Personality Traits: ಯಾವ ರಾಶಿಗೆ ಯಾವ ವಿಷಯಕ್ಕೆ ಅಭದ್ರತೆ ಹೆಚ್ಚು ಗೊತ್ತಾ?

By Suvarna NewsFirst Published Mar 5, 2022, 5:12 PM IST
Highlights

ಅಭದ್ರತೆ ಎಂಬುದು ಜೀವನದ ಒಂದಲ್ಲಾ ಒಂದು ಸಮಯದಲ್ಲಿ ಕಾಡಿಬಿಡಬಹುದು. ಹಲವಾರು ಕಾರಣಕ್ಕೆ ಇನ್‌ಸೆಕ್ಯೂರ್ ಆಗಬಹುದು. ಆದರೆ, ಹೀಗೆ ಆಗುವುದಕ್ಕೂ ಅನೇಕ ಕಾರಣಗಳಿದ್ದು, ಗ್ರಹಗತಿಗಳು ಸಹ ಪರಿಣಾಮವನ್ನು ಬೀರುತ್ತದೆ. ರಾಶಿಗನುಸಾರವಾಗಿ ಸಂಬಂಧದಲ್ಲಿ ಯಾವ ಯಾವ ರಾಶಿಯವರು ಹೇಗೆ ಅಭದ್ರತೆಗೆ ಒಳಗಾಗುತ್ತಾರೆ ಅನ್ನೋದನ್ನು ನೋಡೋಣ...

ಆತ್ಮವಿಶ್ವಾಸ (Confidence) ಜೀವನದಲ್ಲಿ (Life) ಬಹಳವೇ ಮುಖ್ಯವಾಗುತ್ತದೆ. ಯಾವ ವ್ಯಕ್ತಿಗೆ ತನ್ನ ಮೇಲೆ ತನಗೆ ನಂಬಿಕೆ (Trust) ಇರುತ್ತದೋ ಅವನಿಗೆ ಯಾವ ವಿಷಯದ ಬಗ್ಗೆಯೂ ಭಯ (Fear) ಕಾಡದು. ಆದರೆ, ಕೆಲವರಿಗೆ ತಮ್ಮ ಮೇಲೆ ತಮಗೇ ನಂಬಿಕೆ ಇರುವುದಿಲ್ಲ. ಜೊತೆಗೆ ಬೇರೆಯವರು ತಮ್ಮನ್ನು ನಂಬುತ್ತಾರೋ ಇಲ್ಲವೋ ಎಂಬ ಗೊಂದಲ ಬೇರೆ. ಇಂಥ ಪ್ರವೃತ್ತಿಕ್ಕೆ ರಾಶಿ ಚಕ್ರವೂ ಕಾರಣವಾಗಿರುತ್ತದೆ. 

ಗುಣ, ಸ್ವಭಾವದ (Character, Nature) ಮೇಲೆ ಗ್ರಹಗತಿಗಳು (Planet), ರಾಶಿಚಕ್ರಗಳು ಬೀರುವ ಪರಿಣಾಮ ಏನು..? ಯಾವ ರಾಶಿಗಳಿಗೆ ಯಾವ ರೀತಿಯ ಅಭದ್ರತೆ ಕಾಡುತ್ತದೆ ಎಂಬುದನ್ನು ನೋಡೋಣ... 

ಮೇಷ ರಾಶಿ (Aries)
ಮೇಷ ರಾಶಿಯಲ್ಲಿ ಜನಸಿದವರು ಸ್ವಲ್ಪ ವಿಭಿನ್ನ (Different) ವ್ಯಕ್ತಿತ್ವದವರು. ಇವರಿಗೆ ಸಂಬಂಧಗಳ (Relationship) ಮೇಲೆ ವಿಶೇಷ ಆಸಕ್ತಿಗಳಿದ್ದು (Special interest), ಸದಾ ಉತ್ಸಾಹದಿಂದ ಖುಷಿಪಡಿಸಲು ಏನೆಲ್ಲ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಆದರೆ, ಅವರಿಗೆ ಒಮ್ಮೆ ತಮ್ಮ ಸಂಬಂಧದಲ್ಲಿ ಖುಷಿ (Happy) ಕಡಿಮೆಯಾಗುತ್ತಿದೆ ಎಂದು ಭಾಸವಾದರೆ ಸಾಕು ಅಭದ್ರತೆ ಇವರನ್ನು ಕಾಡಿಬಿಡುತ್ತದೆ. 

