ಚಾಣಕ್ಯ ನಮ್ಮ ಬುದ್ಧಿಶಕ್ತಿಯ ಹೆಚ್ಚಳ, ಮೆಮೊರಿ ಪವರ್ ಹೆಚ್ಚಿಸಿಕೊಳ್ಳುವುದಕ್ಕೆ ಏನು ಮಾಡಬೇಕು ಎಂದು ಹೇಳಿರುವುದನ್ನು ನೀತಿಸೂತ್ರದಿಂದ ಹೆಕ್ಕಿ ಇಲ್ಲಿ ಕೊಡಲಾಗಿದೆ. ನೋಡಿ:
ಆಚಾರ್ಯ ಚಾಣಕ್ಯ ತಮ್ಮ ನೀತಿಶಾಸ್ತ್ರದಲ್ಲಿ ಹಲವಾರು ವಿಷಯಗಳನ್ನು ಹೇಳಿದ್ದಾನೆ. ಮುಖ್ಯವಾಗಿ ರಾಜಕಾರಣ, ಅರ್ಥಶಾಸ್ತ್ರ, ಗಂಡು- ಹೆಣ್ಣಿನ ಸಂಬಂಧ, ರಾಜನು ಹೇಗಿರಬೇಕು, ಶತ್ರುಗಳನ್ನು ಹೇಗೆ ಸದೆಬಡಿಯಬೇಕು ಇತ್ಯಾದಿ ವಿಷಯಗಳು. ಇದರ ನಡುವೆ ವೈಯಕ್ತಿಕ ಬೆಳವಣಿಗೆಗೆ ಪೂರಕವಾದ ಹಲವಾರು ವಿಷಯಗಳೂ ಅಲ್ಲಲ್ಲಿ ಬಂದುಹೋಗಿವೆ. ಹೀಗೆ ಆತ ನಮ್ಮ ಬುದ್ಧಿಶಕ್ತಿಯ ಹೆಚ್ಚಳ, ಮೆಮೊರಿ ಪವರ್ ಹೆಚ್ಚಿಸಿಕೊಳ್ಳುವುದಕ್ಕೆ ಏನು ಮಾಡಬೇಕು ಎಂದು ಹೇಳಿರುವುದನ್ನು ನೀತಿಸೂತ್ರದಿಂದ ಹೆಕ್ಕಿ ಇಲ್ಲಿ ಕೊಡಲಾಗಿದೆ. ನೋಡಿ:
- ಬ್ರಾಹ್ಮೀಕಾಲ ಉತ್ಥಾನ: ಬ್ರಾಹ್ಮೀಕಾಲದಲ್ಲಿ ಏಳಬೇಕು. ಬ್ರಾಹ್ಮೀ ಮುಹೂರ್ತ ಎಂದರೆ ಮುಂಜಾನೆ ನಾಲ್ಕು ಗಂಟೆಯಿಂದ ಐದೂವರೆಯ ನಡುವಿನ ಸಮಯ. ಆ ಹೊತ್ತಿನಲ್ಲಿ ಎಲ್ಲರೂ ಗಾಢ ನಿದ್ದೆಯಲ್ಲಿರುವುದರಿಂದ, ನಿಮ್ಮ ಓದುವಿಕೆ, ಧ್ಯಾನ ಇತ್ಯಾದಿಗಳಿಗೆ ಪೂರಕವಾದ ಆನಂದದಾಯಕವಾದ ವಾತಾವರಣ ಸಿಗುತ್ತದೆ. ಇದು ಬುದ್ಧಿಶಕ್ತಿಯನ್ನು ಚುರುಕಾಗಿಸುತ್ತದೆ. ಮೆಮೊರಿ ಪವರ್ ಅನ್ನು ಹೆಚ್ಚಿಸುತ್ತದೆ.
