ಈ ಐದು ಪ್ರಾಣಿಗಳು ಸಾವಿನ ಮುನ್ಸೂಚನೆ ನೀಡುತ್ತವೆ.. ಅವುಗಳ ಶಕುನಗಳು ಅಶುಭ..!

By Sushma Hegde  |  First Published Jan 8, 2024, 1:05 PM IST

ಆದಿ ಸಾಮಾನ್ಯವಾದಿಗಳು ಸಾವಿನ ಬಗ್ಗೆ  ದೀರ್ಘಕಾಲ ತನಿಖೆ ಮಾಡಿದ್ದಾರೆ. ಇದರ ಪ್ರಕಾರ ಸಾವನ್ನು ಮುನ್ಸೂಚಿಸಬಲ್ಲ ಅನೇಕ ಪ್ರಾಣಿಗಳನ್ನು ಗುರುತಿಸಿದ್ದಾರೆ.


ಅಧಿಸಾಮಾನ್ಯವಾದಿಗಳು ಸಾವಿನ ಬಗ್ಗೆ  ದೀರ್ಘಕಾಲ ತನಿಖೆ ಮಾಡಿದ್ದಾರೆ. ಇದರ ಪ್ರಕಾರ ಸಾವನ್ನು ಮುನ್ಸೂಚಿಸಬಲ್ಲ ಅನೇಕ ಪ್ರಾಣಿಗಳನ್ನು ಗುರುತಿಸಿದ್ದಾರೆ.ಹುಟ್ಟು, ಸಾವು, ಮದುವೆ... ಯಾವಾಗ ಏನಾಗುತ್ತದೆ ಎಂದು ಯಾರೂ ಹೇಳಲಾರರು. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ಪ್ರಾಣಿಗಳು ಮನುಷ್ಯನ ಸಾವಿನ ಸುದ್ದಿಯನ್ನು ಮುಂತಿಳಿಸುತ್ತವೆ. ಅಧಿಸಾಮಾನ್ಯವಾದಿಗಳು ಇದನ್ನು ದೀರ್ಘಕಾಲ ತನಿಖೆ ಮಾಡಿದ್ದಾರೆ. ಇದರ ಪ್ರಕಾರ ಸಾವನ್ನು ಮುನ್ಸೂಚಿಸಬಲ್ಲ ಅನೇಕ ಪ್ರಾಣಿಗಳಿವೆ.

ಸಂಸ್ಕಾರದ ಪ್ರಕಾರ ನಾಯಿಗಳು ಸಾವನ್ನು ಮೊದಲೇ ಗ್ರಹಿಸಬಲ್ಲವು ಎನ್ನುತ್ತಾರೆ. ಯಾರದೋ ಸಾವು ಹತ್ತಿರವಾಗಿದೆ ಎಂದು ತಿಳಿದಾಗ ನಾಯಿಗಳು ಅಳುವರೀತಿಯಲ್ಲಿ ಕೂಗಲು ಪ್ರಾರಂಭಿಸುತ್ತವೆ. ಹಾಗಾಗಿ  ಮನೆಯಲ್ಲಿನ  ಹಿರಿಯರು ನಾಯಿ ಅಳುವ ರೀತಿಯಲ್ಲಿ ಕೋಗಿದರೆ ಒಳ್ಳೆಯದಲ್ಲ ಎನ್ನುತ್ತಾರೆ . ಪ್ರಾಚೀನ ಕಾಲದಿಂದಲೂ ಬೆಕ್ಕುಗಳು ಸಾವನ್ನು ಮುನ್ಸೂಚಿಸುತ್ತವೆ ಎಂದು ನಂಬಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಎರಡು ಬೆಕ್ಕುಗಳು ಕಾದಾಡುವುದು ಜಗಳ ಮಾಡುವುದು ಒಳ್ಳೆಯದಲ್ಲ. ಬೆಕ್ಕುಗಲು ಹೀಗೆ ಕಚ್ಚಾಡುವುದನ್ನು ಸಾವನ್ನು ಊಹಿಸುವ ಸಂಕೇತವೆಂದು ಹೇಳುತ್ತಾರೆ.

