ಕಂಚೀ ವರದರಾಜಸ್ವಾಮಿಯನ್ನು ನಾಣ್ಯಗಳಲ್ಲೇ ಮುಳುಗಿಸಿದ ಭಕ್ತವೃಂದ

Published : Apr 21, 2022, 04:21 PM ISTUpdated : Apr 21, 2022, 04:44 PM IST
ಕಂಚೀ ವರದರಾಜಸ್ವಾಮಿಯನ್ನು ನಾಣ್ಯಗಳಲ್ಲೇ ಮುಳುಗಿಸಿದ ಭಕ್ತವೃಂದ

ಸಾರಾಂಶ

ಚಿತ್ರದುರ್ಗದಲ್ಲೊಂದು ಮಿನಿ ತಿರುಪತಿ ಹೆಗ್ಗಳಿಕೆಯ ಕಂಚೀ ವರದರಾಜಸ್ವಾಮಿ ದೇವಾಲಯವಿದೆ. ಇಲ್ಲಿನ ಬ್ರಹ್ಮ ರಥೋತ್ಸವ ವಿಶಿಷ್ಠವಾಗಿರುತ್ತದೆ. 

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

'ಏಳು ಕೊಂಡಲವಾಡ ಗೋವಿಂದ ಗೋವಿಂದ' ಅಂತ ಎಲ್ಲ ಭಕ್ತರು ತಿರುಪತಿ‌ ತಿಮ್ಮಪ್ಪನನ್ನು ಸ್ಮರಿಸುತ್ತಾ ಆತನ ದರ್ಶನ ಪಡೆಯಲು ಸನ್ನಿಧಿಗೆ ತೆರಳ್ತಾರೆ. ಅದೇ ರೀತಿ ಕೋಟೆನಾಡು ಚಿತ್ರದುರ್ಗ(Chitradurga)ದಲ್ಲೂ ಮಿನಿ ತಿರುಪತಿ ಎಂದೇ ಪ್ರಖ್ಯಾತಿ ಪಡೆದಿರೋ ಹೊಸದುರ್ಗ ತಾಲ್ಲೂಕಿನ ಕಂಚೀಪುರದಲ್ಲಿರುವ ಕಂಚೀ ವರದರಾಜಸ್ವಾಮಿ( Kanchi Varadaraja swamy)ಯ ದರ್ಶನಕ್ಕೆ ಸಾಗರೋಪಾದಿಯಲ್ಲಿ ಭಕ್ತರು ಆಗಮಿಸಿ ಸ್ವಾಮಿಯ ದರ್ಶನವನ್ನು ಕಣ್ತುಂಬಿಕೊಂಡರು. ಇಂದು ಬೆಳಗಿನ 4 ಗಂಟೆ ಸುಮಾರಿಗೆ ನಡೆದ ಕಂಚೀ ವರದರಾಜ ಸ್ವಾಮೀ ಬ್ರಹ್ಮ ರಥೋತ್ಸವದ ವೇಳೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಸುಂದರ ಕ್ಷಣಗಳನ್ನು ಕಣ್ತುಂಬಿಕೊಂಡರು.

ಸ್ವಾಮಿ ಕಂಚೀವರದ ರಥದಲ್ಲಿ‌ ಕೂರುವ ಮುನ್ನವೇ ಹೊಂಬಾಳೆಯಿಂದ ಶೃಂಗಾರಗೊಂಡು ಭಕ್ತರ ಸಮ್ಮುಖದಲ್ಲಿ ನೃತ್ಯ ಮಾಡುವುದೇ ವಿಶೇಷ. ನಂತರ ರಥದಲ್ಲಿ ಕುಳಿತ ಬಳಿಕವೇ ಶುರುವಾಗೋದು ಮಿನಿ ತಿರುಪತಿಯ ಅಸಲಿ ಕಹಾನಿ.

Vastu Tips: ಈ ದಿಕ್ಕಿನಲ್ಲಿ ಗೋಡೆ ಗಡಿಯಾರವಿದ್ದರೆ ಸಂಪತ್ತನ್ನು ಆಕರ್ಷಿಸುತ್ತದೆ!

