ಗೋ ಕಳ್ಳರ ಪಾಲಾಗಿ ಪವಾಡ ಎನ್ನುವ ರೀತಿಯಲ್ಲಿ ಮತ್ತೆ ದೇವಾಲಯಕ್ಕೆ ಸೇರಿಕೊಂಡಿರುವ ಬಸವನಿಗಾಗಿ ಭಕ್ತರು ಇಂದು ಉತ್ಸವವನ್ನು ಚಿಕ್ಕಮಗಳೂರು ಜಿಲ್ಲೆಯ ಬೀರೂರಿನಲ್ಲಿ ಮಾಡಿದ್ದಾರೆ.
ಚಿಕ್ಕಮಗಳೂರು (ಜು.14): ಗೋ ಕಳ್ಳರ ಪಾಲಾಗಿ ಪವಾಡ ಎನ್ನುವ ರೀತಿಯಲ್ಲಿ ಮತ್ತೆ ದೇವಾಲಯಕ್ಕೆ ಸೇರಿಕೊಂಡಿರುವ ಬಸವನಿಗಾಗಿ ಭಕ್ತರು ಇಂದು ಉತ್ಸವವನ್ನು ಚಿಕ್ಕಮಗಳೂರು ಜಿಲ್ಲೆಯ ಬೀರೂರಿನಲ್ಲಿ ಮಾಡಿದ್ದಾರೆ. ಇತ್ತೀಚಿಗೆ ಕಳ್ಳತನವಾಗಿ ಮತ್ತೆ ಪೋಲೀಸರ ಸಹಕಾರದಿಂದ ಪತ್ತೆಯಾಗಿ ದೇವಾಲಯಕ್ಕೆ ಹಿಂದಿರುಗಿದ ನಡೆದಾಡುವ ಮೈಲಾರಲಿಂಗ ಖ್ಯಾತಿಗೆ ಪ್ರಸಿದ್ದಿಯಾಗಿದ್ದ ಮುದ್ರೆ ಹಾಕಿದ್ದ ಬಸವಣ್ಣನನ್ನು ದೇವಾಲಯ ಸಮಿತಿ ಹಾಗೂ ಭಂಡಾರದಯ್ಯನ ಭಕ್ತರು ಸಾರ್ವಜನಿಕರ ಒತ್ತಾಸೆ ಮೇರೆಗೆ ಬಸವಣ್ಣನನ್ನು ರಾಜಬೀದಿ ಉತ್ಸವವನ್ನು ನಡೆಸಿದ್ದಾರೆ.
ಉತ್ಸವಕ್ಕೆ ಮೆರಗು ತಂದ ವಿವಿಧ ಜಾನಪದ ಕಲಾತಂಡ: ಚಿಕ್ಕಮಗಳೂರು ಜಿಲ್ಲೆಯ ಬೀರೂರಿನ ಮೈಲಾರಲಿಂಗಸ್ವಾಮಿಗೆ ಬಸವ ಸಿಕ್ಕಿರುವ ಹಿನ್ನೆಲೆಯಲ್ಲಿ ವಿಶೇಷ ರುದ್ರಾಭಿಷೇಕ ನಡೆಯಿತು. ತದನಂತರ ಬಸವಣ್ಣನಿಗೆ ವಿಶೇಷ ಅಲಂಕಾರ ಮಾಡಿ ರಾಜಬೀದಿ ಉತ್ಸವವನ್ನು ಮಾಡಲಾಯಿತು. ಚಿತ್ರದುರ್ಗದ ಮೈಲಾರಲಿಂಗನ ಗೊರವರ ಕೊಳಲು ಮತ್ತು ಡಮಾರುಗದ ವಾದನದ ನರ್ತನ, ಚಿಟ್ಟಿಮೇಳ, ವೀರಗಾಸೆ, ಗೊಂಬೆಮೇಳ, ಕರಡೇ ವಾದನ, ಡ್ರಮ್ ಸೆಟ್ ಸೇರಿದಂತೆ ವಿವಿಧ ವಾದ್ಯಗಳು ಉತ್ಸವಕ್ಕೆ ಮೆರಗು ನೀಡಿದವು.
