ಈ ವರ್ಷ ನಾಲ್ಕಲ್ಲ, 5 ತಿಂಗಳು ಚಾತುರ್ಮಾಸ! ಶುಭ ಕಾರ್ಯಗಳಿಗೆ ಇನ್ನು ಬ್ರೇಕ್, ಯಾವಾಗ ಆರಂಭ?

By Suvarna News  |  First Published Jun 15, 2023, 1:28 PM IST

ಚಾತುರ್ಮಾಸವು ಆಷಾಢದ ಶುಕ್ಲ ಪಕ್ಷದ ಏಕಾದಶಿ ದಿನದಂದು ಪ್ರಾರಂಭವಾಗುತ್ತದೆ. ಈ ಅವಧಿಯಲ್ಲಿ ವಿಷ್ಣುವು ನಿದ್ರಾವಸ್ಥೆಯಲ್ಲಿರುತ್ತಾನೆ. ಹಾಗಾಗಿ, ಯಾವು ಶುಭ ಸಮಾರಂಭಗಳನ್ನು ನಡೆಸಲಾಗುವುದಿಲ್ಲ. ಆ ವರ್ಷ ಚಾತುರ್ಮಾಸ ಯಾವಾಗ ಆರಂಭ? ಹಿಂದೂ ಕ್ಯಾಲೆಂಡರ್‌ನ ಈ ವಿಶೇಷ ಅವಧಿಯ ಬಗ್ಗೆ ತಿಳಿಯೋಣ.


ಹಿಂದೂ ಧರ್ಮದಲ್ಲಿ ಚಾತುರ್ಮಾಸಕ್ಕೆ ವಿಶೇಷ ಮಹತ್ವವಿದೆ. ಚಾತುರ್ಮಾಸ ಅಂದರೆ ನಾಲ್ಕು ತಿಂಗಳ ಕಾಲ. ವಿಷ್ಣು ಪುರಾಣದ ಪ್ರಕಾರ, ಬ್ರಹ್ಮಾಂಡದ ರಕ್ಷಕನಾದ ವಿಷ್ಣುವು ಕ್ಷೀರಸಾಗರದಲ್ಲಿ ನಾಲ್ಕು ತಿಂಗಳ ಕಾಲ ವಿಶ್ರಾಂತಿ ಪಡೆಯುತ್ತಾನೆ. ಈ ಕಾರಣದಿಂದ ಈ ನಾಲ್ಕು ತಿಂಗಳಲ್ಲಿ ಎಲ್ಲಾ ರೀತಿಯ ಶುಭ ಕಾರ್ಯಗಳು ನಿಲ್ಲುತ್ತವೆ. ಚಾತುರ್ಮಾಸದ ಕಾರಣದಿಂದ ಶುಭ ವಿವಾಹ, ಗೃಹಪ್ರವೇಶ, ಪ್ರಾಪಂಚಿಕ ವಿಧಿವಿಧಾನಗಳು ಮುಂತಾದ ಅನೇಕ ಶುಭ ಕಾರ್ಯಗಳು ನೆರವೇರುವುದಿಲ್ಲ. ಹಿಂದೂ ಕ್ಯಾಲೆಂಡರ್ ಪ್ರಕಾರ, ಚಾತುರ್ಮಾಸ ಅವಧಿಯು ಆಷಾಢ ಮಾಸದ ದೇವಶಯನಿ ಏಕಾದಶಿಯ ಮರುದಿನದಿಂದ ಪ್ರಾರಂಭವಾಗುವ ನಾಲ್ಕು ತಿಂಗಳವರೆಗೆ ಇರುತ್ತದೆ. ಇದು ಕಾರ್ತಿಕ ಮಾಸದ ಶುಕ್ಲ ಪಕ್ಷದ ದೇವುತನಿ ಏಕಾದಶಿಯಂದು ಮುಕ್ತಾಯವಾಗುತ್ತದೆ. ಚಾತುರ್ಮಾಸ ಅವಧಿಯಲ್ಲಿ, ಕೆಲವು ನಿರ್ಬಂಧಗಳು ಮತ್ತು ಆಚರಣೆಗಳನ್ನು ಅನುಸರಿಸಲಾಗುತ್ತದೆ. 

