Numerology: ಮದುವೆ ಮಾತುಕತೆಯ ಹಾದಿ ಹಿಡಿವ ಪ್ರೇಮ ಸಂಬಂಧ

Published : Oct 13, 2022, 06:33 AM IST
Numerology: ಮದುವೆ ಮಾತುಕತೆಯ ಹಾದಿ ಹಿಡಿವ ಪ್ರೇಮ ಸಂಬಂಧ

ಸಾರಾಂಶ

13th October 2022 ಇಂದು ಈ ಜನ್ಮಸಂಖ್ಯೆಗೆ ಅವಲಂಬನೆಯಿಂದ ಹೊರ ಬರದೆ ನೆಮ್ಮದಿ ಸಾಧ್ಯವಿಲ್ಲ ಎಂಬುದನ್ನು ಅರಿಯುವ ದಿನ.. ಸಂಖ್ಯಾ ಭವಿಷ್ಯವು ನಿಮ್ಮ ಜನ್ಮ ದಿನಾಂಕದ ಆಧಾರದ ಮೇಲೆ ಈ ದಿನದ ಭವಿಷ್ಯದ ಬಗ್ಗೆ ತಿಳಿಸುತ್ತದೆ. 

ಸಂಖ್ಯೆ 1 (ಯಾವುದೇ ತಿಂಗಳ 1, 10, 19 ಮತ್ತು 28 ರಂದು ಜನಿಸಿದ ಜನರು)
ವ್ಯಾಪಾರ ವ್ಯವಸ್ಥೆ ಸುಧಾರಿಸಬಹುದು. ಗಂಡ ಹೆಂಡತಿ ಭಿನ್ನಾಭಿಪ್ರಾಯ ಹೊಂದಿರಬಹುದು. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಆಸ್ತಿಯ ಮಾರಾಟ ಮತ್ತು ಖರೀದಿಗೆ ಸಂಬಂಧಿಸಿದ ಪ್ರಮುಖ ವಹಿವಾಟುಗಳ ಮೇಲೆ ಒಪ್ಪಂದಗಳನ್ನು ಮಾಡುವ ಸಾಧ್ಯತೆಯಿದೆ. ಪತಿ ಪತ್ನಿ ಪ್ರಣಯ ಸಂಬಂಧವನ್ನು ಹೊಂದಬಹುದು. 

ಸಂಖ್ಯೆ 2 (ಯಾವುದೇ ತಿಂಗಳ 2, 11, 20 ಅಥವಾ 29 ರಂದು ಜನಿಸಿದ ಜನರು)
ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆ ಗಮನ ವಹಿಸಬಹುದು. ಮನೆ ಸುಧಾರಣೆಯ ಕಾರ್ಯಗಳು ವಿಳಂಬವಾಗುತ್ತಲೇ ಹೋಗಿ ಮನಸ್ಸಿಗೆ ಕಸಿವಿಸಿಯಾಗುವುದು. ಮಳೆಯ ಕಾರಣಕ್ಕೆ ಯೋಜನೆಗಳು ತಲೆಕೆಳಗಾಗಬಹುದು. ಹತ್ತಿರದವರ ಅಭಿವೃದ್ಧಿ ನೋಡಿ ಕರುಬಬೇಡಿ. ಸ್ಪೂರ್ತಿ ಪಡೆಯಿರಿ. 

