ವೃಷಭದಿಂದ ಸಿಂಹದವರೆಗೆ ಈ ನಾಲ್ಕು ರಾಶಿಗಳು ಬೆಸ್ಟ್ ಪೇರೆಂಟ್ಸ್

By Suvarna News  |  First Published Jun 11, 2022, 11:56 AM IST

ಅತ್ಯುತ್ತಮ ಪೋಷಕರಾಗುವ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಈ ನಾಲ್ಕು ರಾಶಿಗಳ ಸ್ವಭಾವದಲ್ಲೇ ಅವರು ಉತ್ತಮ ಪೋಷಕರಾಗುವ ಲಕ್ಷಣಗಳಿರುತ್ತವೆ. ಅಂಥ 4 ರಾಶಿಚಕ್ರಗಳಿವು. 


ಮಕ್ಕಳನ್ನು ಬೆಳೆಸುವುದು ಸಣ್ಣ ಮಾತಲ್ಲ. ಅಲ್ಲಿಯವರೆಗೆ ಮಕ್ಕಳಂತೆ ಆಡಿಕೊಂಡಿರೋ ಪತಿ ಪತ್ನಿ(Husband and wife) ಇದ್ದಕ್ಕಿದ್ದಂತೆ ಬೆನ್ನ ಮೇಲೆ ಬಂದು ಬೀಳೋ ಹೆಚ್ಚಿನ ಜವಾಬ್ದಾರಿಯನ್ನು ಹೊತ್ತುಕೊಳ್ಳಲು ಒದ್ದಾಡಿ ಹೋಗುತ್ತಾರೆ. ಮಗುವು ಅರ್ಥ ಮಾಡಿಕೊಳ್ಳುವ ಸ್ಥಿತಿಯಲ್ಲೂ ಇರುವುದಿಲ್ಲ. ಹೀಗಾಗಿ ಪ್ರತಿ ಕ್ಷಣವೂ ಪೋಷಕರೇ ಅರ್ಥ ಮಾಡಿಕೊಳ್ಳಬೇಕು, ಜವಾಬ್ದಾರಿ(responsibility) ಹೊರಬೇಕು, ಪರಿಸ್ಥಿತಿ ಬಂದಂತೆ ನಿಭಾಯಿಸಬೇಕು. ಇದೇನು ಸುಲಭದ ವಿಷಯವಲ್ಲ. ಮಕ್ಕಳನ್ನು ಬೆಳೆಸಲು ಇದೇ ಸರಿಯಾದ ವಿಧಾನ ಎಂದು ಎಲ್ಲೂ ತಿಳಿಸಿಲ್ಲ. ಒಬ್ಬ ವ್ಯಕ್ತಿಯು ಉತ್ತಮ ಪಾಲನೆ ಎಂದು ಪರಿಗಣಿಸುವುದನ್ನು ಇನ್ನೊಬ್ಬರು ಪರಿಗಣಿಸದಿರಬಹುದು. ಹಾಗಿದ್ದೂ, ಕೆಲವರು ತುಂಬಾ ಚೆನ್ನಾಗಿ ಮಕ್ಕಳ ಪಾಲನೆ ಪೋಷಣೆಯಲ್ಲಿ ತೊಡಗುತ್ತಾರೆ. ಇಂಥವರ ಸ್ವಭಾವವೇ ಅದಕ್ಕೆ ಕಾರಣ. ಹೀಗೆ ಅತ್ಯುತ್ತಮ ಪೋಷಕ(best parents)ರೆನಿಸಿಕೊಳ್ಳುವವರು ಈ ನಾಲ್ಕು ರಾಶಿಚಕ್ರ(zodiac sign)ಗಳಿಗೆ ಸೇರಿರುತ್ತಾರೆ. 

ವೃಷಭ ರಾಶಿ(Taurus)
ವೃಷಭ ರಾಶಿಯ ತಾಯಂದಿರು ಮತ್ತು ಅಪ್ಪಂದಿರು ಅತ್ಯುತ್ತಮ ಪೋಷಕರು. ಅವರು ತಮ್ಮ ಮಗುವಿನ ಮೇಲೆ ನೆಲದ ಪ್ರಭಾವವನ್ನು ಹೊಂದಿರುದ್ದಾರೆ. ಅವರು ನಿಜವಾಗಿಯೂ ಮಗುವಿನ ಅಗತ್ಯಗಳನ್ನು, ಮುಖ್ಯವಾಗಿರುವುದನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಆದ್ದರಿಂದ ಅವರು ಸಣ್ಣ ವಿಷಯಗಳ ಬಗ್ಗೆ ಕೋಪಗೊಳ್ಳುವುದು ಅಥವಾ ಕಿರಿಕಿರಿಗೊಳ್ಳುವುದು ಅಪರೂಪ. ವೃಷಭ ರಾಶಿಯ ಪೋಷಕರು ತಮ್ಮ ಮಗುವಿಗೆ ಆದರ್ಶ ಪರಿಸರ ಮತ್ತು ಜೀವನಶೈಲಿಯನ್ನು ರಚಿಸಲು ಪ್ರಯತ್ನಿಸುತ್ತಾರೆ. ಅವರು ಬಹಳ ನಿಷ್ಠಾವಂತರು.

Tap to resize

Latest Videos

Shukra Gochar 2022: ಈ ಮೂರು ರಾಶಿಗಳ ಕಷ್ಟಗಳೆಲ್ಲ ಇನ್ನು 7 ದಿನದಲ್ಲಿ ತೀರಲಿದೆ!

