಇವರು ದಿಢೀರ್‌ ನಿರ್ಧಾರ ಕೈಗೊಂಡು ತಮ್ಮ ಪ್ರಯಾಣವನ್ನು ಕ್ಯಾನ್ಸಲ್‌ ಮಾಡಿಬಿಡಬಲ್ಲರು. ಇವರ ಈ ಗುಣದಿಂದಾಗಿ ಸಂಬಂಧದಲ್ಲಿ ಅಡೆತಡೆಗಳು (Obstacles) ನಿರ್ಮಾಣವಾಗಲ್ಲವು. 

•    ಮಿಥುನ (Gemini)
ದ್ವಂದ್ವ ಮನಸ್ಸಿಗೆ (Dual Mind) ಹೆಸರಾಗಿರುವ ಮಿಥುನ ರಾಶಿಯ ಜನ ಆಗಾಗ ಬದಲಾಗುತ್ತಾರೆ. ಈ ಗುಣದಿಂದಾಗಿ ಇವರನ್ನು ಯಾವ ರೀತಿ ಗುರುತಿಸಬೇಕು ಎನ್ನುವುದು ಸವಾಲಾಗುತ್ತದೆ. ಇವರು ಹಿಂದಿನ ದಿನವಿದ್ದಂತೆ ಮಾರನೆಯ ದಿನ ಇರುವುದಿಲ್ಲ. ಭಾವನೆಗಳು, ಅಭಿಪ್ರಾಯಗಳಲ್ಲೂ ಭಿನ್ನತೆ ತೋರಬಹುದು. ಹೀಗಾಗಿ, ಇವರ ಸಂಗಾತಿಗೆ (Partner) ಆಳವಾಗಿ ಇವರನ್ನು ಪ್ರೀತಿಸಲು ಸಾಧ್ಯವಾಗದಿರಬಹುದು. ಒಮ್ಮೆ ಪ್ರೀತಿ (Love) ತೋರಿದರೆ, ಮತ್ತೆ ಕೆಲವೇ ಸಮಯದಲ್ಲಿ ದೂರ ಕಾಯ್ದುಕೊಂಡಂತೆ ವರ್ತಿಸಬಹುದು. ಈ ಗುಣ, ಭಾವನಾತ್ಮಕವಾಗಿ ಸಂಗಾತಿಯನ್ನು ಬೆಸೆಯಲು ತಡೆಯಾಗುತ್ತದೆ.

•    ಕರ್ಕಾಟಕ (Cancer)
ಕರ್ಕಾಟಕ ರಾಶಿಯ ಜನ ಸಿಕ್ಕಾಪಟ್ಟೆ ಸೂಕ್ಷ್ಮ ಮನಸ್ಸನ್ನು ಹೊಂದಿರುತ್ತಾರೆ. ಭಾವನಾತ್ಮಕವಾಗಿ (Emotions) ಸಂಗಾತಿಯೊಂದಿಗೆ ಬಾಂಧವ್ಯ ಹೊಂದುವುದು ಇವರ ಬಯಕೆ. ಆದರೆ, ಸಂಪೂರ್ಣವಾದ ಮುಕ್ತ ಮನಸ್ಥಿತಿಯಲ್ಲಿ ಎಲ್ಲವನ್ನೂ ಹೇಳಿಕೊಳ್ಳುವುದು ಇವರಿಂದ ಸಾಧ್ಯವಾಗುವುದಿಲ್ಲ. ತಮ್ಮೊಳಗೆ ಅಭದ್ರತೆ ಇದ್ದರೂ ಮೇಲ್ನೋಟಕ್ಕೆ ದೃಢವಾಗಿರುವಂತೆ ತೋರಿಸಿಕೊಳ್ಳುತ್ತಾರೆ. ಹೀಗಾಗಿ, ಸಂಗಾತಿಗೆ ಇವರ ಬಗ್ಗೆ ಗೊಂದಲವಾಗಿ, ಇವರು ಬಯಸುವ ಬೆಂಬಲ (Support) ನೀಡಲು ಸಾಧ್ಯವಾಗುವುದಿಲ್ಲ.

ಈ ರಾಶಿಯವರಿಗೆ 500 ವರ್ಷಗಳ ನಂತರ ನಾಲ್ಕು ರಾಜಯೋಗ, ಭಾರಿ ಆರ್ಥಿಕ ಲಾಭ..ಲೈಫ್‌ ಜಿಂಗಾಲಾಲ

•    ಸಿಂಹ (Leo)
ಎಲ್ಲರ ಗಮನ (Attention) ತಮ್ಮ ಮೇಲಿರಬೇಕೆಂದು ಬಯಸುವ ಸಿಂಹ ರಾಶಿಯ ಜನ ಸಂಗಾತಿಯ ಜೀವನದಲ್ಲಿ ಕೇಂದ್ರಬಿಂದುವಾಗಿರಲು ಇಷ್ಟಪಡುತ್ತಾರೆ. ಇವರಿಗೆ ನಿರಂತರವಾಗಿ ಮೆಚ್ಚುಗೆ (Admiration) ಬೇಕು. ಈ ಗುಣದಿಂದಾಗಿ ಇವರ ಸಂಗಾತಿಯ ಭಾವನೆಗಳು ಬಹಳಷ್ಟು ಬಾರಿ ಮೂಲೆಗುಂಪಾಗುತ್ತವೆ. ಸಂಬಂಧದಲ್ಲಿ ಡಾಮಿನೇಟ್‌ (Dominate) ಮಾಡುತ್ತಾರೆ. ಮಾತುಕತೆಯಲ್ಲಿ ತಮ್ಮ ಸಾಧನೆಗಳನ್ನೇ ಕೇಂದ್ರೀಕರಿಸುತ್ತಾರೆ. ನಿರಂತರವಾಗಿ ಹೀಗಾಗುವುದರಿಂದ ಇವರ ಸಂಗಾತಿಗೆ ತಮ್ಮ ನೈಜ ಭಾವನೆಗಳು (Feelings), ವಿಚಾರಗಳನ್ನು ಹೇಳಿಕೊಳ್ಳಲು ಆಸ್ಪದವಾಗುವುದಿಲ್ಲ. 

•    ಕನ್ಯಾ (Virgo)
ಪರಿಪೂರ್ಣತೆ (Perfection), ನಿಖರತೆ ಬಯಸುವ ಕನ್ಯಾ ರಾಶಿಯ ಜನ ಸಂಬಂಧದಲ್ಲೂ ಇದನ್ನೇ ಬಯಸಿದಾಗ ಕಷ್ಟವಾಗುತ್ತದೆ. ಮನೆಯಲ್ಲಿ ಇದೇ ಕಾರಣಕ್ಕೆ ಸಮಸ್ಯೆ ಸೃಷ್ಟಿಸುತ್ತಾರೆ. ಸಂಗಾತಿಯ ಕುಂದುಕೊರತೆಗಳನ್ನೇ ಎತ್ತಿ ಆಡುತ್ತಾರೆ. ತಮ್ಮನ್ನು ಅತಿಯಾಗಿ ಟೀಕಿಸುವ ಭಾವನೆಯಿಂದ ಇವರ ಸಂಗಾತಿ ಇವರಿಂದ ದೂರವಿರುತ್ತಾರೆ. 
 

click me!