ಹೊರನಾಡಿನ ಮಾತೆ ಅನ್ನಪೂರ್ಣೇಶ್ವರಿ ದುರ್ಗೆಯ ಮಕರರೂಢಾ ಸ್ಕಂದಮಾತಾ ಅಲಂಕಾರದೊಂದಿಗೆ ಕಂಗೊಳಿಸಿದಳು.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಸೆ.30): ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ನವರಾತ್ರಿ ಸಂಭ್ರಮ ಮನೆಮಾಡಿದೆ. ಅದರಲ್ಲೂ ಧಾರ್ಮಿಕ ಕ್ಷೇತ್ರವಾದ ಶೃಂಗೇರಿ ಹಾಗೂ ಹೊರನಾಡಿನಲ್ಲಿ ನವರಾತ್ರಿ ಸಂಭ್ರಮ ಕಳೆಕಟ್ಟಿದ್ದು ಭಕ್ತ ಸಾಗರವೇ ಹರಿದುಬರುತ್ತಿದೆ.
undefined
ಮಕರರೂಢಾ ಅಲಂಕಾರ
ನವರಾತ್ರಿಯ ಐದನೇ ದಿನವಾದ ಇಂದು(ಶುಕ್ರವಾರ) ಹೊರನಾಡಿನ ಮಾತೆ ಅನ್ನಪೂರ್ಣೇಶ್ವರಿ ದುರ್ಗೆಯ ಮಕರರೂಢಾ ಸ್ಕಂದಮಾತಾ ಅಲಂಕಾರದೊಂದಿಗೆ ಕಂಗೊಳಿಸಿದಳು. ವಿವಿಧ ಹೂಗಳ ಅಲಂಕಾರ ಆಭರಣಗಳಿಂದ ಕಂಗೊಳಿಸಿದ ಅನ್ನಪೂರ್ಣೇಶ್ವರಿಯನ್ನು ಕಣ್ತುಂಬಿಸಲು ರಾಜ್ಯ ಹೊರರಾಜ್ಯಗಳಿಂದ ನೂರಾರು ಭಕ್ತರು ಬಂದು ಕಣ್ತುಂಬಿಸಿಕೊಂಡರು.ಕಷ್ಟ ಕಾಲಕ್ಕೆ ಹೇಳಿಕೊಂಡಿದ ಹರಕೆಗಳನ್ನು ಭಕ್ತರು ತೀರಿಸಿಕೊಂಡರು. ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಸಪ್ತಶತಿ ಪಾರಾಯಣ, ವೇದ ಪಾರಾಯಣ,ಸುಂದರಕಾಂಡ ಪಾರಾಯಣ,ಕುಂಕುಮಾರ್ಚನೆ ಮತ್ತು ಶ್ರೀ ಲಲಿತಾ ಮೂಲಮಂತ್ರ ಹೋಮ ನಡೆಯಿತು.ಹೋಮದ ಪೂರ್ಣಾಹುತಿಯನ್ನು ಧರ್ಮಕರ್ತ ಡಾ|ಜಿ.ಭೀಮೇಶ್ವರ ಜೋಷಿ ದಂಪತಿಗಳು ನೆರವೇರಿಸಿದರು.
ರಾಮನಗರ: ಮನೆ ಮನೆಗಳಲ್ಲಿ ರಾರಾಜಿಸುತ್ತಿರುವ ದಸರಾ ಬೊಂಬೆಗಳು..!
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಮಹೇಂದ್ರ ಘೋರೆ ತಂಡ ಶಿವಮೊಗ್ಗ ಇವರಿಂದ ಸುಗಮ ಸಂಗೀತ, ಸಂಜೆ ಭರತಾಂಜಲಿ ನೃತ್ಯ ತಂಡ ಬೆಂಗಳೂರು ಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.ಅಕ್ಟೋಬರ್ 1 ರಂದು ಮಯೂರಾರೂಢಾ ಕಾತ್ಯಾಯಿನೀ ಅಲಂಕಾರ ಪೂಜೆ, ಶ್ರೀ ಸರಸ್ವತಿ ಮೂಲಮಂತ್ರ ಹೋಮ, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಗಿ ಬೆಳಿಗ್ಗೆ ಜಿ.ಎಂ.ಸೌಮ್ಯ ಉಪಾಧ್ಯಾಯ ತಂಡ ಬೆಂಗಳೂರು ಇವರಿಂದ ದೇವರ ನಾಮ, ನೃತ್ಯ ವಿದ್ಯಾ ನಿಲಯ ಬೆಂಗಳೂರು ಇವರಿಂದ ಭರತನಾಟ್ಯ ನಡೆಯಲಿದೆ.
ಶೃಂಗೇರಿಯಲ್ಲಿ ಗುರುಡ ವಾಹನಲಂಕರ
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದೆಯ ಸನ್ನಿಧಿಯಲ್ಲಿ ಅದ್ಧೂರಿಯಾಗಿ ನವರಾತ್ರಿಯ ಆಚರಣೆ ನಡೆಯುತ್ತಿದ್ದು 5ದಿನವಾದ ಇಂದು ಜಗನ್ಮಾತೆ ಶಾರದೆ ಗುರುಡ ವಾಹನ ಅಲಂಕಾರದಲ್ಲಿ ಅನುಗ್ರಹಿಸಿದ್ದಾಳೆ. ಇಂದು ಸಂಜೆ ದೇವಿಯ ರಾಜ ಬೀದಿ ಉತ್ಸವ ನಡೆಯಲಿದ್ದು ಭಕ್ತಾದಿಗಳು ಪಾಲ್ಗೊಳ್ಳಲಿದ್ದಾರೆ.