ಶೃಂಗೇರಿಯ ಮಾರುತಿ ಬೆಟ್ಟದಲ್ಲಿ 32 ಅಡಿ ಎತ್ತರದ ಶಂಕರ ಪ್ರತಿಮೆ ಅನಾವರಣ!

By Govindaraj S  |  First Published Nov 9, 2023, 11:30 PM IST

ದಕ್ಷಿಣಾಮ್ನಯ ಶಾರದಾಂಭೆ ಕ್ಷೇತ್ರ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಇಷ್ಟು ದಿನ ಶೃಂಗೇರಿಯಲ್ಲಿ ಶಾರದಾಂಭೆ ದರ್ಶನ ಪಡೆಯುತ್ತಿದ್ದು ಭಕ್ತರು ಇನ್ಮುಂದೆ ಅದ್ವೈತ ಸಿದ್ಧಾಂತ ಪ್ರತಿಪಾದಕ ಶಂಕರಾಚಾರ್ಯರ ದರ್ಶನವನ್ನೂ ಪಡೆಯಬಹುದು. 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ನ.09): ದಕ್ಷಿಣಾಮ್ನಯ ಶಾರದಾಂಭೆ ಕ್ಷೇತ್ರ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಇಷ್ಟು ದಿನ ಶೃಂಗೇರಿಯಲ್ಲಿ ಶಾರದಾಂಭೆ ದರ್ಶನ ಪಡೆಯುತ್ತಿದ್ದು ಭಕ್ತರು ಇನ್ಮುಂದೆ ಅದ್ವೈತ ಸಿದ್ಧಾಂತ ಪ್ರತಿಪಾದಕ ಶಂಕರಾಚಾರ್ಯರ ದರ್ಶನವನ್ನೂ ಪಡೆಯಬಹುದು. ಶೃಂಗೇರಿಯ ಹಿರಿಯ ಗುರುಗಳಾದ ಶ್ರೀ ಭಾರತೀತೀರ್ಥ ಶ್ರೀಗಳ ಸಂಕಲ್ಪದಂತೆ ಶೃಂಗೇರಿಯಲ್ಲಿ ಎರಡು ಎಕರೆ ವಿಸ್ತೀರ್ಣದಲ್ಲಿ 45 ಕೋಟಿ ವೆಚ್ಚದ 32 ಅಡಿಯ ಬೃಹತ್ ಹಾಗೂ ಸುಂದರ ಮೂರ್ತಿ ಇಂದು (ಶುಕ್ರವಾರ) ಲೋಕಾರ್ಪಣೆಗೊಳ್ಳಲಿದೆ.

Tap to resize

Latest Videos

undefined

45 ಕೋಟಿ ವೆಚ್ಚದ 32 ಅಡಿಯ ಶಂಕರಾಚಾರ್ಯರ ಪ್ರತಿಮೆ ಲೋಕಾರ್ಪಣೆ: ಇಷ್ಟು ದಿನಗಳ ಕಾಲ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯಲ್ಲಿ ವಿದ್ಯಾದಿದೇವತೆ ಶಾರದಾಂಬೆ ದರ್ಶನ ಪಡೆಯುತ್ತಿದ್ದ ನೀವು ಇನ್ಮುಂದೆ ಸಿದ್ಧಾಂತಗಳಲ್ಲೇ ಪ್ರಾಚೀನ ಸಿದ್ಧಾಂತವಾದ ಅದ್ವೈತ ಸಿದ್ಧಾಂತದ ಪ್ರತಿಪಾದಕರಾದ ಶಂಕರಾಚಾರ್ಯರ ದರ್ಶನವನ್ನೂ ಪಡೆಯಬಹುದು. ಶೃಂಗೇರಿ ಮಠದ ಹಿರಿಯ ಗುರುಗಳಾದ ಶ್ರೀ ಭಾರತೀತೀರ್ಥ ಶ್ರೀಗಳ ಸಂಕಲ್ಪದಂತೆ 45 ಕೋಟಿ ವೆಚ್ಚದ ಎರಡು ಎಕರೆ ವಿಸ್ತೀರ್ಣದಲ್ಲಿ ಬೃಹತ್ ಹಾಗೂ ಸುಂದರವಾಗಿ ನಿರ್ಮಾಣಗೊಂಡಿರೋ 32 ಅಡಿಯ ಶಂಕರಾಚಾರ್ಯರ ಪ್ರತಿಮೆ ಇಂದು ಲೋಕರ್ಪಣೆಗೊಳ್ಳಲಿದೆ. 

