Bengaluru: ರಾತ್ರಿಯಿಂದಲೇ ಸಿಲಿಕಾನ್ ಸಿಟಿಯಲ್ಲಿ ಕ್ರಿಸ್‌ಮಸ್‌ ಸಂಭ್ರಮಾಚರಣೆ

By Govindaraj SFirst Published Dec 25, 2022, 10:40 AM IST
Highlights

ಶಿವಾಜಿ ನಗರದ ಸೆಂಟ್‌ ಮೇರಿಸ್‌ ಬೆಸಿಲಿಕಾ ಚರ್ಚ್‌, ಕ್ಲೈವ್‌ಲ್ಯಾಂಡ್‌ನ ಸೆಂಟ್‌ ಮಾರ್ಕ್ಸ್ ಕ್ಯಾಥೆಡ್ರಾಲ್‌ ಸೇರಿ ರಾಜಧಾನಿಯ ಎಲ್ಲ ಚರ್ಚ್‌ಗಳಲ್ಲಿ ಕ್ರಿಸ್ಮಸ್‌ ಈವ್‌ ಆಚರಣೆ ಶನಿವಾರ ತಡರಾತ್ರಿ ಸಂಭ್ರಮದಿಂದ ನಡೆಯಿತು. 

ಬೆಂಗಳೂರು (ಡಿ.25): ಶಿವಾಜಿ ನಗರದ ಸೆಂಟ್‌ ಮೇರಿಸ್‌ ಬೆಸಿಲಿಕಾ ಚರ್ಚ್‌, ಕ್ಲೈವ್‌ಲ್ಯಾಂಡ್‌ನ ಸೆಂಟ್‌ ಮಾರ್ಕ್ಸ್ ಕ್ಯಾಥೆಡ್ರಾಲ್‌ ಸೇರಿ ರಾಜಧಾನಿಯ ಎಲ್ಲ ಚರ್ಚ್‌ಗಳಲ್ಲಿ ಕ್ರಿಸ್ಮಸ್‌ ಈವ್‌ ಆಚರಣೆ ಶನಿವಾರ ತಡರಾತ್ರಿ ಸಂಭ್ರಮದಿಂದ ನಡೆಯಿತು. ಚರ್ಚ್‌ಗಳಲ್ಲಿ ಸಂಜೆಯಿಂದಲೇ ದೇವದೂತರ ಧಿರಿಸಿನಲ್ಲಿ ಮಕ್ಕಳು ಏಸುವಿನ ಕುರಿತಾದ ಹಾಡುಗಳ (ಕ್ಯಾರೆಲ್ಸ್‌ ) ಮೂಲಕ ಆರಾಧನೆ ಮಾಡಿದರು.  ಶ್ರದ್ಧಾ ಭಕ್ತಿಯಿಂದ ವಿಶೇಷ ಸಾಮೂಹಿಕ ಪ್ರಾರ್ಥನೆ (ಮಾಸ್‌) ಜರುಗಿತು. ಏಸು, ಮೇರಿಯ ಎದುರು ಮೊಂಬತ್ತಿಗಳನ್ನು ಬೆಳಗಿ ಭಕ್ತಿ ಸಮರ್ಪಿಸಿದರು. 

