ನಿಜವಾದ ಪ್ರೀತಿ ದೊರೆಯೋಕೆ ನಿಮಗೆ ಎಷ್ಟು ವರ್ಷವಾಗಿರ್ಬೇಕು ಗೊತ್ತಾ?

By Suvarna News  |  First Published Jan 7, 2024, 4:53 PM IST

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಾವು ಜನಿಸುವ ಸಮಯದಲ್ಲಿದ್ದ ಗ್ರಹಗಳ ಸ್ಥಾನ, ಚಲನೆಗಳು ವ್ಯಕ್ತಿಯ ರೋಮ್ಯಾಂಟಿಕ್ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಪ್ರತಿಯೊಂದೂ ರಾಶಿಯೂ ಅದರದ್ದೇ ಆದ ವ್ಯಕ್ತಿತ್ವ ಹೊಂದಿರಲು ಆ ರಾಶಿಯ ಅಧಿಪತ್ಯ ಹೊಂದಿರುವ ಗ್ರಹ, ಅದರಿಂದಾಗುವ ಪ್ರಭಾವದ ಪಾತ್ರವೇ ಹೆಚ್ಚಾಗಿರುತ್ತದೆ. 


ನಿಜವಾದ ಪ್ರೀತಿ-ಪ್ರೇಮ ಯಾವಾಗ ದೊರೆಯುತ್ತದೆ, ನಮ್ಮ ಆತ್ಮಸಂಗಾತಿ ಯಾರು, ಯಾರನ್ನು ನಿಜವಾದ ಸೋಲ್ ಮೇಟ್ ಎಂದು ನಂಬಬೇಕು? ಇವೆಲ್ಲ ಮಿಲಿಯನ್ ಡಾಲರ್ ಪ್ರಶ್ನೆಗಳು. ಏಕೆಂದರೆ, ಇವುಗಳಿಗೆಲ್ಲ ನಿರ್ದಿಷ್ಟವಾದ ಉತ್ತರ ಸಿಗೋದು ಕಷ್ಟ. ಆದರೆ, ಪ್ರತಿಯೊಬ್ಬರೂ ಒಂದು ವಯಸ್ಕ ಸ್ಥಿತಿಗೆ ಬಂದಾಗ ತಮ್ಮ ಜೀವನದ ಪ್ರೀತಿಗಾಗಿ ಹಂಬಲಿಸುತ್ತಾರೆ. ಆತ್ಮಸಂಗಾತಿಯ ಹುಡುಕಾಟದಲ್ಲಿ ನಿರತರಾಗುತ್ತಾರೆ. ಕೆಲವರು ಯಾರನ್ನೋ ಪ್ರೀತಿಸಿ, ಅವರನ್ನೇ ವಿವಾಹವಾಗಿ, ಬಳಿಕ ಅವರಿಂದ ದೂರವಾಗುತ್ತದೆ. ಅನೇಕರು ಪದೇ ಪದೆ ಪ್ರೀತಿಯಲ್ಲಿ ಬಿದ್ದರೂ ಯಾರನ್ನೂ ವಿವಾಹವಾಗದೆ ಹಲವು ವರ್ಷ ಏಕಾಂಗಿಯಾಗಿ ಕಳೆಯುತ್ತಾರೆ. ಕೆಲವರಿಗೆ ಪ್ರೀತಿ-ಪ್ರೇಮದ ಸಂಬಂಧಕ್ಕೆ ಬದ್ಧತೆ ತೋರುವುದೇ ಕಷ್ಟವಾಗಬಹುದು. ಕೆಲವರು ಬದ್ಧತೆ ತೋರಲು ಹಿಂಜರಿಯಬಹುದು. ಇವೆಲ್ಲ ಆಯಾ ರಾಶಿಗಳಿಗೆ ಸಂಬಂಧಿಸಿ ರೂಪುಗೊಳ್ಳುವ ಅಂಶಗಳಾಗಿವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿಯೊಂದು ರಾಶಿಗೂ ಅದರದ್ದೇ ಆದ ಶಕ್ತಿ, ಸಾಮರ್ಥ್ಯ, ದೌರ್ಬಲ್ಯಗಳಿರುತ್ತವೆ. ಅವು ಆ ರಾಶಿಯ ಜನರ ಸಂಬಂಧಗಳ ಮೇಲೆ ಪ್ರಭಾವ ಹೊಂದಿರುತ್ತವೆ. 

