Chikkamagaluru; ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಲೋಕಕಲ್ಯಾಣಕ್ಕಾಗಿ ಚಂಡಿಕಾ ಹೋಮ

By Suvarna News  |  First Published Oct 7, 2022, 11:52 PM IST

  ಚಿಕ್ಕಮಗಳೂರು ಜಿಲ್ಲೆಯ ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಲೋಕಕಲ್ಯಾಣಕ್ಕಾಗಿ ಚಂಡಿಕಾ ಹೋಮ ಕ್ಷೇತ್ರದಲ್ಲಿ ನಡೆಯಿತು. ಸಾವಿರಾರು ಭಕ್ತರು ಭಾಗಿಯಾಗಿದ್ದರು.
 


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ಅ.7): ಪಶ್ಚಿಮ ಘಟ್ಟದ ದಟ್ಟ ಕಾನನ. ಕಣ್ಣು ಹಾಯಿಸಿದಷ್ಟು ದೂರವು ತುಂಬಿ-ತುಳುಕುತ್ತಿರುವ ಹಸಿರ ವನರಾಶಿ. ಸುಡುಸೂರ್ಯ ನಡುನೆತ್ತಿಗೆ ಬಂದ್ರು ಸುರಿಯುತ್ತಿರೋ ಮಂಜು. ಇದೆಲ್ಲವೂ ಯಾವುದೋ ಗಿರಿಧಾಮದ ವರ್ಣನೆಯಲ್ಲ. ಪ್ರಕೃತಿ ಮಾತೆಯ ತವರೂರು, ಸಸ್ಯ ಶ್ಯಾಮಲೆಯ ನೆಲೆಬೀಡು. ಹಸಿದ ವಡಲಿಗೆ ಅನ್ನ ನೀಡೋ ಅನ್ನಪೂರ್ಣೇಶ್ವರಿ ಪುಣ್ಯ ಭೂಮಿ.  ಇದು ಆಧಿಶಕ್ತಿ ಅನ್ನಪೂರ್ಣೇಶ್ವರಿ ನೆಲೆಸಿರೋ ದಿವ್ಯತಾಣ ಚಿಕ್ಕಮಗಳೂರು ಜಿಲ್ಲೆಯ ಹೊರನಾಡು ಕ್ಷೇತ್ರ. ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಬರೋ ಭಕ್ತರು ಈ ತಾಯಿಯ ದರ್ಶನದಿಂದ ಪುನೀತರಾಗ್ತಿದ್ದಾರೆ. ನವರಾತ್ರಿಯ ಸಮಯದಲ್ಲಿ ಅನ್ನಪೂಣೇಶ್ವರಿಯಂತು ಸಾಕ್ಷಾತ್ ತಾಯಿಯ ಸ್ವರೂಪ, ಸುಮಾರು ನಾಲ್ಕು ಅಡಿ ಎತ್ತರ, ತಲೆಗೆ ಬಂಗಾರದ ಕಿರೀಟ, ಕಿರೀಟದ ಹಿಂದೆ ಏಳು ಎಡೆಯ ಆದಿಶೇಷನ ಪ್ರಭಾವಳಿ, ಸುಂದರವಾದ ದುಂಡನೆಯ ಮುಖ. ಹಣೆಯಲ್ಲಿ ಕಾಸಗಲದ ಕುಂಕುಮ, ಮೂಗಿಗೆ ಲಕ್ಷಣವಾದ ಮೂಗುತಿ, ಮಂದಹಾಸ ಬೀರುತ್ತಿರೋ ತುಟಿಗಳು, ಅನ್ನದಾತೆ ಅನ್ನಪೂರ್ಣೇಶ್ವರಿಯನ್ನ ವರ್ಣಿಸಲು ಪದಪುಂಜಗಳೇ ಸಾಲದು ಅನ್ನೋದು ಅಕ್ಷರಶಃ ಸತ್ಯ.ಅದರಲ್ಲೂ ನವರಾತ್ರಿ ಮುಗಿದು ದ್ವಾದಶಿಯಂದು ನಡೆಯುವ ಧಾರ್ಮಿಕ ಕಾರ್ಯಗಳು ಮಹತ್ವವನ್ನು ಪಡೆದುಕೊಂಡಿದೆ. 

Latest Videos

undefined

ಕಳೆದ ಹನ್ನೆರಡು ದಿನಗಳಿಂದ ನಡೆಯುತ್ತಿದ್ದ ಶರನ್ನವರಾತ್ರಿ ಮಹೋತ್ಸವಕ್ಕೆ ತೆರೆ: ನವರಾತ್ರಿ ಉತ್ಸವದಲ್ಲಿ ಶ್ರೀ ಕ್ಷೇತ್ರದಲ್ಲಿ ನಡೆಯುವ ಪೂಜೆ ಅತ್ಯಂತ ಶ್ರೇಷ ಎನ್ನುವ ಪ್ರತೀತಿ ಇದೆ. ಅನ್ನಪೂಣೇಶ್ವರಿ ಸನ್ನಿಧಾನದಲ್ಲಿ ನವರಾತ್ರಿಯಲ್ಲಿ  ನಡೆದ ಚಂಡಿಕಾ ಹವನದಲ್ಲಿ ಅರ್ಚಕರು ದೇವಿಗೆ ಅಗ್ನಿಗೆ ಬೇರೆ ಬೇರೆ ತರದ ಅಪೀಸುಗಳನ್ನು ನೀಡಲಾಗುತ್ತದೆ. ಆ ಮೂಲಕ ದೇವಿಯನ್ನು ಸಂತುಷ್ಟಗೊಳಿಸಲಾಗುತ್ತದೆ.