ಬೈಬಲ್‌ನ ಎರಡನೇ ಅಧ್ಯಾಯವನ್ನು ಪಠಣ ಮಾಡಲಾಯಿತು. ಅಲಂಕೃತ ಗೋದಲಿಗೆ ಪೂಜೆ ಸಲ್ಲಿಸಿ ಏಸು ಜನನವನ್ನು ಸಂಭ್ರ ಮಿಸಲಾಯಿತು. ಬಳಿಕ ಸಾಂತಾ ಕ್ಲಾಸ್‌ ವೇಷಧಾರಿಗಳು ಮಕ್ಕಳಿಗೆ ಉಡುಗೊರೆ, ಚಾಲೋಲೆಟ್‌ ವಿತರಣೆ ಮಾಡಿದರು.ಪರಸ್ಪರ ಹಂಚಿಕೊಳ್ಳುವ ಮೂಲಕ ಪರಸ್ಪರ ಶುಭ ಕೋರಿಕೊಂಡರು.ಬೆಂಗಳೂರಿನ ಮಹಾ ಧರ್ಮಾಧ್ಯಕ್ಷರಾದ ಆರ್ಚ್‌ ಬಿಷಪ್‌ ಡಾ.ಪೀಟರ್‌ ಮಚಾಡೋ, ಬೆಂಗಳೂರು ಮಹಾಧರ್ಮಕ್ಷೇತ್ರ ಶ್ರೇಷ್ಠ ಗುರು ಫಾ.ಸಿ.ಫ್ರಾನ್ಸಿಸ್‌ ಅವರು ಏಸುವಿನ ಶಾಂತಿ, ಪ್ರೀತಿ, ಸೇವೆ ಹಾಗೂ ತ್ಯಾಗದ ಸಂದೇಶವನ್ನು ಬೋಧಿಸಿದರು.

Latest Videos

Christmas 2022: ಜಗ​ಕೆ ಮನು​ಷ್ಯತ್ವದ ಪಾಠ ಹೇಳಿದ ಯೇಸು​ ಕ್ರಿ​ಸ್ತ

ಕೋವಿಡ್‌ ಜಾಗೃತಿ: ಶಿವಾಜಿ ನಗರದ ಸೇಂಟ್‌ ಬೆಸಿಲಿಕಾ ಚರ್ಚ್‌ನಲ್ಲಿ ಪ್ರಾರ್ಥನೆಗೆ ಬರುವವರು ಮಾಸ್ಕ್‌ ಧರಿಸಿಯೆ ಬರಬೇಕು. ಸ್ಯಾನಿಟೈಸರ್‌ ಬಳಸಬೇಕು ಹಾಗೂ ಸಾಮಾಜಿಕ ಅಂತರ ಕಾಪಾಡಬೇಕು ಎಂದು ಎಂದು ಫಲಕ ಅಳವಡಿಸಲಾಗಿದೆ. ಜತೆಗೆ ಚರ್ಚ್‌ಗೆ ಬಂದವರಿಗೆ ಈ ಬಗ್ಗೆ ಜಾಗೃತಿಯನ್ನೂ ಮೂಡಿಸಲಾಯಿತು.

