ಮಹಾಭಾರತ ಯುದ್ಧದ ವಿವರಗಳನ್ನು ಕೇಳಿದರೆ, ಅಲ್ಲಾದ ಸಾವುನೋವುಗಳ ಸಂಖ್ಯೆ ಗಮನಿಸಿದರೆ ಆಗ ಬಳಸಿದ ಶಸ್ತ್ರಾಸ್ತ್ರಗಳು ಈಗಿನ ಅಣ್ವಸ್ತ್ರಗಳ ಮಟ್ಟಕ್ಕೆ ಇದ್ದವು ಎಂಬುದು ಅತಿಶಯೋಕ್ತಿಯಲ್ಲ.
ನಮ್ಮ ದೇಶದಿಂದ ಬೇರೆ ದೇಶಕ್ಕೆ ವಿಮಾನದಲ್ಲಿ ಹಾರಿದ ಮೊದಲ ಮಹಿಳೆ ಸೀತೆ ಎಂದರೆ ನಿಮ್ಮ ಮುಖದಲ್ಲಿ ಹೌದಲ್ವಾ ಎಂದೊಂದು ನಗು ಕಾಣಿಸಬಹುದು. ಇದೇನೋ ತಮಾಷೆಯಲ್ಲ, ಆಳವಾಗಿ ಯೋಚಿಸಿದರೆ ನಮ್ಮ ಪೂರ್ವಜರು ಆಗಲೇ ಎಷ್ಟು ಮುಂದುವರಿದಿದ್ದರು ಎಂಬುದು ಅರಿವಿಗೆ ಬರುತ್ತದೆ. ಏಕೆಂದರೆ ವೈಜ್ಞಾನಿಕ ಜ್ಞಾನವಿಲ್ಲದೆ ವಿಮಾನದ ಕಲ್ಪನೆ ಮೂಡುವುದೂ ಕಷ್ಟವೇ. ಈಗ ಮಹಾಭಾರತ(Mahabharata)ದ ವಿಷಯಕ್ಕೆ ಬರೋಣ. 18 ದಿನಗಳ ಕಾಲ ನಡೆದ ಯುದ್ಧದಲ್ಲಿ 1.6 ಶತಕೋಟಿ ಜನರು ತಮ್ಮ ಜೀವ ಕಳೆದುಕೊಂಡಿದ್ದಾರೆ. ನಿಜವಾಗಿಯೂ ಅದು ಸಾಧ್ಯವೇ? ಹಾಗಾದರೆ ಅದಕ್ಕಾಗಿ ಬಳಸಿದ ಅಸ್ತ್ರ(weapons)ಗಳೇನು? ಕೇವಲ ಬಿಲ್ಲು, ಬಾಣ, ಗದೆ ಹಿಡಿದು, ಮುಷ್ಠಿ ಯುದ್ಧ ಮಾಡಿ ಇಷ್ಟು ಪ್ರಮಾಣದ ಜನರ ಜೀವ ತೆಗೆಯಲು ಸಾಧ್ಯವಿಲ್ಲ. ಖಂಡಿತಾ ಇಲ್ಲ.. ಆಗಲೂ ಇದರ ಹೊರತಾಗಿ ನಾರಾಯಣ ಅಸ್ತ್ರ, ಬ್ರಹ್ಮಾಸ್ತ್ರ, ಭಾರ್ಗವ ಅಸ್ತ್ರ... ಹೀಗೆ ಸಾಕಷ್ಟು ವಿಭಿನ್ನ ಅಸ್ತ್ರಗಳಿದ್ದವು.
ಆಗಿನ ಭಾಷೆಯಲ್ಲಿ ಅಸ್ತ್ರ ಎಂದರೆ ಕ್ಷಿಪಣಿ(missile)ಯಾಗಿದ್ದು, ಧನುಷ್ ಎಂದರೆ ಲಾಂಚರ್(launchers) ಇರಬಹುದು ಎಂದು ಅಂದಾಜಿಸಲಾಗಿದೆ. ದಿನಾಂಕ ಬಿಟ್ಟು ಬಿಡಿ, ಮಹಾಭಾರತ ರಚನೆಯಾಗಿದ್ದೇ 1000 ಬಿಸಿ ಸಮಯದಲ್ಲಿ. ಆಗ ಬಳಸಿದ ಶಸ್ತ್ರಾಸ್ತ್ರಗಳ ವಿವರ ಹೇಳ್ತೀವಿ ಕೇಳಿ. ಅವೆಲ್ಲ ಈಗಿನ ಅಣ್ವಸ್ತ್ರ(nuclear)ಗಳಿಗೆ ಸಮಾನವಾಗಿವೆ ಎಂದು ಅಂದಾಜಿಸಲಾಗಿದೆ.