ವೃಷಭ ರಾಶಿ (Taurus)
ಈ ರಾಶಿಯವರಿಗೆ ತಮ್ಮನ್ನೇ ಎಲ್ಲರೂ ಹೊಗಳಬೇಕು ಎನ್ನುವ ಮನಸ್ಥಿತಿ. ಇವರು ತಮ್ಮ ಸೌಂದರ್ಯವನ್ನು (Beauty) ಹೆಚ್ಚು ಇಷ್ಟಪಡುತ್ತಾರೆ. ಇವರ ಸಂಗಾತಿಯು ಇನ್ನೊಬ್ಬರ ಸೌಂದರ್ಯವನ್ನು ನೋಡಿದರೆ ಇಲ್ಲವೇ ಹೊಗಳಿದರೆ ಅಸೂಯೆ ಉಂಟಾಗುತ್ತದೆ. ಅಲ್ಲದೆ, ಇದರಿಂದ ಅಭದ್ರತಾ ಭಾವ ಇವರದ್ದಾಗುತ್ತದೆ. 

ಮಿಥುನ ರಾಶಿ (Gemini)
ಈ ರಾಶಿಯವರು ಸ್ವಲ್ಪ ಕೇರ್‌ಲೆಸ್. ಆದರೆ, ಹೊರಗಡೆ ಹಾಸ್ಯ ಮಾಡಿಕೊಂಡು ಇದ್ದುಬಿಡುತ್ತಾರೆ. ಒಂದು ವೇಳೆ ತಮ್ಮ ಭಾವನೆಗಳ (Emotions) ಬಗ್ಗೆ ಸಂಗಾತಿ ಬಳಿ ಹೇಳಿಕೊಂಡರೆ ಸಾಕು ಬಳಿಕ ಇವರ ತಲೆಯಲ್ಲಿ ಸಾವಿರ ಆಲೋಚನೆಗಳು, ಅವರು ತಮ್ಮ ಬಗ್ಗೆ ಏನು ತಿಳಿದುಕೊಂಡರೋ ಏನೊ...? ಈ ಸ್ವಭಾವ ಅವರಿಗೆ ಇಷ್ಟವಾಗುತ್ತದೋ ಇಲ್ಲವೋ ಎಂಬುದು ಅಭದ್ರತೆಗೆ ಕಾರಣವಾಗುತ್ತದೆ. 

ಕರ್ಕಾಟಕ ರಾಶಿ (Cancer)
ಈ ರಾಶಿಯವರಿಗೆ ಸಂಗಾತಿಯ ವರ್ತನೆಯಲ್ಲಿ ಸ್ವಲ್ಪ ಬದಲಾವಣೆಯಾದರೂ ಸಹಿಸಲು ಆಗದು. ಅವರಿಂದ ಸಂಬಂಧದಲ್ಲಿ ಸಿಗಬೇಕಾದ ಅಟೆನ್ಶನ್ ಸಿಗುತ್ತಿಲ್ಲ ಎಂಬುದು ಇವರಿಗೆ ಸಹಿಸಲು ಆಗುವುದಿಲ್ಲ. ಇದು ಇವರಿಗೆ ಆತಂಕವನ್ನುಂಟು (Anxiety) ಮಾಡುತ್ತದೆ. 