ಇನ್ನು ನವರಾತ್ರಿಯ ಒಂಭತ್ತೂ ದಿನವೂ ಕೂಡಾ ವಿಶೇಷ ಪೂಜೆ ಪುನಸ್ಕಾರಗಳನ್ನ ದೇವಿಗೆ ನೆರವೇರಿಸಲಾಗುತ್ತದೆ. ಮಹಿಳೆಯರು ಈ ಸಂದರ್ಭದಲ್ಲಿ ಅಕ್ಕಿ ತಂದು ಸಮರ್ಪಿಸುತ್ತಾರೆ. ಜತೆಗೆ ಹಣ್ಣು ಕಾಯಿ ಕುಂಕುಮ ಕೊಬ್ಬರಿ ಬೆಲ್ಲ ಇಂತಹ ಮಂಗಳಕರ ವಸ್ತುಗಳನ್ನು ದೇವಸ್ಥಾನಕ್ಕೆ ಅರ್ಪಿಸುತ್ತಾರೆ. ಅಲ್ಲದೇ ದೇವಿಗೆ ಬೆಲ್ಲದ ದೀಪ ಕೂಡಾ ಹಚ್ಚುತ್ತಾರೆ. ನವರಾತ್ರಿ ಉತ್ಸವದ ಅಂಗವಾಗಿ ಇಂದು ಮಹಾಚಂಡಿಕಾ ಹೋಮ ಬೆಳಿಗ್ಗೆ 9.30ಕ್ಕೆ ಆರಂಭಗೊಂಡ ಧಾರ್ಮಿಕ ವಿಧಿ ವಿಧಾನಗಳಲ್ಲಿ ಸಪ್ತಶತಿ ಪಾರಾಯಣ,ವೇದ ಪಾರಾಯಣ, ಸುಂದರಕಾಂಡ ಪಾರಾಯಣ, ಕುಂಕುಮಾರ್ಚನೆ ಮತ್ತು ಪರಿವಾರ ದೇವರುಗಳಿಗೆ ವಿಶೇಷ ಪೂಜಾ ವಿಧಿ ವಿಧಾನಗಳು ನಡೆಯಿತು.

ದೇವರಿಗಾಗಿ ಬಡಿದಾಡೋ ಉತ್ಸವ, ರಕ್ತ ಚೆಲ್ಲಿದರೂ ನಿಲ್ಲದು ಜನರ ರಣೋತ್ಸಾಹ

ಬೆಳಿಗ್ಗೆ ಧರ್ಮಕರ್ತರಿಂದ ಶ್ರೀ ಮಾತೆಗೆ ಮಹಾ ಅಭಿಷೇಕ ಅಲ್ಲದೆ ಇದೇ ಸಂದರ್ಭದಲ್ಲಿ ಶ್ರೀಮನ್ ಮಹಾಚಂಡಿಕಾ ಹೋಮ ನಡೆಯಿತು. ದೇಗುಲದಲ್ಲಿ ಲೋಕಕಲ್ಯಾಣಾರ್ಥವಾಗಿ ನಡೆದ ಈ ಮಹಾಚಂಡಿಕಾ ಹೋಮದಲ್ಲಿ ಧರ್ಮದರ್ಶಿ ಕುಟುಂಬ ಹಾಗೂ ಭಕ್ತರು ಪಾಲ್ಗೊಂಡಿದ್ದರು. ಮಾತ್ರವಲ್ಲ ದ್ವಾದಶಿಯಂದು ನಡೆಯೋ ಈ ವಿಶೇಷ ಚಂಡಿಕಾ ಹೋಮವನ್ನು ಕಣ್ತುಂಬಿಕೊಳ್ಳೋ ಭಕ್ತರಿಗೆ ಒಳಿತಾಗುತ್ತೆ ಅನ್ನೋ ನಂಬಿಕೆಯಿಂದಲೇ ಈ ಪವಿತ್ರ ಕಾರ್ಯವನ್ನು ಕಣ್ತುಂಬಿಕೊಳ್ಳಲು ಹೊರನಾಡಿಗೆ ರಾಜ್ಯವಲ್ಲದೇ ಹೊರರಾಜ್ಯಗಳಿಂದಲೂ ಭಕ್ತರು ಬಂದಿದ್ದರು. ಈ ಬಾರಿಯ 11 ದಿನಗಳ ಕಾಲ ನಡೆದ ನವರಾತ್ರಿ ಸಂಭ್ರಮ ಇಂದಿನ ಚಂಡಿಕಾ ಹೋಮದೊಂದಿಗೆ ಸಂಪನ್ನವಾಯ್ತು.

click me!