ಚಾತುರ್ಮಾಸ 2023 ದಿನಾಂಕ (Chaturmaas 2023 date)
ಚಾತುರ್ಮಾಸವು ಭಗವಾನ್ ವಿಷ್ಣುವಿನ ನಿದ್ರಿಸುವ ಸಮಯವಾಗಿದೆ. ಚಾತುರ್ಮಾಸ 2023 ಜೂನ್ 29ರಂದು ಪ್ರಾರಂಭವಾಗುತ್ತದೆ ಮತ್ತು ಈ ವರ್ಷ ನವೆಂಬರ್ 23ರಂದು ಕೊನೆಗೊಳ್ಳುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಚಾತುರ್ಮಾಸವು ಶ್ರಾವಣ, ಭಾದ್ರಪದ, ಅಶ್ವಿಜ ಮತ್ತು ಕಾರ್ತಿಕ ಮಾಸವನ್ನು ಒಳಗೊಂಡಿರುತ್ತದೆ. ಈ ವರ್ಷ ಅಧಿಕಮಾಸದಿಂದಾಗಿ ಚಾತುರ್ಮಾಸವು ನಾಲ್ಕು ತಿಂಗಳ ಬದಲು ಐದು ತಿಂಗಳಾಗಿರುತ್ತದೆ. ಚಾತುರ್ಮಾಸದಲ್ಲಿ ಯಾವ ಕೆಲಸಗಳನ್ನು ಮಾಡಬೇಕು ಮತ್ತು ಯಾವ ಕೆಲಸಗಳನ್ನು ತಪ್ಪಿಸಬೇಕು ಎಂದು ಸನಾತನ ಧರ್ಮದಲ್ಲಿ ಹೇಳಲಾಗಿದೆ.

Tap to resize

Latest Videos

ಅಂಬಾನಿ ಮಕ್ಕಳನ್ನು ಅದೃಷ್ಟದ ತೊಟ್ಟಿಲಲ್ಲಿಟ್ಟು ತೂಗಿದ ರಾಶಿಚಕ್ರ

ಚಾತುರ್ಮಾಸದಲ್ಲಿ ಈ ಕೆಲಸ ಮಾಡಿ (thins to do during Chaturmas)
1. ಚಾತುರ್ಮಾಸದ ನಿಮಿತ್ತ ಜಪ ಮತ್ತು ತಪಸ್ಸು ಮಾಡಲು ಒಂದೇ ಸ್ಥಳದಲ್ಲಿ ತಂಗುವುದು. ಋಷಿಗಳು ಈಗಲೂ ಚಾತುರ್ಮಾಸದಂದು ಅದೇ ಸ್ಥಳದಲ್ಲಿ ತಂಗುತ್ತಾ ಜಪ ಮಾಡುತ್ತಾರೆ ಮತ್ತು ತಪಸ್ಸು ಮಾಡುತ್ತಾರೆ.
2. ಚಾತುರ್ಮಾಸದಲ್ಲಿ ಉಪವಾಸ ಮತ್ತು ಸ್ವಯಂ ನಿಯಂತ್ರಣದ ನಿಯಮಗಳನ್ನು ಅನುಸರಿಸಬೇಕು.
3. ಈ ಚಾತುರ್ಮಾಸದಲ್ಲಿ ಉಪವಾಸ ಮತ್ತು ಪೂಜೆಯಿಂದ ವಿಶೇಷ ಲಾಭವಿದೆ.
4. ಚಾತುರ್ಮಾಸದ ಸಮಯದಲ್ಲಿ ಪವಿತ್ರ ನದಿಗಳಲ್ಲಿ ಸ್ನಾನ ಮತ್ತು ದಾನ ಮಾಡುವುದು ಮಂಗಳಕರ ಮತ್ತು ಫಲಪ್ರದವೆಂದು ಪರಿಗಣಿಸಲಾಗಿದೆ. 
5. ಈ ಸಮಯದಲ್ಲಿ ವಿಷ್ಣುವಿನ ಮಂತ್ರಗಳನ್ನು ನಿರಂತರವಾಗಿ ಜಪಿಸಬೇಕು. ಚಾತುರ್ಮಾಸದಲ್ಲಿ ಗರಿಷ್ಠ ಧಾರ್ಮಿಕ ಕಾರ್ಯಗಳನ್ನು ಮಾಡುವುದರಿಂದ, ಸಾಧಕನು ಅನೇಕ ಪಟ್ಟು ಫಲವನ್ನು ಪಡೆಯುತ್ತಾನೆ.
6. ಚಾತುರ್ಮಾಸದಲ್ಲಿ ಅಶ್ವತ್ಥ ಮರಕ್ಕೆ ನಿಯಮಿತವಾಗಿ ನೀರನ್ನು ಅರ್ಪಿಸಬೇಕು. ಚಾತುರ್ಮಾಸದಲ್ಲಿ ಋಷಿ-ಮುನಿಗಳ ಸಹವಾಸದಲ್ಲಿ ಸತ್ಸಂಗದ ಲಾಭ ಪಡೆಯಬೇಕು.