ಸಂಖ್ಯೆ 3 (ಯಾವುದೇ ತಿಂಗಳ 3, 12, 21, 30 ರಂದು ಜನಿಸಿದ ಜನರು)
ಬ್ಯಾಂಕಿಂಗ್ ಕಾರ್ಯಗಳನ್ನು ನಿರ್ವಹಿಸುವಾಗ ಹೆಚ್ಚಿನ ಎಚ್ಚರಿಕೆ ಅಗತ್ಯ. ವಿವಾದದ ಪರಿಸ್ಥಿತಿ ಉಂಟಾಗಬಹುದು. ಫಿಟ್‌ನೆಸ್‌ಗಾಗಿ ನೀವು ಮಾಡುವ ಪ್ರಯತ್ನ ನಿಲ್ಲಿಸಬೇಡಿ. ಡಯಟ್ ಬಗ್ಗೆ ಸಂಪೂರ್ಣ ಗಮನ ವಹಿಸಿ. ಸುಳ್ಳು ವಾದಗಳಿಂದ ದೂರವಿರುವುದು ಉತ್ತಮ. ನಿಮ್ಮ ಸಮಸ್ಯೆಗಳ ಬಗ್ಗೆ ಬಾಯಿ ಬಿಟ್ಟು ಮಾತನಾಡಿ. 

ಸಂಖ್ಯೆ 4 (ಯಾವುದೇ ತಿಂಗಳ 4, 13, 22 ಅಥವಾ 31 ರಂದು ಜನಿಸಿದ ಜನರು)
ಯಾರ ಮೇಲೂ ಅತಿಯಾದ ಅವಲಂಬನೆ ಒಳ್ಳೆಯದಲ್ಲ. ಅದು ಅವರಿಗೂ ಕಿರಿಕಿರಿ ತರುವುದು, ನಿಮಗೂ ಇರಿಸುಮುರಿಸುಂಟಾಗುವುದು. ಅವಮಾನದ ಪರಿಸ್ಥಿತಿ ಎದುರಿಸಬೇಕಾಗಬಹುದು. ಸ್ವಾವಲಂಬನೆಯ ದಾರಿಗಳತ್ತ ಕಣ್ಣು ಹಾಯಿಸಿ. ಕಷ್ಟ ಪಡದೇ ಕನಸಿನ ಬದುಕು ಸಾಧ್ಯವಿಲ್ಲ ಎಂಬುದು ನೆನಪಿರಲಿ. 

ಈ ನಾಲ್ಕು ನಕ್ಷತ್ರಗಳಲ್ಲಿ ಮಗು ಹುಟ್ಟಿದರೆ ಬಹಳ ಶುಭ, ನಿಮ್ಮ ನಕ್ಷತ್ರ ಇದರಲ್ಲಿದ್ಯಾ?

ಸಂಖ್ಯೆ 5 (ಯಾವುದೇ ತಿಂಗಳ 5, 14, 23 ರಂದು ಜನಿಸಿದ ಜನರು)
ವ್ಯವಹಾರದಲ್ಲಿ ಕೆಲವು ಅಡೆತಡೆಗಳು ಉಂಟಾಗಬಹುದು. ಧೃತಿಗೆಡಬೇಡಿ. ಕೌಟುಂಬಿಕ ಜೀವನದಲ್ಲಿ ಯಾವುದೇ ರೀತಿಯ ತಪ್ಪು ತಿಳುವಳಿಕೆ ಬರಲು ಬಿಡಬೇಡಿ. ಸ್ವಾಭಿಮಾನ ಬಿಟ್ಟು ಸಂಗಾತಿಯ ಬಳಿ ಮನ ಬಿಚ್ಚಿ ಮಾತನಾಡಿ. ಪ್ರಯಾಣವನ್ನು ತಪ್ಪಿಸುವುದು ಉತ್ತಮ. 

ಸಂಖ್ಯೆ 6 (ಯಾವುದೇ ತಿಂಗಳ 6, 15 ಅಥವಾ 24 ರಂದು ಜನಿಸಿದ ಜನರು)
ಹಣದ ಬೇಕಾಬಿಟ್ಟಿ ಖರ್ಚು ಒಳ್ಳೆಯದಲ್ಲ. ಉಳಿತಾಯ ಯೋಜನೆಗಳ ಕಡೆ ಗಮನ ಹರಿಸಿ. ಯಾವುದೇ ನಿರ್ಧಾರ ತೆಗೆದುಕೊಳ್ಳುವಲ್ಲಿ ಆತ್ಮಸಾಕ್ಷಿಯನ್ನು ಆಲಿಸಿ. ಔದ್ಯೋಗಿಕ ಒತ್ತಡವು ಮನೆಯ ವಾತಾವರಣವನ್ನು ಇನ್ನಷ್ಟು ಹದಗೆಡಿಸುತ್ತದೆ. ಅನಗತ್ಯ ಪ್ರವಾಸಗಳನ್ನು ತಪ್ಪಿಸುವುದು ಉತ್ತಮ. 

