ಗಣಪತಿ ಬಪ್ಪನ ನೋಡಲು ಬಂದ ನಾಗರ: ತಿರುಪತಿ ವೀಡಿಯೋ ಸಖತ್ ವೈರಲ್

By Anusha Kb  |  First Published Sep 17, 2024, 4:30 PM IST

ಇಲ್ಲೊಂದು ಕಡೆ ಗಣಪನ ಕೂರಿಸಿದ ಗಣೇಶ ಪೆಂಡಾಲ್‌ಗೆ ನಿಜ ಹಾವೊಂದು ಬಂದಿದ್ದು, ಗಣೇಶನ ದೇಹದ ಮೇಲೆಲ್ಲಾ ಓಡಾಡಿ ಬಳಿಕ ಹೊರಟು ಹೋಗಿದೆ. ಈ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ. 


ವಿಘ್ನನಿವಾರಕ ತಿಂಡಿಪೋತ, ಮಕ್ಕಳ ಪ್ರೀತಿಯ ಬಪ್ಪನಿಗೂ ಹಾವಿಗೂ ಅವಿನಾಭಾವ ಸಂಬಂಧವಿದೆ. ಜಾನಪದ ಕತೆಗಳಲ್ಲಿರುವಂತೆ ತಾಯಿ ಗೌರಿಯೊಂದಿಗೆ  ಗಣೇಶ ಹಬ್ಬಕ್ಕೆ ಅಜ್ಜಿಯ ಮನೆಗೆ ಬರುವ ಬಾಲ ಗಣಪ ಅಜ್ಜಿ ಮನೆಯಲ್ಲಿ ಮೊಮ್ಮಗನಿಗೆ ಮಾಡಿದ, ಕರ್ಜಿಕಾಯಿ, ಲಾಡು, ಕಡುಬು ಸೇರಿದಂತೆ ಬಗೆ ಬಗೆಯ ತಿಂಡಿ ತಿನಿಸುಗಳ ವಿಶೇಷ ಔತಣವನ್ನು ಹೊಟ್ಟೆ ಬಿರಿಯುವಂತೆ ತಿಂದು ನಡೆಯಲಾಗದಾಗ ತನ್ನ ಡುಮ್ಮ ಡುಮ್ಮ ಹೊಟ್ಟೆಗೆ ಹಾವನ್ನು ಹಗ್ಗದಂತೆ ಕಟ್ಟಿ ನಡೆದಾಡಿದ ಎಂಬ ನಂಬಿಕೆ ಇದೆ.  ಹೀಗೆ ನಡೆಯುವ ವೇಳೆ ಜಾರಿಬಿದ್ದ ಗಣಪನ ನೋಡಿ ನಕ್ಕ ಆಗಸದ ಚಂದ್ರನಿಗೆ ಗಣೇಶ ಸಿಟ್ಟಿಗೆದ್ದು ಶಾಪವನ್ನು ಕೊಟ್ಟ ಎಂಬ ಕತೆ ಬಹುತೇಕರಿಗೆ ಗೊತ್ತು. ಈ ಕತೆ ಈಗೇಕೆ ಅಂತಿರಾ? ಇಲ್ಲೊಂದು ಕಡೆ ಗಣಪನ ಕೂರಿಸಿದ ಗಣೇಶ ಪೆಂಡಾಲ್‌ಗೆ ನಿಜ ಹಾವೊಂದು ಬಂದಿದ್ದು, ಗಣೇಶನ ದೇಹದ ಮೇಲೆಲ್ಲಾ ಓಡಾಡಿ ಬಳಿಕ ಹೊರಟು ಹೋಗಿದೆ. ಈ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ. 

ಆಂಧ್ರಪ್ರದೇಶದ ತಿರುಪತಿಯಲ್ಲಿನ ಗಣೇಶ ಪೆಂಡಾಲೊಂದರಲ್ಲಿ ಈ ಅಪರೂಪದ ದೃಶ್ಯ ನಡೆದಿದೆ. ಗಣಪತಿಯ ಕುತ್ತಿಗೆ ಬಳಿಯಿಂದ ಕೆಳಗೆ ಬಂದ ಗಣೇಶ ಬಳಿಕ ಗಣೇಶಮ ಕತ್ತಿನ ಸುತ್ತಲೂ ಸುತ್ತಾಡಿ ಬಳಿಕ ಹೊಟ್ಟೆಯಿಂದ ಕೆಳಗೆ ಇಳಿದು ಓಡಾಡಿದೆ. ಈ ದೃಶ್ಯವನ್ನು ಅಲ್ಲೇ ಇದ್ದವರು ರೆಕಾರ್ಡ್ ಮಾಡಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ವಿಡಿಯೋ ನೋಡಿದ ಅನೇಕರು ಈ ಅಪರೂಪದ ಕ್ಷಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 3 ಲಕ್ಷಕ್ಕೂ ಅಧಿಕ ಮಂದಿ ಈ ವೀಡಿಯೋವನ್ನು ವೀಕ್ಷಿಸಿದ್ದಾರೆ. 

Latest Videos

undefined

ಇದನ್ನು ನೋಡಿದ ಒಬ್ಬರು ಹಾವಿಗೂ ಗಣೇಶನಿಗೂ ಇರುವ ಆಧ್ಯಾತ್ಮಿಕ ಸಂಬಂಧದ ಬಗ್ಗೆ ವಿವರಿಸಿ ಕಾಮೆಂಟ್ ಮಾಡಿದ್ದಾರೆ.  ದೇವ ಗಣೇಶನನ್ನು ಕುಂಡಲಿನಿ ರೂಪುಗೊಳ್ಳುವ ಮೂಲಧಾರದ ಆಡಳಿತಗಾರ ಎಂದು ಕರೆಯುತ್ತಾರೆ. ಈ ಕುಂಡಲಿನಿ ಹಾವಿನ ರೂಪದಲ್ಲಿ ಇರುತ್ತದೆ. ಹಾಗೆಯೇ ಗಣೇಶ ಕೇತುವಿಗೂ ದೇವರಾಗಿದ್ದಾನೆ. ಕೇತು ಎಂದರೆ ಸರ್ಪವಾಗಿದೆ. ಹಾಗೂ ಗಣೇಶ ಹಾವನ್ನು ಆಭರಣದಂತೆ ಧರಿಸುತ್ತಾನೆ. ಹೀಗಾಗಿ ನೀವು ಅದೃಷ್ಟವಂತರು ಗಣೇಶ ನಿಮ್ಮನ್ನು ಆಶೀರ್ವದಿಸಿದ್ದಾನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.  ಹೀಗೆ ಅನೇಕರು ಈ ವೀಡಿಯೋಗೆ ಲವ್ ಸಿಂಬಲ್ ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

 

click me!