ದೇಹದ ಮೇಲಿನ ಮಚ್ಚೆಗೂ ಹಿಂದಿನ ಜನ್ಮಕ್ಕೂ ಸಂಬಂಧ ಇದೆಯಾ? ಪುನರ್ಜನ್ಮದ ಬಗ್ಗೆ ಗಾಂಧಿಜಿಗೆ ಆದ ಅನುಭವವೇನು? ಡಾ. ರಾಮಚಂದ್ರ ಗುರೂಜಿ ಹೇಳಿದ್ದಾರೆ ನೋಡಿ.
ಅದು 1936ನೇ ಇಸ್ವಿ. ಗಾಂಧೀಜಿಯವರ ತೊಡೆಯ ಮೇಲೆ ಆರು ವರ್ಷದ ಪುಟ್ಟ ಬಾಲಕಿಯೊಬ್ಬಳು ಕುಳಿತಿದ್ದಳು. ಆಕೆ ಹೆಸರು ಶಾಂತಿದೇವಿ. ಅವಳು ನನಗೆ ಮದುವೆಯಾಗಿದೆ. ನನಗೆ ಮಗ ಇದ್ದಾನೆ. ಗಂಡನೂ ಇದ್ದಾನೆ. ಅವರ ಹೆಸರು ಹೀಗಿದೆ ಇದೆ. ನನ್ನ ಹೆಸರು ಲುಗುಡಿದೇವಿ ಎಂದಳು. ಗಾಂಧೀಜಿಯವರಿಗೆ ಇದು ಶಾಕ್ ಆಯಿತು. ಬಾಲಕಿ ಇಷ್ಟೆಲ್ಲಾ ಹೇಳುತ್ತಿದ್ದಾಳೆ ಎಂದ ಮೇಲೆ ನೋಡಿಯೇ ಬಿಡೋಣ ಎಂದು 15 ಮಂದಿಯನ್ನು ಕರೆದುಕೊಂಡು, ಆ ಪ್ರದೇಶಕ್ಕೆ ಹೋದರೆ ಗಾಂಧೀಜಿಯವರಿಗೆ ಆಶ್ಚರ್ಯ ಆಗೋಯ್ತು. ಬಳಿಕ ಸತ್ಯ ಶೋಧನಾ ಸಮಿತಿ ರಚನೆಗೊಂಡು ಈ ಬಗ್ಗೆ ವಿಚಾರಣೆ ಮಾಡಿದಾಗ, ಆ ಬಾಲಕಿ ಹೇಳ್ತಿರೋದೆಲ್ಲವೂ ಸತ್ಯ. ಇದು ಆಕೆಯ ಪುನರ್ಜನ್ಮ ಎಂದು ತಿಳಿಯಿತು. ಇದನ್ನು ಗಾಂಧೀಜಿವರು ಖುದ್ದಾಗಿ I have lived before ಎನ್ನುವ ಪುಸ್ತಕದಲ್ಲಿ ದಾಖಲು ಮಾಡಿದ್ದಾರೆ. ಭಾರತದಲ್ಲಿ ದಾಖಲಾದ ಮೊದಲ ಪುನಜ್ಮನ್ಯದ ಕಥೆಯಿದು...
- ಹೀಗೆಂದು ಮೈಮೇಲಿನ ಮಚ್ಚೆಯ ಗುಟ್ಟನ್ನು ತೆರೆದಿಡುತ್ತಲೇ ಗಾಂಧೀಜಿಯ ಈ ವಿಷಯವನ್ನು ತಿಳಿಸಿದವರು ಡಾ.ರಾಮಚಂದ್ರ ಗುರೂಜಿ. ರಾಜೇಶ್ ಗೌಡ ಅವರ ಯೂಟ್ಯೂಬ್ ಜೊತೆಗಿನ ಮಾತುಕತೆಯಲ್ಲಿ ಈ ವಿಷಯದ ಕುರಿತು ಅವರು ಮಾತನಾಡಿದ್ದಾರೆ. ಮೈಮೇಲೆ ಮೂಡುವ ಮಚ್ಚೆಗಳು, ಬಗೆಹರಿಯಲಾಗದ ಹಲವು ಕಾಯಿಲೆಗಳು, ಸ್ಕ್ಯಾನಿಂಗ್, ಬ್ಲಡ್ ಟೆಸ್ಟ್ಗಳಲ್ಲಿಯೂ ಸಿಗದ ಕೆಲವೊಂದು ಸಮಸ್ಯೆಗಳಿಗೆ ಹೇಗೆ ಪುನಜ್ಮನ, ಹಿಂದಿನ ಜನ್ಮ ತಾಳೆ ಹಾಕಿಕೊಂಡಿದೆ ಎನ್ನುವ ಬಗ್ಗೆ ಗುರೂಜಿ ಮಾತನಾಡಿದ್ದಾರೆ.