ಸಂಖ್ಯೆ 7 (ಯಾವುದೇ ತಿಂಗಳ 7, 16 ಮತ್ತು 25 ರಂದು ಜನಿಸಿದ ಜನರು)
ಯಾವುದೇ ದೀರ್ಘಕಾಲದ ಆತಂಕ ಮತ್ತು ಒತ್ತಡವನ್ನು ಇಂದು ನಿವಾರಿಸಬಹುದು. ನಿಮ್ಮ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಿಕಟ ಸಂಬಂಧಿಗಳು ತೊಡಗಿಸಿಕೊಳ್ಳುತ್ತಾರೆ. ಎಲ್ಲಿಂದಲೋ ಒಳ್ಳೆಯ ಸುದ್ದಿ ಬರಲಿದೆ. ವಿರೋಧಿಗಳು ಸಕ್ರಿಯವಾಗಿರಬಹುದು ಮತ್ತು ನಿಮ್ಮ ಕೆಲಸವನ್ನು ಅಡ್ಡಿಪಡಿಸಬಹುದು.  

2022ರಲ್ಲಿ ಈ ಎರಡು ದಿನ ಬಾಗಿಲು ಮುಚ್ಚಿರುತ್ತೆ ತಿರುಪತಿ ದೇವಸ್ಥಾನ!

ಸಂಖ್ಯೆ 8 (ಯಾವುದೇ ತಿಂಗಳ 8, 17 ಮತ್ತು 26 ರಂದು ಜನಿಸಿದ ಜನರು)
ಆರ್ಥಿಕ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ. ಪ್ರೇಮ ಸಂಬಂಧಗಳು ಮದುವೆಯಾಗಿ ಬದಲಾಗಬಹುದು. ಶಾಖ ಮತ್ತು ಮಾಲಿನ್ಯದಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ. ಒಡಹುಟ್ಟಿದವರೊಂದಿಗಿನ ಸಂಬಂಧದಲ್ಲಿ ಕೆಲವು ತಪ್ಪುಗ್ರಹಿಕೆಗಳು ಇರಬಹುದು.

ಸಂಖ್ಯೆ 9 (ಯಾವುದೇ ತಿಂಗಳ 9, 18 ಮತ್ತು 27 ರಂದು ಜನಿಸಿದ ಜನರು)
ಸುತ್ತಮುತ್ತಲಿನ ಚಟುವಟಿಕೆಗಳತ್ತ ಗಮನ ಹಾಯಿಸುತ್ತಾ ಸಮಯವನ್ನು ವ್ಯರ್ಥ ಮಾಡದೆ ನಿಮ್ಮ ಕೆಲಸದ ಮೇಲೆ ಕೇಂದ್ರೀಕರಿಸಿ. ಈ ಸಮಯದಲ್ಲಿ ನೀವು ಮಾಡಿದ ಕಠಿಣ ಪರಿಶ್ರಮಕ್ಕೆ ಸರಿಯಾದ ಫಲಿತಾಂಶವನ್ನು ನೀವು ಪಡೆಯುತ್ತೀರಿ. ಯಾವುದೇ ಆಸೆ ಈಡೇರಬಹುದು. ಕೆಲ ದಿನಗಳಿಂದ ಕಾಡುತ್ತಿದ್ದ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ.

PREV
Read more Articles on
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