Garuda Purana: ಸಂಜೆ ಅಂತ್ಯಸಂಸ್ಕಾರ ನಿಷಿದ್ಧ, ಶವ ಒಂಟಿಯಾಗಿದ್ರೆ ಅನಾಹುತ

By Suvarna NewsFirst Published Aug 2, 2022, 4:30 PM IST
Highlights

ಹಿಂದೂ ಧರ್ಮದಲ್ಲಿ ಸಾವಿನ ನಂತ್ರವೂ ಸಂಸ್ಕಾರಗಳಿವೆ. ನಿಯಮ ಮೀರಿದ್ರೆ ಕೆಲವೊಂದು ತೊಂದರೆ ಎದುರಿಸಬೇಕಾಗುತ್ತದೆ. ಸತ್ತ ವ್ಯಕ್ತಿ ಹಾಗೂ ಕುಟುಂಬಸ್ಥರೆಲ್ಲರಿಗೂ ಒಂದಿಷ್ಟು ಸಮಸ್ಯೆ ಕಾಡುತ್ತದೆ. ಸತ್ತ ನಂತ್ರ ಶವ ಸಂಸ್ಕಾರಕ್ಕೂ ಸಮಯ ನೋಡೋದು ಏಕೆ ಎಂಬುದನ್ನು ನಾವು ಹೇಳ್ತೇವೆ. 
 

ಭೂಮಿಯಲ್ಲಿ ಜನ್ಮತಳೆದ ಮೇಲೆ ಸಾವು ಖಚಿತ. ಆದ್ರೆ ಸಾವು ಯಾವಾಗ ಬರುತ್ತೆ ಎಂಬುದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲವಾದ್ರೂ ಸಾವು ಪ್ರತಿಯೊಬ್ಬ ವ್ಯಕ್ತಿಗೆ ಬರಲೇಬೇಕು. ಸಾವಿನ ಬಗ್ಗೆ ಜನರು ಕಡಿಮೆ ಮಾತನಾಡಲು ಬಯಸ್ತಾರೆ. ಸಾವು ಕೆಲವರಲ್ಲಿ ಭಯ ಹುಟ್ಟಿಸಿದ್ರೆ ಮತ್ತೆ ಕೆಲವರು ಆಪ್ತರನ್ನು ಕಳೆದುಕೊಳ್ಳುವ ಆ ಕಠು ಸತ್ಯವನ್ನು ಅರಗಿಸಿಕೊಳ್ಳಲು ಸಿದ್ಧರಿರುವುದಿಲ್ಲ. ಸಾವಿನ ನಂತ್ರ ದೇಹ ನಿಷ್ಕ್ರಿಯಗೊಳ್ಳುತ್ತದೆ. ಅದಕ್ಕೆ ಅಂತ್ಯಸಂಸ್ಕಾರ ನೆರವೇರುತ್ತದೆ. ಪ್ರತಿಯೊಂದು ಧರ್ಮದಲ್ಲೂ, ಪ್ರತಿಯೊಂದು ಪಂಗಡದಲ್ಲೂ ಅಂತ್ಯ ಸಂಸ್ಕಾರಕ್ಕೆ ಭಿನ್ನ ವಿಧಾನಗಳಿವೆ. ಹಿಂದಿನಿಂದ ನಡೆದುಕೊಂಡು ಬಂದ ಪದ್ಧತಿಯಲ್ಲಿಯೇ ಅಂತ್ಯಸಂಸ್ಕಾರವನ್ನು ನೆರವೇರಿಸಲಾಗುತ್ತದೆ.  ಹಿಂದೂ ಧರ್ಮದಲ್ಲಿಯೂ ಅಂತ್ಯ ಸಂಸ್ಕಾರಕ್ಕೆ ಸಂಬಂಧಿಸಿದಂತೆ ಅನೇಕ ಪದ್ಧತಿಗಳನ್ನು ಅನುಸರಿಸಲಾಗುತ್ತದೆ. ಅದ್ರಲ್ಲಿ ಸೂರ್ಯಾಸ್ತದ ನಂತರ ಮೃತ ದೇಹವನ್ನು ಸುಡುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಗರುಡ ಪುರಾಣದಲ್ಲಿ ಈ ಬಗ್ಗೆ ಹೇಳಲಾಗಿದೆ. ಯಾಕೆ ಸೂರ್ಯಾಸ್ತದ ನಂತ್ರ ಅಂತ್ಯಸಂಸ್ಕಾರ ನಡೆಸಬಾರದು ಎಂಬುದಕ್ಕೆ ಗರುಡ ಪುರಾಣದಲ್ಲಿ ವಿವರಿಸಲಾಗಿದೆ. 

