ಇಂದು ಬೆಳಿಗ್ಗೆ 4 ಗಂಟೆಯಿಂದಲೇ ಭಕ್ತರು ಅಂಜನಾದ್ರಿ ಬೆಟ್ಟವನ್ನ ಏರಿದ್ದಾರೆ. ಹನುಮ ಜಯಂತಿ ಪ್ರಯುಕ್ತ ಆಂಜನೇಯಸ್ವಾಮಿಗೆ ವಿಶೇಷ ಎಲೆ ಅಲಂಕಾರ ಮಾಡಲಾಗಿತ್ತು. ಹೋಮ, ಹವನ ಸೇರೀದಂತೆ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಗಂಗಾವತಿ(ಏ.23): ಹನುಮ ಜಯಂತಿ ಆಚರಣೆ ಹಿನ್ನಲೆಯಲ್ಲಿ ಇಂದು(ಮಂಗಳವಾರ) ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟಕ್ಕೆ ಭಕ್ತರ ದಂಡೇ ಹರಿದು ಬಂದಿದೆ.
ಇಂದು ಬೆಳಿಗ್ಗೆ 4 ಗಂಟೆಯಿಂದಲೇ ಭಕ್ತರು ಅಂಜನಾದ್ರಿ ಬೆಟ್ಟವನ್ನ ಏರಿದ್ದಾರೆ. ಹನುಮ ಜಯಂತಿ ಪ್ರಯುಕ್ತ ಆಂಜನೇಯಸ್ವಾಮಿಗೆ ವಿಶೇಷ ಎಲೆ ಅಲಂಕಾರ ಮಾಡಲಾಗಿತ್ತು. ಹೋಮ, ಹವನ ಸೇರೀದಂತೆ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
undefined
ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ; ಅಂಜನಾದ್ರಿಯಲ್ಲಿ ಮೆಟ್ಟಿಲು ದೀಪೋತ್ಸವಕ್ಕೆ ರೆಡ್ಡಿ ದಂಪತಿ ಚಾಲನೆ
ನಾಡಿನ ವಿವಿಧ ಜಿಲ್ಲೆಗಳಿಂದ ಅಂಜನಾದ್ರಿ ಬೆಟ್ಟಕ್ಕೆ ಭಕ್ತರು ಆಗಮಿಸಿದ್ದರು. ಸುಡು ಬಿಸಿಲನ್ನು ಲೆಕ್ಕಿಸದೇ ಭಕ್ತರು ಪಾದಯಾತ್ರೆ ಮೂಲಕ ಆಗಮಿಸಿ ತಮ್ಮ ಭಕ್ತಿ ಸಮರ್ಪಿಸಿದ್ದಾರೆ. ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಿದ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಗಿದೆ.