Coriander Remedies: ನಿಮ್ ದುನಿಯಾದ ಅದೃಷ್ಟವನ್ನೇ ಬದಲಿಸುತ್ತೆ ಧನಿಯಾ !

By Suvarna NewsFirst Published Dec 8, 2022, 2:56 PM IST
Highlights

ಧನಿಯಾ ಪ್ರತಿ ಅಡುಗೆಮನೆಯ ಆಸ್ತಿ. ಈ ಸಾಂಬಾರ ಪದಾರ್ಥದಲ್ಲಿ ನಿಮ್ಮ ಅದೃಷ್ಟ ಬದಲಿಸುವ ಶಕ್ತಿ ಇದೆ ಎಂದರೆ ಅಚ್ಚರಿಯಲ್ಲವೇ? ಕೊತ್ತಂಬರಿಯ ಈ ಪರಿಹಾರೋಪಾಯಗಳನ್ನು ಪಾಲಿಸಿ ನೋಡಿ.. 

ಪ್ರತಿ ಮನೆಯ ಅಡುಗೆಮನೆಯಲ್ಲಿ ಕೊತ್ತಂಬರಿ ಇದ್ದೇ ಇರುತ್ತದೆ. ಇವನಾವ ಸೀಮೆ ರಾಜ, ಕೊತ್ತಂಬರಿ ಬೀಜ ಅಂತ ಮೂಗು ಮುರೀಬೇಡಿ. ಏಕೆಂದರೆ ಈ ಕೊತ್ತಂಬರಿ ಬೀಜದಲ್ಲಿ ಸಾಕಷ್ಟು ಆರೋಗ್ಯ ಲಾಭಗಳಿವೆ. ಅಡುಗೆಗೂ ರುಚಿ ತರುತ್ತದೆ. ಅಷ್ಟೇ ಅಲ್ಲ, ನಿಮ್ಮ ಅದೃಷ್ಟವನ್ನು ಬದಲಿಸುವ ಶಕ್ತಿ ಈ ಪುಟ್ಟ ಪುಟ್ಟ ಕೊತ್ತಂಬರಿ ಮಹಾರಾಜರಿಗಿದೆ. 
ಹೌದು, ಜ್ಯೋತಿಷ್ಯದಲ್ಲಿ ಕೊತ್ತಂಬರಿಯನ್ನು ಪ್ರಮುಖ ಸಮಸ್ಯೆಗಳಿಗೆ ಅಸ್ತ್ರದಂತೆ ಬಳಸಲಾಗುತ್ತದೆ. ಇದನ್ನು ಬಳಸಿ ಕೈಗೊಳ್ಳುವ ಈ ಪರಿಹಾರೋಪಾಯಗಳು ನಿಮಗೆ ಕತ್ತಲಲ್ಲಿ ಕೈ ಹಿಡಿದ ದೇವರಂತೆ ಕಾಣಿಸುತ್ತವೆ. ಏಕೆಂದರೆ ಸಮಸ್ಯೆಯಿಂದ ಕಂಗೆಟ್ಟ ನಿಮ್ಮ ಜೀವನದಲ್ಲಿ ಇದರ ಪರಿಹಾರಗಳು ದೊಡ್ಡ ಬದಲಾವಣೆಯನ್ನು ತರಬಹುದು. ಕೊತ್ತಂಬರಿಯ ಅದ್ಭುತ ಪರಿಹಾರಗಳ ಬಗ್ಗೆ ಇಲ್ಲಿ ತಿಳಿಸಿದ್ದೇವೆ.

ಜ್ಯೋತಿಷ್ಯ ದುನಿಯಾದಲ್ಲಿ ಧನಿಯಾ(Dhania)

  • ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿಮ್ಮ ಮನೆಯಲ್ಲಿ ಸದಾ ಭಿನ್ನಾಭಿಪ್ರಾಯಗಳಿದ್ದರೆ ಪೂರ್ವ ದಿಕ್ಕಿನಲ್ಲಿ ಸ್ವಲ್ಪ ಒಣ ಕೊತ್ತಂಬರಿ ಬೀಜಗಳನ್ನು ಇಟ್ಟು ಹನುಮಾನ್ ಚಾಲೀಸಾ(Hanuman Chalisa)ವನ್ನು ಪಠಿಸಿ. ಈ ಪರಿಹಾರವನ್ನು ಮಾಡುವುದರಿಂದ ಕುಟುಂಬ ಸದಸ್ಯರಲ್ಲಿ ಪ್ರೀತಿ ಹೆಚ್ಚಾಗಲು ಪ್ರಾರಂಭಿಸುತ್ತದೆ.
  • ನಿಮ್ಮ ಹಣ ಎಲ್ಲೋ ಸಿಕ್ಕಿಹಾಕಿಕೊಂಡು ಬಹಳ ದಿನವಾದರೂ ವಾಪಸ್ ಬರದೇ ಇದ್ದಲ್ಲಿ ಶುಕ್ರವಾರ(Friday)ದಂದು ಪೇಪರ್ ಮೇಲೆ ಹಣ ತೆಗೆದುಕೊಂಡವರ ಹೆಸರನ್ನು ಬರೆದು ಒಣ ಕೊತ್ತಂಬರಿ ಬೀಜವನ್ನು ಹಾಕಿ ಆ ಕಾಗದವನ್ನು ಹರಿಯುವ ನೀರಿನಲ್ಲಿ ಹರಿಯಲು ಬಿಡಿ. ಈ ಪರಿಹಾರವನ್ನು ಮಾಡುವುದರಿಂದ, ನಿಮ್ಮ ಸ್ಥಗಿತಗೊಂಡ ಹಣವನ್ನು ನೀವು ಶೀಘ್ರದಲ್ಲೇ ಪಡೆಯುತ್ತೀರಿ.

