Latest Videos

Aries Traits: ಮೇಷ ರಾಶಿಯವರ ಐದು ಸಾಮಾನ್ಯ ಸ್ವಭಾವಗಳಿವು..

By Suvarna NewsFirst Published Feb 16, 2022, 5:47 PM IST
Highlights

ನಿಮ್ಮ ಗುಂಪಿನಲ್ಲಿ ಎಲ್ಲ ವಿಷಯಕ್ಕೂ ತಾನಿದ್ದೇನೆ ಎಂದು ಮುಂದೋಡುವವರು ಯಾರಾದರೂ ಇದ್ದರೆ ಅವರದು ಮೇಷ ರಾಶಿಯೇ ಇರಬೇಕು. ಹೌದು, ಗುಣ ನೋಡಿಯೇ ಕೆಲವರ ರಾಶಿ ಹೇಳಬಹುದು. ಹಾಗೆಯೇ ರಾಶಿ ನೋಡಿ ಅವರ ಗುಣವನ್ನೂ ಅರಿಯಬಹುದು. 

ಇವರಿರುವುದೇ ಹಾಗೆ, ಎಷ್ಟು ಜನರಾದರೂ ಇರಲಿ, ಅವರನ್ನು ಯಾವುದೇ ಸಂದರ್ಭದಲ್ಲಿ ಹೆದರದೇ ಮುನ್ನಡೆಸಿಕೊಂಡು ಹೋಗುತ್ತಾರೆ, ಯಾರಾದರೂ ಹೇಳಿದ ಮಾತನ್ನು ಕೇಳುವುದು ಇವರ ಜಾಯಮಾನದಲ್ಲೇ ಇಲ್ಲ.. ಇನ್ನು ಏನೋ ಇಷ್ಟವಾದರೆ ಹಿಂದು ಮುಂದು ಯೋಚಿಸದೆ ಕೊಂಡೇ ಬಿಡುತ್ತಾರೆ.. ಈ ಎಲ್ಲ ಸ್ವಭಾವವೂ ನಿಮ್ಮದೇ ಆಗಿದ್ದರೆ ಅಥವಾ ನಿಮ್ಮ ಗುಂಪಿನಲ್ಲಿ ಇಂಥ ಸ್ವಭಾವಗಳಿರುವವರು ಇದ್ದರೆ ಅವರದು ಮೇಷ ರಾಶಿಯೇ ಆಗಿರಬೇಕು. 

ಮೇಷ ರಾಶಿಯವರಲ್ಲಿ ಸಾಮಾನ್ಯವಾಗಿರುವ ಕೆಲ ಗುಣಗಳನ್ನು ಇಲ್ಲಿ ಹೇಳಲಾಗಿದೆ ನೋಡಿ. 

ಹಠಾತ್ ಪ್ರವೃತ್ತಿ(impulsive)
'ನೋಡಿದ್ರಿ, ಇಷ್ಟ ಆಯ್ತು, ಬೇಕು ಅನ್ಸ್‌ತು, ತಗೊಂಡೆ...' ಇಂಥ ಹಠಾತ್ ನಿರ್ಧಾರಗಳನ್ನು ತೆಗೆದುಕೊಳ್ಳಲು ಇವರಿಂದ ಮಾತ್ರ ಸಾಧ್ಯ ಅನ್ಸುತ್ತೆ. ಯಾವುದೋ ಆನ್‌ಲೈನ್ ಸೇಲಲ್ಲಿ ಏನೋ ನೋಡಿದ್ರೆ ಇಷ್ಟವಾದ್ರೆ ಪಟ್ಟಂಥ ಖರೀದಿಸೋರು ಇವರು. ಇಷ್ಟಕ್ಕೂ ರಿಟರ್ನ್ ಪಾಲಿಸಿ ಇರೋ ಧೈರ್ಯ ಇದ್ದೇ ಇರುತ್ತಲ್ಲ.. ಕಚೇರಿಯಲ್ಲಿ, ಪ್ರೀತಿಯಲ್ಲಿ ಎಲ್ಲದರಲ್ಲೂ ಹೀಗೆ... ಯಾರಾದರೂ ಇಷ್ಟವಾದ್ರೆ ಫಟಾಫಟ್ ಹೇಳೋದೇ. ನಿರ್ಧಾರಗಳನ್ನು ಪಟ್ಟಂಥ ತೆಗೆದುಕೊಳ್ಳುತ್ತಾರೆ. ಹಾಗಾಗಿ ಇವರಿಗೆ ಯಶಸ್ಸು ಕೊಂಚ ಬೇಗನೇ ಬರುತ್ತದೆ ಎನ್ನಬಹುದು. 