ಸೂರ್ಯಾಸ್ತದ ನಂತ್ರ ಯಾಕಿಲ್ಲ ಅಂತ್ಯ ಸಂಸ್ಕಾರ : ಗರುಡ ಪುರಾಣದ ಪ್ರಕಾರ, ರಾತ್ರಿಯಲ್ಲಿ ಅಂದರೆ ಸೂರ್ಯಾಸ್ತದ ನಂತ್ರ ಸ್ವರ್ಗದ ದ್ವಾರಗಳನ್ನು ಮುಚ್ಚಲಾಗುತ್ತದೆ . ಈ ವೇಳೆ ನರಕದ ಬಾಗಿಲುಗಳು ತೆರೆದಿರುತ್ತವೆ ಎಂದು ಹೇಳಲಾಗಿದೆ.  ಒಂದು ವೇಳೆ ಸೂರ್ಯಾಸ್ತದ ನಂತ್ರ ಅಂತ್ಯಸಂಸ್ಕಾರ ಮಾಡಿದ್ರೆ ಜೀವಿಯ ಆತ್ಮವು ನರಕದ ನೋವನ್ನು ಅನುಭವಿಸಬೇಕಾಗುತ್ತದೆ. ಆತನಿಗೆ ಸ್ವರ್ಗ ಪ್ರಾಪ್ತಿಯಾಗುವುದಿಲ್ಲ. ಸ್ವರ್ಗ ಪ್ರಾಪ್ತಿಯಾಗಬೇಕು, ನರಕದ ಕಷ್ಟವನ್ನು ಆಪ್ತರು ನೋಡಬಾರದು ಎನ್ನುವ ಕಾರಣಕ್ಕೆ ರಾತ್ರಿ ಬದಲು ಹಗಲಿನಲ್ಲಿ ಅಂತ್ಯಸಂಸ್ಕಾರ ನಡೆಸಲಾಗುತ್ತದೆ. 

ಆಗಸ್ಟ್ ಮೂರು ರಾಶಿಗಳಿಗೆ ವರದಾನ, ಕಾರಣ ಇಲ್ಲಿದೆ..

ಇದಲ್ಲದೆ ಆ ವ್ಯಕ್ತಿಯು ಅವನತಿ ಹೊಂದುತ್ತಾನೆ ಎಂದು ನಂಬಲಾಗಿದೆ. ಆತನಿಗೆ ಮೋಕ್ಷ ಪ್ರಾಪ್ತಿಯಾಗುವುದಿಲ್ಲ. ಆತ್ಮವು ಪಿಶಾಚಿಯಾಗಿ ಅಲೆಯುವ ಸಾಧ್ಯತೆಯಿರುತ್ತದೆ. ಇಲ್ಲವೆ ಅಸುರರ ಮನೆಯಲ್ಲಿ ಆತನ ಮತ್ತೆ ಜನ್ಮ (Birth) ತಾಳುತ್ತಾನೆ ಎನ್ನುವ ಕಾರಣವೂ ಇದೆ. 

ಹಾಗೆಯೇ ಶವ ಸಂಸ್ಕಾರಕ್ಕೆ (Cremation) ಸಮಯ ಕೂಡ ಮುಖ್ಯವಾಗುತ್ತದೆ. ಶವ (Dead Body) ಸಂಸ್ಕಾರಕ್ಕೆ ಸರಿಯಾದ ಸಮಯವನ್ನು ಆರಿಸುವುದು ಅಗತ್ಯವೆಂದು ಪರಿಗಣಿಸಲಾಗಿದೆ. ಪಂಚಕ ಕಾಲದಲ್ಲಿ ಯಾರಾದರೂ ಮರಣ ಹೊಂದಿದರೆ, ಅವರ ಅಂತ್ಯ ಸಂಸ್ಕಾರವನ್ನು ಅವಧಿ ಮುಗಿದ ನಂತರವೇ ಮಾಡಲಾಗುತ್ತದೆ. ಪಂಚಕ ಕಾಲದಲ್ಲಿ ಯಾರನ್ನಾದರೂ ದಹನ ಮಾಡಿದರೆ ಆ ವ್ಯಕ್ತಿಯ ಕುಟುಂಬದಲ್ಲಿ ಇತರ ಐದು ಜನರು ಸಹ ಸಾವನ್ನಪ್ಪುವ ಸಾಧ್ಯತೆಯಿರುತ್ತದೆ. ಇದಕ್ಕೆ ಪರಿಹಾರವನ್ನೂ ಹೇಳಲಾಗಿದೆ. ಅದರ ಪ್ರಕಾರ ಮೃತದೇಹದ ಜೊತೆಗೆ 5 ಕಾಳು ಹಿಟ್ಟು ಅಥವಾ ಒಣ ಹುಲ್ಲಿನ ಪ್ರತಿಕೃತಿಗಳನ್ನು ಸಹ ಸಂಪೂರ್ಣ ನಿಯಮಗಳೊಂದಿಗೆ ಸುಡಬೇಕು. 