ಮಿಥುನ ರಾಶಿ(Gemini)
ಮಿಥುನ ರಾಶಿಯ ಪೋಷಕರು ತಮ್ಮ ಮನೆಗೆ ವಿನೋದ ಮತ್ತು ಹಾಸ್ಯದ ಪ್ರಜ್ಞೆಯನ್ನು ತರುತ್ತಾರೆ. ಅವರು ತಮ್ಮ ಕುಟುಂಬಕ್ಕೆ ಮಾನಸಿಕವಾಗಿ ಸವಾಲು ಹಾಕುವುದನ್ನು ಆನಂದಿಸುತ್ತಾರೆ, ಆದ್ದರಿಂದ ಅವರು ತಮ್ಮ ಮಕ್ಕಳೊಂದಿಗೆ ಕ್ರಾಸ್‌ವರ್ಡ್ ಪದಬಂಧಗಳಲ್ಲಿ ಕೆಲಸ ಮಾಡುವುದನ್ನು ಅಥವಾ ರಾತ್ರಿಯ ಊಟದ ನಂತರ ಸುಡೊಕು ಪರಿಹರಿಸುವುದನ್ನು ಆಗಾಗ್ಗೆ ಕಾಣಬಹುದು. ಶಿಕ್ಷಣದಲ್ಲಿ ತಮ್ಮ ಮಕ್ಕಳಿಗೆ ಅವರ ಮೊದಲ ಆದ್ಯತೆ. ಅವರು ಕುಟುಂಬ, ಸಮಾಜವನ್ನು ಗೌರವಿಸುವುದರಿಂದ, ತಮ್ಮೆಲ್ಲ ಕುಟುಂಬ ಸದಸ್ಯರೊಂದಿಗೆ, ಹೊರ ಜಗತ್ತಿನೊಂದಿಗೆ ಹೆಚ್ಚು ಬೆರೆಯಲು ಮಗುವಿಗೆ ಅವಕಾಶಗಳನ್ನು ಕಲ್ಪಿಸುತ್ತಾರೆ. 

ಕರ್ಕಾಟಕ ರಾಶಿ(Cancer)
ಕುಟುಂಬ ಮತ್ತು ಮನೆಯ ಜೀವನಕ್ಕಿಂತ ಕರ್ಕಾಟಕ ರಾಶಿಯವರಿಗೆ ಯಾವುದೂ ಹೆಚ್ಚು ಮುಖ್ಯವಲ್. ಅವರು ಬೆಚ್ಚಗಿನ, ಪ್ರೀತಿಯ ಮತ್ತು ಬೆಂಬಲದ ವಾತಾವರಣವನ್ನು ಸೃಷ್ಟಿಸಲು ಹೆಚ್ಚಿನ ಪ್ರಯತ್ನ ಮಾಡುತ್ತಾರೆ. ಕರ್ಕಾಟಕ ರಾಶಿಯ ತಾಯಿ ಇಲ್ಲವೇ ತಂದೆ ಗರ್ಭಧಾರಣೆ, ಜನನ ಮತ್ತು ಅವರ ಮಗುವಿನ ಬೆಳವಣಿಗೆಯ ಪ್ರತಿ ಅದ್ಭುತ ಕ್ಷಣಗಳನ್ನು ಆನಂದಿಸುತ್ತಾರೆ ಮತ್ತು ಕಲಿಯುತ್ತಾರೆ. ಅವರು ಭಾವನಾತ್ಮಕವಾಗಿರುವುದರಿಂದ, ಕೋಮಲ, ರಕ್ಷಣಾತ್ಮಕ, ಸೂಕ್ಷ್ಮವಾಗಿ ತಮ್ಮ ಮಗುವಿನ ಬಗ್ಗೆ ಕಾಳಜಿ ವಹಿಸುತ್ತಾರೆ. 

ರಾಹು ಸೇರಿ ಸಂಕಷ್ಟ ಪರಿಹಾರಕ್ಕೆ 'ಉದ್ದಿನಕಾಳು' ಪರಿಹಾರ!

ಸಿಂಹ ರಾಶಿ(Leo)
ಸಿಂಹ ರಾಶಿಯ ಪೋಷಕರು ಕುಟುಂಬದ ನಿಷ್ಠೆ, ರಕ್ಷಣೆ ಮತ್ತು ಪ್ರೀತಿಯನ್ನು ಹೆಚ್ಚು ಗೌರವಿಸುತ್ತಾರೆ. ಅವರ ಮಕ್ಕಳ ಮನಸ್ಸನ್ನು ಅರಿಯುವಲ್ಲಿ ಎತ್ತಿದ ಕೈ. ಅವರು ಭಾವನೆಗಳನ್ನು ಮುಚ್ಚಿಡುವವರಲ್ಲ. ಹೀಗಾಗಿ, ಅವರ ಮಕ್ಕಳಿಗೂ ಪೋಷಕರ ಮನೋಭಾವನೆ ಅರ್ಥವಾಗುತ್ತದೆ. ಇದರಿಂದ ಇಬ್ಬರ ನಡುವೆ ಹೆಚ್ಚಿನ ಬಾಂಧವ್ಯ ಮೂಡುತ್ತದೆ. ಸಿಂಹ ರಾಶಿಯವರು ಜೀವನವನ್ನು ಆನಂದಿಸುತ್ತಾರೆ ಮತ್ತು ಯಾವಾಗಲೂ ಜೀವನವನ್ನು ಪ್ರಕಾಶಮಾನವಾದ ಬದಿಯಲ್ಲಿ ನೋಡಲು ಪ್ರಯತ್ನಿಸುತ್ತಾರೆ. 
 

ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!