Chikkamagaluru: ಮಲೆನಾಡಿನಲ್ಲಿ ಮುಂದುವರಿದ ಮಳೆ ಅಬ್ಬರ: ಶೃಂಗೇರಿಯಲ್ಲಿ ಶಾಲೆಗಳಿಗೆ ರಜೆ
ಮೆರಗು ನೀಡಿದ ಗೊರವಪ್ಪನವರ ಕುಣಿತ: ರಾಜ ಬೀದಿ ಉತ್ಸವ ಬೀರೂರಿನ ಮಹಾತ್ಮ ಗಾಂಧಿ ವೃತ್ತಕ್ಕೆ ಬಸವಣ್ಣ ಆಗಮಿಸಿದಾಗ ಭಕ್ತಾದಿಗಳು ಕಟುಕರ ಕೈಯಿಂದ ಮತ್ತೆ ದೇವಾಲಯಕ್ಕೆ ಆಗಮಿಸಿದ ಸ್ವಾಮಿಗೆ ಕೇಕ್ ತಂದು ಕತ್ತರಿಸಿ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿ ನೆರೆದಿದ್ದ ಜನರಿಗೆ ಹಂಚಿದರು. ಬಸವಣ್ಣ ಮೆರವಣಿಗೆಯಲ್ಲಿ ಗೊರವಪ್ಪನವರ ಕುಣಿತ ಮೆರಗು ನೀಡಿತ್ತು. ಮಹಾತ್ಮಾ ಗಾಂಧಿ ವೃತ್ತಕ್ಕೆ ಆಗಮಿಸಿದಾಗ ಭಕ್ತರು ಹಣ್ಣು ತುಪ್ಪ ಹಾಕಿ ಬಾಳೆಹಣ್ಣಿನ ರಾಶಿ ಹಾಕಿದಾಗ ಬಸವಣ್ಣನನ್ನು (ಎತ್ತು) ನೋಡಲು ಗ್ರಾಮೀಣ ಪ್ರದೇಶಗಳಿಂದ ಆಗಮಿಸಿದ್ದ ಭಕರು ಗೊರವರ ಕುಣಿತ ಕಂಡು ಸಂತಸ ವ್ಯಕ್ತಪಡಿಸಿದರು. ಪ್ರಸಾದ ಪಡೆದು ಮೈಲಾರಲಿಂಗನಿಗೆ ಜೈಕಾರ ಹಾಕಿದರು. ರಾಷ್ಟೀಯ ಹೆದ್ದಾರಿಯಲ್ಲಿ ಉತ್ಸವ ಹಾದು ಬರುವಾಗ ಪುರಸಭೆ ವತಿಯಿಂದ ಬಸವಣ್ ನಿಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಆಶೀರ್ವಾದ ಪಡೆದರು.
ಕಾಣೆಯಾಗಿದ್ದ ಬಸವನನ್ನು ಹುಡುಕಿ ದೇವಾಲಯಕ್ಕೆ ಒಪ್ಪಿಸಿದ ಪೊಲೀಸರು: ಗೋ ಕಳ್ಳರ ಪಾಲಾಗಿದ್ದ ಬಸವ (ಎತ್ತು) ಪವಾಡ ಎನ್ನುವ ರೀತಿಯಲ್ಲಿ ಸ್ವಗ್ರಾಮವನ್ನು ಸೇರಿಕೊಂಡಿದೆ. ಕಾಣೆಯಾಗಿದ್ದ ಬಸವ ಮತ್ತೆ ಗ್ರಾಮಕ್ಕೆ ಬಂದ ವೇಳೆಯಲ್ಲಿ ಭಕ್ತರು, ಗ್ರಾಮಸ್ಥರು ಭರ್ಜರಿಯಾಗಿ ಸ್ವಾಗತ ಕೋರಿದ್ದಾರೆ.