ಹಾಗೆಯೇ ಹಿಂದೂ ಧರ್ಮದಲ್ಲಿ ಸಾವಿನ ನಂತ್ರ ಮೃತ ದೇಹವನ್ನು ಒಬ್ಬಂಟಿಯಾಗಿ ಬಿಡುವುದಿಲ್ಲ. ಅದನ್ನು ನೀವು ಗಮನಿಸಿರಬಹುದು.  ಇದು ಕೂಡ ಗರುಡ ಪುರಾಣಕ್ಕೆ ಸಂಬಂಧಿಸಿದೆ. ಹಾಗಾದರೆ, ಅದರ ಹಿಂದಿನ ಕಾರಣ ಏನು ಎಂದು ತಿಳಿಯೋಣ.

ಮನೆ ಸುತ್ತ ಗಿಡ ಇರಬೇಕು, ಒಳ್ಳೇದು, ಒಣಗಿದರೆ ದರಿದ್ರ ಒಕ್ಕರಿಸುತ್ತೆ!

1. ಗರುಡ ಪುರಾಣದ ಪ್ರಕಾರ, ರಾತ್ರಿಯಲ್ಲಿ ಒಬ್ಬಂಟಿಯಾಗಿ ದೇಹವನ್ನು ಬಿಡದಿರಲು ದೊಡ್ಡ ಕಾರಣವೆಂದರೆ ಮೃತ ದೇಹವನ್ನು ಒಬ್ಬಂಟಿಯಾಗಿ ಬಿಟ್ಟರೆ ನಾಯಿ, ಬೆಕ್ಕುಗಳಂತಹ ಪ್ರಾಣಿಗಳು ಅದನ್ನು ತಿನ್ನುತ್ತವೆ. 
2. ಗರುಡ ಪುರಾಣದ ಪ್ರಕಾರ ರಾತ್ರಿ ವೇಳೆ ಶವವನ್ನು ಒಂಟಿಯಾಗಿಟ್ಟರೆ ದುಷ್ಟ ಶಕ್ತಿಗಳು ಅದರಲ್ಲಿ ಪ್ರವೇಶಿಸಬಹುದು. ಅಂತಹ ಪರಿಸ್ಥಿತಿಯಲ್ಲಿ, ನಕಾರಾತ್ಮಕ ಶಕ್ತಿಗಳು ಮನೆಯ ಮೇಲೆ ಪರಿಣಾಮ ಬೀರಬಹುದು. ಇದು ಇಡೀ ಕುಟುಂಬಕ್ಕೆ ತೊಂದರೆ ಉಂಟುಮಾಡಬಹು.
3. ಸಾವಿನ ನಂತರ ಆತ್ಮವು ಮನೆಯಲ್ಲಿ 13 ದಿನಗಳವರೆಗೆ ಇರುತ್ತದೆ ಎಂದು ಹೇಳಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಶವವನ್ನು ಅಂತ್ಯಸಂಸ್ಕಾರ ಮಾಡುವವರೆಗೆ ಸುಮ್ಮನೆ ಬಿಡಬಾರದು. ಇದು ಆತ್ಮದ ನೋವಿಗೆ ಕಾರಣವಾಗುತ್ತೆ.
4. ಮೃತದೇಹವನ್ನು ಒಂಟಿಯಾಗಿ ಬಿಟ್ಟಾಗ ವಾಸನೆ ಬರಲು ಆರಂಭಿಸುತ್ತದೆ ಎಂಬ ನಂಬಿಕೆಯೂ ಇದೆ.  
5.  ತಾಂತ್ರಿಕ ಚಟುವಟಿಕೆಗಳ ಪರಿಣಾಮವು ರಾತ್ರಿಯಲ್ಲಿ ತೀವ್ರಗೊಳ್ಳುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮೃತ ದೇಹವನ್ನು ಒಂಟಿಯಾಗಿ ಬಿಟ್ಟರೆ  ಅದನ್ನು ತಂತ್ರ ಸಾಧನಕ್ಕಾಗಿ ಬಳಸಬಹುದು. ಆತ್ಮಕ್ಕೆ ಹಾನಿಯಾಗಬಹುದು. 

click me!