    2023ರಲ್ಲಿ ಮೊದಲ 3 ಜನ್ಮರಾಶಿಯ ರೊಮ್ಯಾಂಟಿಕ್‌ ಲೈಫ್‌ ಹೀಗಿರುತ್ತೆ ನೋಡಿ!
     
  • ನಿಮ್ಮ ಬಳಿ ಹಣವಿಲ್ಲದಿದ್ದರೆ, ಅಥವಾ ನೀವು ಗಳಿಸಿದ ಹಣವು ಬರೀ ಖರ್ಚಾಗುತ್ತಿದ್ದರೆ, ಹಸುವಿಗೆ ಬುಧವಾರ ಹಸಿರು ಕೊತ್ತಂಬರಿ ಸೊಪ್ಪನ್ನು(Green coriander leaves) ತಿನ್ನಿಸಿ. ಹೀಗೆ ಮಾಡುವುದರಿಂದ ಆರ್ಥಿಕ ಸ್ಥಿತಿ ಸದೃಢವಾಗುತ್ತದೆ. ಇದರೊಂದಿಗೆ ಹಣದಲ್ಲಿ ಸ್ಥಿರತೆಯೂ ಇರುತ್ತದೆ.
  • ತಾಯಿ ಲಕ್ಷ್ಮಿಯ ಆಶೀರ್ವಾದ ಪಡೆಯಲು, ಶುಕ್ರವಾರದಂದು ಮಾ ಲಕ್ಷ್ಮಿ(Goddess Lakshmi)ಯ ವಿಗ್ರಹದ ಮುಂದೆ ಕೆಂಪು ಬಟ್ಟೆಯಲ್ಲಿ ಕೊತ್ತಂಬರಿ ಮತ್ತು ಬೆಳ್ಳಿಯ ನಾಣ್ಯವನ್ನು ಇರಿಸಿ. ನಂತರ ಮಾತಾ ಲಕ್ಷ್ಮಿಯ ಪೂಜೆಯ ಜೊತೆಗೆ ಆ ಪೊಟ್ಟಣಕ್ಕೂ ಪೂಜೆ ಮಾಡಿ. ಇದರ ನಂತರ ಈ ಬಟ್ಟೆಯಲ್ಲಿ ಕಟ್ಟಿದ ಕೊತ್ತಂಬರಿ ಮತ್ತು ಬೆಳ್ಳಿ ನಾಣ್ಯವನ್ನು ತಿಜೋರಿಯಲ್ಲಿ ಇರಿಸಿ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರೀತಿ ಮಾಡುವುದರಿಂದ ಮನೆಯ ಸದಸ್ಯರ ಆರ್ಥಿಕ ಪ್ರಗತಿ ಹೆಚ್ಚುತ್ತದೆ ಹಾಗೂ ಲಕ್ಷ್ಮಿಯ ಆಶೀರ್ವಾದ ಸದಾ ಇರುತ್ತದೆ.

    Astrology Tips : ಮನೆಯಲ್ಲಿ ಹನುಮಂತನ ಪೂಜೆ ಮಾಡ್ತಿದ್ರೆ ಈ ನಿಯಮ ತಪ್ಪಿಸ್ಬೇಡಿ
     
  • ಯಾವುದೇ ತಿಂಗಳ ಶುಕ್ಲ ಪಕ್ಷದ ಮಂಗಳವಾರದಂದು ಮಣ್ಣಿನ ಪಾತ್ರೆಯಲ್ಲಿ ಒಣ ಕೊತ್ತಂಬರಿ, ಕೆಲವು ನಾಣ್ಯಗಳು ಮತ್ತು ನೀರನ್ನು ಹಾಕಿ. ಆ ಮಡಕೆಯನ್ನು ಮನೆಯ ಉತ್ತರ ದಿಕ್ಕಿ(North Direction)ನಲ್ಲಿ ಇಡಿ. ಆ ಬೀಜಗಳಿಂದ ಕೊತ್ತಂಬರಿ ಸೊಪ್ಪು ಮೊಳಕೆಯೊಡೆದು ಹೊರಬಂದಾಗ, ಅದರಿಂದ ಒಂದು ನಾಣ್ಯವನ್ನು ತೆಗೆದುಕೊಳ್ಳಿ. ಅದನ್ನು ಬೀರು ಅಥವಾ ತಿಜೋರಿಯಲ್ಲಿ ಸುರಕ್ಷಿತವಾಗಿ ಇರಿಸಿ. ಹೀಗೆ ಮಾಡುವುದರಿಂದ ಧನ ಲಾಭವಾಗುತ್ತದೆ.
  • ಒಣ ಕೊತ್ತಂಬರಿ ಬೀಜವನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ದೇವಸ್ಥಾನಕ್ಕೆ ಹೋಗಿ ಹನುಮಂತನಿಗೆ ಅರ್ಪಿಸಿ. ಇದರ ನಂತರ ಹನುಮಾನ್ ಚಾಲೀಸಾ ಪಠಿಸಿ. ಪವನಪುತ್ರನ ಕೃಪೆಯಿಂದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ.

    ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.
click me!