ಮೈಲಾರಲಿಂಗ ಸ್ವಾಮಿಯ ಬಸವನಿಗೆ ಭರ್ಜರಿ ಸ್ವಾಗತ: ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಬೀರೂರಿನ ಮೈಲಾರಲಿಂಗ ಸ್ವಾಮಿ ದೇವಸ್ಥಾನದಲ್ಲಿಯೇ ಇದ್ದ ಬಸವ (ಎತ್ತು) ಕಳೆದ 10 ದಿನಗಳ ಹಿಂದೆ ಕಾಣೆಯಾಗಿತ್ತು. ಈ ಬಗ್ಗೆ ಗ್ರಾಮಸ್ಥರು ಆತಂಕಕ್ಕೆ ಒಳಾಗಿದ್ದರು. ಅಲ್ಲದೆ ಬಸವನಿಗಾಗಿ ಹುಡುಕಾಟ ನಡೆಸಿ ಬೀರೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಸವ ಕಾಣೆಯಾಗ್ತಾ ಇದ್ದಂತೆ ಭಕ್ತರಲ್ಲಿ ಆತಂಕ ಮೂಡಿಸಿತ್ತು. ಆದ್ರೆ ಗೋ ಕಳ್ಳರ ಪಾಲಾಗಿದ್ದ ಮೈಲಾರಲಿಂಗ ಸ್ವಾಮಿಯ ಬಸವವನ್ನು ಪೊಲೀಸರು ಹುಡುಕಿ ಕೊಟ್ಟಿದ್ದಾರೆ. ತುಮಕೂರು ಜಿಲ್ಲೆಯ ಅಮೃತೂರಿನಲ್ಲಿ ಗೋ ಕಳ್ಳರ ವಿರುದ್ದ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಬೀರೂರಿನ ಬಸವ ಸಿಕ್ಕಿದೆ.
ಚಿಕ್ಕಮಗಳೂರು ನೆರೆ ಪ್ರದೇಶಗಳಿಗೆ ಸಚಿವೆ ಶೋಭಾ ಕರಂದ್ಲಾಜೆ ಭೇಟಿ: ಪರಿಶೀಲನೆ
ಕಳೆದ 10 ದಿನಗಳ ಹಿಂದೆ ಬೀರೂರು ಪಟ್ಟಣದ ಸರಸ್ವತಿಪುರಂ ಬಡಾವಣೆಯ ಶ್ರೀ ಮೈಲಾರ ಲಿಂಗಸ್ವಾಮಿಗೆ ಬಿಟ್ಟಿದ್ದ ಬಸವಣ್ಣನನ್ನು ಬೀರೂರು ಪೋಲಿಸರು ದೇವಾಲಯ ಸಮಿತಿಗೆ ಹಸ್ತಾಂತರಿಸಿದರು. ಬಸವಣ್ಣ ಕಾಣೆಯಾಗಿ, ನಂತರ ಕುಣಿಗಲ್ ತಾಲ್ಲೂಕಿನ ಅಮೃತೂರಿನಲ್ಲಿ ಪತ್ತೆಯಾಗಿತ್ತು. ಪತ್ತೆಯಾಗಿದ್ದ ಬಸವಣ್ಣನನ್ನು ಅಮೃತ್ತೂರು ಪೊಲೀಸರು ಮೈಸೂರಿನ ಪಿಂಜಾರಪೋಲ್ ಗೋಶಾಲೆಗೆ ಬಿಟ್ಟಿದ್ದರು .ಪೊಲೀಸ್ ಮಾಹಿತಿ ಮೇರೆಗೆ ದೇವಾಲಯ ಸಮಿತಿಯವರು ಬಸವಣ್ಣನ್ನನು ಕರೆ ತರಲು ಮೈಸೂರಿಗೆ ತೆರಳಿ ಮಂಗಳವಾರ ಫಿಕಪ್ ಮೂಲಕ ಬೀರೂರಿಗೆ ಆಗಮಿಸಿದ್ದಾರೆ.