Latest Videos

Chanakya Neethi: ಈ ಗುಣವಿರುವ ಸ್ನೇಹಿತರು ಶತ್ರುಗಳಿಗಿಂತ ಅಪಾಯಕಾರಿ!!

By Bhavani BhatFirst Published Jun 29, 2024, 10:28 AM IST
Highlights

ನೀವು ನಿಜವಾದ ಸ್ನೇಹಿತರನ್ನುಹೊಂದಿದ್ದೀರಾ? ನಿಮ್ಮ ಸ್ನೇಹಿತ ನಿಮ್ಮ ನಿಜವಾದ ಸ್ನೇಹಿತ ಅಥವಾ ಅಲ್ಲವೇ ಎಂಬುದನ್ನು ಗುರುತಿಸುವುದು ಹೇಗೆ? ಚಾಣಕ್ಯ ನೀತಿ ಈ ಬಗ್ಗೆ ಹೇಳುತ್ತದೆ.

ಚಾಣಕ್ಯ ಒಬ್ಬ ಬ್ರಾಹ್ಮಣ ವಿದ್ವಾಂಸ, ರಾಜಕೀಯ ಸಿದ್ಧಾಂತಿ ಮತ್ತು ಭಾರತೀಯ ಇತಿಹಾಸದಲ್ಲಿ ರಾಜಕೀಯದ ಶ್ರೇಷ್ಠ ಚಿಂತಕ. ತಮ್ಮ ಅದ್ಭುತ ನೀತಿಗಳ ಮೂಲಕ ಭಾರತೀಯ ರಾಜಕೀಯಕ್ಕೆ ಒಂದು ಸಿದ್ಧಾಂತದ ತಳಹದಿಯನ್ನು ಹಾಕಿಕೊಟ್ಟಿದ್ದಾರೆ. ಅವರ ತತ್ವಗಳು ಮತ್ತು ನೈತಿಕತೆಯ ಆಧಾರದ ಉದಾಹರಣೆಗಳಲ್ಲಿ, ಸ್ನೇಹಿತರ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ಕೆಲವು ಅಮೂಲ್ಯ ವಿಷಯಗಳಿವೆ. ಚಾಣಕ್ಯ ನೀತಿಯಲ್ಲಿ, ಶತ್ರುಗಳಿಗಿಂತ ಹೆಚ್ಚು ಅಪಾಯಕಾರಿಯಾಗಬಲ್ಲ ಸ್ನೇಹಿತರನ್ನು ಗುರುತಿಸಲು ಕೆಲವು ಸೂತ್ರಗಳನ್ನು ಅವರು ನೀಡುತ್ತಾರೆ. ಹೆಚ್ಚಾಗಿ ಸ್ನೇಹಿತರಿಂದ ಸುತ್ತುವರೆದಿರುವ ಪ್ರತಿಯೊಬ್ಬರಿಗೂ ಇದು ತಿಳಿದಿರಬೇಕು. 

ಜೊತೆಗೆ ನಿಲ್ಲದವರು
ಬದಲಾಗುತ್ತಿರುವ ಕಾಲದಲ್ಲೂ, ನಿಜವಾದ ಸ್ನೇಹಿತ ನಮ್ಮೊಂದಿಗಿರುತ್ತಾನೆ. ಅವರು ನಮ್ಮ ಒಳ್ಳೆಯ ಮತ್ತು ಕೆಟ್ಟ ದಿನಗಳಲ್ಲಿ ನಮಗೆ ಬೆಂಬಲ ನೀಡುತ್ತಾರೆ ಮತ್ತು ಸಹಾಯ ಮಾಡುತ್ತಾರೆ. ಅದಕ್ಕಾಗಿಯೇ ನೀವು ನಿಜವಾದ ಸ್ನೇಹಿತನನ್ನು ಗುರುತಿಸಲು ಮತ್ತು ಅವನೊಂದಿಗೆ ಸಮಯ ಕಳೆಯಲು ಗಮನಹರಿಸಬೇಕು. ಆಪತ್ತಿನ ಸಮಯದಲ್ಲಿ ನಮ್ಮ ಜೊತೆಗೆ ನಿಲ್ಲದವರು ಸ್ನೇಹಿತರಲ್ಲ.

ಸ್ವಾರ್ಥವೇ ಮೊದಲು ಎನ್ನುವವನು
ಸ್ನೇಹಿತರನ್ನು ರಕ್ಷಿಸುವುದು ನಮ್ಮ ಧರ್ಮ ಎಂದು ಚಾಣಕ್ಯ ಕಲಿಸಿದ. ಸಂತೋಷ ಮತ್ತು ಕಷ್ಟದ ಸಮಯದಲ್ಲಿ ನಿಜವಾದ ಸ್ನೇಹಿತ ನಮ್ಮೊಂದಿಗೆ ನಿಲ್ಲುತ್ತಾನೆ. ನಾವು ಅವನ ಪರವಾಗಿ ನಿಲ್ಲಬೇಕು. ನಿಜವಾದ ಸ್ನೇಹಿತನ ಕೆಲಸ ಅವನು ತೊಂದರೆಗೆ ಸಿಲುಕಿದ್ದರೆ ಅವನನ್ನು ರಕ್ಷಿಸುವುದು. ತೊಂದರೆಯಲ್ಲಿ ತನ್ನನ್ನು ಮಾತ್ರ ಕಾಪಾಡಿಕೊಳ್ಳುವವನು ಸ್ವಾರ್ಥಿ, ಅವನು ಅಪಾಯಕಾರಿ.

