Asianet Suvarna News Asianet Suvarna News

Zodiac Luck: ಈ 3 ರಾಶಿಯವರು ಸಖತ್ ಲಕ್ಕೀ, ಇವರು ಕೈ ಇಟ್ಟಲ್ಲಿ ಸಕ್ಸಸ್ ಪಕ್ಕಾ!

ಜ್ಯೋತಿಷ್ಯದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯೂ ಅದೃಷ್ಟವಂತರೇ ಆಗಿರುತ್ತಾರೆ. ಆದರೆ, ಅದೃಷ್ಟ ಕೈ ಹಿಡಿಯಲು ಕೆಲವರಿಗೆ ಸಮಯ ಹಿಡಿಯುತ್ತದೆ. ಮತ್ತೆ ಕೆಲವರಿಗೆ ಹುಟ್ಟಿನಿಂದಲೇ ಅದೃಷ್ಟ ಬಂದಿರುತ್ತದೆ. ಹೀಗಾಗಿ ಜೀವನದಲ್ಲಿ ಯಾವುದೇ ಕ್ಷೇತ್ರಕ್ಕೆ ಕೈ ಹಾಕಿದರೂ ಅದರಲ್ಲಿ ಯಶ ಸಾಧಿಸುವ ಮೂರು ರಾಶಿ ಚಕ್ರದವರಿದ್ದು, ಅವರು ಯಾರು ಎಂಬುದನ್ನು ನೋಡೋಣ...

these 3 zodiacs are the luckiest of all
Author
Bangalore, First Published Feb 16, 2022, 5:10 PM IST | Last Updated Feb 16, 2022, 5:10 PM IST

ಜೀವನದಲ್ಲಿ ಕಷ್ಟಪಟ್ಟರಷ್ಟೇ ಸುಖ-ಸಮೃದ್ಧಿ (Happiness and prosperity) ಸಿಗಲಿದೆ ಎಂಬುದು ಎಲ್ಲರಿಗೂ ತಿಳಿದ ವಿಚಾರವೇ. ಹೀಗಾಗಿ ಯಾವುದೇ ಕೆಲಸಕ್ಕೆ (Any Work) ಮುಂದಾಗುವುದಿದ್ದರೂ ಬಹಳ ಅದಕ್ಕೆ ಪೂರಕ ಸಿದ್ಧತೆಗಳನ್ನು ನಡೆಸಿಕೊಂಡು, ಸಾಕಷ್ಟು ಬಂಡವಾಳ (Capital) ನೋಡಿಕೊಂಡು ಮುಂದಾಗಲಾಗುತ್ತದೆ. ಕೊನೆಗೆ ಅದಕ್ಕೆ ಅಷ್ಟೇ ಶ್ರಮವಹಿಸಿ ಕೆಲಸ ಮಾಡುತ್ತಾರೆ. ಆದರೆ ಅವರ ಶ್ರಮಕ್ಕೆ ತಕ್ಕ ಫಲ ಸಿಗುತ್ತಿರುವುದಿಲ್ಲ. ಮತ್ತೆ ಕೆಲವರು ಯಾವುದನ್ನೂ ಮಾಡದೆ ಯಾವ ಕೆಲಸಕ್ಕೆ ಕೈ ಹಾಕಿದರೂ ಅವರಿಗೆ ಯಶಸ್ಸಿನ (Success) ಬುತ್ತಿ ಕಟ್ಟಿಕೊಂಡಿರುತ್ತದೆ. ಅವರು ಮುಟ್ಟಿದ್ದೆಲ್ಲಾ ಚಿನ್ನವೇ... ಎಲ್ಲ ಕೆಲಸದಲ್ಲೂ ಯಶಸ್ಸನ್ನು ಸಾಧಿಸುತ್ತಾ ಹೋಗುತ್ತಾರೆ. ಆದರೆ ಈ ಅದೃಷ್ಟ ಬರುವುದು ಹೇಗೆ? ಹುಟ್ಟಿನಿಂದಲೇ ಬಂದಿರುತ್ತದೆಯೆ? ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಖಂಡಿತ ಹೌದು.