undefined
ಬ್ರಹ್ಮಾಸ್ತ್ರ(Brahmastra)
ಅನೇಕ ಪುರಾಣಗಳಲ್ಲಿ ಈ ಆಯುಧದ ಬಗ್ಗೆ ವಿವರಿಸಲಾಗಿದೆ. ಹೆಚ್ಚು ವಿನಾಶಕಾರಿಯಾದುದು ಇದಾಗಿದೆ. ಆದರೆ, ಈ ಅಸ್ತ್ರವನ್ನು ಬಳಸಲು ಕೆಲವು ನಿರ್ಬಂಧಗಳಿವೆ. ಯೋಧನ ಪ್ರತಿಯೊಂದು ಸಂಪನ್ಮೂಲವು ಪೂರ್ಣಗೊಂಡಾಗ ಮಾತ್ರ, ಮನುಕುಲದ ಪ್ರಯೋಜನಕ್ಕಾಗಿ ಒಬ್ಬರು ಈ ಅಸ್ತ್ರವನ್ನು ಬಳಸಬಹುದು. ನಿರ್ದಿಷ್ಟ ಗುರಿಯು ಸಂಪೂರ್ಣ ನಾಶವನ್ನು ಎದುರಿಸಬೇಕಾಗುತ್ತದೆ. ಆಧುನಿಕ ತಂತ್ರಜ್ಞಾನದ ಪ್ರಕಾರ, ಈ ಅಸ್ತ್ರವನ್ನು ಪರಮಾಣು ಶಸ್ತ್ರಾಸ್ತ್ರ(nuclear weapon)ಕ್ಕೆ ಹೋಲಿಸಬಹುದು.
ಬ್ರಹ್ಮಶೀರ್ಶ ಅಸ್ತ್ರ(Brahmashirsha Astra)
ಪ್ರಾಚೀನ ಗ್ರಂಥಗಳ ಪ್ರಕಾರ, ಈ ಆಯುಧವು ಬ್ರಹ್ಮಾಸ್ತ್ರದ ಶಕ್ತಿಯ ನಾಲ್ಕು ಪಟ್ಟು ಹೆಚ್ಚು ಶಕ್ತಿಯುತವಾಗಿದೆ ಎಂದು ಊಹಿಸಲಾಗಿದೆ. ವಾಸ್ತವವಾಗಿ, ಇದು ಸೃಷ್ಟಿಕರ್ತನಾದ ಭಗವಾನ್ ಬ್ರಹ್ಮನಿಂದ ತನ್ನ ಹೆಸರನ್ನು ಪಡೆದುಕೊಂಡಿದೆ. ಇದು ಬ್ರಹ್ಮನ ನಾಲ್ಕು ತಲೆಗಳ ಶಕ್ತಿಯನ್ನು ತುದಿಯಲ್ಲಿ ಹೊಂದಿದೆ ಎಂದು ಊಹಿಸಲಾಗಿದೆ. ಈ ಆಯುಧದಿಂದ ಉಂಟಾಗುವ ವಿನಾಶವು ಹೈಡ್ರೋಜನ್ ಬಾಂಬ್(hydrogen bomb) ಅಥವಾ ಥರ್ಮೋನ್ಯೂಕ್ಲಿಯರ್ ಹೈಡ್ರೋಜನ್ ಬಾಂಬ್ ಅನ್ನು ಹೋಲುತ್ತದೆ.
Weekly Horoscope: ತುಲಾ, ಮಿಥುನ ರಾಶಿಗೆ ಅದೃಷ್ಟದ ವಾರ, ಕಟಕಕ್ಕೆ ಸಂಕಷ್ಟ
ನಾರಾಯಣ ಅಸ್ತ್ರ(Narayana Astra)
ಈ ಆಯುಧವು ಭಗವಾನ್ ವಿಷ್ಣುವಿನಿಂದ ತನ್ನ ಹೆಸರನ್ನು ಪಡೆದಿದೆ. ತಪಸ್ಸಿನಿಂದ, ನೀವು ಭಗವಂತನಿಂದ ನೇರವಾಗಿ ಈ ಅಸ್ತ್ರವನ್ನು ಪಡೆಯಬಹುದು. ಮಹಾಭಾರತದಲ್ಲಿನ ಪರಮಾಣು ಶಸ್ತ್ರಾಸ್ತ್ರಗಳ ಐತಿಹಾಸಿಕ ವಿವರಗಳ ಪ್ರಕಾರ, ನಾರಾಯಣ ಅಸ್ತ್ರವು ಸಾವಿರಾರು ಮಾರಣಾಂತಿಕ ವಿನಾಶಕಾರಿ ಕ್ಷಿಪಣಿಗಳನ್ನು ಸತತವಾಗಿ ಹಾರಿಸುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಒಂದು ಸವಾಲು ಇದೆ. ನೀವು ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಈ ಆಯುಧವನ್ನು ಬಳಸಬಹುದು.