Tap to resize

Latest Videos

30 ವರ್ಷ ನಂತರ ಶನಿ ಹಿಮ್ಮುಖ, ಈ ಮೂರು ರಾಶಿಗೆ ದಿಢೀರ್ ಸಂಪತ್ತು ಸಿಗುತ್ತದೆಯೇ? ಜೂನ್‌ ನಿಂದ ಮೂರು ರಾಶಿಗೆ ಅದೃಷ್ಟ

 

ಅದಲ್ಲದೆ ಕಪ್ಪು ಚಿಟ್ಟೆ ಸಾವಿನ ಸಂದೇಶವಾಹಕ ಎಂದು ಹಳೆಯ ಕಾಲದಿಂದಲು ವಿದ್ವಾಂಸರು ಹೇಳುತ್ತಾರೆ. ಕಪ್ಪು ಚಿಟ್ಟೆ ವಾಸ್ತವವಾಗಿ ಒಂದು ಚಿಟ್ಟೆ. ಆದರೆ ರಾತ್ರಿಯ ಕತ್ತಲೆಯಲ್ಲಿ ಈ ಕಪ್ಪು ಚಿಟ್ಟೆ ಹಾರುವುದನ್ನು ಅನೇಕರು ಹಿರಿಯರು ಅಶುಭ ಶಕುನವೆಂದು ಪರಿಗಣಿಸುತ್ತಾರೆ. ಅದಲ್ಲದೆ ಹಗಲಿನಲ್ಲಿ ನರಿ ಮನೆಗೆ ಬಂದರೆ ಆ ಮನೆಯಲ್ಲಿ ಯಾರಾದರೂ ಸಾಯುತ್ತಾರೆ ಎಂಬ ನಂಬಿಕೆ ಇದೆ. ನರಿಗಳು ಸಾಮಾನ್ಯವಾಗಿ ಹಗಲಿನಲ್ಲಿ ಕಂಡುಬರುವುದಿಲ್ಲ ಮತ್ತು ನರಿಗಳು ಮಾನವ ವಾಸಸ್ಥಳದಿಂದ ದೂರವಿರುತ್ತವೆ. ಆದ್ದರಿಂದ, ಹಗಲಿನಲ್ಲಿ ನರಿಯು ಮನೆಗೆ ಪ್ರವೇಶಿಸುವುದನ್ನು ಸಾವು ಎಂದು ಪರಿಗಣಿಸಲಾಗುತ್ತದೆ.

ಬಾವಲಿಗಳು ಸಾವಿನ ಸುದ್ದಿಯನ್ನು ತರುತ್ತವೆ ಎಂದು ಹಲವರು ಬಲವಾಗಿ ನಂಬುತ್ತಾರೆ. ದಕ್ಷಿಣ ಅಮೆರಿಕಾದ ಮಾಯಾ ಮತ್ತು ಅಜ್ಟೆಕ್ ನಾಗರಿಕತೆಗಳಲ್ಲಿ, ಬಾವಲಿಗಳು ಸಾವಿನ ಸಂದೇಶವಾಹಕರೆಂದು ಪರಿಗಣಿಸಲ್ಪಟ್ಟವು.ಕಾಗೆ ಹಾರುವಾಗ ತಲೆಗೆ ತಾಗಿದರೆ ಮಾತ್ರ ಅದು ಅಪಶಕುನ. ಇದರಿಂದ ದೇಹಸ್ಥಿತಿ ತೀವ್ರವಾಗಿ ಹದಗೆಡುತ್ತದೆ, ಆರ್ಥಿಕ ಸಂಕಷ್ಟದಿಂದ ಜೀವನವು ಅಧೋಗತಿಗೆ ಇಳಿಯಬಹುದು.ಹಾಗೇ  ನಿಮ್ಮ ಕನಸಿನಲ್ಲಿ ಕಾಗೆ ಕಾಣಿಸಿಕೊಂಡರೆ ಇದು ಒಂದು ಕೆಟ್ಟ ಘಟನೆ ನೆಡೆಯುವ ಮುನ್ಸೂಚನೆ.

click me!