ಹುಟ್ಟಾ ನಾಯಕ(born leader)
ರಾಶಿಗಳಲ್ಲೇ ಮೊದಲ ರಾಶಿ, ಅಂದ ಮೇಲೆ ನಾಯಕತ್ವ ಗುಣ ಇರಲೇಬೇಕಲ್ಲ.. ಹೊಸ ಪ್ರಾಜೆಕ್ಟ್ ಎಂದ ಕೂಡ್ಲೇ ಎಲ್ರೂ ನಿಮ್ಮತ್ತ ತಿರುಗುತ್ತಾರೆ. ಪ್ರವಾಸದಲ್ಲಿ ಏನೋ ಸಮಸ್ಯೆ ಎದುರಾಯ್ತೆಂದ್ರೆ ನಿಮ್ಮತ್ತ ನೋಡುತ್ತಾರೆ. ಯಾರೊಂದಿಗೋ ಮುಖ್ಯ ಮಾತುಕತೆ ನಡೆಸಬೇಕು ಅಂದ್ರೂ ನಿಮ್ ಕಡೆ ನೋಡ್ತಾರೆ. ಅದ್ಕೆ ಕಾರಣ, ನಾಯಕತ್ವ ನಿಮ್ಮ ಹುಟ್ಟು ಗುಣವಾಗಿರೋದು. ಜೊತೆಗೆ ಮುನ್ನುಗ್ಗುವ ಛಾತಿಯೂ ಸೇರಿರುವುದು. 

Black Magic: ವಾಮಾಚಾರದ ಪರಿಣಾಮ ತಗ್ಗಿಸಲು ಮನೆಯಲ್ಲೇ ಈ ರಕ್ಷಣಾತ್ಮಕ ಪರಿಹಾರ ಮಾಡಿಕೊಳ್ಳಿ

ರಿಸ್ಕ್ ತಗೋಳೋದು ಇವರಿಗೆ ರಿಸ್ಕೇ ಅಲ್ಲ!
ಹೊಸತೇನೋ ಸಾಹಸ ಟ್ರೈ ಮಾಡ್ಬೇಕಾ, ಮುಂಚೂಣಿಯಲ್ಲಿರ್ತೀರಿ. ಎಲ್ಲೋ ಏನೋ ಗಲಾಟೆಯ ಮಧ್ಯಸ್ಥಿಕೆ ವಹಿಸ್ಬೇಕಾ ಯಾರಿಗೆ ಬೇಕು ಎಂದು ಸುಮ್ಮನಾಗದೆ ಮಧ್ಯೆ ಹೋಗಿ ಪಂಚಾಯ್ತಿ ಮಾಡ್ತೀರಿ. ಯಾರದೋ ತಪ್ಪನ್ನು ಪ್ರಶ್ನಿಸ್ಬೇಕಾ, ಹಿಂದೆ ಮುಂದೆ ನೋಡೋರೇ ಅಲ್ಲ. ಒಟ್ನಲ್ಲಿ ಎಲ್ಲರ್ಗೂ ರಿಸ್ಕ್(risk) ಎಂದು ಕಂಡದ್ದು ನಿಮಗೆ ರಿಸ್ಕೇ ಅಲ್ಲ. ಹೊಸ ದೇಶಕ್ಕೆ ಹೋಗ್ಬೇಕಾ- ಸೈ, ಕೆಲಸ ಚೇಂಜ್ ಮಾಡ್ಬೇಕಾ, ಭಯ ಯಾಕೆ ಅನ್ನೋರಿವ್ರು. 