200ಕ್ಕೂ ಹೆಚ್ಚು ಚರ್ಚ್‌ಗಳಲ್ಲಿ ಆಚರಣೆ: ನಗರದ ಪ್ರಮುಖವಾದ ಶಿವಾಜಿನಗರ ಸೆಂಟ್‌ ಮೇರಿಸ್‌ ಬೆಸಿಲಿಕಾ ಚರ್ಚ್‌, ಎಂಜಿ ರಸ್ತೆಯ ಸೆಂಟ್‌ ಮಾರ್ಕ್ಸ್ ಕ್ಯಾಥೆಡ್ರಲ್‌ ಚರ್ಚ್‌, ಕ್ಲೈವ್‌ ಲ್ಯಾಂಡ್‌ ಟೌನ್‌ನಲ್ಲಿನ ಸೆಂಟ್‌ ಫ್ರಾನ್ಸಿಸ್‌ ಕ್ಸೆವಿಯರ್‌ ಕೆಥಡ್ರಲ್‌, ಸೆಂಟ್‌ ಜಾನ್ಸ್‌ ಚರ್ಚ್‌, ಚಾಮರಾಜಪೇಟೆಯ ಸೆಂಟ್‌ ಲ್ಯೂಕ್ಸ್‌ ಚರ್ಚ್‌, ಅಶೋಕ ನಗರದ ಸೆಕ್ರೆಡ್‌ ಹಾಟ್ಸ್‌ರ್‍ ಚರ್ಚ್‌, ಪ್ರಿಮ್‌ರೋಸ್‌ ರಸ್ತೆಯ ಮಾರ್‌ಥೋಮಾ ಚರ್ಚ್‌, ಹೋಲಿ ಟ್ರಿನಿಟಿ ಚರ್ಚ್‌, ಬ್ರಿಗೆಡ್‌ ರಸ್ತೆಯ ಸೆಂಟ್‌ ಪ್ಯಾಟ್ರಿಕ್ಸ್‌ ಚರ್ಚ್‌, ಹಡ್ಸನ್‌ ವೃತ್ತದ ಹಡ್ಸನ್‌ ಮೆಮೊರಿಯಲ್‌ ಚರ್ಚ್‌, ವಿವೇಕ ನಗರದ ಇನ್‌ಫಂಟ್‌ ಜೀಸಸ್‌ ಚರ್ಚ್‌, ಟಸ್ಕರ್‌ ಟೌನ್‌ ಸೆಂಟ್‌ ಆ್ಯಂಡ್ರೂಸ್‌ ಚರ್ಚ್‌, ಹೊಸೂರು ರಸ್ತೆಯ ಆಲ್‌ ಸೈಂಟ್ಸ್‌ ಚರ್ಚ್‌, ಹೆಬ್ಬಾಳದ ಬೆಥೆಲ್‌ ಅಸೆಂಬ್ಲಿ ಆಫ್‌ ಗಾಡ್‌, ಎಂಜಿ ರಸ್ತೆಯ ಈಸ್ಟ್‌ ಪರೇಡ್‌, ಸರ್ಜಾಪುರ ರಸ್ತೆಯ ಮೌಂಟ್‌ ಕಾರ್ಮೆಲ್‌ ಚರ್ಚ್‌, ಹೋಲಿ ಗೋಸ್ಟ್‌ ಚರ್ಚ್‌ ಸೇರಿ 200ಕ್ಕೂ ಹೆಚ್ಚಿನ ಚರ್ಚ್‌ಗಳಲ್ಲಿ ಕ್ರಿಸ್ಮಸ್‌ ಆಚರಣೆ ಸಂಭ್ರಮದಿಂದ ನಡೆಯಲಿದೆ.

Christmas wishes 2022: ಕರ್ನಾಟಕದ ಸಮಸ್ತರಿಗೆ ಮೆರಿ ಕ್ರಿಸ್ಮಸ್

ಕುಟುಂಬದ ವರ್ಷವಾಗಿ ಆಚರಣೆ: ಕ್ರಿಸ್ಮಸ್‌ ಸಂದೇಶ ನೀಡಿದ ಬೆಂಗಳೂರು ಮಹಾಧರ್ಮಾಧ್ಯಕ್ಷರಾದ ಆರ್ಚ್‌ ಬಿಷಪ್‌ ಡಾ. ಪೀಟರ್‌ ಮಚಾಡೊ ‘ಕ್ರಿಸ್ಮಸ್‌ ಹಬ್ಬದ ಮೂಲಕ ಇತರರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಬೇಕು. ಉಳ್ಳವರು ಬಡವರನ್ನು ಒಳಗೊಂಡು ಹಬ್ಬವನ್ನು ಆಚರಿಸಬೇಕು. ಈ ವರ್ಷ ಧರ್ಮ ಕೇಂದ್ರದ ಮಾರ್ಗಸೂಚಿಯಂತೆ ‘ಕುಟುಂಬದ ವರ್ಷ (ಇಯರ್‌ ಆಫ್‌ ದಿ ಫ್ಯಾಮಿಲಿ)’ ವಾಗಿ ಕ್ರಿಸ್ಮಸ್‌ ಆಚರಿಸುತ್ತಿದ್ದೇವೆ. ಯುವಕರು ದುರಭ್ಯಾಸದಿಂದ ಹೊರಬರಬೇಕು. ಕುಟುಂಬ ಜೀವನದ ಧ್ಯೇಯ ಕಾಪಾಡಿಕೊಂಡು ಹೋಗಲು ಎಲ್ಲರೂ ಮುಂದಾಗಬೇಕು. ಕ್ರಿಸ್ಮಸ್‌ ಎಲ್ಲರಿಗೂ ಶುಭಾಶಯ ಕೋರಿದ್ದಾರೆ.

click me!