Curses of Mahabharata: ಮಹಾಭಾರತದ ನಾಲ್ಕು ಶಾಪಗಳು ಇಂದಿಗೂ ಇವೆಯಂತೆ! ಯಾವುವು ಗೊತ್ತೆ?
ಭಾರ್ಗವ ಅಸ್ತ್ರ(Bhargava Astra)
ಈ ಆಯುಧವು ಬ್ರಹ್ಮಶೀರ್ಷ ಅಸ್ತ್ರಕ್ಕೆ ಸಮಾನವಾದ ಶಕ್ತಿಯನ್ನು ಹೊಂದಿದೆ. ಅದರ ಬಳಕೆಯ ನಂತರ, ಬೂದಿ ಇಲ್ಲದೆ ಜಗತ್ತು ನಾಶವಾಗುತ್ತದೆ ಎಂದು ಪ್ರಾಚೀನ ಗ್ರಂಥಗಳು ಚಿತ್ರಿಸುತ್ತವೆ. ಆದಾಗ್ಯೂ, ಇದು ಉತ್ತಮ ಅಂಶವನ್ನು ಪಡೆದುಕೊಂಡಿದೆ. ಬ್ರಹ್ಮಾಸ್ತ್ರ ಮತ್ತು ಬ್ರಹ್ಮಶೀರ್ಷ ಅಸ್ತ್ರಗಳನ್ನು ತಟಸ್ಥಗೊಳಿಸುವ ಸಾಮರ್ಥ್ಯವನ್ನು ಹೊಂದಿರುವ ಈ ಆಯುಧವು ಅತ್ಯುತ್ತಮ ಪ್ರತಿವಿಷವಾಗಿದೆ. ಆದರೆ ವಿನಾಶಕ್ಕೆ ಪ್ರತ್ಯೇಕವಾಗಿ ಬಳಸಿದಾಗ, ಆಯುಧವು ಸಮುದ್ರದ ನೀರನ್ನು ಕುದಿಯುವಂತೆ ಮಾಡುತ್ತದೆ ಮತ್ತು ಪರ್ವತಗಳನ್ನು ಗಾಳಿಯಲ್ಲಿ ತೇಲುವಂತೆ ಮಾಡುತ್ತದೆ.
ಪಾಶುಪತಾಸ್ತ್ರ(Pashupatastra)
ಹೆಸರು ಕೇಳಿದರೆ ಶಿವ ಹಾಗೂ ಅರ್ಜುನನ ನಡುವಿನ ಕದನ ನೆನಪಾಗುತ್ತಲ್ಲವೇ? ತಪಸ್ಸನ್ನು ಮಾಡಿ ಈ ಅಸ್ತ್ರವನ್ನು ಶಿವನಿಂದ ಪಡೆಯಬಹುದು. ಶಿವ ಹಾಗೂ ಆದಿಪರಾಶಕ್ತಿ ಬಳಿಯ ಅತಿ ವಿನಾಶಕಾರಿ ಅಸ್ತ್ರ ಇದಾಗಿದ್ದು, ಇದನ್ನು ಕಣ್ಣು, ಮನಸ್ಸು, ಮಾತುಗಳು ಹಾಗೂ ಬಗ್ಗುವ ಮೂಲಕವೂ ಆ್ಯಕ್ಟಿವೇಟ್ ಮಾಡಬಹುದು. ಅಂದರೆ ಈಗಿನ ಫೇಸ್ ರೆಕಗ್ನಿಶನ್, ಫಿಂಗರ್, ವಾಯ್ಸ್ ರೆಕಗ್ನಿಶನ್ ತಂತ್ರಾಂಶಕ್ಕೆ ಹೋಲುತ್ತದೆ. ಆದರೆ, ನಮಗಿಂತ ದುರ್ಬಲರ ವಿರುದ್ಧ ಇದನ್ನು ಬಳಸಬಾರದೆಂಬ ನಿಯಮವಿದೆ.