ಡ್ರಾಮಾ? ಇಗ್ನೋರ್ ಇಗ್ನೋರ್
ಯಾರೋ ಸಣ್ಣ ವಿಷಯವನ್ನು ಹಿಡಿದು ಧಾರಾವಾಹಿಯಂತೆ ಎಳೆದಾಡ್ತಿದ್ರೆ ಅದಕ್ಕೆ ಖಡಕ್ ಆಗಿ ಏನ್ ಮಾಡ್ಬೋದು ಹೇಳ್ತೀರಿ. ಅವರದನ್ನು ಮಾಡ್ದೇ ಮತ್ತದೇ ಗೋಳು ಹೇಳಿಕೊಳ್ತಿದ್ರೆ ಇಗ್ನೋರ್ ಮಾಡೋದು ನಿಮ್ಮ ಸ್ವಭಾವ. ಗಾಸಿಪಿಂಗ್ ಮಾಡೋದಿರ್ಬೋದು, ತಮ್ ಲವ್(love) ವಿಷ್ಯನ್ನ ದೊಡ್ಡದು ಮಾಡ್ಕೊಂಡು ಹೇಳೋರಿರ್ಬೋದು- ಅದಕ್ಕೆಲ್ಲ ನಿಮ್ಮ ಬಳಿ ಸಮಯವಿಲ್ಲ ಅನ್ನೋದನ್ನ ತೋರಿಸ್ದೇ ಬಿಡೋರಲ್ಲ ನೀವು. 

Zodiac Luck: ಈ 3 ರಾಶಿಯವರು ಸಖತ್ ಲಕ್ಕೀ, ಇವರು ಕೈ ಇಟ್ಟಲ್ಲಿ ಸಕ್ಸಸ್ ಪಕ್ಕಾ!

ನೇರ ಮಾತು
ಕೆಲವರು ತಮ್ಮ ಮನಸ್ಸಲ್ಲೇನಿದೆ ಅಂತ ಹೇಳೋಲ್ಲ. ಇನ್ನು ಕೆಲವರು ಅದನ್ನೇ ನಯವಾದ ಪದಗಳಲ್ಲಿ ಜೋಡಣೆ ಮಾಡಿ ಹೇಳ್ತಾರೆ. ಆದ್ರೆ ಮೇಷ ರಾಶಿಯವರು ಹಾಗಲ್ಲ, ಮುಖಕ್ಕೆ ಹೊಡೆದಂತೆ ಮಾತಾಡೋ ಸ್ವಭಾವ ಇವರದು. ನೋವು ಮಾಡುವ ಉದ್ದೇಶವಿರಲ್ಲ. ಆದರೆ ಎಲ್ಲವನ್ನೂ ನೇರಾನೇರ ಹೇಳುವುದು ಇವರ ಸ್ವಭಾವ. ಕೋಪ(Anger) ಬಂದ್ರೂ ಹೇಳ್ತಾರೆ, ಕಿರಿಕಿರಿಯಾದ್ರೂ ಹೇಳ್ತಾರೆ, ಯಾರನ್ನೋ ಕಂಡರೆ ಆಗಲ್ಲ ಎಂದ್ರೂ ನೇರವಾಗಿ ಹೇಳಿ ಮುಗಿಸೋರು ಇವರು. ಇಷ್ಟಕ್ಕೂ ಇದನ್ನು ಪ್ರಾಮಾಣಿಕತೆ(Honesty) ಎಂದುಕೊಂಡರೆ ಉತ್ತಮವಲ್ಲವೇ?

(ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.)

click me!