ಸಿಂಹ ರಾಶಿ (Leo)
ಈ ರಾಶಿಯವರಿಗೆ ಅಟೆನ್ಶನ್ ಸೀಕಿಂಗ್ ಪ್ರವೃತ್ತಿ ಹೆಚ್ಚಿರುತ್ತದೆ. ಎಲ್ಲರೂ ಇಷ್ಟಪಡುತ್ತಿದ್ದರೂ ಸಂಗಾತಿ (Partner) ಯಾಕೋ ಕೈತಪ್ಪಿ ಹೋಗುತ್ತಿದ್ದಾರೆ ಎಂಬ ಮನೋಭಾವ ಇವರಿಗೆ ಒಮ್ಮೆ ಕಾಡಿದರೆ ಸಾಕು ಅಭದ್ರತೆ ಮನೆ ಮಾಡುತ್ತದೆ. 

ಕನ್ಯಾ ರಾಶಿ (Virgo)
ಈ ರಾಶಿಯವರು ಸಂಗಾತಿಯಿಂದ ಹೆಚ್ಚಿನ ನಿರೀಕ್ಷೆಯನ್ನು (Expectation) ಹೊಂದಿರುತ್ತಾರೆ. ಎಲ್ಲವೂ ಉತ್ತಮ ಹಾಗೂ ನಿಖರತೆಯಿಂದ ಕೂಡಿರಬೇಕು ಎಂದು ಬಯಸುತ್ತಾರೆ. ಇದರಲ್ಲಿ ಏನಾದರೂ ವ್ಯತ್ಯಾಸವಾದರೆ ಇವರು ಅಭದ್ರರಾಗುತ್ತಾರೆ. 

ಇದನ್ನು ಓದಿ: Personality Traits And Zodiacs: ಈ ನಾಲ್ಕು ರಾಶಿಯವರದು ಬಹಳ ಸೌಮ್ಯ ಸ್ವಭಾವ

ತುಲಾ ರಾಶಿ (Libra)
ಈ ರಾಶಿಯವರು ಸಂಬಂಧಗಳ ವಿಚಾರದಲ್ಲಿ ಸ್ವಲ್ಪ ನಿರಾಶಾವಾದಿಗಳಾಗಿರುತ್ತಾರೆ (Pessimistic). ಸಂಗಾತಿ ತಮ್ಮಿಂದ ದೂರವಾಗುತ್ತಿದ್ದಾರೆ ಎನ್ನುವ ಭಾವನೆ ಇವರಿಗೆ ಮೂಡಿದರೆ ಅದನ್ನು ಪರಾಮರ್ಶಿಸದರೆ ಇನ್‌ಸೆಕ್ಯೂರ್ ಆಗುತ್ತಾರೆ. 

ವೃಶ್ಚಿಕ ರಾಶಿ (Scorpio)
ಈ ರಾಶಿಯವರು ಸಂಗಾತಿಯೊಂದಿಗೆ ಸ್ವಲ್ಪ ಮೇಲುಗೈ ಸಾಧಿಸುವ ಸ್ವಭಾವದವರು. ಹೀಗಾಗಿ ಇದೇ ಇವರಿಗೆ ಸಮಸ್ಯೆಯಾಗಿ (Problems) ಸಂಗಾತಿ ಪ್ರತಿಕ್ರಿಯೆಯು ಬೇರೆ ರೀತಿಯ ಅರ್ಥವನ್ನು ಕಲ್ಪಿಸಿಕೊಳ್ಳಲು ದಾರಿ ಮಾಡಿ ಅಭದ್ರತೆಗೆ ತಳ್ಳುತ್ತದೆ. 