ಆತ್ಮಸಂಗಾತಿ (Soul Mate) ಸಿಗುವಲ್ಲಿ ಶನಿ ಪಾತ್ರವೂ ಇದೆ
ಗ್ರಹಗಳ ಪೈಕಿ ಶನಿ (Saturn) ಗ್ರಹಕ್ಕೆ (Planet) ವಿಶಿಷ್ಟ ಸ್ಥಾನವಿದೆ. ಇದನ್ನು ಟಾಸ್ಕ್ ಮಾಸ್ಟರ್ (Task Master) ಗ್ರಹ ಎಂದೇ ಕರೆಯಲಾಗುತ್ತದೆ. ಸಂಬಂಧಗಳನ್ನು ರೂಪಿಸುವಲ್ಲಿ ಶನಿ ಗ್ರಹದ ಪಾತ್ರ ಅಧಿಕವಾಗಿದೆ. ಆತ್ಮಸಂಗಾತಿ ದೊರಕುವಲ್ಲಿ ಹಾಗೂ ಜೀವನದ ಬಹಳ ಪ್ರಮುಖ ಆಗುಹೋಗುಗಳು ಘಟಿಸುವಲ್ಲಿ ಶನಿ ಗ್ರಹದ ಪಾತ್ರ ಹೆಚ್ಚು. ಶನಿ ಗ್ರಹ ಪ್ರತಿ 29.5 ವರ್ಷಗಳಿಗೆ ತನ್ನ ಕಕ್ಷೆಯನ್ನು ಪೂರ್ಣಗೊಳಿಸುತ್ತದೆ. ಈ ಅವಧಿಯಲ್ಲಿ ಎಲ್ಲ ಬದುಕಲ್ಲೂ ಭಾರೀ ಬದಲಾವಣೆಯಾಗುತ್ತದೆ. 

Tap to resize

Latest Videos

ಜನವರಿಯಲ್ಲಿ ಈ ರಾಶಿಗಳ ಲವ್ ಸಕ್ಸಸ್, ಜೀವನ ಸಂಗಾತಿಯ ಭೇಟಿಯಿಂದ ಫುಲ್ ಖುಷ್

ಯಾವ ರಾಶಿಗೆ ಯಾವಾಗ?

ಮೇಷ (Aries):  ಮೇಷ ರಾಶಿಯ ಜನರಿಗೆ ಅವರ ಆತ್ಮಸಂಗಾತಿ ಅತ್ಯುತ್ಸಾಹದ, ಸಾಹಸಮಯ ದಿನಗಳಲ್ಲೇ ದೊರೆಯುತ್ತಾರೆ. ಅಂದರೆ, 20ರಿಂದ 30ರ ವಯೋಮಾನದಲ್ಲೇ ತಮ್ಮ ಸಂಗಾತಿಯನ್ನು ಅವರು ಹುಡುಕಿಕೊಳ್ಳುತ್ತಾರೆ.

ವೃಷಭ (Taurus): ವೃಷಭ ರಾಶಿಯ ಜನರಿಗೆ ಪ್ರಬುದ್ಧ ವಯೋಮಾನವೆಂದೇ ಕರೆಸಿಕೊಳ್ಳುವ 30-40ರ ದಶಕದಲ್ಲಿ ಪ್ರೀತಿ ದೊರೆಯುತ್ತದೆ. ಸ್ಥಿರತೆ ಮತ್ತು ಸುಭದ್ರ ಜೀವನ ರೂಪುಗೊಳ್ಳುವ ಸಮಯದಲ್ಲಿ ಅವರಿಗೆ ಸಾಂಗತ್ಯವೂ ಲಭಿಸುತ್ತದೆ.

ಮಿಥುನ (Gemini):  ಮಿಥುನ ರಾಶಿಯ ಜನ ಇತರರೊಂದಿಗೆ ಬರೆಯುವುದನ್ನು ಇಷ್ಟಪಡುತ್ತಾರೆ. ಬೌದ್ಧಿಕವಾಗಿ ವಿಕಾಸಗೊಳ್ಳುವ 20ರಿಂದ 30ರ ವಯೋಮಾನದಲ್ಲಿ ಅವರು ತಮ್ಮ ಸಂಗಾತಿಯನ್ನು ಕಂಡುಕೊಳ್ಳುತ್ತಾರೆ.

ಕರ್ಕಾಟಕ (Cancer): ಭಾವನಾತ್ಮಕ ರಾಶಿಯಾಗಿರುವ ಕರ್ಕಾಟಕದ ಜನರಿಗೆ 30 ವರ್ಷದ ಬಳಿಕ ಪ್ರೀತಿ ಲಭಿಸುತ್ತದೆ. ಆರೈಕೆ ಮಾಡುವ ಗುಣದಿಂದ ಆಳವಾದ ಸಂಬಂಧ ಬೆಸೆಯುವಲ್ಲಿ ಸಮರ್ಥರಾಗುತ್ತಾರೆ. 