ಎಚ್‌ಡಿಕೆ ಯಾವತ್ತು ಸತ್ಯ ಹೇಳಿದ್ದಾರೆ, ಬರಿ ಸುಳ್ಳೆ: ಸಿಎಂ ಸಿದ್ದರಾಮಯ್ಯ ಲೇವಡಿ

ಶೃಂಗೇರಿಯಿಂದ ಎರಡು ಕಿ.ಮೀ. ದೂರದ ವಿದ್ಯಾರಣ್ಯಪುರದ ಹನುಮಗಿರಿಯಲ್ಲಿ ಶಂಕರಾಚಾರ್ಯರ ಪ್ರತಿಮೆ ಜೊತೆ ಅವರ ನಾಲ್ವರು ಶಿಷ್ಯರಾದ ಸುರೇಶ್ವರಾಚಾರ್ಯರು, ತೋಟಕಾಚಾರ್ಯರು, ಪದ್ಮಪಾದಚಾರ್ಯರು, ಹಸ್ತಮಲಕಾಚಾರ್ಯರು ಮೂರ್ತಿಯೂ ಅನಾವರಣಗೊಳ್ಳಲಿದೆ. ಇವರ ಜೊತೆ, ವಿಜಯನಗರ ಸಾಮ್ರಾಜ್ಯದ ರೂವಾರಿಗಳಾದ ಜಗದ್ಗುರು ವಿದ್ಯಾರಣ್ಯರ ಮೂರ್ತಿಯೂ ಕೂಡ ಲೋಕಾರ್ಪಣೆಗೊಳ್ಳಲಿದೆ. ವಿದ್ಯಾರಣ್ಯರು ಶಂಕರಾಚಾರ್ಯರ ಶಿಷ್ಯರಾಗಿದ್ದು 10ನೇ ಜಗದ್ಗುರುಗಳಾಗಿದ್ದಾರೆ. ಹನುಮಗಿರಿಯಲ್ಲಿ ನಿರ್ಮಾಣಗೊಳ್ತಿರೋ ಜಗದ್ಗುರುಗಳ ಜೊತೆ ಹನುಮನ ಮೂರ್ತಿ ಕೂಡ ನಿರ್ಮಾಣವಾಗಿದೆ. ಇಂದು ಭಾರತೀತೀರ್ಥ ಶ್ರೀಗಳ ಅಮೃತ ಹಸ್ತದಿಂದ ಲೋಕಾರ್ಪಣೆಗೊಳ್ಳಲಿರೋ ಈ ಸುಂದರ ತಾಣಕ್ಕೆ ಸಾರ್ವಜನಿಕರಿಗೆ ಪ್ರವೇಶವಿಲ್ಲ. 15 ದಿನಗಳ ಬಳಿಕ ನಾಡಿನ ಜನ ಈ ತಾಣದ ಸೌಂದರ್ಯವನ್ನ ಸವಿಯಬಹುದು.... 