ಇಡೀ ಚಿತ್ರದುರ್ಗ ಜಿಲ್ಲೆಯಲ್ಲೇ ದೇವರ ಮೇಲೆ ನಾಣ್ಯಗಳ ರಾಶಿಯನ್ನು ತೂರಿಸಿಕೊಳ್ಳುವ ಏಕೈಕ ದೇವರು ಅಂದ್ರೆ ಅದು ಶ್ರೀ‌ ಕಂಚೀ ವರದರಾಜ ಸ್ವಾಮಿ. ಸ್ವಾಮಿಯ ದರ್ಶನಕ್ಕೆ ಆಗಮಿಸುವ ಸಾವಿರಾರು ಭಕ್ತರೆಲ್ಲರೂ ದೇವರಿಗೆ ಲಕ್ಷಾಂತರ ರೂಪಾಯಿ ಹಣದ ನಾಣ್ಯಗಳನ್ನು ತೂರುತ್ತಾರೆ. ನಾಣ್ಯ ಎರಚಿಸಿಕೊಳ್ಳುವುದರಿಂದಲೇ ಅತಿ ಹೆಚ್ಚು ಪ್ರಸಿದ್ದಿ ಆಗಿದೆ ಕಂಚಿ ವರದ. ತಮ್ಮ ಇಷ್ಟಾರ್ಥ ಸೇವೆಗಳು ಈಡೇರುತ್ತವೆ ಎಂಬ ನಂಬಿಕೆಯಿಂದ ರಾಜ್ಯ ಹೊರ ರಾಜ್ಯಗಳಿಂದಲೂ ಈತನ ಸನ್ನಿಧಿಗೆ ಭಕ್ತರು ಆಗಮಿಸ್ತಾರೆ. ಎತ್ತ ನೋಡಿದರತ್ತ ಭಕ್ತರು ರಥದ ಮೇಲೆ ಕುಳಿತಿರುವ ಕಂಚೀ ವರದನಿಗೆ‌ ಕೆಜಿಗಟ್ಟಲೆ ಲಕ್ಷಾಂತರ ನಾಣ್ಯಗಳನ್ನು ತೂರುತ್ತಾರೆ. ಅಲ್ಲೇ ಇರುವ ಭಕ್ತರು ಆ ನಾಣ್ಯಗಳನ್ನು ಆರಿಸಿಕೊಳ್ಳುತ್ತಾರೆ. ಜೊತೆಗೆ ರಥದ ಮೇಲೆ ಪೂಜಾರಿ ವಂಶಸ್ಥರು ಕೂಡ ನಾಣ್ಯಗಳನ್ನು ಕ್ರೋಢೀಕರಿಸಲು ಕೂತಿರುತ್ತಾರೆ.

ಭಕ್ತರು ತೂರಿದ ನಾಣ್ಯಗಳನ್ನು ಎತ್ತಿಕೊಂಡವರು ಅಲ್ಲೇ ಖರ್ಚು ಮಾಡಬೇಕು. ತನ್ನ ಸನ್ನಿಧಿಗೆ ಬಂದ ಭಕ್ತರಿಗೆ ಯಾವುದೇ ಸಮಸ್ಯೆ ಆಗದಂತೆ ಸ್ವಾಮಿ ಕಾಪಾಡುತ್ತಾನೆ. ತನ್ನ ಮೇಲೆ ಭಕ್ತರು ಲಕ್ಷಾಂತರ ನಾಣ್ಯಗಳ ರಾಶಿ ಸುರಿದ್ರೂ, ಅದು ತಮ್ಮ ಭಕ್ತರಿಗೆ ಸೇರಬೇಕು ಎಂಬುದು ಸ್ವಾಮಿಯ ಇಚ್ಚೆ. ಅದರಂತೆ ನಾಣ್ಯ ಆರಿಸಿಕೊಂಡ ಎಲ್ಲ ಭಕ್ತರು ಅದೇ ಸನ್ನಿಧಿಯಲ್ಲಿ ಆ ಹಣವನ್ನು ತಮ್ಮ ಇಷ್ಟಾರ್ಥ ಗಳಿಗೆ ಖರ್ಚು ಮಾಡಿಕೊಂಡು ತೆರಳುತ್ತಾರೆ.

ಒಟ್ಟಾರೆಯಾಗಿ ಜಿಲ್ಲೆಯಲ್ಲೇ ಮಿನಿ‌ ತಿರುಪತಿ ಎಂದು ಪ್ರಸಿದ್ದಿ ಪಡೆದಿರೋ ಕಂಚೀ ವರದರಾಜನ ಸನ್ನಿಧಿಯಲ್ಲಿ ಬ್ರಹ್ಮ ರಥೋತ್ಸವ ಅದ್ದೂರಿಯಾಗಿ ನಡೆಯಿತು.

PREV
Read more Articles on
click me!

Recommended Stories

2026 ರಲ್ಲಿ ಈ 4 ರಾಶಿ ಜೀವನದಲ್ಲಿ ಪ್ರಮುಖ ಬದಲಾವಣೆ
ಜೆನ್‌ ಜೀ ಮನಗೆದ್ದ ಭಗವದ್ಗೀತೆ: ಏನಿದರ ಗುಟ್ಟು?