ಸಿಂಹ (Leo):  ಡೈನಮಿಕ್ ಆಗಿರುವ ಸಿಂಹ ರಾಶಿಯ ಜನ ತಮ್ಮ ಆತ್ಮ ಸಾಂಗತ್ಯವನ್ನು 20ರ ವಯೋಮಾನದಲ್ಲೇ ಕಂಡುಕೊಳ್ಳುವ ಸಾಧ್ಯತೆ ಹೆಚ್ಚು. ಹೆಚ್ಚು ಪ್ರಖರ ಮತ್ತು ಪ್ಯಾಷನೇಟ್ ಆಗಿರುವ ವಯೋಮಾನವಾದ 20ರಿಂದ 30ರೊಳಗಿನ ವರ್ಷಗಳಲ್ಲಿ ಪ್ರೀತಿಯನ್ನು ಪಡೆಯುತ್ತಾರೆ.

ಕನ್ಯಾ (Virgo):  ಜೀವನದಲ್ಲಿ ಹೆಚ್ಚು ಪ್ರಾಯೋಗಿಕ ನಿಲುವು ಮೂಡುವುದು 30ರ ಬಳಿಕವೇ ಆಗಿದೆ. ಹೆಚ್ಚು ಸಂಘಟಿತರಾಗುವುದು ಸಹ ಇದೇ ಸಮಯುದಲ್ಲಿ. ಕನ್ಯಾ ರಾಶಿಯವರು ಇದೇ ಅವಧಿಯಲ್ಲಿ ತಮ್ಮ ಪ್ರೀತಿ ಪಡೆಯುತ್ತಾರೆ.

ತುಲಾ (Libra): ವರ್ಚಸ್ಸಿನ ತುಲಾ ರಾಶಿಯ ಜನ ತಮ್ಮ 20ರ ವಯೋಮಾನದಲ್ಲೇ ಪಡೆಯುತ್ತಾರೆ. ಸೌಹಾರ್ದ ಬಾಂಧವ್ಯ ಹೆಚ್ಚಿಸಿಕೊಳ್ಳುವ ಈ ಅವಧಿ ಇವರಿಗೆ ಸಂಗಾತಿಯನ್ನು ದೊರಕಿಸುತ್ತದೆ.

5 ವರ್ಷ ನಂತರ ಧನುದಲ್ಲಿ 'ಮಹಾಶುಭ ಯೋಗ' ಮೂರು ಗ್ರಹಳಿಂದ 'ಈ' ರಾಶಿಗೆ ಅದೃಷ್ಟ, ಶ್ರೀಮಂತಿಕೆ ಭಾಗ್ಯ

ವೃಶ್ಚಿಕ (Scorpio):  ಆಳವಾದ ಬಾಂಧವ್ಯ ಹೊಂದುವ, ಪರಿವರ್ತನೆಯ ಸಮಯವಾಗಿರುವ 30ರ ಬಳಿಕ ವೃಶ್ಚಿಕ ರಾಶಿಯ ಜನ ಪ್ರೀತಿ ಪಡೆಯುತ್ತಾರೆ. 

ಧನು (Sagittarius):  ಸಾಹಸ ಧೋರಣೆಯ ಧನು ರಾಶಿಯ ಜನರು ಅತ್ಯುತ್ಸಾಹದ ದಿನಗಳಾಗಿರುವ 20ರಿಂದ 30 ವರ್ಷಗಳ  ಅವಧಿಯಲ್ಲಿ ಪ್ರೀತಿ-ಪ್ರೇಮದ ವಿಚಾರಕ್ಕೆ ಮನಸ್ಸು ಕೊಡುತ್ತಾರೆ. 

ಮಕರ (Capricorn):  ಮಹತ್ವಾಕಾಂಕ್ಷಿ ರಾಶಿಯಾಗಿರುವ ಮಕರ ರಾಶಿಯ ಜನ ತಮ್ಮ ಜೀವನದ 30ನೇ ವರ್ಷದ ಬಳಿಕ ಸಂಗಾತಿ ಪಡೆಯುತ್ತಾರೆ. 

ಕುಂಭ (Aquarius): ಅಸಾಂಪ್ರದಾಯಿಕ ನಿಲುವಿನ ಕುಂಭ ರಾಶಿಯ ಜನ 20ರಿಂದ 30ರ ವಯೋಮಾನದಲ್ಲಿ ಪ್ರೀತಿ ಹೊಂದುತ್ತಾರೆ. ಈ ವೇಳೆಯಲ್ಲಿ ಇವರ ಸಾಮಾಜಿಕ ನಿಲುವು ಪ್ರವರ್ಧಮಾನಕ್ಕೆ ಬಂದಿರುತ್ತದೆ.

ಮೀನ (Pisces): ಕನಸುಗಾರರಾಗಿರುವ ಮೀನ ರಾಶಿಯ ಜನ 30ನೇ ವರ್ಷದ ಬಳಿಕ ಆಳವಾದ ಸಂಬಂಧ ಹೊಂದಲು ಯಶಸ್ವಿಯಾಗುತ್ತಾರೆ. 

click me!