ಚಾತುರ್ಮಾಸದಲ್ಲಿ ಈ ಚಟುವಟಿಕೆಗಳನ್ನು ತಪ್ಪಿಸಿ
1. ಚಾತುರ್ಮಾಸದ ನಾಲ್ಕು ತಿಂಗಳುಗಳು ವಿಶೇಷ. ಇಂತಹ ಪರಿಸ್ಥಿತಿಯಲ್ಲಿ ಶ್ರಾವಣ ಮಾಸ ಬಂತೆಂದರೆ ಅದರಲ್ಲಿ ಸೊಪ್ಪು ತಿನ್ನುವುದನ್ನು ತಪ್ಪಿಸಬೇಕು. ಭಾದ್ರಪದದಲ್ಲಿ ಮೊಸರನ್ನು ಸೇವಿಸಬಾರದು. ಕಾರ್ತಿಕ ಮಾಸ, ಅಶ್ವಿಜದಲ್ಲಿ ಹಾಲು ಮತ್ತು ಬೆಳ್ಳುಳ್ಳಿ ತಪ್ಪಿಸಬೇಕು.
2. ಚಾತುರ್ಮಾಸದಲ್ಲಿ ಹಾಸಿಗೆಯ ಮೇಲೆ ಮಲಗಬಾರದು.
3. ಚಾತುರ್ಮಾಸದಲ್ಲಿ ಯಾವುದೇ ಶುಭ ಕಾರ್ಯವನ್ನು ಮಾಡಬಾರದು.
4. ಇತರರ ಆಹಾರವನ್ನು ತೆಗೆದುಕೊಳ್ಳಬಾರದು.
5. ಚಾತುರ್ಮಾಸದಲ್ಲಿ ಕೂದಲು ಕತ್ತರಿಸುವುದನ್ನು ನಿಷೇಧಿಸಲಾಗಿದೆ. ಇದರ ಹೊರತಾಗಿ ತುಳಸಿ ಎಲೆಗಳನ್ನು ಕೀಳಬಾರದು ಮತ್ತು ದೇಹಕ್ಕೆ ಎಣ್ಣೆ ಹಚ್ಚಬಾರದು.

ಜೂ.17ರಂದು shani vakri 2023; ನಿಮ್ಮ ರಾಶಿಗೆ ಮುಂದಿನ 5 ತಿಂಗಳು ಲಾಭವೋ, ನಷ್ಟವೋ?

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!