ಮೆಚ್ಚುಗೆ ಇಲ್ಲದವನು
ಸ್ನೇಹಿತರನ್ನು ಹೆಚ್ಚು ಮೆಚ್ಚುವ ಮತ್ತು ಬೆಂಬಲಿಸುವ ಮಹತ್ವವನ್ನು ಚಾಣಕ್ಯ ಪ್ರಸ್ತಾಪಿಸಿದ್ದಾರೆ. ಸ್ನೇಹಿತರೊಂದಿಗೆ ಸಾಮರಸ್ಯದ ಸಂಬಂಧವನ್ನು ಕಾಪಾಡಿಕೊಳ್ಳಲು ನಾವು ಅವರನ್ನು ಗೌರವಿಸಬೇಕು ಮತ್ತು ಅವರನ್ನು ಮೆಚ್ಚಬೇಕು. ನಿಮ್ಮ ಒಳ್ಳೆಯ ಗುಣವನ್ನು ಮೆಚ್ಚದವನು, ಬೆಂಬಲಿಸದವನು ನಿಮ್ಮ ನಿಜವಾದ ಸ್ನೇಹಿತ ಆಗಿರಲು ಸಾಧ್ಯವಿಲ್ಲ.  

ಚಾಣಕ್ಯ ನೀತಿ: ಸಾಕಷ್ಟು ಸಂಪಾದಿಸಿದ್ರೂ ಈ ಐವರ ಜೇಬು ಯಾವಾಗ್ಲೂ ಖಾಲಿ ಖಾಲಿ!
 

ಹಾನಿಕರ ಸಲಹೆ ಕೊಡುವವನು
ಚಾಣಕ್ಯ ಸ್ನೇಹಿತರ ಜೊತೆ ಸಮಾಲೋಚನೆ ಮಾಡುವಂತೆ ಸಲಹೆ ನೀಡುತ್ತಾನೆ. ನಿಜವಾದ ಸ್ನೇಹಿತ ಯಾವಾಗಲೂ ನಮಗೆ ಒಳ್ಳೆಯ ಮತ್ತು ಪ್ರಾಮಾಣಿಕ ಸಲಹೆಯನ್ನು ನೀಡುತ್ತಾನೆ. ಅವರ ಸಲಹೆಗೆ ಪ್ರಾಮುಖ್ಯತೆ ನೀಡಬೇಕು. ಆದರೆ ಸ್ನೇಹಿತನ ರೂಪದಲ್ಲಿರುವ ಶತ್ರು, ನಮಗೆ ಹಾನಿಯಾಗುವಂಥ ಸಲಹೆಗಳನ್ನು ಕೊಡುತ್ತಾನೆ. 

ದ್ರೋಹದಿಂದ ದೂರವಿರಿ
ಚಾಣಕ್ಯ ನಮಗೆ ದ್ರೋಹ ಮಾಡುವವರಿಂದ ದೂರವಿರಬೇಕೆಂದು ಹೇಳುತ್ತಾನೆ. ನಿಜವಾದ ಸ್ನೇಹಿತ ಯಾವಾಗಲೂ ನಮ್ಮೊಂದಿಗೆ ಪ್ರಾಮಾಣಿಕವಾಗಿರುತ್ತಾನೆ. ಆತನು ನಮಗೆ ನಂಬಿಕೆಯ ಮೌಲ್ಯವನ್ನು ಕೊಡುತ್ತಾನೆ. ಸ್ನೇಹಿತನು ಒಮ್ಮೆ ಅವನಿಗೆ ದ್ರೋಹ ಮಾಡಿದರೆ, ಅವನನ್ನು ಶಾಶ್ವತವಾಗಿ ಬಿಡುವುದು ಅಥವಾ ಅವನಿಂದ ಸರಿಯಾದ ಅಂತರವನ್ನು ಕಾಯ್ದುಕೊಳ್ಳುವುದು ಉತ್ತಮ. 

ಇಲ್ಲಿಯವರೆಗೆ ನೀವು ನಿಮ್ಮ ನಿಜವಾದ ಸ್ನೇಹಿತ ಅಥವಾ ಸ್ನೇಹಿತ ಎಂದು ಹೇಳಿಕೊಳ್ಳುವವರ ನಡುವಿನ ವ್ಯತ್ಯಾಸವನ್ನು ಅನುಭವಿಸಿದ್ದರೆ, ಈಗ ಅವನ ಅಥವಾ ನಿಮ್ಮಲ್ಲಿರುವ ಈ ಗುಣಗಳನ್ನು ಎಚ್ಚರಿಕೆಯಿಂದ ನೋಡಿ. ಜೀವನದಲ್ಲಿ ಒಳ್ಳೆಯ ಸ್ನೇಹಿತರನ್ನು ಹೊಂದಿರುವುದು ಬಹಳ ಮುಖ್ಯ. ಕೆಲವು ಜನರು ಅನೇಕ ನಿಜವಾದ ಸ್ನೇಹಿತರನ್ನು ಹೊಂದಿರುತ್ತಾರೆ. ಕೆಲವರಿಗೆ ಒಬ್ಬನೇ ನಿಜವಾದ ಸ್ನೇಹಿತ ಇರುತ್ತಾನೆ. ಕೆಲವರು ತಮ್ಮ ಜೀವಿತಾವಧಿಯಲ್ಲಿ ಒಬ್ಬ ನಿಜವಾದ ಸ್ನೇಹಿತನನ್ನು ಸಹ ಪಡೆಯುವುದಿಲ್ಲ. ನಿಜವಾದ ಸ್ನೇಹಿತನನ್ನು ಪಡೆದವನು ಭಾಗ್ಯಶಾಲಿ.

ಯಾರನ್ನೇ ನಂಬಿದ್ರೂ ಈ ಹುಡಿಗಿಯರನ್ನು ಮಾತ್ರ ನಂಬಬೇಡಿ, ಬಹಳ ಡೇಂಜರ್ ಅಂತೆ
 

click me!