ಇನ್ನೂ ಒಂದೂವರೆ ವರ್ಷ ಕೊರೋನಾ ಕಾಟ; ಕೋಡಿಹಳ್ಳಿ ಶ್ರೀ ಭವಿಷ್ಯ

By Suvarna NewsFirst Published Jun 11, 2022, 4:57 PM IST
Highlights

ಇನ್ನೊಂದೂವರೆ ವರ್ಷ ಕಾಡಲಿರೋ ಕೊರೊನಾ
ಸಾಕಷ್ಟು ನೋವನ್ನು ಕೊಟ್ಟು ಹೋಗುವ ಕೊರೊನಾ
ಬಳ್ಳಾರಿಯಲ್ಲಿ ಕೊರೊನಾ ಬಗ್ಗೆ ಕೋಡಿಹಳ್ಳಿ ಶ್ರೀ ಭವಿಷ್ಯ
ಪೈಗಂಬರ ವಿಚಾರದಲ್ಲಿ ಗಲಾಟೆ ಹೆಚ್ಚಾಗಲಿದೆ ಎಂದ ಶ್ರೀಗಳು

ವರದಿ: ನರಸಿಂಹ ಮೂರ್ತಿ ಕುಲಕರ್ಣಿ

ರಾಜಕೀಯ, ಆರ್ಥಿಕತೆ, ಕೃಷಿ ಸೇರಿದಂತೆ  ಪ್ರಕೃತಿಯ ವಿಕೋಪದ ವಿಷಯಗಳ ಕುರಿತ ಭವಿಷ್ಯ ನುಡಿಯೋ ಮೂಲಕ ಜನಮನ ಸೆಳೆದಿರೋ ಕೋಡಿಹಳ್ಳಿ ಶ್ರೀ(Kodihalli Sri)ಗಳು, ಇದೀಗ ಕೊರೊನಾ ಮತ್ತಷ್ಟು ದಿನ ನಮ್ಮನ್ನು ಕಾಡಲಿದೆ ಎನ್ನುವ ಮೂಲಕ ಕೊರೊನಾ ಬಗ್ಗೆ ಭಯಂಕರ ಭವಿಷ್ಯ ನುಡಿದಿದ್ದಾರೆ. 
'ಇನ್ನೂ ಒಂದೂವರೆ ವರ್ಷ ಕಾಲ ಕೊರೊನಾ ನಮ್ಮ ಜೊತೆಗೆ ಇರೋ ಕೊರೊನಾ(Corona) ಹೋಗುವಾಗ ವಿಶೇಷ ಕಷ್ಟ ಕೊಟ್ಟು ಹೋಗುತ್ತದೆ. ಜಗತ್ತಿನಾದ್ಯಂತ ಕುಡಿಯೋಕೆ ನೀರಿಲ್ಲದ ಹಾಗೆ ಆಗುತ್ತದೆ, ಅಷ್ಟೊಂದು ನೋವನ್ನ ಕೊಡುತ್ತದೆ. ಈ ಬಗ್ಗೆ ಮೂರು ತಿಂಗಳ ಹಿಂದೆಯೇ ಹೇಳಿದ್ದೆ. ಆ ಪ್ರಕಾರ  ಇದೀಗ ಕೊರೊನಾ ಮತ್ತೆ ಬಂದಿದೆ.  ಒಂದೂವರೆ ವರ್ಷದಲ್ಲಿ ಕಾಟ ಕೊಡೋ ಮೂಲಕ ಸಂಪೂರ್ಣವಾಗಿ ಜಗತ್ತಿನಾದ್ಯಂತ ಕೋವಿಡ್ ಬಿಡುಗಡೆಯಾಗಿ ಹೋಗ್ತದೆ' ಎಂದು ಕೋಡಿ ಶ್ರೀ ಹೇಳಿದ್ದಾರೆ.

