ರಾಮನಗರ: ಮನೆ ಮನೆಗಳಲ್ಲಿ ರಾರಾಜಿಸುತ್ತಿರುವ ದಸರಾ ಬೊಂಬೆಗಳು..!

By Girish Goudar  |  First Published Sep 30, 2022, 10:02 PM IST

ಹಬ್ಬದ ಪ್ರಯುಕ್ತ ಮನೆಯಲ್ಲಿ ವಿಶೇಷವಾದ ಬೊಂಬೆಗಳನ್ನ ಕೂರಿಸಿ ಪೂಜಿಸುವ ಮಹಿಳೆಯರು  


ವರದಿ- ಜಗದೀಶ್, ಏಷ್ಯಾನೆಟ್ ಸುವರ್ಣನ್ಯೂಸ್, ರಾಮನಗರ

ರಾಮನಗರ(ಸೆ.30): ನಾಡಹಬ್ಬ ದಸರಾ ಈ ಬಾರಿ ನಾಡಿನೆಲ್ಲೆಡೆ ವಿಜೃಂಭಣೆಯಿಂದ ನಡೆಯುತ್ತಿದೆ. ಅದರಲ್ಲೂ ನವರಾತ್ರಿ ಪ್ರಮುಖ ಆಕರ್ಷಣೆ ಅಂದರೆ ದಸರಾ ಬೊಂಬೆಗಳು. ಹೆಣ್ಣು ಮಕ್ಕಳು ಮನೆಯಲ್ಲಿ ದಸರಾ ಬೊಂಬೆಗಳನ್ನ ಮನೆಯಲ್ಲಿ ಕೂರಿಸಿ ವಿಶೇಷವಾಗಿ ಪೂಜೆ ಮಾಡುತ್ತಾರೆ. ಈ ಕುರಿತು ಒಂದು ವರದಿ. 

Tap to resize

Latest Videos

ಮನೆಯಲ್ಲಿ ಕೂರಿಸಿರೋ ವಿವಿಧ ಬಗೆಯ ಬೊಂಬೆಗಳು. ಪಟ್ಟದ ಬೊಂಬೆಗಳು, ಸರಸ್ವತಿ, ಲಕ್ಷಿ, ನವದುರ್ಗೆಯರು. ಬೊಂಬೆಗಳ ಮಧ್ಯೆ ಪ್ರತಿಷ್ಠಾಪನೆ ಆಗಿರೋ ಅಪ್ಪು ಪ್ರತಿಮೆ. ಅಂದಹಾಗೆ ಇಂತಹ ದೃಶ್ಯಕಂಡು ಬಂದಿದ್ದು, ರೇಷ್ಮೆನಗರಿ ರಾಮನಗರದಲ್ಲಿ.  ಹೌದು ನಾಡಿನೆಲ್ಲಡೆ ಈ ಬಾರಿ ದಸರಾ ಕಳೆಗಟ್ಟಿದೆ. ಈ ಬಾರಿ ದಸರಾವನ್ನ ಅದ್ದೂರಿಯಾಗಿ ಎಲ್ಲೆಡೆ ಆಚರಣೆ ಮಾಡಲಾಗುತ್ತಿದೆ. ಅದರಲ್ಲೂ ನವರಾತ್ರಿ ಸಂದರ್ಭದಲ್ಲಿ ಮನೆಯಲ್ಲಿ ದಸರಾ ಬೊಂಬೆಗಳನ್ನ ಕೂರಿಸಿ ಮಹಿಳೆಯರು ಪೂಜೆ ಸಲ್ಲಿಸುವುದು ವಾಡಿಕೆ. ಅದೇ ರೀತಿ ರೇಷ್ಮೆನಗರಿ ರಾಮನಗರದಲ್ಲೂ ಹಲವು ಮನೆಗಳಲ್ಲಿ ದಸರಾ ಬೊಂಬೆಗಳು ರಾರಾಜಿಸುತ್ತಿವೆ. ನವರಾತ್ರಿ ಅಂಗವಾಗಿ ಮನೆಯಲ್ಲಿ ವಿವಿಧ ಬಗೆಯ ಬೊಂಬೆಗಳನ್ನ ಕೂರಿಸಿ ಮಹಿಳೆಯರು ಪೂಜೆ ಸಲ್ಲಿಸುತ್ತಿದ್ದಾರೆ. ಪಟ್ಟದ ಬೊಂಬೆ, ಅಷ್ಟ ಲಕ್ಷಿಯರು, ಆನೆಗಳು, ಪ್ರಾಣಿಗಳು ಹೀಗೆ ವಿವಿಧ ಬಗೆಯ ಬೊಂಬೆಗಳು ಎಲ್ಲರನ್ನ ಆಕರ್ಷಣೆ ಮಾಡುತ್ತಿವೆ.

ನವರಾತ್ರಿ ಹಬ್ಬಕ್ಕೆ ಇಲ್ಲಿ ಪುರುಷರೂ ಸೀರೆಯುಟ್ಟು ಡ್ಯಾನ್ಸ್ ಮಾಡ್ತಾರೆ ! 

ಅಂದಹಾಗೆ ಹಳೆ ಮೈಸೂರು ಭಾಗದಲ್ಲಿ ದಸರಾ ಸಂದರ್ಭದಲ್ಲಿ ಮನೆಗಳಲ್ಲಿ ನೂರಾರು ಬೊಂಬೆಗಳನ್ನ ಕೂರಿಸಿ ಪೂಜಿಸುತ್ತಾರೆ. ಇನ್ನು ನಾವು ಮನೆಗಳಲ್ಲಿ ಬೊಂಬೆಗಳನ್ನ ಕೂರಿಸುತ್ತೇವೆ. ಅಕ್ಕಪಕ್ಕದ ಮನೆಯವರೂ ಕೂಡ ಬಂದು ವಿಶೇಷವಾದ ಬೊಂಬೆಗಳನ್ನ ನೋಡಿ

ನಮಸ್ಕರಿಸುತ್ತಾರೆ. ಆದರೆ ರಾಮನಗರದ ಶರತ್ ಮೆಮೋರಿಯಲ್ ಶಾಲೆಯಲ್ಲೂ ಕೂಡ ನೂರಾರು ಬೊಂಬೆಗಳನ್ನ ಕೂರಿಸಲಾಗಿವೆ. ಎಲ್ಲ ಮಕ್ಕಳಿಗೂ ಮೈಸೂರಿಗೆ ಹೋಗಿ ದಸರಾವನ್ನ ಕಣ್ಣುತುಂಬಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಶಾಲೆಯಲ್ಲಿ ಕೂರಿಸಿ ಒಂಬತ್ತು ದಿನಗಳು ಹಬ್ಬದ ವಾತಾವರಣವನ್ನ ನಿರ್ಮಾಣ ಮಾಡಲಾಗಿದೆ. ಒಟ್ಟಾರೆ ನಾಡಿನೆಲ್ಲೆಡೆ ದಸರಾ ಹಬ್ಬ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ಹಬ್ಬದ ಪ್ರಯುಕ್ತ ಮಹಿಳೆಯರು ಕೂಡ ಮನೆಯಲ್ಲಿ ವಿಶೇಷವಾದ ಬೊಂಬೆಗಳನ್ನ ಕೂರಿಸಿ ಪೂಜಿಸುತ್ತಿದ್ದಾರೆ.
 

click me!