ಜ್ಯೋತಿಷ್ಯದಲ್ಲಿ ಬಹಳ ಪ್ರಮುಖ ವಿಚಾರಗಳನ್ನು ಮುಂಚಿತವಾಗಿ ತಿಳಿದುಕೊಳ್ಳಬಹುದಾಗಿದೆ. ವ್ಯಕ್ತಿಯ ಹುಟ್ಟು (Birth), ಘಳಿಗೆಗಳ (Time) ಆಧಾರದ ಮೇಲೆ ರಾಶಿ - ನಕ್ಷತ್ರಗಳನ್ನು (Zodiac – Star) ತಿಳಿಯಬಹುದಾಗಿದ್ದು, ಈ ರಾಶಿ - ನಕ್ಷತ್ರಗಳ ಅನುಸಾರವಾಗಿ ಅವರ ಮುಂದಿನ ಜೀವನ (Life), ಭವಿಷ್ಯವನ್ನು (Future) ಅರಿಯಬಹುದಾಗಿದೆ. ಹೀಗಾಗಿ ಹುಟ್ಟಿನಿಂದಲೇ ಅದೃಷ್ಟವನ್ನು (Luck) ಹೊತ್ತು ತಂದ ಯಾವುದೇ ಕೆಲಸಕ್ಕೆ ಕೈಹಾಕಿದರೂ ಅದರಲ್ಲಿ ಸಕ್ಸಸ್ ಕಾಣುತ್ತಾರೆ. ಕೆಲವರು ಹೆಚ್ಚು ಅದೃಷ್ಟವಂತರಾಗಿದ್ದರೆ, ಮತ್ತೆ ಕೆಲವರಿಗೆ ಅದರ ಪ್ರಮಾಣ ಕಡಿಮೆಯಾಗಿರುತ್ತದೆ. ಆದರೆ, ಈ ರಾಶಿಚಕ್ರದವರ ಜಾತಕದವರು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಸಾಧಿಸುತ್ತಾರೆ. ಅಲ್ಲದೆ, ಜನರಲ್ಲಿ ತಮ್ಮದೇ ಆದ ವಿಶೇಷ ಸ್ಥಾನವನ್ನು ಗಳಿಸುತ್ತಾರೆ. ಹಾಗಾದರೆ ಆ ಅದೃಷ್ಟಶಾಲಿ ರಾಶಿಯವರು ಯಾರು ಎಂಬುದನ್ನು ನೋಡೋಣ. 

ಮೇಷ ರಾಶಿ (Aries)
ಮೇಷ ರಾಶಿಯ ಅಧಿಪತಿ ಮಂಗಳ ಗ್ರಹವಾಗಿದೆ. ಜ್ಯೋತಿಷ್ಯದ (Astrology) ಪ್ರಕಾರ ಈ ರಾಶಿಚಕ್ರದ ವ್ಯಕ್ತಿಗಳು ಬಹಳ ಶಕ್ತಿಯುತ ಮತ್ತು ದೃಢನಿಶ್ಚಯವುಳ್ಳ ವ್ಯಕ್ತಿತ್ವದವರು. ಅವರು ಏನು ಮಾಡಲು ಬಯಸುತ್ತಾರೋ ಅದನ್ನು ಮಾಡಿಯೇ ತೀರುತ್ತಾರೆ. ಇದಕ್ಕಾಗಿ ಹಿಂದೆ ಮುಂದೆ ನೋಡುವ ಜಾಯಮಾನದವರಲ್ಲ. ಮೇಷ ರಾಶಿ ಜನರು ಇತರರನ್ನು ಮೆಚ್ಚಿಸುವ ಸಾಮರ್ಥ್ಯವನ್ನು (Capacity) ಸಹ ಹೊಂದಿರುತ್ತಾರೆ. ಈ ರಾಶಿಚಕ್ರದ ವ್ಯಕ್ತಿಗಳು ಪ್ರತಿಯೊಂದು ಪರಿಸ್ಥಿತಿಯನ್ನು (Situation) ಎದುರಿಸಬೇಕಾಗುತ್ತದೆ. ಹೀಗಾಗಿ ಇವರು ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮ ಗುಣಗಳಿಂದಾಗಿ ಉನ್ನತ ಸ್ಥಾನಗಳನ್ನು ಸಾಧಿಸುತ್ತಾರೆ. ಜೊತೆಗೆ ಇತರರಿಗೂ ಮಾದರಿಯಾಗಿರುತ್ತಾರೆ.

ಇದನ್ನು ಓದಿ: Vastu Tips: ಗಂಡ-ಹೆಂಡತಿ ಮಧ್ಯೆ ಜಗಳ ತಂದಿಡುವ ವಾಸ್ತುದೋಷ!