ದೇವರಿಗೂ ಕಾಟ ಕೊಟ್ಟಿರೋ ಕೊರೊನಾ
'ಇನ್ನೂ ವಿಶೇಷ ಅಂದ್ರೆ ಮನುಷ್ಯ ಕಷ್ಟ ಬಂದಾಗ ಮಾತ್ರ ದೇವರು, ಧರ್ಮ ಅಂತಾನೆ, ಪ್ರಾರ್ಥನೆ‌ ಮಾಡ್ತಾನೆ. ಆದ್ರೆ, ಕೊರೊನಾ ಎನ್ನುವ ವಿಶೇಷ ಕಾಯಿಲೆ ನೇರವಾಗಿ ಬಂದು ದೇವರನ್ನೆ ಹಿಡಿದುಕೊಂಡು, ದೇವಸ್ಥಾನಗಳ ಬಾಗಿಲು ಮುಚ್ಚಿಸಿತ್ತು. ಆಮೇಲೆ ಜನರ ಮೇಲೆ ಬಂತು, ನೀರಿನ ಮೇಲೆ, ಭೂಮಿ ಮೇಲೆ ಬಂತು. ಇನ್ನೂ ಒಂದುವರೆ ವರ್ಷದಲ್ಲಿ ಗಾಳಿ ಮೇಲೆ ಬರಬಹುದು, ಉಸಿರಾಟದ ತೊಂದರೆಯಾಗಿ ಜನ ಬಿದ್ದು ಸಾಯಬಹುದು. ಹೀಗಾಗಿಯೇ  ಹೋಗುವಾಗ ಕಷ್ಟ ಕೊಟ್ಟು ಹೋಗೋ ಕೊರೊನಾ ಬಗ್ಗೆ ಈಗಿನಿಂದಲೇ ಜನರು  ಎಚ್ಚರ ವಹಿಸಿದ್ರೆ  ಆಪಾಯದಿಂದ ತಪ್ಪಿಸಿಕೊಳ್ಳಬಹುದಾಗಿದೆ' ಎಂದರು.

ಈ ಐದು ರಾಶಿಗಳಿಗೆ ವ್ಯಂಗ್ಯ ಮಾಡೋದಂದ್ರೆ ನೀರು ಕುಡಿದಷ್ಟು ಸುಲಭ!
 
ಮಳೆಯೂ ಕಾಡಲಿದೆ

ಈ ಹಿಂದೆಯೇ  ಹೇಳಿರೋ ಪ್ರಕಾರ ಈ ಬಾರಿಯ ಮಳೆ ಕೆಂಡಾಮಂಡಲವಾಗಲಿದೆ. ಮಲೆನಾಡು ಬಯಲಾಗತ್ತೆ, ಬಯಲು ಮಲೆನಾಡಗತ್ತೆ ಎಂದು ಹೇಳಿದ್ದೆ. ಇದೀಗ ಆದೇ ರೀತಿಯಾಗ್ತಿದೆ. ಮುಂಗಾರು ಮಳೆ ಇನ್ನೂ ಹೆಚ್ಚಾಗೋ ಲಕ್ಷಣ ಕಾಣ್ತಾ ಇದೆ. ಅಲ್ಲದೇ ಈ ಬಾರಿ ಹಿಂಗಾರು ಮಳೆ ಅಕಾಲಿಕವಾಗಿ ಹೆಚ್ಚು ಸುರಿಯಲಿದೆ. ಮಳೆ ಹಾವಳಿ ಜಾಸ್ತಿಯಾಗೋದ್ರಿಂದ ದೊಡ್ಡ ದೊಡ್ಡ ನಗರಗಳಿಗೆ ತೊಂದರೆಯಾಗ್ತದೆ' ಎಂದು ಮಳೆ ಕುರಿತು ಭವಿಷ್ಯ ನುಡಿದಿದ್ದಾರೆ.

Shukra Gochar 2022: ಈ ಮೂರು ರಾಶಿಗಳ ಕಷ್ಟಗಳೆಲ್ಲ ಇನ್ನು 7 ದಿನದಲ್ಲಿ ತೀರಲಿದೆ!
 
ರಾಜಕೀಯ ಮತ್ತು ಗಲಾಟೆ
ರಾಜಕೀಯ ವಿಷಯವಾಗಿಯೂ ಮಾತಾಡಿರುವ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು, 'ರಾಜಕೀಯ ಅಸ್ತಿರವಾಗ್ತದೆ. ಗುಂಪು ಆಗ್ತಾವೆಂದು ಈಗಾಗಲೇ ಹೇಳಿರೋದು ಇದೀಗ ನಡೆಯುತ್ತಿದೆ.. ಒಟ್ಟಾರೆ  ರಾಜಕೀಯವೇ ಗುಂಪು ಗುಂಪಾಗಲಿದೆ. ಇದು ಯಾರ ಮೇಲೆ ಪರಿಣಾಮ ಬೀರಲಿದೆ ಅನ್ನೋದು ಹೇಳೋಕೆ ಆಗಲ್ಲ. ಕೇವಲ ಭಾರತವಲ್ಲ‌, ಪ್ರಪಂಚದಲ್ಲಿ ಅವಘಡ ಈಗ ಪ್ರಾರಂಭವಾಗಿದೆ. ಪೈಗಂಬರರನ್ನ ಅವಹೇಳನ‌ ಮಾಡಿರೋ ವಿಚಾರದಿಂದ ಇದೀಗ ಜಗತ್ತಿನದ್ಯಂತ ಗಲಾಟೆ ಶುರುವಾಗಿದೆ. ಮುಂದೆ ಇದರಿಂದ ದೊಡ್ಡ ಮಟ್ಟದ ಅಪಾಯ ಇದೆ' ಎಂದು ಅವರು ಹೇಳಿದ್ರು. .

click me!