ಅಪ್ಪು ನಿಜವಾಗಿ ಸತ್ತಿದ್ದು ಹೇಗೆ? ಈಗ ಎಲ್ಲಿದ್ದಾರೆ? ಆತ್ಮದ ಜೊತೆ ಸಂಭಾಷಿಸಿದ ರಾಮಚಂದ್ರ ಗುರೂಜಿ
ಇದಾಗಲೇ ನಟ ಪುನೀತ್ ರಾಜ್ಕುಮಾರ್, ವಿರಪ್ಪನ್ ಸೇರಿದಂತೆ ಕೆಲವರ ಆತ್ಮದ ಜೊತೆ ಮಾತನಾಡಿರುವ ಗುರೂಜಿ ಅವರು ದೇವರು, ದೆವ್ವಗಳ ನಡುವೆ ನೇರಪ್ರಸಾರದಲ್ಲಿಯೇ ಸಂಪರ್ಕ ಸಾಧಿಸಿರುವುದಾಗಿ ಹೇಳಿದ್ದಾರೆ. ಇದೀಗ ಪುನರ್ಜನ್ಮ ಎನ್ನುವುದು ಬರೀ ಭ್ರಮೆ ಎಂದು ಹಲವರು ಹೇಳುತ್ತಾರೆ. ಆದರೆ ವಿತ್ತಂಡ ವಾದ ಮಾಡುವವರಿಗೆ ಉತ್ತರಿಸುವ ಅವಶ್ಯಕೆ ಇಲ್ಲ ಎಂದಿರುವ ಗುರೂಜಿ, ಗಾಂಧೀಜಿಯವರ ಉದಾಹರಣೆ ನೀಡುತ್ತಲೇ ವಿದೇಶಗಳಲ್ಲಿನ ಸೈಕ್ರಿಯಾಟ್ರಿಸ್ಟ್ಗಳು ಪುನರ್ಜನ್ಮದ ಕುರಿತು ಮಾಡಿರುವ ಅಧ್ಯಯನದ ಕುರಿತು ಗುರೂಜಿ ವಿವರಿಸಿದ್ದಾರೆ. ಅಮೆರಿಕದ ಸೈಕಾಲಾಜಿ ಪ್ರೊಫೆಸರ್ 40 ವರ್ಷ ಸಂಶೋಧನೆ ಮಾಡಿ ಪುರ್ನಜ್ಮದ ಕುರಿತು ಅನೇಕ ಗ್ರಂಥ ಬರೆದಿದ್ದಾರೆ. ಅವರ ಶಿಷ್ಯ ಜಿನ್ ಟಕ್ಕರ್ ಹಾಗೂ ಸದ್ಯ ಬೆಂಗಳೂರಿನ ನಿಮ್ಹಾನ್ಸ್ನಲ್ಲಿ ಸೈಕಾಲಾಜಿ ಪ್ರೊಫೆಸರ್ ಆಗಿರುವ ಅವರ ಶಿಷ್ಯೆ ಪುನರ್ಜನ್ಮದ ಕುರಿತು ನಾಲ್ಕು ಗ್ರಂಥಗಳನ್ನು ಬರೆದಿದ್ದಾರೆ. ಗಾಂಧೀಜಿಯವರ ಪುಸ್ತಕವನ್ನು ನಾನು, 'ನಾನು ಈ ಹಿಂದೆಯೂ ಬದುಕಿದ್ದೆ' ಎಂದು ಕನ್ನಡಕ್ಕೆ ತರ್ಜುಮೆ ಮಾಡಿದ್ದೇನೆ. ಇವುಗಳನ್ನು ನೋಡಿದರೆ ಪುನರ್ಜನ್ಮದ ಬಗ್ಗೆ ತಿಳಿಯುತ್ತದೆ ಎಂದಿದ್ದಾರೆ.
ಅದೇ ವೇಳೆ ದೇಹದಲ್ಲಿ ದೊಡ್ಡ ದೊಡ್ಡ ಮಚ್ಚೆಗಳು ಬರಲು ಕಾರಣ, ಹಿಂದಿನ ಜನ್ಮದಲ್ಲಿ ಆ ಭಾಗಕ್ಕೆ ಆಗಿರುವ ಆಳವಾದ ಗಾಯ ಎನ್ನುವುದು ರಾಮಚಂದ್ರ ಗುರೂಜಿ ಅವರ ಮಾತು. ಆ ಶರೀರದ ಭಾಗಕ್ಕೆ ತುಂಬಾ ನೋವಾಗಿರುತ್ತದೆ. ಆ ಭಾಗದಲ್ಲಿ ಪ್ಯಾಚ್ ಆಗುತ್ತದೆ. ಅದೇ ಮಚ್ಚೆಯ ರೂಪ ತಾಳುತ್ತದೆ ಎಂದಿದ್ದಾರೆ. ಇನ್ನು ಕೆಲವು ಸಂದರ್ಭದಲ್ಲಿ ಕೆಲವರಿಗೆ ವೈದ್ಯರೂ ಬಗೆಹರಿಸದ ಸಮಸ್ಯೆ ಕಾಡುತ್ತದೆ. ಬಾಡಿ ಪೇನ್, ತಲೆ ನೋವಿನಿಂದ ಹಿಡಿದಿ ವಾಸಿಯಾಗದ ಕೆಲವು ವ್ಯಾಧಿಗಳಿಗೆ ಮೂಲ ಕಾರಣವೇ ತಿಳಿಯುವುದಿಲ್ಲ. ಸ್ಕ್ಯಾನಿಂಗ್, ಬ್ಲಡ್ ಟೆಸ್ಟ್ ಎಲ್ಲಾ ಓಕೆ ಇದ್ದರೂ ಸಮಸ್ಯೆ ಮಾತ್ರ ಬಗೆಹರಿದಿರುವುದಿಲ್ಲ. ಇದಕ್ಕೆ ಕಾರಣವೂ ಹಿಂದಿನ ಜನ್ಮದ್ದೇ. ಅದನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಬೇಕಾಗುತ್ತದೆ ಎನ್ನುವುದು ಅವರ ಮಾತು.
ಮೃತ ವ್ಯಕ್ತಿ ಜೀವಂತ ಆಗುವುದ್ಯಾಕೆ? ದೇಹದಲ್ಲಿರೋ ಧನಂಜಯ ಯಾರು? ರಾಮಚಂದ್ರ ಗುರೂಜಿ ರಿವೀಲ್