ವೃಶ್ಚಿಕ ರಾಶಿ (Scorpio)
ವೃಶ್ಚಿಕ ರಾಶಿಯ ಅಧಿಪತಿಯೂ ಮಂಗಳ (Mars) ಗ್ರಹವಾಗಿದೆ. ಈ ರಾಶಿಚಕ್ರದ ಜನರು ಕಠಿಣ ಪರಿಶ್ರಮಿಗಳಾಗಿರುತ್ತಾರೆ. ಆದರೆ, ಅವರ ಕಠಿಣ ಪರಿಶ್ರಮವು ವ್ಯರ್ಥವಾಗುವುದಿಲ್ಲ. ಅದರ ಬಲದ ಮೇಲೆ ಯಶಸ್ಸನ್ನು ಸಾಧಿಸುತ್ತಾರೆ. ಈ ರಾಶಿಯ ವ್ಯಕ್ತಿಗಳು ಯಾವುದೇ ಕ್ಷೇತ್ರದಲ್ಲಿಯೂ ಉನ್ನತ ಸ್ಥಾನಗಳನ್ನು ಅಲಂಕರಿಸುತ್ತಾರೆ. ಈ ರಾಶಿಚಕ್ರದ ಜಾತಕದವರು ಎಂತಹ ಪರಿಸ್ಥಿತಿ ಎದುರಾದರೂ ದೃಢತೆಯನ್ನು (Firmness) ಕಳೆದುಕೊಳ್ಳುವುದಿಲ್ಲ. ಅವರು ಪ್ರತಿ ಪರಿಸ್ಥಿತಿಯನ್ನು ದೃಢವಾಗಿ ಎದುರಿಸುತ್ತಾರೆ. ವೃಶ್ಚಿಕ ರಾಶಿಯವರು ಸ್ವಭಾವದಲ್ಲಿ ಸ್ವಲ್ಪ ಆಕ್ರಮಣಕಾರಿಗಳಾಗಿದ್ದು, ತಮ್ಮ ಕೆಲಸದಲ್ಲಿ ಇತರರು ಹಸ್ತಕ್ಷೇಪ (Interference ) ಮಾಡುವುದು, ಮೂಗು ತೂರಿಸುವುದನ್ನು ಇವರು ಇಷ್ಟಪಡುವುದಿಲ್ಲ. ವೃಶ್ಚಿಕ ರಾಶಿಯ ಸ್ಥಳೀಯರು ತಮ್ಮ ವಿರೋಧಿಗಳಿಗೆ ಹೆದರುವವರಲ್ಲ. ಈ ಜನರು ಸಮಾಜದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಾರೆ.

ಇದನ್ನು ಓದಿ: Vastu Tips: ಗಂಡ-ಹೆಂಡತಿ ಮಧ್ಯೆ ಜಗಳ ತಂದಿಡುವ ವಾಸ್ತುದೋಷ!

ಧನು ರಾಶಿ (Sagittarius)
ಜ್ಯೋತಿಷ್ಯದಲ್ಲಿ ಗುರುವನ್ನು ಧನು ರಾಶಿಯ ಅಧಿಪತಿ ಎಂದು ಪರಿಗಣಿಸಲಾಗಿದೆ. ಈ ರಾಶಿಚಕ್ರದ ಜನರು ತುಂಬಾ ಕಠಿಣ ಪರಿಶ್ರಮಿಗಳಾಗಿರುತ್ತಾರೆ. ತಮ್ಮ ಕಠಿಣ ಪರಿಶ್ರಮದ ಬಲದಿಂದ ಜೀವನದಲ್ಲಿ ಎಲ್ಲವನ್ನೂ ಸಾಧಿಸುತ್ತಾರೆ. ಅದೃಷ್ಟವು ಯಾವಾಗಲೂ ಅವರೊಂದಿಗೆ ಇರುತ್ತದೆ. ಇವರು ಜೀವನದ ಎಲ್ಲ ಭೌತಿಕ ಸಂತೋಷಗಳನ್ನು ಸಹ ಆನಂದಿಸುತ್ತಾರೆ. ಈ ರಾಶಿಚಕ್ರದ ಜನರಿಗೆ ಜೀವನದಲ್ಲಿ ಎಂದಿಗೂ ಹಣದ ಕೊರತೆ (Lack of money ) ಕಾಡುವುದಿಲ್ಲ.

Latest Videos
Follow Us:
Download App:
  • android
  • ios