- ಹಿತಭುಕ್, ಮಿತಭುಕ್, ಕ್ಷುತಭುಕ್: ಈ ಮೂರು ಸೂತ್ರಗಳು ವಿಶಿಷ್ಟ. ಹೀಗೆಂದರೆ ಹಿತವಾದುದನ್ನು ಊಟ ಮಾಡು (ಹಿತಭುಕ್), ಮಿತವಾಗಿ ಊಟಮಾಡು (ಮಿತಭುಕ್) ಹಾಗೂ ಹಸಿವಾದಾಗ ಮಾತ್ರ ಊಟ ಮಾಡು (ಕ್ಷುತಭುಕ್). ಇದೇ ಹೊಟ್ಟೆ, ಆ ಮೂಲಕ ಜಠರ, ಅದರಿಂದ ಮೆದುಳು ಆರೋಗ್ಯವಾಗಿರಲು ಸೂಕ್ತವಾದ ಸೂತ್ರ. ಅತಿಯಾಗಿ ಆಹಾರ ಸೇವನೆ ಮಾಡಿದರೆ ನಿದ್ರೆ ಬಂದುಬಿಡುತ್ತದೆ, ಓದಿದ್ದು ತಲೆಯಲ್ಲಿ ಉಳಿಯುವುದಿಲ್ಲ. ಹಸಿದುಕೊಂಡು ಇದ್ದರೂ ಓದಲಾಗುವುದಿಲ್ಲ. ಹಸಿವಿಲ್ಲದಾಗ ಉಂಡರೆ ಜಠರ ಅದನ್ನು ಜೀರ್ಣಿಸದೆ ತಿರಸ್ಕರಿಸುತ್ತದೆ.
ಘೃತ ಸೇವನೆ: ದಿನದ ಊಟದಲ್ಲಿ ಒಂದು ಹೊತ್ತಿನಲ್ಲಾದರೂ ತುಸು ತುಪ್ಪ (Ghee) ಸೇವನೆ ಮಾಡಲೇಬೇಕು. ಇದು ಬುದ್ಧಿಶಕ್ತಿ (ಧೀಶಕ್ತಿ) ಹೆಚ್ಚಲು ಸಹಕಾರಿ. ತುಪ್ಪ ಕೊಲೆಸ್ಟರಾಲ್ (Cholesterol) ಅಲ್ಲ, ಅದು ಕೆಟ್ಟ ಕೊಬ್ಬಲ್ಲ. ಅದರಿಂದ ಹಾನಿಯಿಲ್ಲ. ಇತರ ಕರಿದ ತಿಂಡಿಗಳು ಹಾನಿಕರ. ಆದರೆ ತುಪ್ಪ ಸೇರಿಸಿದ ಹಲ್ವಾ ಅಥವಾ ತುಪ್ಪದಿಂದ ಮಾಡಿದ ಭಕ್ಷ್ಯಗಳನ್ನು ಸವಿಯಬಹುದು. ಅದು ಬುದ್ಧಿಶಕ್ತಿಯನ್ನೂ ಹೆಚ್ಚಿಸುತ್ತದೆ.
ಗಾಯತ್ರಿ ಮಂತ್ರ: ಗಾಯತ್ರಿ ಮಂತ್ರವನ್ನು ಸದಾ, ದಿನದಲ್ಲಿ ಸಾಧ್ಯವಾದಷ್ಟು ಕಾಲ, ಶುಚಿರ್ಭೂತವಾಗಿ ಒಂದೆಡೆ ಕುಳಿತು ಪಠಿಸಬೇಕು. ಗಾಯತ್ರಿ ಮಂತ್ರ ಇರುವುದು ನನ್ನ ಬುದ್ಧಿಶಕ್ತಿಯನ್ನು ಹೆಚ್ಚಿಸು ಎಂದು ಸೂರ್ಯದೇವನಲ್ಲಿ (Sun) ಕೇಳಿಕೊಳ್ಳುವುದಕ್ಕಾಗಿಯೇ. ನೀವು ಕೇಳಿಕೊಂಡರೆ ತಾನೇ ಸೂರ್ಯದೇವ ಅದನ್ನು ನಿಮಗೆ ಕೊಡಲು ಸಾಧ್ಯ? ಗಾಯತ್ರಿ ಮಂತ್ರ ಹೀಗಿದೆ:
"ಓಂ ಭೂರ್ಭುವಸ್ವಃ ತತ್ಸವಿತುರ್‌ವರೇಣ್ಯಂ ಭರ್ಗೋ ದೇವಸ್ಯಧೀಮಹಿ ಧಿಯೋಯೋನಃ ಪ್ರಚೋದಯಾತ್"
ಚೈತ್ರ ಹುಣ್ಣಿಮೆಯಂದು ಈ ಕೆಲಸ ಮಾಡಿದ್ರೆ ಜೀವನದಲ್ಲಿ ಸಮಸ್ಯೆಗಳೇ ತುಂಬಿರುತ್ತೆ!