ಧನು ರಾಶಿ (Sagittarius)
ಧನು ರಾಶಿಯವರು ಸಂಬಂಧದ ವಿಷಯದಲ್ಲಿ ರಾಜಿ ಮಾಡಿಕೊಳ್ಳುವವರಲ್ಲ. ಇವರು ಸಖತ್ ಅಡ್ವೆಂಚರ್ (Adventure) ಮನೋಭಾದವರು. ಆದರೆ, ತಮ್ಮನ್ನು ಇನ್ನೊಬ್ಬರು ನಿಯಂತ್ರಣ ಮಾಡುವುದನ್ನು ಸಹಿಸಲಾರರು. ತಮ್ಮ ಸಂಗಾತಿ ಹಿಡಿತದಲ್ಲಿ ಇಟ್ಟುಕೊಳ್ಳುತ್ತಿದ್ದಾರೆ ಎಂದು ಅನ್ನಿಸಿದರೆ ಗೊಂದಲದ ಭಾವ ಇವರದ್ದಾಗ ಅಭದ್ರರಾಗುತ್ತಾರೆ. 

ಮಕರ ರಾಶಿ (Capricorn)
ಮಕರ ರಾಶಿಯವರು ತುಂಬಾ ರೊಮ್ಯಾಂಟಿಕ್. ಆದರೆ, ಎಂಥ ವಿಷಯವೇ ಇರಲಿ ಇವರು ಹೃದಯದಾಳದಿಂದ (Heart) ಯೋಚನೆ ಮಾಡುವವರಲ್ಲ. ತಲೆಯಿಂದ ಎಲ್ಲವನ್ನೂ ಚಿಂತಿಸುತ್ತಾರೆ. ಇದಲ್ಲದೆ ತಮ್ಮ ಸಂಗಾತಿಯ ಆರ್ಥಿಕ ಸ್ಥಿರತೆ ಇವರನ್ನು ಅಭದ್ರತೆಗೆ ತಳ್ಳುತ್ತದೆ. 

ಕುಂಭ ರಾಶಿ (Aquarius)
ಈ ರಾಶಿಯವರು ಸ್ವತಂತ್ರರಾಗಿರಲು ಬಯಸುತ್ತಾರೆ. ಸಂಬಂಧದಲ್ಲಿ ಯಾರಾದರೂ ಕಟ್ಟಿಹಾಕಲು ಪ್ರಯತ್ನಪಟ್ಟರೆ ಒಪ್ಪಲಾರರು. ಇವರ ಏಕಾಂತಕ್ಕೆ (Solitude) ಸಂಗಾತಿ ಅಡ್ಡಿ ಮಾಡುತ್ತಿದ್ದಾರೆಂದರೆ ಇವರಿಗೆ ಸಹಿಸಲು ಕಷ್ಟ. ಇದು ಬೇರೆ ಯೋಚನೆ ಇವರನ್ನು ತಳ್ಳಿ ಅಭದ್ರತೆ ಉಂಟಾಗುತ್ತದೆ. 

ಇದನ್ನು ಓದಿ:  Sunday Born Personality: ಭಾನುವಾರ ಹುಟ್ಟಿದೋರು ಅಹಂಕಾರಿಗಳಾ? ಅವ್ರ್ ಲವ್ ಲೈಫ್ ಹೇಗೆ?

ಮೀನ ರಾಶಿ (Pisces)
ಈ ರಾಶಿಯವರು ತುಂಬಾ ರೊಮ್ಯಾಂಟಿಕ್ (Romantic) ಆಗಿದ್ದರೂ ಹತಾಶ ಮನೋಭಾವದವರಾಗಿರುತ್ತಾರೆ. ಸಂಗಾತಿಯನ್ನು ಪ್ರೀತಿಸಿದರೂ ಸಹ ಅವರ ದೃಢತೆ ಬಗ್ಗೆ ಸದಾ ಅನುಮಾನದ ಪಿಶಾಚಿ ನಿಮ್ಮನ್ನು ಕಾಡುತ್ತಿರುತ್ತದೆ. ಇದು ಕೊನೆಗೆ ಅಭದ್ರತೆಗೆ ದೂಡುತ್ತದೆ.

click me!