750 ಟನ್ ತೂಕದ ಶಿಲೆಯಿಂದ ಶಂಕರರ ಸುಂದರ ಮೂರ್ತಿ: 2013ರಿಂದ ನಡೆಯುತ್ತಿದ್ದ ಕೆಲಸ ಇದೀಗ ಸಂಪೂರ್ಣ ಮುಕ್ತಾಯಗೊಂಡು ಇಂದು ಲೋಕಾರ್ಪಣೆಗೊಳ್ಳಲಿದೆ. ಶ್ರೀ ಭಾರತೀತೀರ್ಥ ಶ್ರೀಗಳು ಸನ್ಯಾಸತ್ವ ಸ್ವೀಕರಿಸಿದ ಸುವರ್ಣ ಮಹೋತ್ಸವದ ಹೊತ್ತಲ್ಲೆ ಶಂಕರಾಚಾರ್ಯರ ಸುಂದರ ಪ್ರತಿಮೆ ಅನಾವರಣಗೊಳ್ಳಲಿದೆ. 45 ಕೋಟಿ ವೆಚ್ಚದ 2 ಎಕರೆ ವಿಸ್ತೀರ್ಣದಲ್ಲಿ ಮೂರ್ತಿ ನಿರ್ಮಾಣವಾಗಿದೆ. ಮೂರ್ತಿ ಸ್ಥಾಪನೆಗೆ ಬೆಂಗಳೂರಿನ ಹೊಸಕೋಟೆಯಿಂದ 750 ಟನ್ ತೂಕದ ಶಿಲೆ ತರಲಾಗಿತ್ತು. ಶಂಕರರು ಜೀವಿಸಿದ್ದ ಕಾಲಾವಧಿಗೆ ಹೊಂದುವಂತೆ ತಮಿಳುನಾಡಿನ ಪ್ರಸಿದ್ಧ ಶಿಲ್ಪಿ ಶಂಕರ ಸ್ಥಪತಿ 32 ಅಡಿ ಎತ್ತರದ ಮೂರ್ತಿ ನಿರ್ಮಿಸಿದ್ದಾರೆ. 

ಬರದಿಂದ ರೈತರಿಗೆ ಸಂಕಷ್ಟ, ರಾಜ್ಯ ಸರ್ಕಾರ ಕಚ್ಚಾಟ: ಮಾಜಿ ಸಿಎಂ ಸದಾನಂದಗೌಡ ತರಾಟೆ!

ಈ ಹನುಮಗಿರಿ ಬೆಟ್ಟದಲ್ಲಿ ಸೂರ್ಯೋದಯ ಹಾಗೂ ಸೂರ್ಯಾಸ್ತ ವೀಕ್ಷಣೆಗೂ ವ್ಯವಸ್ಥೆ ಮಾಡಲಾಗಿದೆ. ಬೆಟ್ಟ ಹತ್ತಲು-ಇಳಿಯಲು ಎಸ್ಕಲೇಟರ್ ವ್ಯವಸ್ಥೆ ಅಳವಡಿಸಲಾಗಿದೆ. ಶೃಂಗೇರಿ ಮಠದ 36ನೇ ಜಗದ್ಗುರುಗಳಾದ ಭಾರತೀತೀರ್ಥ ಶ್ರೀಗಳು 1974ರ ನವೆಂಬರ್ 11ರಂದು ಸನ್ಯಾಸ ಸ್ವೀಕರಿಸಿದ್ದರು. ಅವರು ಸನ್ಯಾಸ ಸ್ವೀಕರಿಸಿ 50ನೇ ವರ್ಷದ ಸ್ವರ್ಣ ಮಹೋತ್ಸವದ ಅಂಗವಾಗಿ ಶಂಕರರ ಮೂರ್ತಿ ಲೋಕಾರ್ಪಣೆಗೊಳ್ಳಲಿದೆ.ಒಟ್ಟಾರೆ, ಇಷ್ಟು ದಿನಗಳ ಕಾಲ ಧಾರ್ಮಿಕ ಕ್ಷೇತ್ರವಾಗಿದ್ದ ಶೃಂಗೇರಿ ಮಠ ಇನ್ಮುಂದೆ ಪ್ರವಾಸಿ ತಾಣ ಕೂಡ ಆಗಲಿದೆ. ಒಂದೆಡೆ ಧಾರ್ಮಿಕ ನಂಬಿಕೆ. ಮತ್ತೊಂದೆಡೆ ಇತಿಹಾಸ ಪ್ರಸಿದ್ಧ ಪುರುಷರ ದರ್ಶನ. ಮಗದೊಡೆ ಜಗದೊಡೆಯ ಸೂರ್ಯ ಹುಟ್ಟೋದು-ಮುಳುಗೋದನ್ನ ನೋಡಿ ಕಣ್ತುಂಬಿಕೊಳ್ಳಬಹುದಾದ ಎತ್ತರದ ಪ್ರದೇಶ.

click me!