ಎಂಜಲು ಉಗುಳಬೇಡಿ: ಕೆಲವರಿಗೆ ಎಂಜಲು ಉಗುಳುವ ಕೆಟ್ಟ ಅಭ್ಯಾಸವಿರುತ್ತದೆ. ಕಫ ಹೆಚ್ಚು ಇದ್ದಾಗ ಉಗುಳಬೇಕು. ಆದರೆ ಸಾಮಾನ್ಯ ಪರಿಸ್ಥಿತಿಯಲ್ಲಿ, ಎಂಜಲು ಉಗುಳುವುದರಿಂದ ದೇಹದಲ್ಲಿ ಉತ್ಪತ್ತಿಯಾಗುತ್ತಿರುವ ಕೆಲವು ಆರೋಗ್ಯಕಾರಿ ಕಿಣ್ವರಸಗಳು ಇಲ್ಲವಾಗುತ್ತವೆ. ಅವು ದೇಹದಲ್ಲಿದ್ದಾಗ ಮಾತ್ರ ದೇಹ ಸೂಕ್ತ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ.
ಧ್ಯಾನ (Medidation): ಓದಿದ್ದನ್ನು ಧ್ಯಾನಿಸಿ. ಕಲಿತದ್ದನ್ನು ಧ್ಯಾನಿಸಿ. ಗುರುಗಳಿಂದ ಕೇಳಿಸಿಕೊಂಡಿದ್ದನ್ನು ಧ್ಯಾನಿಸಿ. ಇದನ್ನೇ ಮನನ ಎನ್ನುತ್ತಾರೆ. ಹಿಂದಿನ ಕಾಲದಲ್ಲಿ ಶ್ರವಣ, ಮನನ, ನಿಧಿಧ್ಯಾಸನ ಎಂದು ಇದನ್ನು ಕರೆಯುತ್ತಿದ್ದರು. ಓದುವಷ್ಟೇ ಮುಖ್ಯ ಅದನ್ನು ಮರಳಿ ಮರಳಿ ನೆನಪಿಸಿಕೊಳ್ಳುವುದು. ಇದರಿಂದ ಬುದ್ಧಿಶಕ್ತಿ ಹರಿತಗೊಳ್ಳುತ್ತದೆ.
ನಕಾರಾತ್ಮಕತೆ (Negativity): ನಕಾರಾತ್ಮಕ ಆಲೋಚನೆಗಳು ನಿಮ್ಮ ಬುದ್ಧಿಶಕ್ತಿಯನ್ನು ಹ್ರಾಸಗೊಳಿಸುತ್ತವೆ. ಸದಾ ಸಂತೋಷದಿಂದಿರಿ. ನಕಾರಾತ್ಮಕ ಆಲೋಚನೆಗಳಿಂದ ದೂರವಿರಿ. ಎರಡು ರೆಕ್ಕೆಗಳ ಸಹಾಯದಿಂದ ಪಕ್ಷಿಗಳು ಹೇಗೆ ಆಕಾಶದಲ್ಲಿ ಹಾರುತ್ತವೆಯೋ ಅದೇ ರೀತಿ ಕರ್ಮ ಮತ್ತು ಜ್ಞಾನ ಎಂಬ ಎರಡು ರೆಕ್ಕೆಗಳ ಸಹಾಯದಿಂದ ಮನುಷ್ಯನು ಯಶಸ್ಸಿನ ಆಕಾಶದಲ್ಲಿ ಹಾರಲು ಸಾಧ್ಯವಾಗುತ್ತದೆ ಎಂದು ಚಾಣಕ್ಯ ನೀತಿ ಹೇಳುತ್ತದೆ.
Chanakya Niti : ನರಕದಲ್ಲಿ ಶಿಕ್ಷೆ ಅನುಭವಿಸಿ, ಬಳಿಕ ಭೂಮಿ ಮೇಲೆ ಹುಟ್ಟೋ ಜನರ ಸ್ಥಿತಿ ಹೇಗಿರುತ್ತೆ?